ಭಾರತದಲ್ಲಿ ಇಂದು ಚಿನ್ನದ ಬೆಲೆಯಂತೂ (Gold Rate) ಭಾರೀ ಇಳಿಕೆ ಕಂಡಿದೆ. ಬಂಗಾರದ ಬೆಲೆ ಇಳಿಕೆ ಬೆನ್ನಲ್ಲೇ, ಹೂಡಿಕೆದಾರರಿಗೂ ಬೆಳ್ಳಿ ಬೆಲೆ (Silver Rate) ಏನಾಗಬಹುದು ಎಂಬ ಪ್ರಶ್ನೆ ಮೂಡಿದೆ ಆದ್ರೆ ಬೆಳ್ಳಿ ಪ್ರಿಯರಿಗೂ ಇಂದು ಗುಡ್ ನ್ಯೂಸ್ ಸಿಕ್ಕಿದೆ. ಏಕೆಂದರೆ ಭಾರತದಲ್ಲಿ ಬೆಳ್ಳಿ ದರ ಇಂದು ಭಾರೀ ಇಳಿಕೆ ಕಂಡಿದೆ. ಹಾಗಿದ್ರೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದ ಬೆಳ್ಳಿ ದರ ಎಷ್ಟಿದೆ?
ಭಾರತದಲ್ಲಿ ಇಂದು ಬೆಳ್ಳಿ ಬೆಲೆ ಭರ್ಜರಿ ಕುಸಿತ ಕಂಡಿದೆ. 1 ಗ್ರಾಂ ಬೆಳ್ಳಿ ದರದಲ್ಲಿ 10 ರೂ. ಇಳಿಕೆ ಕಂಡಿದ್ದು, ಒಟ್ಟು ₹280 ರೂ. ಆಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ಬೆಲೆ ₹2,240 ರೂ. ಆಗಿದ್ದು, ನಿನ್ನೆ ₹2,320 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹80 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,800 ರೂ. ಆಗಿದ್ದು, ನಿನ್ನೆ ₹2,900 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹100 ರೂ. ಇಳಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಬೆಳ್ಳಿ ದರ ₹28,000 ರೂ. ಆಗಿದ್ದು, ನಿನ್ನೆ ₹29,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ ₹1,000 ರೂ. ಕುಸಿತ ಕಂಡಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ಬೆಲೆ ₹2,80,000 ರೂ. ಆಗಿದ್ದು, ನಿನ್ನೆ ₹2,90,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೋಬ್ಬರಿ ₹10,000 ರೂ. ಇಳಿಕೆಯಾಗಿದೆ.
ಭಾರತದಲ್ಲಿ ಚಿನ್ನದ ದರವೂ ಇಳಿಕೆ:
ಭಾರತದಲ್ಲಿ ಇಂದು ಚಿನ್ನದ ಬೆಲೆಯೂ ಭರ್ಜರಿ ಕುಸಿತ ಕಂಡಿದೆ. 24K ಚಿನ್ನದ ಬೆಲೆ 16,222 ರೂ., 22K ಚಿನ್ನದ ಬೆಲೆ 14,870 ರೂ., 18K ಚಿನ್ನದ ಬೆಲೆ 12,167 ರೂ. ತಲುಪಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಹೇಗಿದೆ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರ ಭಾರೀ ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು 2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,000 ರೂ., 1000 ಗ್ರಾಂ ಬೆಳ್ಳಿ ಬೆಲೆ 2,90,000 ರೂ. ಆಗಿದೆ.
ದೆಹಲಿಯಲ್ಲಿ ಬೆಳ್ಳಿ ದರ
ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 2,800 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,000 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ದರ 2,80,000 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಕೊಂಚ ಇಳಿಕೆ ಕಂಡಿದೆ.
ಹೈದರಾಬಾದ್ ಬೆಳ್ಳಿ ದರ:
ಹೈದರಾಬಾದ್‌ನಲ್ಲೂ ಬೆಳ್ಳಿ ಬೆಲೆ ಕುಸಿತ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,000 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ಬೆಲೆ ಇಂದು 2,90,000 ರೂ. ಆಗಿದೆ.
ಮುಂಬೈ ಬೆಳ್ಳಿ ದರ
ಮುಂಬೈನಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 2,800 ರೂ. ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,000 ರೂ., 1000 ಗ್ರಾಂ ಬೆಳ್ಳಿ ಬೆಲೆ 2,80,000 ರೂ. ಆಗಿದೆ.
ಚೆನ್ನೈ ಬೆಳ್ಳಿ ದರ
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ 2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,000 ರೂ. ಆಗಿದೆ. 1000 ಗ್ರಾಂ ಬೆಳ್ಳಿ ದರ ಇಂದು 2,90,000 ರೂ. ಆಗಿದೆ.
MCX ಬೆಳ್ಳಿ ದರ:
ಮಾರ್ಚ್ 12, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಇಂದು 2,71,619 ರೂ.ನಲ್ಲಿ ವಹಿವಾಟು ನಡೆಸುತ್ತಿದ್ದು, ಹಿಂದಿನ ವಹಿವಾಟಿಗಿಂತ 1.17% ಏರಿಕೆಯಾಗಿದೆ.
ಸ್ಪಾಟ್ ಬೆಳ್ಳಿ ದರ:
ಮಾರ್ಚ್ 12, 2026 ರ GOLDPRICE.ORG ವರದಿ ಪ್ರಕಾರ, ಬೆಳ್ಳಿ ದರ ಇಂದು $86.21 ಡಾಲರ್ ತಲುಪಿದ್ದು, ಹಿಂದಿನ ವಹಿವಾಟಿಗೆ ಹೋಲಿಕೆ ಮಾಡಿದ್ರೆ ಇಂದು 1.04% ಏರಿಕೆಯಾಗಿದೆ.


Click it and Unblock the Notifications