ಭಾರತದಲ್ಲಿ ಚಿನ್ನದ ಬೆಲೆಯಂತೆ (Gold Rate), ಬೆಳ್ಳಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಚಿನ್ನದ ಬೆಲೆಯಂತೆ ಇತ್ತೀಚೆಗೆ ಬೆಳ್ಳಿ ಬೆಲೆ ಕೂಡಾ ದಾಖಲೆ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಕಳೆದೊಂದು ವಾರದಿಂದ ಬೆಳ್ಳಿ ದರವಂತೂ ಊಹೆಯೂ ಮಾಡದಷ್ಟೂ ಇಳಿಕೆ ಕಂಡಿತ್ತು. ಆದರೆ ವಾರಾಂತ್ಯ ಬರುತ್ತಿದ್ದಂತೆ, ಬೆಳ್ಳಿ ದರ ಭಾರೀ ಏರಿಕೆಯಾಗಿದೆ (Silver Rate Rise). ಹಾಗಿದ್ರೆ ಎಷ್ಟಿದೆ ಗೊತ್ತಾ ದರ?

ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಭಾರತದಲ್ಲಿ ಬೆಳ್ಳಿ ಬೆಲೆ ಇಂದು ₹10 ರೂ. ಇಂದು ಹೆಚ್ಚಳ ಕಂಡಿದೆ. 1 ಗ್ರಾಂ ಬೆಳ್ಳಿ ದರ ₹285 ರೂ. ಆಗಿದ್ದು, ನಿನ್ನೆ ₹275 ರೂ. ಇತ್ತು. 8 ಗ್ರಾಂ ಬೆಳ್ಳಿ ಬೆಲೆ ಇಂದು ದಿಢೀರ್ ₹2,280 ರೂ. ಆಗಿದ್ದು, ನಿನ್ನೆ ₹2,200 ರೂ. ಇತ್ತು. ಒಂದೇ ದಿನದಲ್ಲಿ ₹80 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,850 ರೂ. ಆಗಿದ್ದು, ನಿನ್ನೆ ₹2,750 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ ₹100 ರೂ. ಹೆಚ್ಚಳವಾಗಿದೆ. 100 ಗ್ರಾಂ ಬೆಳ್ಳಿ ದರ ಇಂದು ₹28,500 ರೂ. ಆಗಿದ್ದು, ನಿನ್ನೆ ₹27,500 ರೂ. ಇತ್ತು. ಒಟ್ಟು ₹1,000 ರೂ. ಏರಿಕೆಯಾಗಿದೆ. 1000 ಗ್ರಾಂ ಬೆಳ್ಳಿ ಬೆಲೆ ಇಂದು ₹2,85,000 ರೂ. ಆಗಿದ್ದು, ನಿನ್ನೆ ₹2,75,000 ರೂ. ಇತ್ತು. ಒಂದೇ ದಿನದಲ್ಲಿ ₹10,000 ರೂ. ಹೆಚ್ಚಳ ಕಂಡಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ
ಬೆಂಗಳೂರಿನಲ್ಲಿ ವಾರಾಂತ್ಯ ಬರುತ್ತಿದ್ದಂತೆ ಬೆಳ್ಳಿ ದರ ಭಾರೀ ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ ಬೆಂಗಳೂರಿನಲ್ಲಿ ₹2,850 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹28,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ ₹2,85,000 ರೂ. ಆಗಿದೆ.
ಹೈದರಾಬಾದ್ ಬೆಳ್ಳಿ ದರ:
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,850 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹28,500 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 2,85,000 ರೂ. ಆಗಿದೆ.
ದೆಹಲಿ ಬೆಳ್ಳಿ ದರ:
ದೆಹಲಿಯಲ್ಲಿ 10 ಗ್ರಾಂ ಬೆಳ್ಳಿ ದರ 2,850 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹28,500 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ₹2,85,000 ರೂ. ಆಗಿದೆ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ 2,850 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹28,500 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ದರ ಇಂದು 2,85,000 ರೂ. ತಲುಪಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ 10 ಗ್ರಾಂ ಬೆಳ್ಳಿ ದರ ₹2,850 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,500 ರೂ., 1 ಕೆಜಿ ಬೆಳ್ಳಿ ಬೆಲೆ 2,85,000 ರೂ. ಆಗಿದೆ.
MCX ಬೆಳ್ಳಿ ದರದ ವಿವರ:
ಫೆಬ್ರವರಿ 6, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಶುಕ್ರವಾರ, ವಹಿವಾಟು ಅಂತ್ಯದ ವೇಳೆಗೆ ಬೆಳ್ಳಿ ದರ 2,49,499 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗಿಂತಲೂ ಇಂದು 0.16% ಇಳಿಕೆಯಾಗಿದೆ
ಸ್ಪಾಟ್ ಬೆಳ್ಳಿ ದರ:
ಫೆಬ್ರವರಿ 6ರ ವರದಿ ಪ್ರಕಾರ, ಬೆಳ್ಳಿ ದರ ಶುಕ್ರವಾರ $78 ಡಾಲರ್ ತಲುಪಿದೆ. ಹಿಂದಿನ ವಹಿವಾಟಿಗಿಂತ ಇಂದು 9.43% ಏರಿಕೆ ಕಂಡಿದೆ.


Click it and Unblock the Notifications