ಇಂದಿನ ಬೆಳ್ಳಿ ದರ: ಸೋಮವಾರ ಬರುತ್ತಿದ್ದಂತೆ ಭಾರತದಲ್ಲಿ ಬೆಳ್ಳಿ ಬೆಲೆ (Silver Rate India) ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಇತಿಹಾಸದಲ್ಲಿ ಬೆಳ್ಳಿ ದರ ಭಾರೀ ಹೆಚ್ಚಳವಾಗಿದೆ. ಭಾರೀ ಏರಿಕೆಯ ಜೊತೆಗೆ ಕೇವಲ 1 ತಿಂಗಳಲ್ಲಿ ಬೆಳ್ಳೀ ದರ ಪ್ರತೀ ಕೆಜಿಗೆ 2 ಲಕ್ಷ ರೂ.ನಿಂದ 3 ಲಕ್ಷ ರೂ. ಗಡಿ ದಾಟಿದೆ. ಇನ್ನು ಭಾರತದಲ್ಲಿ ಬೆಳ್ಳಿ ದರ ದಾಖಲೆ ಬರೆದರೆ, ಅತ್ತ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲೂ ಬೆಳ್ಳಿ ಬೆಲೆ ಭಾರೀ ಏರಿಕೆಯ ಹಾದಿ ಹಿಡಿದಿದೆ. ಇದು ಚಿನ್ನ-ಬೆಳ್ಳಿ ಮೇಲೆ ಹೂಡಿಕೆದಾರರ ಬೇಡಿಕೆ ಹೇಗಿದೆ ಎಂಬುದನ್ನು ಎತ್ತಿ ತೋರಿಸಿದೆ.

ಅತ್ತ ಭಾರತದ ವಿವಿಧ ರಾಜ್ಯಗಳಲ್ಲಿ ಬೆಲೆ ಭಾರೀ ಏರಿಕೆ ಕಂಡಿದೆ. ಬೆಂಗಳೂರು, ದೆಹಲಿ, ಹೈದರಾಬಾದ್, ಮುಂಬೈ ರಾಜ್ಯಗಳಲ್ಲಿ ಬೆಳ್ಳಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದು, ಗ್ರಾಹಕರಂತೂ ಶಾಕ್ ಆಗಿದ್ದಾರೆ. ಹಾಗಿದ್ರೆ ಇಂದು ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ ಗೊತ್ತಾ?
ಜನವರಿ 19, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳಿಗ್ಗೆ 10:50ರ ವೇಳೆಗೆ ಬೆಳ್ಳಿ ದರ 3,00,489 ಕ್ಕೆ ತಲುಪಿದೆ. ಅಂದರೆ ಒಟ್ಟು 4.42% ಹೆಚ್ಚಳ ಕಂಡಿದೆ.
ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಬೆಳ್ಳಿ ದರ ಇಂದು ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಇತಿಹಾಸದಲ್ಲೇ ಬೆಳ್ಳಿ ಬೆಲೆ ಭಾರೀ ಏರಿಕೆ ಕಂಡಿದ್ದು, ಅತ್ತ ಹೂಡಿಕೆದಾರರ ಬೇಡಿಕೆಯೇ ಇದಕ್ಕೆ ಕಾರಣ. ಅದೇ ಪ್ರಕಾರ 1 ಗ್ರಾಂ ಬೆಳ್ಳಿ ಬೆಲೆ ಇಂದು ₹305 ರೂ. ಆಗಿದ್ದು, ನಿನ್ನೆ ₹295 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹10 ರೂ. ಹೆಚ್ಚಳವಾಗದೆ. ಹಾಗೆಯೇ 8 ಗ್ರಾಂ ಬೆಳ್ಳಿ ಬೆಲೆ ₹2,440 ರೂ. ಆಗಿದ್ದು, ನಿನ್ನೆ ₹2,360 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹80 ರೂ. ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿ ದರ ₹3,050 ರೂ. ಆಗಿದ್ದು, ನಿನ್ನೆ ₹2,950 ರೂ. ಇತ್ತು. ನಿನ್ನೆಗಿಂತ ಇಂದು ₹100 ರೂ. ಹೆಚ್ಚಳ ಕಂಡಿದೆ. ಹಾಗೆಯೇ 100 ಗ್ರಾ ಬೆಳ್ಳಿ ಬೆಲೆ ₹30,500 ರೂ. ಆಗಿದ್ದು, ನಿನ್ನೆ ₹29,500 ರೂ. ಇತ್ತು. ಒಟ್ಟು ₹1,000 ರೂ. ಹೆಚ್ಚಳ ಕಂಡಿದೆ. 1000 ಗ್ರಾಂ ಬೆಳ್ಳಿ ದರ ₹3,05,000 ರೂ. ಆಗಿದೆ. ಇದೇ ಮೊದಲ ಬಾರಿಗೆ ಬೆಳ್ಳಿ ಬೆಲೆ ಮೂರು ಲಕ್ಷ ಗಡಿ ದಾಡಿದೆ.
ಭಾರತದಲ್ಲಿ ಚಿನ್ನದ ಬೆಲೆ ಹೇಗಿದೆ?
ಭಾರತದಲ್ಲಿ ಬೆಳ್ಳಿಯಂತೆಯೇ ಬಂಗಾರದ ಬೆಲೆ ಕೂಡಾ ಭಾರೀ ಏರಿಕರ ಕಂಡಿದೆ. ಅದೇ ಪ್ರಕಾರ 24K ಚಿನ್ನದ ಬೆಲೆ ಇಂದು 14,569 ರೂ. ಆಗಿದ್ದು, 22K ಚಿನ್ನದ ಬೆಲೆ 13,355 ರೂ., 18K ಚಿನ್ನದ ಬೆಲೆ 10,927 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಇಂದು ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಅಂದರೆ ಇಂದು 10 ಗ್ರಾಂ ಬೆಳ್ಳಿ ಬೆಲೆ ₹3,050 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹30,500 ರೂ., 1 ಕೆಜಿ ಬೆಳ್ಳಿ ದರ ₹3,05,000 ರೂ. ಆಗಿದೆ. ಕೊನೆಗೂ ಇಂದು ಪ್ರತೀ ಗ್ರಾಂ ಬೆಳ್ಳಿ ಬೆಲೆ 3 ಸಾವಿರ ಗಡಿ ದಾಟಿದ್ದು, ಒಂದು ಕೆಜಿ ಬೆಲೆ 3 ಲಕ್ಷ ಗಡಿ ದಾಟಿದೆ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 3,180 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 31,800 ರೂ. ಇದೆ. ಅದೇ ರೀತಿ 1 ಕೆಜಿ ಬೆಳ್ಳಿ ದರ ಇಂದು 3,18,000 ರೂ. ಆಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ, ಚೆನ್ನೈನಲ್ಲಿ ಬೆಳ್ಳಿ ದರ ಮೊದಲಿನಿಂದಲೂ ಹೆಚ್ಚಳವೇ ಇರುತ್ತದೆ. ಅದೇ ರೀತಿ ಇಂದೂ ಕೂಡಾ ಮುಂದುವರೆದಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 3,050 ರೂ. ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ 30,500 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ಬೆಲೆ 3,05,000 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂನಲ್ಲಿ 10 ರೂ. ಹೆಚ್ಚಳ ಕಂಡಿದೆ.
ಹೈದರಾಬಾದ್ ಬೆಳ್ಳಿ ಬೆಲೆ:
ಹೈದರಾಬಾದ್‌ನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 3,180 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 31,800 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 3,18,000 ರೂ. ಆಗಿದೆ.
ದೆಹಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲೂ ಇಂದು ಬೆಳ್ಳಿ ದರ ಗಗನಕ್ಕೇರಿದೆ. ಅದೇ ರೀತಿ ಇಂದು 10 ಗ್ರಾಂ ಬೆಳ್ಳಿ ದರ 3,050 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ 30,500 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ₹3,05,000 ರೂ. ಆಗಿದೆ.
MCX ಬೆಳ್ಳಿ ದರ:
ಜನವರಿ 19, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳಿಗ್ಗೆ 10:50ರ ವೇಳೆಗೆ ಬೆಳ್ಳಿ ದರ 3,00,489 ಕ್ಕೆ ತಲುಪಿದೆ. ಅಂದರೆ ಒಟ್ಟು 4.42% ಹೆಚ್ಚಳ ಕಂಡಿದೆ.
ಸ್ಪಾಟ್ ಬೆಳ್ಳಿ ದರ:
ಜನವರಿ 19ರ GOLDPROCE.org ವರದಿ ಪ್ರಕಾರ, ಬೆಳಿಗ್ಗೆ 11:11 ರ ವೇಳೆಗೆ ಬೆಳ್ಳಿ ದರ ಪ್ರತೀ ಔನ್ಸ್‌ಗೆ $93.36 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ಬರೋಬ್ಬರಿ 3.59% ಹೆಚ್ಚಳ ಕಂಡಿದೆ.


Click it and Unblock the Notifications