ಅಬ್ಬಾ, ಕೊನೆಗೂ ಇಳಿಕೆಯಾಯ್ತು ಭಾರತದಲ್ಲಿ ಬೆಳ್ಳಿ ದರ (Gold Rate India). ಕೆಲವು ದಿನಗಳಿಂದ ಭಾರೀ ಏರಿಕೆಯ ಹಾದಿ ಹಿಡಿದಿದ್ದ ಬೆಳ್ಳಿ ದರ, ಇಂದು ದಿಢೀರ್ ಕುಸಿತ ಕಂಡಿದೆ. ಚಿನ್ನದ ಬೆಲೆ ಇಳಿಕೆಯಾದ್ರೂ, ಬೆಳ್ಳಿ ಬೆಲೆ ಮಾತ್ರೆ ಗಗನಕ್ಕೇರುತ್ತಲೇ ಇತ್ತು. ಈ ವಾರವಂತೂ ದಾಖಲೆ ಬೆಲೆಯಲ್ಲಿ ಬೆಳ್ಳಿ ದರ ಏರಿಕೆಯಾಗಿತ್ತು. ಆದ್ರೆ ಇದೀಗ ದಿಢೀರ್ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಹಾಗಿದ್ರೆ ಎಷ್ಟು ಇಳಿಕೆಯಾಗಿದೆ ಗೊತ್ತಾ?

ಜನವರಿ 16, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಇಂದು ಭಾರೀ ಇಳಿಕೆ ಕಂಡಿದೆ. ಭಾರತೀಯ ಸಮಯ 11:58 ರ ಹೊತ್ತಿಗೆ ಪ್ರತೀ ಕೆಜಿಗೆ ಇಂದು 2,90,486 ಲಕ್ಷ ರೂ. ತಲುಪಿದೆ. ಹಿಂದಿನ ವಹಿವಟಿಗೆ ಹೋಲಿಸಿದ್ರೆ ಇಂದು ಒಟ್ಟು 0.37% ರಷ್ಟು ಇಳಿಕೆ ಕಂಡಿದೆ. ಹಾಗಿದ್ರೆ ಬೇರೆ ರಾಜ್ಯಗಳಲ್ಲಿ ಬೆಳ್ಳಿ ದರ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಭಾರತದಲ್ಲಿ ಬೆಳ್ಳಿ ದರ:
ಇಂದು ಚಿನ್ನ, ಬೆಳ್ಳಿ ಎರಡರ ಬೆಲೆಯೂ ಭಾರೀ ಇಳಿಕೆ ಕಂಡಿದೆ. ಇಂದು 1 ಗ್ರಾಂ ಬೆಳ್ಳಿ ದರ ಇಂದು ₹292 ರೂ. ಆಗಿದ್ದು, ನಿನ್ನೆ ₹295 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಪ್ರತೀ ಗ್ರಾಂ ಬೆಳ್ಳಿಯಲ್ಲಿ ₹15 ರೂ. ಇಳಿಕೆ ಕಂಡಿದೆ. 8 ಗ್ರಾಂ ಬೆಳ್ಳಿ ಬೆಲೆ ₹2,336 ರೂ. ಆಗಿದೆ. ನಿನ್ನೆ ₹2,360 ರೂ. ಇತ್ತು. ನಿನ್ನೆಗಿಂತ ಇಂದು ₹24 ರೂ. ಕುಸಿತ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,920 ರೂ. ಆಗಿದೆ. ನಿನ್ನೆ ₹2,950 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹30 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ ₹29,200 ರೂ. ಆಗಿದ್ದು, ನಿನ್ನೆ ₹29,500 ರೂ. ಇತ್ತು. ಒಟ್ಟು ₹300 ರೂ. ಇಳಿಕೆಯಾಗಿದೆ. 1000 ಗ್ರಾಂ ಬೆಳ್ಳಿ ಬೆಲೆ ₹2,92,000 ರೂ. ಆಗಿದ್ದು, ನಿನ್ನೆ ₹2,95,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹3,000 ರೂ. ಇಳಿಕೆಯಾಗಿದೆ.
ಭಾರತದಲ್ಲಿ ಚಿನ್ನದ ಬೆಲೆ ಹೇಗಿದೆ?
ಭಾರತದಲ್ಲಿ ಇಂದು ಚಿನ್ನದ ಬೆಲೆ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಅದೇ ರೀತಿ ಇಂದು (ಜ.16) 24K ಚಿನ್ನದ ಬೆಲೆ 14,340 ರೂ., 22K ಚಿನ್ನದ ಬೆಲೆ 13,145 ರೂ., 18K ಚಿನ್ನದ ಬೆಲೆ 10,755 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ ಹೇಗಿದೆ?
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಯಾವಾಗ ಇಳಿಕೆಯಾಗುತ್ತೆ ಎಂದು ಹಲವರು ಕಾಯುತ್ತಿದ್ದರು. ಅಂಥವರಿಗಾಗಿ ಕೊನೆಗೂ ಇಂದು ಗುಡ್ ನ್ಯೂಸ್ ಸಿಕ್ಕಿದೆ. ಅಂದರೆ ಇಂದು 10 ಗ್ರಾಂ ಬೆಳ್ಳಿ ಬೆಲೆ ₹2,920 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹29,200 ರೂ., 1 ಕೆಜಿ ಬೆಳ್ಳಿ ದರ ₹2,92,000 ರೂ. ಆಗಿದೆ. ಅಂದರೆ ಇಂದು ಪ್ರತೀ ಗ್ರಾಂ ಬೆಳ್ಳಿಯಲ್ಲಿ 3 ರೂ. ಇಳಿಕೆಯಾಗಿದೆ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 3,060 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 30,600 ರೂ. ಇದೆ. ಅದೇ ರೀತಿ 1 ಕೆಜಿ ಬೆಳ್ಳಿ ದರ ಇಂದು 3,06,000 ರೂ. ಆಗಿದೆ. ಪ್ರತೀ ಬಾರಿ ಬೆಳ್ಳಿ ಬೆಲೆ ಚೆನ್ನೈನಲ್ಲಿ ಏರಿಕೆಯಲ್ಲೇ ಇರುತ್ತೆ. ಆದ್ರೆ ಇಂದು ಚೆನ್ನೈನಲ್ಲೂ ಬೆಳ್ಳಿ ಬೆಲೆ ಇಳಿಕೆ ಕಂಡಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 2,920 ರೂ. ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ 29,200 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ಬೆಲೆ 2,92,000 ರೂ. ಆಗಿದೆ. ಅಂತೂ ಮುಂಬೈನಲ್ಲೂ ಇಂದು ಬೆಳ್ಳಿ ದರ ಇಳಿಕೆಯಾಗಿದೆ.
ಹೈದರಾಬಾದ್ ಬೆಳ್ಳಿ ಬೆಲೆ:
ಹೈದರಾಬಾದ್‌ನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 3,060 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 30,600 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 3,06,000 ರೂ. ಆಗಿದೆ.
ದೆಹಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲೂ ಇಂದು ಬೆಳ್ಳಿ ದರ ಕೊಂಚ ಇಳಿಕೆ ಕಂಡಿದೆ. ಇಂದು 10 ಗ್ರಾಂ ಬೆಳ್ಳಿ ದರ ₹2,920 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹29,200 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ₹2,92,000 ರೂ. ಆಗಿದೆ.
MCX ಬೆಳ್ಳಿ ದರ:
ಜನವರಿ 16, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಇಂದು ಭಾರೀ ಇಳಿಕೆ ಕಂಡಿದೆ. ಭಾರತೀಯ ಸಮಯ 11:58 ರ ಹೊತ್ತಿಗೆ ಪ್ರತೀ ಕೆಜಿಗೆ ಇಂದು 2,90,486 ಲಕ್ಷ ರೂ. ತಲುಪಿದೆ. ಹಿಂದಿನ ವಹಿವಟಿಗೆ ಹೋಲಿಸಿದ್ರೆ ಇಂದು ಒಟ್ಟು 0.37% ರಷ್ಟು ಇಳಿಕೆ ಕಂಡಿದೆ.
ಸ್ಪಾಟ್ ಬೆಳ್ಳಿ ದರ:
ಜನವರಿ 16ರ GOLDPROCE.org ವರದಿ ಪ್ರಕಾರ, ಬೆಳ್ಳಿ ದರ ಪ್ರತೀ ಔನ್ಸ್‌ಗೆ $89.91 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗಿಂತ ಮಧ್ಯಾಹ್ನ 12:20ರ ಸಮಯದಲ್ಲಿ 2.48% ಇಳಿಕೆ ಕಂಡಿದೆ.


Click it and Unblock the Notifications