ಭಾರತದಲ್ಲಿ (India) ಈ ತಿಂಗಳು ಆರಂಭದಿಂದಲೇ ಬೆಳ್ಳಿ ದರ ಏರಿಕೆಯೇ ಆಗುತ್ತಿತ್ತು. ಅದರಲ್ಲೂ ಕಳೆದ ವಾರದಲ್ಲಿ ದಾಖಲೆ ಪ್ರಮಾಣದಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿತ್ತು. ಇದೀಗ ಗಗನಕ್ಕೇರಿದ್ದ ಬೆಳ್ಳಿ ದರ, ಕೊನೆಗೂ ಪಾತಾಳಕ್ಕಿಳಿದಿದೆ. ಹಾಗಿದ್ರೆ ಇಂದು ಭಾರತದಲ್ಲಿ ಬೆಳ್ಳಿ ದರ (Silver Rate India) ಎಷ್ಟು ಕಡಿಮೆಯಾಗಿದೆ? ಒಟ್ಟು ಬೆಲೆ ಎಷ್ಟಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಜನವರಿ 30, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಶುಕ್ರವಾರ 2,91,922 ಕ್ಕೆ ತಲುಪಿದೆ. ಅಂದರೆ ಜನವರಿ 30ರಂದು, ಹಿಂದಿನ ವಹಿವಾಟಿಗೆ ಹೋಲಿಸಿದ್ರೆ 3.00% ಇಳಿಕೆಯಾಗಿದೆ.
ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಬೆಳ್ಳಿ ದರ ದಾಖಲೆ ಮಟ್ಟದಲ್ಲಿ ಇಳಿಕೆ ಕಂಡಿದೆ. ಇಂದು 1 ಗ್ರಾಂ ಬೆಳ್ಳಿ ದರ ಇಂದು ₹350 ರೂ.ಗೆ ಆಗಿದ್ದು, ನಿನ್ನೆ ₹395 ರೂ. ಇತ್ತು. 8 ಗ್ರಾಂ ಬೆಳ್ಳಿ ದರ ₹2,800 ರೂ. ಆಗಿದ್ದು, ನಿನ್ನೆ 3,160 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ ಬರೋಬ್ಬರಿ ₹360 ರೂ. ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ₹3,500 ರೂ. ಆಗಿದ್ದು, ನಿನ್ನೆ ₹3,950 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹450 ರೂ. ಹೆಚ್ಚಳ ಕಂಡಿದೆ. 100 ಗ್ರಾಂ ಬೆಳ್ಳಿ ಬೆಲೆ ₹35,000 ರೂ. ಆಗಿದ್ದು, ನಿನ್ನೆ 39,500 ರೂ. ಇತ್ತು. ಒಟ್ಟು 4,500 ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ ₹3,50,000 ರೂ. ಆಗಿದ್ದು, ನಿನ್ನೆ ₹3,95,000 ರೂ. ಇತ್ತು. ಒಂದೇ ದಿನದಲ್ಲೇ ಬರೋಬ್ಬರಿ ₹45,000 ರೂ. ಇಳಿಕೆ ಕಂಡಿದೆ.
ಭಾರತದಲ್ಲಿ ಚಿನ್ನದ ಬೆಲೆ ಹೇಗಿದೆ?
ಭಾರತದಲ್ಲಿ ಇಂದು ಚಿನ್ನದ ಬೆಲೆ ಕೂಡಾ ಭರ್ಜರಿ ಇಳಿಕೆಯಾಗಿದೆ. ಪ್ರತೀ ಗ್ರಾಂ ಚಿನ್ನದಲ್ಲಿ 862 ರೂ. ಇಳಿಕೆಯಾಗಿದೆ. 24K ಚಿನ್ನದ ಬೆಲೆ ಇಂದು 16,058 ರೂ., 22K ಚಿನ್ನದ ಬೆಲೆ ಇಂದು 14,720 ರೂ., 18K ಚಿನ್ನದ ಬೆಲೆ ಇಂದು 12,044 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ ಹೇಗಿದೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದಷ್ಟೇ ಬೆಳ್ಳಿ ಪ್ರಿಯರೂ ಇದ್ದಾರೆ. ಅದೇ ರೀತಿ ಇಂದು 10 ಗ್ರಾಂ ಬೆಳ್ಳಿ ಬೆಲೆ ₹3,500 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 35,000 ರೂ., 1 ಕೆಜಿ ಬೆಳ್ಳಿ ದರ ₹3,50,000 ರೂ. ಆಗಿದೆ.
ಚೆನ್ನೈನಲ್ಲಿ ಬೆಳ್ಳಿ ದರ ಎಷ್ಟಿದೆ?
ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಪ್ರತೀ ಬಾರಿ ಚೆನ್ನೈನಲ್ಲಿ ಬೆಳ್ಳಿ ದರ ಸ್ವಲ್ಪ ಜಾಸ್ತಿಯೇ ಆಗುತ್ತದೆ. ಆದರೆ ಇಂದು 10 ಗ್ರಾಂ ಬೆಳ್ಳಿ ಬೆಲೆ ಚೆನ್ನೈನಲ್ಲಿ 3,500 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹35,000 ರೂ. ಇದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ದರ ಇಂದು 3,50,000 ರೂ. ಆಗಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ ಇಂದು 10 ಗ್ರಾಂ ಬೆಳ್ಳಿ ದರ ₹3,500 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 35,000 ರೂ., 1 ಕೆಜಿ ಬೆಳ್ಳಿ ಬೆಲೆ 3,50,000 ರೂ. ಆಗಿದೆ.
ಹೈದರಾಬಾದ್‌ನಲ್ಲಿ ಬೆಳ್ಳಿ ಬೆಲೆ ಎಷ್ಟಿದೆ?
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು 3,500 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 35,000 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 3,50,000 ರೂ. ಆಗಿದೆ.
ದೆಹಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 3,500 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ 35,000 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ₹3,50,000 ರೂ. ಆಗಿದೆ.
MCX ಬೆಳ್ಳಿ ದರ:
ಜನವರಿ 30, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಶುಕ್ರವಾರ 2,91,922 ಕ್ಕೆ ತಲುಪಿದೆ. ಅಂದರೆ ಜನವರಿ 30ರಂದು, ಹಿಂದಿನ ವಹಿವಾಟಿಗೆ ಹೋಲಿಸಿದ್ರೆ 3.00% ಇಳಿಕೆಯಾಗಿದೆ.
ಸ್ಪಾಟ್ ಬೆಳ್ಳಿ ದರ:
ಜನವರಿ 30ರ GOLDPROCE.org ವರದಿ ಪ್ರಕಾರ, ಬೆಳ್ಳಿ ದರ ಶುಕ್ರವಾರ $85.34 ಆಗಿದ್ದು. ಹಿಂದಿನ ವಹಿವಾಟುಗಳಿಗೆ ಹೋಲಿಸಿದ್ರೆ 25.46% ಇಳಿಕೆ ಕಂಡಿದೆ.


Click it and Unblock the Notifications