ಬೆಳ್ಳಿ ಪ್ರಿಯರಿಗೆ ಇಂದು ಬಂಪರ್ ಸುದ್ದಿಯಂತನೇ ಹೇಳಬಹುದು. ಏಕೆಂದರೆ ಇಂದು ಭಾರತದಲ್ಲಿ ಬೆಳ್ಳಿ ಬೆಲೆ (Silver Rate India) ದಿಢೀರ್ ಕುಸಿತ ಕಂಡಿದೆ. ಕಳೆದ ಕೆಲವು ದಿನಗಳಿಂದ ದಾಖಲೆ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದ ಬೆಳ್ಳಿ ಬೆಲೆ, ಎರಡು ದಿನಗಳಿಂದ ಇಳಿಕೆ ಕಾಣುತ್ತಲೇ ಇದೆ. ಹಾಗಿದ್ರೆ ಇಂದು ಭಾರತದಲ್ಲಿ ಬೆಳ್ಳಿ ಬೆಲೆ ಎಷ್ಟು ಇಳಿಕೆಯಾಗಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಜನವರಿ 9, 2026ರಂದು, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಏರಿಕೆಯ ಹಾದಿ ಹಿಡಿದಿದೆ. ಭಾರತೀಯ ಸಮಯ 10:50 ರ ಹೊತ್ತಿಗೆ ಪ್ರತೀ ಕೆಜಿಗೆ ಇಂದು 2,45,701 ಲಕ್ಷ ರೂ. ತಲುಪಿದೆ. ಅಂದರೆ 0.98% ರಷ್ಟು ಏರಿಕೆ ಕಂಡಿದೆ. ಹಾಗಿದ್ರೆ ದೇಶದ ಯಾವ ರಾಜ್ಯದಲ್ಲಿ, ಬೆಳ್ಳಿ ದರ ಎಷ್ಟು ಇಳಿಕೆಯಾಗಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಭಾರತದಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದ್ರೆ ಇಂದು ಬೆಳ್ಳಿ ಬೆಲೆ ಇಳಿಕೆ ಕಂಡಿದ್ದು, ವಿಶೇಷ ಅಂತಾನೇ ಹೇಳಬಹುದು. 1 ಗ್ರಾಂ ಬೆಳ್ಳಿ ದರ ಇಂದು ₹249 ರೂ. ಆಗಿದ್ದು, ನಿನ್ನೆ ₹252 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬೆಳ್ಳಿ ದರಲ್ಲಿ ಒಟ್ಟು ₹3 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹1,992 ರೂ. ಆಗಿದ್ದು, ನಿನ್ನೆ ₹2,016 ರೂ. ಇತ್ತು. ಒಟ್ಟು ₹24 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,490 ರೂ. ಆಗಿದ್ದು, ನಿನ್ನೆ ₹2,520 ರೂ. ಇತ್ತು. ಒಟ್ಟು ₹30 ರೂ. ಕುಸಿತವಾಗಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ ₹24,900 ರೂ. ಆಗಿದ್ದು, ನಿನ್ನೆ ₹25,200 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹300 ರೂ. ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ ₹2,49,000 ರೂ. ಆಗಿದ್ದು, ನಿನ್ನೆ ₹2,52,000 ರೂ. ಇತ್ತು. ಒಟ್ಟು ₹3,000 ರೂ. ಇಳಿಕೆ ಕಂಡಿದೆ.
ಭಾರತದಲ್ಲಿ ಗೋಲ್ಡ್ ರೇಟ್ ಹೇಗಿದೆ?
ಅತ್ತ ಬೆಳ್ಳಿ ಬೆಲೆ ಇಳಿಕೆಯಾದ್ರೆ, ಇತ್ತ ಚಿನ್ನದ ದರ ಏರಿಕೆ ಕಂಡಿದೆ. 24K ಚಿನ್ನದ ಒಂದು ಗ್ರಾಂ ಬೆಲೆ ಇಂದು 13, 871 ರೂ. ಆದ್ರೆ, 22K ಚಿನ್ನದ ಪ್ರತೀ ಗ್ರಾಂ ಬೆಲೆ 12,715 ರೂ. ಆಗಿದೆ. ಇನ್ನು 18K ಚಿನ್ನದ ಪ್ರತೀ ಗ್ರಾಂ ಬೆಲೆ 10,403 ರೂ. ಆಗಿದೆ.
ಬೆಂಗಳೂರಿನ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ನಿನ್ನೆಗಿಂತಲೂ ಇಂದು ಬೆಳ್ಳಿ ದರ ಭಾರೀ ಇಳಿಕೆ ಕಂಡಿದೆ. ಇಂದು 10 ಗ್ರಾಂ ಬೆಳ್ಳಿ ಬೆಲೆ ₹2,490 ರೂ. ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ ₹24,900 ರೂ., 1 ಕೆಜಿ ಬೆಳ್ಳಿ ದರ ₹2,49,000 ರೂ. ಆಗಿದೆ.
ಚೆನ್ನೈ ಬೆಳ್ಳಿ ದರ ಎಷ್ಟಿದೆ?
ಚೆನ್ನೈನಲ್ಲೂ ಇಂದು ಬೆಳ್ಳಿ ಬೆಲೆ ಇಳಿಕೆಯಾಗಿದೆ. ಇನ್ನು 10 ಗ್ರಾಂ ಬೆಳ್ಳಿ ಬೆಲೆ ಇಂದು 2,680 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 26,800 ರೂ. ಇದೆ. ಇನ್ನು 1 ಕೆಜಿ ಬೆಳ್ಳಿ ದರ ಇಂದು 2,68,000 ರೂ. ಆಗಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 2,490 ರೂ. ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ 24,900 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ಬೆಲೆ 2,49,000 ರೂ. ಆಗಿದೆ. ಈ ಮೂಲಕ ಇಂದು ಒಂದೇ ದಿನ ಪ್ರತೀ ಗ್ರಾಂನಲ್ಲಿ 5 ರೂ. ಏರಿಕೆ ಕಂಡಿದೆ.
ಹೈದರಾಬಾದ್ ಬೆಳ್ಳಿ ಬೆಲೆ ಎಷ್ಟಿದೆ?
ಹೈದರಾಬಾದ್‌ನಲ್ಲಿ ಇಂದು ಬೆಳ್ಳಿ ದರ ದಿಢೀರ್ ಇಳಿಕೆಯಾಗಿದೆ. ಅಂದರೆ 10 ಗ್ರಾಂ ಬೆಳ್ಳಿ ಬೆಲೆ ಇಂದು 2,680 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 26,800 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 2,68,000 ರೂ. ಆಗಿದೆ.
MCX ಬೆಳ್ಳಿ ದರ:
ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಏರಿಕೆಯ ಹಾದಿ ಹಿಡಿದಿದೆ. ಭಾರತೀಯ ಸಮಯ 10:50 ರ ಹೊತ್ತಿಗೆ ಪ್ರತೀ ಕೆಜಿಗೆ ಇಂದು 2,45,701 ಲಕ್ಷ ರೂ. ತಲುಪಿದೆ. ಅಂದರೆ ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ಇಂದು 0.98% ರಷ್ಟು ಏರಿಕೆ ಕಂಡಿದೆ.
ಸ್ಪಾಟ್ ಬೆಳ್ಳಿ ದರ:
ಜನವರಿ 9ರ GOLDPROCE.org ವರದಿ ಪ್ರಕಾರ, 11:10 ಗಂಟೆ ಸಮಯದಲ್ಲಿ ಬೆಳ್ಳಿ ದರ ಪ್ರತೀ ಔನ್ಸ್‌ಗೆ $76.89 ಇದ್ದು, $1.32 ಕ್ಕೆ ತಲುಪಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications