ಭಾರತದಲ್ಲಿ ಬೆಳ್ಳಿ ಬೆಲೆಯಂತೂ (Silver Rate India) ಈ ವರ್ಷದಲ್ಲಿ ನಿರೀಕ್ಷೆಗೂ ಮೀರಿ, ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು. ಆದ್ರೆ ಕಳೆದೆರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಕುಸಿತ ಕಂಡಿದೆ. ಅದೇ ನಿರೀಕ್ಷೆಯನ್ನು ಬಜೆಟ್ ಮಂಡನೆಯ ದಿನ (ಫೆ.1) ಹೂಡಿಕೆದಾರರು ಇಟ್ಟುಕೊಂಡಿದ್ದರು. ಆದ್ರೆ ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಫೆಬ್ರವರಿ 1, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಭಾನುವಾರ ಬೆಳ್ಳಿ ದರ 2,67,903 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ಒಟ್ಟು 7.55% ಇಳಿಕೆಯಾಗಿದೆ.
ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಬೆಳ್ಳಿ ದರದಲ್ಲಿ ಇಂದು ಯಾವುದೇ ರೀತಿಯಲ್ಲಿ ಬದಲಾವಣೆಯಾಗಿಲ್ಲ. ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. 1 ಗ್ರಾಂ ಬೆಳ್ಳಿದರ ಇಂದು ₹350 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. ಇನ್ನು 8 ಗ್ರಾಂ ಬೆಳ್ಳಿ ಬೆಲೆ ಇಂದು ₹2,800 ರೂ. ಆಗಿದ್ದು, 10 ಗ್ರಾಂ ಬೆಳ್ಳಿ ಬೆಲೆ ₹3,500 ರೂ. ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿ ದರ ₹35,000 ರೂ. ಆಗಿದ್ದು, 1000 ಗ್ರಾಂ ಅಥವಾ 1 ಕೆಜಿ ಬೆಳ್ಳಿ ಬೆಲೆ ₹3,50,000 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ ಎಷ್ಟಿದೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. 10 ಗ್ರಾಂ ಬೆಳ್ಳಿ ದರ ಬೆಂಗಳೂರಿನಲ್ಲಿ ₹3,500 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹35,000 ರೂ., 1000 ಗ್ರಾಂ ಬೆಳ್ಳಿ ದರ ₹3,50,000 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆಯಲ್ಲೇ ಇಂದು ಮುಂದುವರೆದಿದೆ.
ಚೆನ್ನೈನಲ್ಲಿ ಬೆಳ್ಳಿ ದರ ಎಷ್ಟಿದೆ?
ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಪ್ರತೀ ಬಾರಿ ಚೆನ್ನೈನಲ್ಲಿ ಬೆಳ್ಳಿ ದರ ಸ್ವಲ್ಪ ಜಾಸ್ತಿಯೇ ಆಗುತ್ತದೆ. ಆದರೆ ಇಂದು ಚೆನ್ನೈನಲ್ಲಿ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 10 ಗ್ರಾಂ ಬೆಳ್ಳಿ ಬೆಲೆ ಚೆನ್ನೈನಲ್ಲಿ 3,500 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹35,000 ರೂ. ನಲ್ಲಿ ಸ್ಥಿರವಾಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ದರ ಇಂದು 3,50,000 ರೂ. ಆಗಿದೆ.
ಮುಂಬೈ ಬೆಳ್ಳಿ ದರ:
ಮಾಯಾನಗರಿ ಮುಂಬೈನಲ್ಲೂ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು 10 ಗ್ರಾಂ ಬೆಳ್ಳಿ ದರ ₹3,500 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 35,000 ರೂ., 1 ಕೆಜಿ ಬೆಳ್ಳಿ ಬೆಲೆ 3,50,000 ರೂ. ಆಗಿದೆ.
ಹೈದರಾಬಾದ್‌ನಲ್ಲಿ ಬೆಳ್ಳಿ ಬೆಲೆ ಎಷ್ಟಿದೆ?
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು 3,200 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 32,000 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 3,20,000 ರೂ. ಆಗಿದೆ.
MCX ಬೆಳ್ಳಿ ದರ:
ಫೆಬ್ರವರಿ 1, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಭಾನುವಾರ ಬೆಳ್ಳಿ ದರ 2,67,903 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ಒಟ್ಟು 7.55% ಇಳಿಕೆಯಾಗಿದೆ.


Click it and Unblock the Notifications