ಭಾರತ (India) ಮಾತ್ರವಲ್ಲದೇ ವಿಶ್ವದೆಲ್ಲೆಡೆ ಚಿನ್ನ ಮತ್ತು ಬೆಳ್ಳಿಯನ್ನು ಸುರಕ್ಷಿತ ಆಸ್ತಿಗಳೆಂದು ಪರಿಗಣಿಸಲಾಗುತ್ತದೆ. ಅದೇ ಕಾರಣದಿಂದ ಇತ್ತೀಚೆಗೆ ಚಿನ್ನ, ಬೆಳ್ಳಿ ದರ (Gold-Silver Rate) ಭಾರೀ ಏರಿಕೆಯಾಗಲು ಕಾರಣವಾಗಿದೆ. ಆದ್ರೆ ಕಳೆದೆರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಕುಸಿತವಾಗಿದೆ. ಜನರ ನಿರೀಕ್ಷೆಯಂತೆಯೇ ಕೊನೆಗೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಆದ್ರೆ ಮುಂಬರುವ ದಿನಗಳಲ್ಲಿ ಚಿನ್ನ, ಬೆಳ್ಳಿ ದರ ಮತ್ತಷ್ಟು ಇಳಿಕೆಯಾಗುತ್ತಾ (Gold-Silver Prediction) ಎಂಬ ಪ್ರಶ್ನೆ ಜನರಲ್ಲಿ ಹುಟ್ಟುಕೊಂಡಿದೆ.

ಹೌದು, ಕಳೆದ ಎರಡು ದಿನಗಳಿಂದ ಬುಲಿಯನ್ ಮಾರುಕಟ್ಟೆ ಕೊಂಚ ಮಟ್ಟಿಗೆ ಕುಸಿತ ಕಂಡಿದೆ. ಚಿನ್ನ ಪ್ರಿಯರಂತೂ ಭಾರೀ ಖುಷಿಯಲ್ಲಿದ್ದಾರೆ. ಈ ಮಧ್ಯೆ ಸಾಮಾನ್ಯ ಜನರಿಂದ ಹಿಡಿದು ದೊಡ್ಡ ದೊಡ್ಡ ಹೂಡಿಕೆದಾರರು ಮುಂದಿನ ದಿನಗಳಲ್ಲಿ ಬೆಳ್ಳಿ ದರ ಮತ್ತಷ್ಟು ಇಳಿಕೆಯಾಗುತ್ತಾ? ಅಥವಾ ಏರಿಕೆಯಾಗುತ್ತಾ? ಎಂಬ ಕುತೂಹಲದಲ್ಲಿದ್ದಾರೆ.
ಇತ್ತೀಚಿನ ಮಾಹಿತಿಗಳ ಪ್ರಕಾರ ಬೆಳ್ಳಿ ಬೆಲೆ ಇಂದು (ಫೆ.2) $78-82 ರಲ್ಲಿ ಪ್ರತೀ ಔನ್ಸ್‌ಗೆ ವ್ಯಾಪಾರ ನಡೆಸುತ್ತಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ಇಂದು ಮತ್ತಷ್ಟು ಕುಸಿತ ಕಂಡಿದೆ.
ಕಳೆದ ತಿಂಗಳು ಶೇ. 30ಕ್ಕೂ ಹೆಚ್ಚು ಏರಿಕೆಯಾಗಿ ದಾಖಲೆ ಮಟ್ಟ ತಲುಪಿದ್ದ ಬೆಳ್ಳಿ ಬೆಲೆ, ಕಳೆದ ಶುಕ್ರವಾರ ಇದ್ದಕ್ಕಿದ್ದಂತೆ ಕುಸಿತ ಕಂಡಿದೆ. ಜಾಗತಿಕ ವಿದ್ಯಮಾನಗಳು ಹಾಗೂ ಲಾಭ ಗಳಿಕೆಯಿಂದ ದರದಲ್ಲಿ ಭಾರೀ ಇಳಿಕೆಯಾಗಿದ್ದು, ಮುಂದಿನ 2-3 ತಿಂಗಳುಗಳಲ್ಲಿ ಬೆಳ್ಳಿ ಬೆಲೆ ಏರಿಕೆಯಾಗುತ್ತಾ ಅಥವಾ ಮತ್ತಷ್ಟು ಕುಸಿಯುತ್ತಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಜಾಗತಿಕ ಮಾರುಕಟ್ಟೆಗಳಲ್ಲೂ ಇದೇ ಪ್ರವೃತ್ತಿ ಕಂಡುಬಂದಿದೆ. ಶುಕ್ರವಾರ ಒಂದೇ ದಿನ, ಬೆಳ್ಳಿ ಪ್ರತಿ ಔನ್ಸ್‌ಗೆ $36 ಡಾಲರ್ ಇಳಿಕೆ ಕಂಡು $78 ಡಾಲರ್‌ಗೆ ತಲುಪಿದೆ. ಅತ್ತ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $594 ಡಾಲರ್ ಕಡಿಮೆಯಾಗಿ $4,732 ಡಾಲರ್‌ಗೆ ಸ್ಥಿರವಾಗಿದೆ. ಈ ಏರಿಳಿತಗಳು ದೇಶೀಯ ಬುಲಿಯನ್ ಮಾರುಕಟ್ಟೆಗಳ ಮೇಲೆ ನೇರ ಪರಿಣಾಮ ಬೀರಿದೆ.
ಇಳಿಕೆಯಾಗುತ್ತಾ ಬೆಳ್ಳಿ ದರ?
ಸಿಟಿ ಬ್ರೋಕರೇಜ್ ವರದಿ ಪ್ರಕಾರ, ಮುಂದಿನ ಮೂರು ತಿಂಗಳಲ್ಲಿ ಬೆಳ್ಳಿ ಬೆಲೆ ಪ್ರತಿ ಔನ್ಸ್‌ಗೆ 150 ಡಾಲರ್‌ಗೆ ಏರಿಕೆಯಾಗಬಹುದು ಎಂದು ಹೇಳಲಾಗಿದೆ. ಇತ್ತೀಚಿನ ಮಾರುಕಟ್ಟೆ ಏರಿಕೆಯ ನಂತರ ಸಂಸ್ಥೆಯು ಹಿಂದಿನ $100 ಗುರಿಯನ್ನು ಪರಿಷ್ಕರಿಸಿದೆ. ಆದರೆ, ವಿಶ್ಲೇಷಕರು ಇಂತಹ ಮುನ್ನೋಟಗಳ ಬಗ್ಗೆ ಸಂಪೂರ್ಣವಾಗಿ ಹೇಳಲಾಗುವುದಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಬೆಳ್ಳಿ ಮಾರುಕಟ್ಟೆ ಏರಿಳಿತಗಳಿಂದ ಕೂಡಿರುತ್ತದೆ ಎಂದು ಎಚ್ಚರಿಸಿದ್ದಾರೆ.
ಚಿನ್ನ ಅಲ್ಲ, ಬೆಳ್ಳಿ:
ಚಿನ್ನದ ಬೆಲೆ ಈಗಾಗಲೇ ಗಣನೀಯವಾಗಿ ಏರಿಕೆ ಕಂಡಿದೆ. ಅದೇ ಕಾರಣದಿಂದ ಹೆಚ್ಚಿನ ಹೂಡಿಕೆದಾರರ ಗಮನ ಈಗ ಬೆಳ್ಳಿಯತ್ತ ಹರಿಯುತ್ತಿದೆ. ಚಿನ್ನಕ್ಕಿಂತ ಬೆಳ್ಳಿ ಕೈಗೆಟುಕುವ ದರದಲ್ಲಿದೆ. ಜೊತೆಗೆ, ಕೈಗಾರಿಕಾ ಬೇಡಿಕೆ ಹೆಚ್ಚುತ್ತಿರುವುದರಿಂದ ಬೆಳ್ಳಿ ಬೆಲೆಗೆ ಬೆಂಬಲ ನೀಡಿದಂತಾಗಿದೆ. ಈ ಅಂಶಗಳನ್ನು ಆಧರಿಸಿ, ಮುಂಬರುವ ವಾರಗಳಲ್ಲಿ ಬೆಳ್ಳಿ ಬೆಲೆ ಶೇ. 30-40% ರಷ್ಟು ಏರಿಕೆಯಾಗಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತೃೆ.
ಇನ್ನು ಬೆಲೆ ಏರಿಕೆಗೆ ಪೂರೈಕೆ ಕೊರತೆಯೇ ಪ್ರಮುಖ ಅಂಶವಾಗಿದೆ. ಭೂರಾಜಕೀಯ ಉದ್ವಿಗ್ನತೆಗಳಿಂದಾಗಿ ಹೂಡಿಕೆದಾರರು ಕೂಡಾ ಸುರಕ್ಷಿತ ಲೋಹಗಳತ್ತ ಗಮನಹರಿಸುತ್ತಿದ್ದಾರೆ. ಅದೇ ಕಾರಣದಿಂದ ಅಮೂಲ್ಯ ಲೋಹಗಳ ಬೆಲೆಗಳು ಏರಿಕೆಯ ಹಾದಿಯ್ಲಲಿದೆ ಎನ್ನಲಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications