ನೀವು ಯಾರಲ್ಲಾದರೂ ನಿಮ್ಮ ನೆಚ್ಚಿನ ಫಿಲ್ಮ್ ಸಿಂಗರ್ ಯಾರೆಂದು ಕೇಳಿದರೆ ಬಹುತೇಕ ಹೆಚ್ಚಿನವರು ಶ್ರೇಯಾ ಘೋಷಾಲ್ ಹೆಸರೇಳುವುದು ಸಾಮಾನ್ಯ. ಅಂದರೆ ಅಷ್ಟು ದೊಡ್ಡ ಮಟ್ಟಿಗೆ ಶ್ರೇಯಾ ಘೋಷಾಲ್ ಅವರು ಅಭಿಮಾನಿಗಳ ಮನದಲ್ಲಿ ಉಳಿದುಕೊಂಡಿದ್ದು, ಸುಮಧುರ ಧ್ವನಿಯ ಮೂಲಕ ಈಗಾಗಲೇ ದೇಶಾದ್ಯಂತ ಅಲ್ಲದೆ ಭಾರತೀಯ ಚಿತ್ರ ವೀಕ್ಷಿಸಲ್ಪಡುವ ದೇಶಗಳಲ್ಲೂ ಮನೆಮಾತಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಶ್ರೇಯಾ ಅವರು ಶಿಲಾದಿತ್ಯ ಮುಖೋಪಾಧ್ಯಾಯ ಅವರನ್ನು ವಿವಾಹವಾಗಿದ್ದು, ಅವರ ಪತಿ ಖ್ಯಾತ ಉದ್ಯಮಿಯಾಗಿದ್ದು, ಜಾಗತಿಕ ರಂಗದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ತನ್ನ 40 ನೇ ವಯಸ್ಸಿನಲ್ಲೂ ಕೂಡ ಶ್ರೇಯಾ ಘೋಷಾಲ್ ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಗಾಯಕರಲ್ಲಿ ಒಬ್ಬರಾಗಿ ಉಳಿದಿದ್ದಾರೆ, "ಡೋಲಾ ರೇ ಡೋಲಾ," "ಚಿಕ್ನಿ ಚಮೇಲಿ," "ಮೇರೆ ಧೋಲ್ನಾ" ಮತ್ತು "ಬರ್ಸೋ ರೇ" ನಂತಹ ಸಾಂಪ್ರದಾಯಿಕ ಹಿಟ್‌ಗಳ ಜೊತೆ ಅವರು ಹಾಡಿದ ಲೆಕ್ಕವಿಲ್ಲದಷ್ಟು ಪ್ರೇಮ ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ. ಶ್ರೇಯಾ ಹಾಡುಗಳು ಅವಳ ಬಹುಮುಖತೆ ಮತ್ತು ಸಾಟಿಯಿಲ್ಲದ ಗಾಯನ ಕೌಶಲ್ಯಗಳನ್ನು ಪ್ರದರ್ಶಿಸಿವೆ. ಶ್ರೇಯಾ ಅವರ ಕಠಿಣ ಪರಿಶ್ರಮದಿಂದ ಇಂದು ಆಕೆ ಪ್ರಸಿದ್ದ ಸಿಂಗರ್ ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಬಾಲಿವುಡ್ ನಲ್ಲಿ ಸದ್ಯ ಎಆರ್ ರೆಹ್ಮಾನ್ ಬಳಿಕ ಅತೀ ಹೆಚ್ಚು ಸಂಭಾವನೆ ಪಡೆಯುವ ಗಾಯಕಿ ಎಂಬ ಹೆಗ್ಗಳಿಕೆಗೆ ಶ್ರೇಯಾ ಪಾತ್ರರಾಗಿದ್ದಾರೆ.
ಪ್ರತೀ ಹಾಡಿಗೆ ಬರೊಬ್ಬರಿ ಸಂಭಾವನೆ!
ಇನ್ನು ಎಲ್ಲರಿಗೂ ತಿಳಿದಿರುವಂತೆ ಶ್ರೇಯಾ ಎಂಥ ಹಾಡುಗಾರ್ತಿ ಎಂದೇ ವಿಶೇಷವಾಗಿ ಹೇಳಬೇಕಿಲ್ಲ. ಕನ್ನಡ, ಹಿಂದಿ, ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಲ್ಲಿ ತನ್ನ ಪ್ರಭಾವ ತೋರಿಸಿರುವ ಶ್ರೇಯಾ ಇಂದಿಗೂ ಬೇಡಿಕೆಗೆ ಸಿಂಗರ್ ಆಗಿದ್ದಾರೆ. ಮೂಲಗಳ ಪ್ರಕಾರ ಶ್ರೇಯಾ ಪ್ರತೀ ಹಾಡಿಗೆ 25 ಲಕ್ಷ ರೂಪಾಯಿಗಳನ್ನು ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ. ಅದೂ ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಅಲ್ಲದೆ ಬಾಲಿವುಡ್ ಹಾಡುಗಳನ್ನು ಕೇಳುವ ವಿದೇಶದಲ್ಲೂ ಅವರು ಕನ್ಸರ್ಟ್ ನಲ್ಲಿ ಹಾಡುವ ಮೂಲಕ ಕೂಡ ಹಣ ಸಂಪಾದಿಸುತ್ತಿದ್ದಾರೆ. ಈ ಮೂಲಕ ಸಂಗೀತ ಉದ್ಯಮದಲ್ಲಿ ರಾಣಿಯಾಗಿ ಅವರ ಸ್ಥಾನಮಾನವನ್ನು ಗಟ್ಟಿಗೊಳಿಸಿದ್ದಾರೆ.

ವೈಯಕ್ತಿಕ ಜೀವನ
ಇನ್ನು ಬಾಲಿವುಡ್ ನಲ್ಲಿ ಪ್ರಭಾವಿ ಸಿಂಗರ್ ಆಗಿ ಗುರುತಿಸಿಕೊಂಡಿರುವ ಶ್ರೇಯಾ 2015 ರಲ್ಲಿ ತನ್ನ ಬಾಲ್ಯದ ಸ್ನೇಹಿತ ಶಿಲಾದಿತ್ಯ ಮುಖೋಪಾಧ್ಯಾಯ ಅವರನ್ನು ವಿವಾಹವಾಗಿದ್ದರು. ಸುಮಾರು 10 ವರ್ಷಗಳ ಕಾಲ ಡೇಟಿಂಗ್ ಮಾಡಿದ ಇಬ್ಬರೂ 2015 ರಲ್ಲಿ ವಿವಾಹ ಬಂಧನಕ್ಕೆ ಒಳಪಟ್ಟರು. ಅದೂ ಅಲ್ಲದೆ ಸ್ನೇಹಿತನ ಮದುವೆಯ ಸಂದರ್ಭದಲ್ಲಿ ಶಿಲಾದಿತ್ಯ ಪ್ರಪೋಸ್ ಮಾಡಿದ್ದನ್ನು ಶ್ರೇಯಾ ಇತ್ತೀಚಿಗೆ ಬಹಿರಂಗಪಡಿಸಿದ್ದರು. ಇನ್ನು ಸಂಗೀತ ಲೋಕದಲ್ಲಿ ಶ್ರೇಯಾ ಮಿಂಚಿದ್ದರೆ ಅತ್ತ ವ್ಯಾಪಾರ ಜಗತ್ತಿನಲ್ಲಿ ಗಂಡ ಶಿಲಾದಿತ್ಯ ಮುಖೋಪಾಧ್ಯಾಯ ಅವರು ಮಿಂಚುತ್ತಿದ್ದಾರೆ. ಇನ್ನು ಶಿಲಾದಿತ್ಯ ಬಗ್ಗೆ ಹೆಚ್ಚು ಹೇಳುವುದಾದರೆ ಅವರು ಕರೆ-ನಿರ್ಬಂಧಿಸುವ ಅಪ್ಲಿಕೇಶನ್‌ಗಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟ ಟ್ರೂಕಾಲರ್‌ನ ಜಾಗತಿಕ ಮುಖ್ಯಸ್ಥರಾಗಿದ್ದಾರೆ. ಅಲ್ಲದೆ ಶಿಲಾದಿತ್ಯ ಅವರು ಎರಡು ಸ್ಟಾರ್ಟ್‌ಅಪ್‌ಗಳನ್ನು ಸಹ ಸ್ಥಾಪಿಸಿದ್ದಾರೆ. ಹಿಪ್‌ಕ್ಯಾಸ್ಕ್ ಎನ್ನುವ ವೈನ್ ಸಂಸ್ಥೆಯನ್ನು ಸ್ಥಾಪಿಸಿದ್ದರೆ ಪಾಯಿಂಟ್‌ಶೆಲ್ಫ್ ಎನ್ನುವ ಹಣಕಾಸಿನ ಸಂಸ್ಥೆಯನ್ನು ಕೂಡ ಅವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಪತಿಯ ಜೊತೆ ಶ್ರೇಯಾ ಕೂಡ ವ್ಯವಹಾರದಲ್ಲಿ ತೊಡಗಿದ್ದು, ಈ ಮೂಲಕ ದಂಪತಿ ಜಂಟಿಯಾಗಿ ವ್ಯವಹಾರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಪ್ರಚಂಡ ಶ್ರೀಮಂತ ದಂಪತಿ
ಇನ್ನು ಇಷ್ಟೆಲ್ಲಾ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದರೂ ಕುಟುಂಬಕ್ಕೆ ಹೆಚ್ಚಿನ ಪಾಧ್ಯಾನ್ಯತೆ ನೀಡಿದ್ದಾರೆ. ದಂಪತಿಯ ಒಟ್ಟು ಸಂಪತ್ತು ಕೂಡ ಅಷ್ಟೇ ಪ್ರಮಾಣದಲ್ಲಿ ಹೆಚ್ಚಿದೆ. ಮೂಲಗಳ ಪ್ರಕಾರ ದಂಪತಿ ಜಂಟಿಯಾಗಿ ಒಟ್ಟು ಬರೊಬ್ಬರಿ 1,500 ಕೋಟಿ ರೂ. ಸಂಪತ್ತು ಹೊಂದಿದ್ದಾರೆ ಎನ್ನಲಾಗಿದೆ. ಇನ್ನು ಇದರಲ್ಲಿ 180-185 ಕೋಟಿ ರೂಪಾಯಿ ಸಂಪತ್ತು ಶ್ರೇಯಾ ಅವರದ್ದಾದರೆ ಶಿಲಾದಿತ್ಯ ಅವರು ಬರೊಬ್ಬರಿ 1,406 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ದಂಪತಿ ಸದ್ಯ ಪುತ್ರ ದೇವಯಾನ್‌ನೊಂದಿಗೆ ಜೊತೆ ಸುಖಿ ಜೀವನ ನಡೆಸುತ್ತಿದ್ದು, ಜೊತೆಗೆ ಕೋಟಿ ರೂ. ಮೌಲ್ಯದ ವ್ಯವಹಾರವನ್ನು ಕೂಡ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.


Click it and Unblock the Notifications