ಹಬ್ಬಗಳ ದೇಶವಾಗಿರುವ ಭಾರತದಲ್ಲಿ ಉತ್ಸವಗಳ ಸಮಯದಲ್ಲಿ ಯಾವ ರೀತಿಯ ಭರ್ಜರಿ ಖರೀದಿ ಪ್ರಕ್ರಿಯೆ ಇರುತ್ತದೆ ಎಂಬ ಬಗ್ಗೆ ನಮಗೆಲ್ಲಗೂ ತಿಳಿದಿರುವ ವಿಚಾರ. ಇತರೆ ಸಮಯಕ್ಕೆ ಹೋಲಿಕೆ ಮಾಡಿದರೆ ಹಬ್ಬಗಳ ಸಮಯದಲ್ಲಿ ಜಾಗತಿಕ ದಾಖಲೆ ಮಟ್ಟದಲ್ಲಿ ವಸ್ತುಗಳನ್ನು ಖರೀದಿಸಲು ಜನರು ಮುಗಿಬೀಳುವುದು ಸಾಮಾನ್ಯ ಸಂಗತಿ. ಅದರಲ್ಲೂ ಸದ್ಯ ಆನ್‌ಲೈನ್ ಶಾಂಪಿಂಗ್ ಬಂದ ಬಳಿಕವಂತೂ ಕೇಳುವುದೇ ಬೇಡ. ಮನೆಯಲ್ಲಿ ಕುಳಿತುಕೊಂಡೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವಲ್ಲಿ ಗ್ರಾಹಕರು ಎಲ್ಲಕ್ಕಿಂತ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಇದೇ ಕಾರಣಕ್ಕೆ ಹಬ್ಬಗಳ ಸಮಯದಲ್ಲಿ ಆನ್‌ಲೈನ್ ಶಾಪಿಂಗ್ ಕಂಪೆನಿಗಳು ಭರ್ಜರಿ ಆಫರ್‌ಗಳನ್ನು ಕೂಡ ನೀಡುತ್ತದೆ. ಫ್ಲಿಪ್ ಕಾರ್ಟ್,ಅಮೆಜಾನ್, ಮೀಶೋ ಮುಂತಾದ ಕಂಪೆನಿಗಳು ಹಬ್ಬಗಳ ಸಮಯದಲ್ಲೇ ಆಕರ್ಷಕ ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತದೆ. ಇನ್ನು ಜಾಗತಿಕ ಆನ್‌ಲೈನ್ ಶಾಂಪಿಂಗ್ ಸಂಸ್ಥೆಯಲ್ಲಿ ಮುಂಚೂಣಿಯಲ್ಲಿರುವ ಅಮೆಜಾನ್ ಇದೀಗ ಸೆಪ್ಟೆಂಬರ್ ತಿಂಗಳಂದು ನಡೆಸಿದ್ದ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ಗೆ ಭಾರೀ ಪ್ರಮಾಣದಲ್ಲಿ ಜನಸ್ಪಂದನೆ ವ್ಯಕ್ತವಾಗಿದ್ದು, ದಾಖಲೆ ಮಟ್ಟದಲ್ಲಿ ಉತ್ಪನ್ನಗಳು ಬಿಕರಿಯಾಗಿದೆ. ಅದರಲ್ಲೂ ಪ್ರೀಮಿಯಂ ಉತ್ಪನ್ನಗಳು ಭಾರೀ ಪ್ರಮಾಣದಲ್ಲಿ ಸೇಲ್ ಆಗಿದ್ದು, ಸಂಸ್ಥೆಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ.
ಏನಿದು ಗ್ರೇಟ್ ಇಂಡಿಯನ್ ಫೆಸ್ಟಿವಲ್ (AGIF) 2024
ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಿದ್ದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಮಯದಲ್ಲಿ ಟೆಲಿವಿಷನ್, ಸ್ಮಾರ್ಟ್‌ಫೋನ್‌ಗಳು ಮತ್ತು ದೊಡ್ಡ ಉಪಕರಣಗಳು ಸೇರಿದಂತೆ ಪ್ರೀಮಿಯಂ ಉತ್ಪನ್ನಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿರುವುದು ಸದ್ಯ ಬಹಿರಂಗವಾಗಿದೆ. ದೀಪಾವಳಿ ಸಮಯದಲ್ಲಿ ಭಾರತೀಯರು ಹೊಸ ವಸ್ತುಗಳನ್ನು ಖರೀದಿಸುವುದು ವಾಡಿಕೆ ಹಾಗೂ ಸಂಪ್ರದಾಯ. ಈ ಸಮಯದಲ್ಲಿ ಖರೀದಿಸಿದ ಹೊಸ ವಸ್ತುಗಳು ಶುಭ ತರುತ್ತದೆ ಎಂಬ ನಂಬಿಕೆ ಕೂಡ ಭಾರತೀಯರಲ್ಲಿದೆ. ಅದು ಸಣ್ಣ ಮಟ್ಟದ ವಸ್ತುವಾಗಿರಬಹುದು ಅಥವಾ ದೊಡ್ಡ ಮಟ್ಟದ ವಸ್ತುವೇ ಆಗಿರಬಹುದು. ಭಾರತೀಯ ಗ್ರಾಹಕರು ದೀಪಾವಳಿ ಸಮಯದಲ್ಲಿ ಆನ್‌ಲೈನ್ ಶಾಪಿಂಗ್ ಮೂಲಕ ಹೆಚ್ಚಿನ ಮೌಲ್ಯಗಳ ವಸ್ತುಗಳನ್ನು ಖರೀದಿಸುವ ಮೂಲಕ ತಮ್ಮ ದೀಪಾವಳಿ ಆಚರಿಸಿಕೊಂಡಿರುವುದು ಕಂಡುಬಂದಿದೆ.

ಅದರಲ್ಲೂ ಮುಖ್ಯವಾಗಿ ಸಮಯದಲ್ಲಿ ಕಂಪನಿಯು ಆಪಲ್ ಐಪ್ಯಾಡ್ ಮಾರಾಟದಲ್ಲಿ 10 ಪಟ್ಟು ಮತ್ತು ಸ್ಯಾಮ್‌ಸಂಗ್ ಟ್ಯಾಬ್ಲೆಟ್‌ಗಳಲ್ಲಿ ಐದು ಪಟ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಅಮೆಜಾನ್ ಇಂಡಿಯಾ ಉಪಾಧ್ಯಕ್ಷ ಸೌರಭ್ ಶ್ರೀವಾಸ್ತವ ಅವರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಅವರು, ನಾವು ಪ್ರೀಮಿಯಂ ವಿಚಾರವನ್ನು ನೋಡಿದಾಗ ಅದು ಟೆಲಿವಿಷನ್ ಅಥವಾ ಫ್ಯಾಷನ್ ಮತ್ತು ಸೌಂದರ್ಯ, ಗೇಮಿಂಗ್ ಲ್ಯಾಪ್‌ಟಾಪ್‌ಗಳು, ಗೃಹ ಮತ್ತು ಅಡುಗೆ ಸಲಕರಣೆಗಳು, ಇದರ ಸ್ಪಷ್ಟ ಪ್ರವೃತ್ತಿಯನ್ನು ನಾವು ನೋಡಿದ್ದೇವೆ. ಜನರು ಹೆಚ್ಚು ಪ್ರೀಮಿಯಂ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಅದೂ ಅಲ್ಲದೆ ಪ್ರೀಮಿಯಂ ಉತ್ಪನ್ನಗಳ ಮಾರಾಟವು ಕೇವಲ ದೊಡ್ಡ ನಗರಗಳಿಗೆ ಸೀಮಿತವಾಗಿರದೆ ಗ್ರಾಮೀಣ ಪ್ರದೇಶಗಳಲ್ಲೂ ಮುಂದುವರೆದಿದೆ ಎಂದು ಶ್ರೀವಾಸ್ತವ ಹೇಳಿದರು. ಇನ್ನು ಮಾರಾಟದ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಅವರು, ಈ ವಿಭಾಗದಲ್ಲಿನ ಒಟ್ಟು ಯೂನಿಟ್ ಮಾರಾಟದಲ್ಲಿ ಸುಮಾರು 30 ಪ್ರತಿಶತದಷ್ಟು ದೊಡ್ಡ-ಪರದೆಯ ಟಿವಿಗಳು ಕೊಡುಗೆ ನೀಡಿವೆ. ಸ್ಯಾಮ್‌ಸಂಗ್, ಕ್ಷಿಯೋಮಿ ಮತ್ತು ಸೋನಿಯ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಬೇಡಿಕೆಯಲ್ಲಿ 10 ಪಟ್ಟು ಬೆಳವಣಿಗೆಯಾಗಿದೆ. ಟ್ಯಾಬ್ಲೆಟ್‌ಗಳಲ್ಲಿ, ಆಪಲ್ ಮತ್ತು ಸ್ಯಾಮ್‌ಸಂಗ್ ಪ್ರೀಮಿಯಂ ಉತ್ಪನ್ನಗಳಾಗಿವೆ. ಆಪಲ್ ಟ್ಯಾಬ್ಲೆಟ್‌ಗಳು ವರ್ಷದಿಂದ 10 ಪಟ್ಟು ಮತ್ತು ಸ್ಯಾಮ್‌ಸಂಗ್ ಟ್ಯಾಬ್ಲೆಟ್‌ಗಳು ವರ್ಷದಿಂದ 5 ಪಟ್ಟು ಬೆಳವಣಿಗೆ ದಾಖಲಿಸಿದೆ. ದೊಡ್ಡ ಉಪಕರಣಗಳ ಬಗ್ಗೆ ಗಮನ ಹರಿಸಿದಾಗ ನಿಸ್ಸಂಶಯವಾಗಿ ಇವುಗಳು ವಾಷಿಂಗ್ ಮೆಶಿನ್ , ರೆಫ್ರಿಜರೇಟರ್‌ಗಳು ಮತ್ತು ಎಸಿಗಳು ಕೂಡ ಸೇರಿವೆ. ಆದರೆ ಪ್ರೀಮಿಯಂ ಫ್ರಂಟ್-ಲೋಡ್ ವಾಷಿಂಗ್ ಮೆಷಿನ್‌ಗಳು ಹಾಗೂ ಅಥವಾ ದೊಡ್ಡ ಮಟ್ಟದ ಎಸಿಗಳು ವರ್ಷಕ್ಕೆ 30 ಪ್ರತಿಶತದಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಅವರು ಹೇಳಿದರು.
ಬೆಳವಣಿಗೆಗೆ ಕಾರಣವೇನು?
ಎಲ್ಲರಿಗೂ ತಿಳಿದಿರುವಂತೆ ಭಾರತವು ವಿಶ್ವದ ಅತೀ ದೊಡ್ಡ ಗ್ರಾಹಕ ಮಾರುಕಟ್ಟೆಯಾಗಿದ್ದು, ಇಲ್ಲಿ ಕೊಳ್ಳುವವರ ಸಂಖ್ಯೆಯಲ್ಲೂ ದಿನದಿಂದ ದಿನಕ್ಕೆ ಏರಿಕೆ ದಾಖಲಾಗುತ್ತಿದೆ. ಜನರ ಜೀವನಮಟ್ಟ ನಿಧಾನವಾಗಿ ಉತ್ತಮಗೊಳ್ಳುತ್ತಿದ್ದು, ಇದರ ಪರಿಣಾಮ ಸದ್ಯ ಖರೀದಿ ವಿಚಾರದಲ್ಲೂ ಗೋಚರಿಸಿದೆ. ಸದ್ಯ ಇದರ ಪ್ರಭಾವ ಅಮೆಜಾನ್‌ನ ದೀಪಾವಳಿ ಆಫರ್‌ನಲ್ಲೂ ಕಂಡುಬಂದಿದೆ. ಒಟ್ಟಾರೆಯಾಗಿ ಜೀವನ ಮಟ್ಟ ಸುಧಾರಣೆಯಾದಂತೆ ಜನರು ಹೊಸ ವಸ್ತುಗಳ ಖರೀದಿಯಲ್ಲಿ ತೊಡಗಿ, ಆರ್ಥಿಕತೆಯನ್ನು ಹೆಚ್ಚಿಸುತ್ತಿರುವುದು ಉತ್ತಮ ಸಂಗತಿ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications