Silver Rate In India: ಬೆಳ್ಳಿ ಪ್ರಿಯರಿಗೆ ಬಂಪರ್‌ ಸುದ್ದಿ! ಕೊನೆಗೂ ಡಿ.29ಕ್ಕೆ ಪಾತಾಳಕ್ಕೆ ಕುಸಿದ ಬೆಳ್ಳಿ ದರ

ಭಾರತದಲ್ಲಿ ಬೆಳ್ಳಿ ಬೆಲೆ 2025ರ ಅಂತ್ಯದ ವೇಳೆಗೆ ಭಾರೀ ಏರಿಕೆ ಕಂಡಿದೆ. ಅದರಲ್ಲೂ ಈ ವರ್ಷವಂತೂ ದಾಖಲೆ ಬೆಲೆಯಲ್ಲಿ ಬೆಳ್ಳಿ ದರ ಏರಿಕೆಯಾಗಿದೆ. ಊಹೆಯೂ ಮಾಡದಷ್ಟು ಏರಿಕೆಯಾಗಿದ್ದರಿಂದ, ಹೂಡಿಕೆದಾರರಂತೂ ಬೆಚ್ಚಿಬಿದ್ದಿದ್ದಾರೆ. ಆದರೆ ಇಂದು (ಡಿ.29) ಚಿನ್ನದ ಬೆಲೆಯೂ ಇಳಿಕೆಯಾಗಿದ್ದು, ಅತ್ತ ಬೆಳ್ಳಿ ಬೆಲೆ (Silver Price) ಕೂಡಾ ಇಳಿಕೆಯಾಗಿದೆ. ಆದ್ರೆ ಒಂದು ಕಾಲದಲ್ಲಿ ಭಾರೀ ಕಮ್ಮಿಯಿದ್ದ ಬೆಳ್ಳಿ ದರ, ಇಂದು ದಾಖಲೆ ಸೃಷ್ಟಿಸಿದೆ. ಆದ್ರೆ ಇಂದು ಬೆಳ್ಳಿ ಪ್ರಿಯರಿಗೆ ಕೊಂಚ ರಿಲೀಫ್‌ ಸಿಕ್ಕಿದೆ. ಹಾಗಿದ್ರೆ ಇಂದು ದೇಶದಲ್ಲಿ ಬೆಳ್ಳಿ ಬೆಲೆ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಳ್ಳಿಪ್ರಿಯರಿಗೆ ಬಂಪರ್‌ ಸುದ್ದಿ! ಕೊನೆಗೂ ಪಾತಾಳಕ್ಕೆ ಕುಸಿದ ಬೆಳ್ಳಿ

ಇನ್ನು ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ಫ್ಯೂಚರ್‌ಗಳು ದಾಖಲೆ ಬೆಲೆಯನ್ನು ಮುಟ್ಟಿದ ನಂತರ, ಇಂದು ಪ್ರತೀ ಕೆಜಿಗೆ 2.42 ಲಕ್ಷ ರೂ. ಕುಸಿದವು. ಹಾಗಿದ್ರೆ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್‌, ಪುಣೆ ಮತ್ತು ಇತರೆ ಭಾರತೀಯ ನಗರಗಳಲ್ಲಿ ಬೆಳ್ಳಿ ದರ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬೆಳ್ಳಿ ದರ:
ಸತತ 7 ದಿನಗಳ ನಂತರ ಭಾರತದಲ್ಲಿ ಇಂದು ಬೆಳ್ಳಿ ದರ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಅಂದರೆ ಇಂದು ಭಾರತದಲ್ಲಿ 1 ಗ್ರಾಂ ಬೆಳ್ಳಿ ದರ ₹258 ರೂ. ಆಗಿದ್ದು, ನಿನ್ನೆ ₹262 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂ ಬೆಳ್ಳಿಯಲ್ಲಿ ₹4 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹2,064 ರೂ. ಆಗಿದ್ದು, ನಿನ್ನೆ ₹2,096 ರೂ. ಇತ್ತು. ನಿನ್ನೆಗಿಂತ ಇಂದು ₹32 ರೂ. ಇಳಿಕೆಯಾಗಿದೆ. ಅದೇ ರೀತಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,580 ರೂ. ಆಗಿದ್ದು, ನಿನ್ನೆ ₹2,620 ರೂ. ಇತ್ತು. ನಿನ್ನೆಗಿಂತ ಇಂದು ₹40 ರೂ. ಕುಸಿತ ಕಂಡಿದೆ. ಹಾಗೆಯೇ 100 ಗ್ರಾಂ ಬೆಳ್ಳಿ ಬೆಲೆ ₹25,800 ರೂ. ಆಗಿದ್ದು, ನಿನ್ನೆ ₹26,200 ರೂ. ಇತ್ತು. ಒಟ್ಟು ₹400 ರೂ. ಇಳಿಕೆಯಾಗಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ದರ ₹2,58,000 ರೂ. ಆಗಿದ್ದು, ನಿನ್ನೆ ₹2,62,000 ರೂ. ಇತ್ತು. 2025ರ ಆರಂಭದಿಂದ ಇಲ್ಲಿಯವರೆಗೆ ಬೆಳ್ಳಿಯ ದರ ಸುಮಾರು 179% ರಷ್ಟು ಏರಿಕೆಯ ಹಾದಿ ಹಿಡಿದಿದೆ.

ಬೆಂಗಳೂರು ಬೆಳ್ಳಿ ದರ:
ಇನ್ನು ಬೆಂಗಳೂರಿನಲ್ಲೂ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಅಂದರೆ ಇಂದು ಬೆಂಗಳೂರಿನಲ್ಲಿ ಪ್ರತೀ ಗ್ರಾಂ ಬೆಳ್ಳಿಯ ಬೆಲೆ 2,580 ರೂ. ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿ ದರ 25,800 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ಬೆಲೆ 2,58,000 ರೂಪಾಯಿ ಆಗಿದೆ.

ಚೆನ್ನೈ ಬೆಳ್ಳಿ ದರ:
ಇನ್ನು ಚೆನ್ನೈ ಬೆಳ್ಳಿ ದರ ನೋಡುವುದಾದ್ರೆ, ಪ್ರತೀ ಗ್ರಾಂ ಬೆಳ್ಳಿ ಬೆಲೆ ಇಂದು 2,810 ರೂ., 100 ಗ್ರಾಂ ಬೆಳ್ಳಿ ದರ 28, 100 ರೂ., 1 ಕೆಜಿ ಬೆಳ್ಳಿ ಬೆಲೆ 2,81,000 ರೂ. ಇದೆ.

ಮುಂಬೈ ಬೆಳ್ಳಿ ದರ:
ಮುಂಬೈನಲ್ಲೂ ಬೆಳ್ಳಿಯಲ್ಲಿ ಭಾರೀ ಇಳಿಕೆಯಾಗಿದೆ. ಇಂದು ಮುಂಬೈನಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ 2,580 ರೂ., 100 ಗ್ರಾಂ ಬೆಳ್ಳಿ ದರ 25,800 ರೂ., 1 ಕೆಜಿ ಬೆಳ್ಳಿ ಬೆಲೆ 2,58,000 ರೂ. ಆಗಿದೆ.

ದೆಹಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ ಇಂದು 2,580 ರೂ., 100 ಗ್ರಾಂ ಬೆಳ್ಳಿ ದರ 25,800 ರೂ., 1000 ಗ್ರಾಂ ಬೆಳ್ಳಿ ಬೆಲೆ 2,58,000 ರೂ. ಆಗಿದೆ.

ಸ್ಪಾಟ್‌ ಬೆಳ್ಳಿ ದರದ ವಿವರ:
ಗೋಲ್ಡ್‌ ಪ್ರೈಸ್‌ ವರದಿ ಪ್ರಕಾರ, ಬೆಳ್ಳಿ ದರ ಇಂದು ಪ್ರತೀ ಔನ್ಸ್‌ಗೆ $75.38 ಡಾಲರ್‌ ತಲುಪಿದ್ದು, ಒಟ್ಟು 4.72% ಕುಸಿತ ಕಂಡಿದೆ.

(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+