ಭಾರತದಲ್ಲಿ ಬೆಳ್ಳಿ ಪ್ರಿಯರು ಬಹಳಷ್ಟು ಇದ್ದಾರೆ. ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಬೆಳ್ಳಿ ದರ ಇಂದು ಸ್ಥಿರವಾಗಿದೆ. ಕಳೆದ ತಿಂಗಳಷ್ಟೇ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಬೆಳ್ಳಿ ದರ (Silver Rate), ಈಗ ಮತ್ತೆ ಇಳಿಕೆಯತ್ತ ಸಾಗುತ್ತಿದೆ. ಹಾಗಿದ್ರೆ ಇಂದು ಎಷ್ಟಿದೆ ಗೊತ್ತಾ ಬೆಳ್ಳಿ ದರ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಇಂದು ಬೆಳ್ಳಿ ದರ ಕೆಟ್ಟು ನಿಂತ ಗಾಡಿಯಂತೆ ನಿಂತು ಬಿಟ್ಟಿದೆ. ಅತ್ತ ಏರಿಕೆಯೂ ಇಲ್ಲ, ಇತ್ತ ಇಳಿಕೆಯೂ ಇಲ್ಲವೆಂಬಂತೆ, ಬೆಳ್ಳಿ ದರ ಸ್ಥಿರವಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು ₹290 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ. 8 ಗ್ರಾಂ ಬೆಳ್ಳಿ ದರ ಇಂದು ₹2,320 ರೂ. ಆಗಿದ್ದು, ನಿನ್ನೆಯಷ್ಟೇ ಬೆಲೆ ಇದೆ. ಇನ್ನು 10 ಗ್ರಾಂ ಬೆಳ್ಳಿ ದರ ₹2,900 ರೂ. ಇದ್ದು, 100 ಗ್ರಾಂ ಬೆಳ್ಳಿ ದರ ಇಂದು ₹29,000 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ದರ ₹2,90,000 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗದೆ, ಸ್ಥಿರವಾಗಿಬಿಟ್ಟಿದೆ.
ಭಾರತದಲ್ಲಿ ಚಿನ್ನದ ದರ ಸ್ಥಿರ:
ಭಾರತದಲ್ಲಿ ಇಂದು ಚಿನ್ನದ ಬೆಲೆ ಸ್ವಲ್ಪ ಇಳಿಕೆ ಕಂಡಿದೆ. 24K ಚಿನ್ನದ ಬೆಲೆ 15,851 ರೂ. ಆಗಿದೆ. ಇನ್ನು 22K ಚಿನ್ನದ ಬೆಲೆ 14,530 ರೂ., 18K ಚಿನ್ನದ ಬೆಲೆ 11,889 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆಯಷ್ಟೇ ಇದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು 2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,000 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ ₹2,90,000 ರೂ. ಆಗಿದೆ.
ಹೈದರಾಬಾದ್ ಬೆಳ್ಳಿ ದರ ಎಷ್ಟಿದೆ?
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹3,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 30,000 ರೂ. ಆಗಿದೆ. ಅಲ್ಲದೇ 1000 ಗ್ರಾಂ ಬೆಳ್ಳಿ ಬೆಲೆ ಇಂದು 3,00,000 ರೂ. ಆಗಿದೆ.
ದೆಹಲಿ ಬೆಳ್ಳಿ ದರ:
ದೆಹಲಿಯಲ್ಲಿ 10 ಗ್ರಾಂ ಬೆಳ್ಳಿ ದರ 2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ 29,000 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ 2,90,000 ರೂ. ಆಗಿದೆ.
ಚೆನ್ನೈ ಬೆಳ್ಳಿ ದರ ಹೇಗಿದೆ?
ಚೆನ್ನೈನಲ್ಲಿಯೂ ಇಂದು ಬೆಳ್ಳಿ ದರ ಸ್ಥಿರವಾಗಿಬಿಟ್ಟಿದೆ. 10 ಗ್ರಾಂ ಬೆಳ್ಳಿ ಬೆಲೆ 3,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹30,000 ರೂ. ಆಗಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ದರ ಇಂದು 3,00,000 ರೂ. ತಲುಪಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ 10 ಗ್ರಾಂ ಬೆಳ್ಳಿ ದರ ₹2,900 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹29,000 ರೂ., 1 ಕೆಜಿ ಬೆಳ್ಳಿ ಬೆಲೆ ₹2,90,000 ರೂ. ಆಗಿದೆ.
MCX ಬೆಳ್ಳಿ ದರ ಹೇಗಿದೆ?
ಫೆಬ್ರವರಿ 11, 2026 ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಬೆಳ್ಳಿ ದರ 2,58,500 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ 2.36% ಏರಿಕೆ ಕಂಡು, ಸ್ಥಿರವಾಗಿಬಿಟ್ಟಿದೆ.
ಸ್ಪಾಟ್ ಬೆಳ್ಳಿ ದರ:
ಫೆಬ್ರವರಿ 11ರ GOLDPRICE.ORG ವರದಿ ಪ್ರಕಾರ, ಬೆಳ್ಳಿ ದರ ಬುಧವಾರ, 11 ಗಂಟೆಯ ಸುಮಾರಿ $82,32 ಡಾಲರ್ ತಲುಪಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ 2.06% ಏರಿಕೆ ಕಂಡಿದೆ.


Click it and Unblock the Notifications