ಕಳೆದ ತಿಂಗಳಿಡೀ ಬೆಳ್ಳಿ ದರ (Silver Rate) ಏರಿಕೆಯಿಂದಾಗಿ ಬೆಳ್ಳಿ ಪ್ರಿಯರು ಶಾಕ್ ಆಗಿದ್ದರು. ಆದ್ರೆ ಫೆಬ್ರವರಿ ತಿಂಗಳ ಆರಂಭದಿಂದಲೇ ಭಾರತದಲ್ಲಿ ಬೆಳ್ಳಿ ದರ (Silver Rate India) ಭಾರೀ ಇಳಿಕೆ ಕಾಣುತ್ತಿದೆ. ಅತ್ತ ಚಿನ್ನದ ಬೆಲೆ ಏರಿಕೆಯಾದರೂ, ಇತ್ತ ಬೆಳ್ಳಿ ದರ ಮಾತ್ರ ಇಳಿಕೆಯ ಹಾದಿಯನ್ನೇ ಹಿಡಿದಿದೆ. ಇಂದೂ (ಫೆ.10) ಬೆಳ್ಳಿ ದರ ಭಾರೀ ಇಳಿಕೆ ಕಂಡಿದೆ. ಹಾಗಿದ್ರೆ ಇಂದು ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ ಗೊತ್ತಾ? ಬೇರೆ ಬೇರೆ ನಗರದ ಬೆಳ್ಳಿ ದರದ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ ಓದಿ.

ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಇಂದು ಬೆಳ್ಳಿ ದರದಲ್ಲಿ ಇಳಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು ₹290 ರೂ. ಆಗಿದ್ದು, ನಿನ್ನೆ ₹300 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹10 ರೂ. ಇಳಿಕೆಯಾಗಿದೆ. 8 ಗ್ರಾಂ ಬೆಳ್ಳಿಯ ಬೆಲೆ ₹2,320 ರೂ. ಆಗಿದ್ದು, ನಿನ್ನೆ ₹2,400 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹80 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,900 ರೂ. ಆಗಿದ್ದು, ನಿನ್ನೆ ₹3,000 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹100 ರೂ. ಕುಸಿತ ಕಂಡಿದೆ. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ ₹29,000 ರೂ. ಆಗಿದ್ದು, ನಿನ್ನೆ ₹30,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಂದೇ ದಿನ ₹1,000 ರೂ. ಇಳಿಕೆ ಕಂಡಿದೆ. 1000 ಗ್ರಾಂ ದರ ₹2,90,000 ರೂ. ಆಗಿದ್ದು, ನಿನ್ನೆ ₹3,00,000 ರೂ. ಇತ್ತು. ನಿನ್ನೆಗಿಂತ ಇಂದು ₹10,000 ರೂ. ಇಳಿಕೆ ಕಂಡಿದೆ.
ಭಾರತದಲ್ಲಿ ಚಿನ್ನದ ದರ ಸ್ಥಿರ:
ಭಾರತದಲ್ಲಿ ಇಂದು ಚಿನ್ನದ ನಿನ್ನೆಯ ಬೆಲೆಯಲ್ಲೇ ಮುಂದುವರೆದಿದೆ. ನಿನ್ನೆ 24K ಚಿನ್ನದ ಬೆಲೆ 15,791 ರೂ. ಇತ್ತು. ಇಂದೂ ಅಷ್ಟೇ ಇದೆ. ಇನ್ನು 22K ಚಿನ್ನದ ಬೆಲೆ 14,475 ರೂ., 18K ಚಿನ್ನದ ಬೆಲೆ 11,844 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆ ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ ಬೆಂಗಳೂರಿನಲ್ಲಿ 2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,000 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ ₹2,90,000 ರೂ. ಆಗಿದೆ.
ಹೈದರಾಬಾದ್ ಬೆಳ್ಳಿ ದರ:
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹3,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 30,000 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 3,00,000 ರೂ. ಆಗಿದೆ.
ದೆಹಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಬೆಳ್ಳಿ ದರ 2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ 29,000 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ 2,90,000 ರೂ. ಆಗಿದೆ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ 3,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹30,000 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ದರ ಇಂದು 3,00,000 ರೂ. ತಲುಪಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ 10 ಗ್ರಾಂ ಬೆಳ್ಳಿ ದರ ₹2,900 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹29,000 ರೂ., 1 ಕೆಜಿ ಬೆಳ್ಳಿ ಬೆಲೆ ₹2,90,000 ರೂ. ಆಗಿದೆ.
MCX ಬೆಳ್ಳಿ ದರ ಹೇಗಿದೆ?
ಫೆಬ್ರವರಿ 10, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಮಂಗಳವಾರ ಬೆಳ್ಳಿ ದರ 2,57,417 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ 1.98% ಇಳಿಕೆ ಕಂಡಿದೆ.
ಸ್ಪಾಟ್ ಬೆಳ್ಳಿ ದರ:
ಫೆಬ್ರವರಿ 10ರ ವರದಿ ಪ್ರಕಾರ, ಬೆಳ್ಳಿ ದರ ಮಂಗಳವಾರ $80,88 ಡಾಲರ್ ತಲುಪಿದೆ. ಹಿಂದಿನ ವಹಿವಾಟಿಗಿಂತ ಇಂದು 2.11% ಇಳಿಕೆಯಾಗಿದೆ.


Click it and Unblock the Notifications