ಚಿನ್ನದ ಬೆಲೆ (Gold Rate) ಗುರುವಾರ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಆದ್ರೆ ಬೆಳ್ಳಿ ಬೆಲೆ ಮಾತ್ರ ದಿನ ಹೋದಂತೆ ಗಗನಕ್ಕೇರುತ್ತಲೇ ಇದೆ. ಇದೀಗ ಇಂದೂ (ಜ.15) ಕೂಡಾ ಭಾರತದಲ್ಲಿ ಬೆಳ್ಳಿ ಬೆಲೆ ಏರಿಕೆ (Silver Rate India) ಕಂಡಿದೆ. ಚಿನ್ನದ ಹೂಡಿಕೆಯಂತೆ ಬೆಳ್ಳಿ ಬೆಲೆ ಕೂಡಾ ಸುರಕ್ಷಿತ ಹೂಡಿಕೆಯಾಗಿ ಪರಿಣಮಿಸಿದೆ. ಹಾಗಿದ್ರೆ ಇಂದು ಭಾರತದಲ್ಲಿ ಬೆಳ್ಳಿ ದರ ಎಷ್ಟು ಏರಿಕೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜನವರಿ 14, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಹಿಂದಿನ ವಹಿವಾಟಿನಲ್ಲೇ ಕಾಯ್ದುಕೊಂಡಿದೆ. ಭಾರತೀಯ ಸಮಯ 12:07 ರ ಹೊತ್ತಿಗೆ ಪ್ರತೀ ಕೆಜಿಗೆ ಇಂದು 2,89,000 ಲಕ್ಷ ರೂ. ತಲುಪಿದೆ. ಒಟ್ಟು 0.34% ರಷ್ಟು ಏರಿಕೆ ಕಂಡಿದೆ. ಹಾಗಿದ್ರೆ ಬೇರೆ ರಾಜ್ಯಗಳಲ್ಲಿ ಬೆಳ್ಳಿ ದರ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಭಾರತದಲ್ಲಿ ಬೆಳ್ಳಿ ದರ ಹೇಗಿದೆ?
ಅತ್ತ ಚಿನ್ನದ ಬೆಲೆ ಇಳಿಕೆಯಾದ್ರೂ, ಇತ್ತ ಬೆಳ್ಳಿ ಬೆಲೆ ಏರಿಕೆಯ ಹಾದಿ ಹಿಡಿದಿದೆ. ಅದೇ ರೀತಿ ಇಂದು 1 ಗ್ರಾಂ ಬೆಳ್ಳಿ ದರ ಇಂದು ₹290 ರೂ. ಆಗಿದ್ದು, ನಿನ್ನೆ ₹275 ರೂ. ಇತ್ತು. ನಿನ್ನೆಗಿಂತ ಇಂದು ಒಂದೇ ದಿನ ಪ್ರತೀ ಗ್ರಾಂನಲ್ಲಿ ₹15 ರೂ. ಏರಿಕೆ ಕಂಡಿದೆ. 8 ಗ್ರಾಂ ಬೆಳ್ಳಿ ಬೆಲೆ ₹2,320 ರೂ. ಆಗಿದೆ. ನಿನ್ನೆ ₹2,200 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹120 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,900 ರೂ. ಆಗಿದೆ. ನಿನ್ನೆ ₹2,750 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹150 ರೂ. ಏರಿಕೆ ಕಂಡಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ ₹29,000 ರೂ. ಆಗಿದ್ದು, ನಿನ್ನೆ ₹27,500 ರೂ. ಇತ್ತು. ಒಂದೇ ದಿನ ₹1,500 ರೂ. ಹೆಚ್ಚಳ ಕಂಡಿದೆ. 1000 ಗ್ರಾಂ ಬೆಳ್ಳಿ ಬೆಲೆ ₹2,90,000 ರೂ. ಆಗಿದ್ದು, ನಿನ್ನೆ ₹2,75,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹15,000 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ ಚಿನ್ನದ ಬೆಲೆ:
ಭಾರತದಲ್ಲಿ ಇಂದು ಚಿನ್ನದ ಬೆಲೆ ಕೊಂಚ ಮಟ್ಟಿಗೆ ಇಳಿಕೆಯ ಹಾದಿ ಹಿಡಿದಿದೆ. ಬಹಳ ದಿನಗಳ ನಂತರ ಪ್ರತೀ ಗ್ರಾಂ ಚಿನ್ನದಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ. ಇಂದು 24K ಚಿನ್ನದ ಬೆಲೆ 14,318 ರೂ., 22K ಚಿನ್ನದ ಬೆಲೆ 13,125 ರೂ., 18K ಚಿನ್ನದ ಬೆಲೆ 10,739 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಬೆಂಗಳೂರಿನಲ್ಲಿ ಚಿನ್ನದಂತೆ ಬೆಳ್ಳಿ ಪ್ರಿಯರೂ ಇದ್ದಾರೆ. ಅಂದರೆ ಇಂದು 10 ಗ್ರಾಂ ಬೆಳ್ಳಿ ಬೆಲೆ ₹2,950 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹29,500 ರೂ., 1 ಕೆಜಿ ಬೆಳ್ಳಿ ದರ ₹2,95,000 ರೂ. ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ರತೀ ಗ್ರಾಂನಲ್ಲಿ 5 ರೂ. ಹೆಚ್ಚಳ ಕಂಡಿದೆ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 3,100 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 31,000 ರೂ. ಇದೆ. ಅದೇ ರೀತಿ 1 ಕೆಜಿ ಬೆಳ್ಳಿ ದರ ಇಂದು 3,10,000 ರೂ. ಆಗಿದೆ. ಇದೀಗ ಒಂದು ಕೆಜಿ ಚಿನ್ನದ ಬೆಲೆ ಚೆನ್ನೈನಲ್ಲಿ 3 ಲಕ್ಷ ಗಡಿದಾಟಿದೆ ಅನ್ನೋದೆ ವಿಶೇಷ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 2,950 ರೂ. ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ 29,500 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ಬೆಲೆ 2,95,000 ರೂ. ಆಗಿದೆ.
ಹೈದರಾಬಾದ್ ಬೆಳ್ಳಿ ಬೆಲೆ:
ಹೈದರಾಬಾದ್‌ನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 3,100 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 31,000 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 3,10,000 ರೂ. ಆಗಿದೆ.
ದೆಹಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ ಬೆಳ್ಳಿ ದರ ₹2,950 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹29,500 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ₹2,95,000 ರೂ. ಆಗಿದೆ.
MCX ಬೆಳ್ಳಿ ದರ:
ಜನವರಿ 14, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಹಿಂದಿನ ವಹಿವಾಟಿನಲ್ಲೇ ಕಾಯ್ದುಕೊಂಡಿದೆ. ಭಾರತೀಯ ಸಮಯ 12:07 ರ ಹೊತ್ತಿಗೆ ಪ್ರತೀ ಕೆಜಿಗೆ ಇಂದು 2,89,000 ಲಕ್ಷ ರೂ. ತಲುಪಿದೆ. ಒಟ್ಟು 0.34% ರಷ್ಟು ಏರಿಕೆ ಕಂಡಿದೆ.
ಸ್ಪಾಟ್ ಬೆಳ್ಳಿ ದರ:
ಜನವರಿ 15ರ GOLDPROCE.org ವರದಿ ಪ್ರಕಾರ, ಬೆಳ್ಳಿ ದರ ಪ್ರತೀ ಔನ್ಸ್‌ಗೆ $89.63 ಕ್ಕೆ ತಲುಪಿದೆ. ಮಧ್ಯಾಹ್ನದ ಸಮಯದಲ್ಲಿ ಅಂತೂ ದಾಖಲೆ ಬೆಲೆಯಲ್ಲಿ ಬೆಳ್ಳಿ ಬೆಲೆ ಏರಿಕೆ ಕಂಡಿದೆ. ಅಂದರೆ ಒಟ್ಟು 1.94% ಇಳಿಕೆ ಕಂಡಿದೆ.


Click it and Unblock the Notifications