ಚಿನ್ನದ ಬೆಲೆ (Gold Rate) ಒಮ್ಮೆ ಇಳಿಕೆ ಕಂಡರೂ, ಬೆಳ್ಳಿ ಬೆಲೆ ಮಾತ್ರ ಇಳಿಕೆಯಾಗುವಂತೆ ಕಾಣುತ್ತಿಲ್ಲ. ಒಂದು ಕಾಲದಲ್ಲಿ ಅಗ್ಗದಲ್ಲಿ ಸಿಗುತ್ತಿದ್ದ ಬೆಳ್ಳಿ, ಇಂದು ದಿಢೀರ್ ಏರಿಕೆಯ ಹಾದಿ ಹಿಡಿದಿದೆ. ದಿನ ಹೋದಂತೆ, 5 ರೂ., 10 ರೂ. ಎಂದು ಏರಿಕೆ ಕಾಣುತ್ತಲೇ ಇದೆ. ಇದೀಗ ಇಂದೂ (ಬುಧವಾರ) ಭಾರತದಲ್ಲಿ ಬೆಳ್ಳಿ ದರ ಏರಿಕೆ (Silver Rate India) ಕಂಡಿದೆ. ಹಾಗಿದ್ರೆ ಬೆಂಗಳೂರು ಸೇರಿ, ಬೇರೆ ಬೇರೆ ರಾಜ್ಯಗಳಲ್ಲಿ ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜನವರಿ 28, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳಿಗ್ಗೆ 12:18 ರ ವೇಳೆಗೆ ಬೆಳ್ಳಿ ದರ 3,78,234 ಕ್ಕೆ ತಲುಪಿದೆ. ಅಂದರೆ ಹಿಂದಿನ ವಹಿವಾಟಿಗೆ ಹೋಲಿಕೆ ಮಾಡಿದ್ರೆ ಇಂದು 6.16% ಹೆಚ್ಚಳವಾಗಿದೆ.
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಭಾರತದಲ್ಲಿ ಬೆಳ್ಳಿ ದರ ಇಂದು ಭಾರೀ ಏರಿಕೆ ಕಂಡಿದೆ. ಒಂದೇ ದಿನ ಪ್ರತೀ ಗ್ರಾಂ ಬೆಳ್ಳಿಯಲ್ಲಿ 10 ರೂ. ಏರಿಕೆಯಾಗಿದ್ದು, ಆ ಮೂಲಕ 1 ಗ್ರಾಂ ಬೆಳ್ಳಿ ದರ ₹380 ರೂ.ಗೆ ತಲುಪಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹3,040 ರೂ. ಆಗಿದ್ದು, ನಿನ್ನೆ ₹2,960 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹80 ರೂ. ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹3,800 ರೂ. ಆಗಿದ್ದು, ನಿನ್ನೆ ₹3,700 ರೂ. ಇತ್ತು. ನಿನ್ನೆಗಿಂತ ಇಂದು ₹100 ರೂ. ಹೆಚ್ಚಳ ಕಂಡಿದೆ. 100 ಗ್ರಾಂ ಬೆಳ್ಳಿ ಬೆಲೆ ₹38,000 ರೂ. ಆಗಿದ್ದು, ಒಂದು ಕೆಜಿ ಬೆಳ್ಳಿ ದರ ₹3,80,000 ರೂ. ತಲುಪುವ ಮೂಲಕ ದಾಖಲೆ ಬರೆದಿದೆ.
ಭಾರತದಲ್ಲಿ ಚಿನ್ನದ ಬೆಲೆ ಹೇಗಿದೆ?
ಭಾರತದಲ್ಲಿ ಇಂದು ಚಿನ್ನದ ಬೆಲೆಯೂ ಭಾರೀ ಏರಿಕೆ ಕಂಡಿದೆ. 24K ಚಿನ್ನದ ಒಂದು ಗ್ರಾಂ ಬೆಲೆ 16,517 ರೂ. ಆಗಿದ್ದು, 22K ಚಿನ್ನದ ಬೆಲೆ 15,140 ರೂ. ತಲುಪಿದೆ. ಅದೇ ರೀತಿ 18K ಚಿನ್ನದ ಬೆಲೆ 12,388 ರೂ. ತಲುಪಿದೆ..
ಬೆಂಗಳೂರಿನಲ್ಲಿ ಬೆಳ್ಳಿ ದರ ಹೇಗಿದೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರವೂ ಹೆಚ್ಚಳ ಕಂಡಿದೆ. ಇಂದು 10 ಗ್ರಾಂ ಬೆಳ್ಳಿ ಬೆಲೆ ₹3,800 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹38,000 ರೂ., 1 ಕೆಜಿ ಬೆಳ್ಳಿ ದರ ₹3,80,000 ರೂ. ಆಗಿದೆ. ಅಂದರೆ ನಿನ್ನೆಗಿಂತ 10 ರೂ. ಹೆಚ್ಚಾಗಿದ್ದು, 10 ಗ್ರಾಂನಲ್ಲಿ 100 ರೂ. ಹೆಚ್ಚಳ ಕಂಡಿದೆ.
ಚೆನ್ನೈ ಬೆಳ್ಳಿ ದರ:
ಇತರ ರಾಜ್ಯಗಳಿಗೆ ಹೋಲಿಸಿದ್ರೆ, ಚೆನ್ನೈನಲ್ಲಿ ಬೆಳ್ಳಿ ದರ ಏರಿಕೆಯೇ ಇರುತ್ತದೆ. ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 4,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 40,000 ರೂ. ಇದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ದರ ಇಂದು 4,00,000 ರೂ. ಆಗಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 3,800 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 38,000 ರೂ., 1 ಕೆಜಿ ಬೆಳ್ಳಿ ಬೆಲೆ 3,80,000 ರೂ. ಆಗಿದೆ. ಮಾಯಾನಗರಿ ಮುಂಬೈ ಜನರು ಬೆಳ್ಳಿ ಬೆಲೆ ಏರಿಕೆಯಿಂದ ಶಾಕ್ ಆಗಿದ್ದಾರೆ.
ಹೈದರಾಬಾದ್ ಬೆಳ್ಳಿ ಬೆಲೆ:
ಚೆನ್ನೈನಂತೆ ಹೈದರಾಬಾದ್‌ನಲ್ಲೂ ಬೆಳ್ಳಿ ದರ ಏರಿಕೆಯ ಹಾದಿ ಹಿಡಿದಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು 4,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 40,000 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 4,00,000 ರೂ. ಆಗಿದೆ.
ದೆಹಲಿಯಲ್ಲಿ ಬೆಳ್ಳಿ ದರ ಎಷ್ಟಿದೆ?
ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 3,800 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ 38,000 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ₹3,80,000 ರೂ. ಆಗಿದೆ.
MCX ಬೆಳ್ಳಿ ದರ ಎಷ್ಟಿದೆ?
ಜನವರಿ 28, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳಿಗ್ಗೆ 12:18 ರ ವೇಳೆಗೆ ಬೆಳ್ಳಿ ದರ 3,78,234 ಕ್ಕೆ ತಲುಪಿದೆ. ಅಂದರೆ ಹಿಂದಿನ ವಹಿವಾಟಿಗೆ ಹೋಲಿಕೆ ಮಾಡಿದ್ರೆ ಇಂದು 6.16% ಏರಿಕೆ ಕಂಡಿದೆ.
ಸ್ಪಾಟ್ ಬೆಳ್ಳಿ ದರ:
ಜನವರಿ 28ರ GOLDPROCE.org ವರದಿ ಪ್ರಕಾರ, ಬೆಳಿಗ್ಗೆ 12:36 ರ ವೇಳೆಗೆ ಬೆಳ್ಳಿ ದರ ಪ್ರತೀ ಔನ್ಸ್‌ಗೆ $114.65 ಕ್ಕೆ ರೀಚ್ ಆಗಿದೆ. ಹಿಂದಿನ ವಹಿವಾಟಿಗಿಂತ ಪ್ರಸ್ತುತ 8.07% ಏರಿಕೆಯಾಗಿದೆ.


Click it and Unblock the Notifications