ಭಾರತದಲ್ಲಿ ಚೀನಾ ಮೊಬೈಲ್‌ಗಳ ಮಾರಾಟದಲ್ಲಿ ಗಣನೀಯ ಕುಸಿತ

ಭಾರತ ಚೀನಾ ಗಡಿ ಉದ್ವಿಗ್ನತೆಯ ನಂತರ ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡುವ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಅದರಲ್ಲೂ ಚೀನಾ ಮೂಲದ ಮೊಬೈಲ್ ಫೋನ್‌ಗಳನ್ನು ಭಾರತದ ಜನ ತಿರಸ್ಕರಿಸುತ್ತಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

ಹೌದು, ಜನವರಿ ಮಾರ್ಚ್ ತ್ರೈಮಾಸಿಕದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ನಿರ್ಮಿತ ಮೊಬೈಲ್‌ಗಳ ಪಾಲು ಶೇ 81 ರಷ್ಟು ಇತ್ತು. ಈ ಪ್ರಮಾಣ ಏಪ್ರಿಲ್ ಜೂನ್ ತ್ರೈಮಾಸಿಕದಲ್ಲಿ ಶೇ 72 ಕ್ಕೆ ಕುಸಿದಿದೆ.

ಕೌಂಟರ್‌ಪಾಯಿಂಟ್ ಅಧ್ಯಯನ ಸಂಸ್ಥೆಯ ವರದಿಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಒಪ್ಪೊ, ವಿವೋ, ರಿಯಲ್ ಮಿ ಬ್ರಾಂಡ್ ಮೊಬೈಲ್‌ಗಳು ಹೆಚ್ಚು ಬೇಡಿಕೆ ಹೊಂದಿವೆ.

ಭಾರತದಲ್ಲಿ ಚೀನಾ ಮೊಬೈಲ್‌ಗಳ ಮಾರಾಟದಲ್ಲಿ ಗಣನೀಯ ಕುಸಿತ

ಏಪ್ರಿಲ್ ಜೂನ್ ತ್ರೈಮಾಸಿಕದಲ್ಲಿನ ಲಾಕ್‌ಡೌನ್ ಪರಿಣಾಮವಾಗಿ ಮೊಬೈಲ್ ವ್ಯಾಪಾರ ಶೇ 51 ರಷ್ಟು ಕುಸಿತ ಕಂಡಿತ್ತು. ಚೀನಾ ವಿರೋಧಿ ಅಲೆ ಭಾರತದಲ್ಲಿ ಹೆಚ್ಚಾಗಿದ್ದರಿಂದ ಮೊಬೈಲ್ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ ಎಂದು ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+