ಭಾರತೀಯರ ಪಾಲಿಗೆ ಬೆಳ್ಳಿ ಕೂಡ ಸುಡುವಂತ ಲೋಹವಾಗಿದೆ. ಬೆಳ್ಳಿ ಬೆಲೆ ಕೂಡ ದಿನೇ ದಿನೆ ಗಗನಕ್ಕೇರುತ್ತಿದೆ. 2026ರಲ್ಲಿ ಬೆಳ್ಳಿ ಮೇಲೆ ಸಾಲ ದೊರೆಯುತ್ತದೆ ಎಂಬ ಅಂಶವು ಗಟ್ಟಿಯಾದ ನಂತರ ಬೆಳ್ಳಿಯಲೇ ನಿರಂತರ ಏರಿಕೆ ಕಂಡುಬಂದಿದೆ. ಕಳೆದ ಕೆಲ ತಿಂಗಳುಗಳ ಹಿಂದೆ 95 ರಿಂದ 100 ರೂ. ನಲ್ಲಿ ಚಲಿಸುತ್ತಿದ್ದ ಬೆಳ್ಳಿ ಬೆಲೆ, ಇಂದು 250 ರೂ.ಗಿಂತಲೂ ಹೆಚ್ಚಾಗಿದೆ. ಇದು ನಿಜಕ್ಕೂ ಹೂಡಿಕೆದಾರರಿಗೆ ಎಚ್ಚರಿಕೆಯ ಘಂಟೆ ಎಂದರೆ ತಪ್ಪಾಗಲ್ಲ. ಹಾಗಾದ್ರೆ ಇಂದು ಭಾರತದಲ್ಲಿ ಎಷ್ಟಿದೆ ಬೆಳ್ಳಿ ಬೆಲೆ, ಭಾರತದ ವಿವಿಧ ನಗರಗಳಲ್ಲಿ ಎಷ್ಟಿದೆ ರೇಟ್.

ಭಾರತದಲ್ಲಿ ಬೆಳ್ಳಿ ಬೆಲೆ:
ಇಂದು ಭಾರತದಲ್ಲಿ ಬೆಳ್ಳಿ ಬೆಲೆಗಳಲ್ಲಿ ಕೆಲವು ಏರಿಳಿತಗಳು ಗಮನಿಸಲಾಗಿವೆ. 1 ಗ್ರಾಂ ಬೆಳ್ಳಿ 263 ರೂ.ಗೆ ಮಾರಾಟವಾಗುತ್ತಿದೆ. ನಿನ್ನೆ ಈ ಬೆಲೆ ₹253 ಆಗಿದ್ದು ಇಂದಿಗೆ ಬರೋಬ್ಬರಿ ₹10 ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿ ಇಂದು ₹2,104, ನಿನ್ನೆ ₹2,024 ಆಗಿದ್ದು 100 ರೂ. ಏರಿಕೆ ನೋಡಿದೆ. ಹಾಗೆಯೇ 100 ಗ್ರಾಂ ಬೆಳ್ಳಿ ಬೆಲೆಯು ₹26,300 ಆಗಿದ್ದು ನಿನ್ನೆಗಿಂತ ಇಂದು 1,000 ರೂ. ಏರಿಕೆ ನೋಡಿದೆ. ಅದರಂತೆಯೂ ಒಂದು ಕೆ.ಜಿ ಬೆಳ್ಳಿ ಬೆಲೆ ಕೂಡ 10, 000 ರೂ. ಏರಿಕೆ ನೋಡಿ, ₹2,63,000 ತಲುಪಿದೆ.
ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆಗಳು ಹೀಗಿವೆ:
ಚೆನ್ನೈ, ಹೈದರಾಬಾದ್ ಮತ್ತು ಕೇರಳದಲ್ಲಿ 10 ಗ್ರಾಂ ₹2,830, 100 ಗ್ರಾಂ ₹28,300 ಮತ್ತು 1 ಕೆಜಿ ₹2,83,000 ಬೆಳ್ಳಿ ಬೆಲೆ ಇದೆ.
ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಪುಣೆ, ವಡೋದರಾ ಮತ್ತು ಅಹಮದಾಬಾದ್‌ನಲ್ಲಿ 10 ಗ್ರಾಂ ₹2,630, 100 ಗ್ರಾಂ ₹26,300 ಮತ್ತು 1 ಕೆಜಿ ₹2,63,000ಕ್ಕೆ ಲಭ್ಯವಿದೆ.
ಹೀಗೆ, ಕೆಲವು ನಗರಗಳಲ್ಲಿ ಬೆಲೆ ಸ್ವಲ್ಪ ಹೆಚ್ಚು, ಕೆಲವು ನಗರಗಳಲ್ಲಿ ಸಾಮಾನ್ಯ ಮಟ್ಟದಲ್ಲಿದೆ. ಈ ವ್ಯತ್ಯಾಸವು ಸ್ಥಳೀಯ ಬೇಡಿಕೆ, ಸರಬರಾಜು ಮತ್ತು ರಾಜ್ಯ ತೆರಿಗೆಗಳಿಂದ ಉಂಟಾಗುತ್ತದೆ.
ಬೆಳ್ಳಿ ಬೆಲೆಗಳು ನೇರವಾಗಿ ನಿರೀಕ್ಷಿಸಲು ಸಾಧ್ಯವಿಲ್ಲ, ಏಕೆಂದರೆ ಜಾಗತಿಕ ಮಾರುಕಟ್ಟೆ, ಹಬ್ಬದ ಅವಧಿ, ಆರ್ಥಿಕ ಪರಿಸ್ಥಿತಿ, ಹೂಡಿಕೆ ಚಟುವಟಿಕೆ ಮತ್ತು ಸರಬರಾಜಿನ ಪರಿಸ್ಥಿತಿಗಳು ಬೆಲೆ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ, ಖರೀದಿದಾರರು ಮತ್ತು ಹೂಡಿಕೆದಾರರು ದಿನನಿತ್ಯದ ಬೆಲೆ ಬದಲಾವಣೆಗಳನ್ನು ಗಮನಿಸಬೇಕು. ಬೆಳ್ಳಿ ಭಾರತದಲ್ಲಿ ಹೂಡಿಕೆ, ನಗದು ಸುರಕ್ಷತೆ ಮತ್ತು ಆಭರಣ ಉದ್ದೇಶಗಳಿಗೆ ಮುಖ್ಯ ಲೋಹವಾಗಿದೆ. ನಗರಾದ್ಯಾಂತ ವ್ಯತ್ಯಾಸಗಳು ಮತ್ತು ದಿನನಿತ್ಯದ ಬೆಲೆ ಬದಲಾವಣೆಗಳನ್ನು ತಿಳಿದುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಬಹುಮುಖ್ಯವಾಗಿದೆ.


Click it and Unblock the Notifications