ಬೆಳ್ಳಿ ಪ್ರಿಯರಿಗೆ ಇಂದು ಬಂಪರ್ ಸುದ್ದಿ. ನಿನ್ನೆಯಷ್ಟೇ ಏರಿಕೆ ಕಂಡಿದ್ದ ಬೆಳ್ಳಿ ದರ (Silver Rate) ಇಂದು ದಿಢೀರ್ ಕುಸಿತ ಕಂಡಿದೆ. ಚಿನ್ನದ ಬೆಲೆ ಇಂದು ಏರಿಕೆ ಕಂಡರೂ, ಇತ್ತ ಬೆಳ್ಳಿ ದರ ಮಾತ್ರ ಪಾತಾಳಕ್ಕಿಳಿದಿದೆ. ಹಾಗಿದ್ರೆ ಇಂದು ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಬೆಳ್ಳಿ ದರ ಇಂದು ಭಾರೀ ಇಳಿಕೆಯಾಗಿದೆ. ನಿನ್ನೆಯಷ್ಟೇ ಏರಿಕೆಯಾಗಿದ್ದ ಬೆಳ್ಳಿ ಬೆಲೆ, ಇಂದು ದಿಢೀರ್ ಕುಸಿತವಾಗಿದೆ. ಪ್ರತೀ ಗ್ರಾಂ ಬೆಳ್ಳಿಯಲ್ಲಿ ಬರೋಬ್ಬರಿ ₹15 ರೂ. ಇಳಿಕೆಯಾಗಿದ್ದು, 1 ಗ್ರಾಂ ಬೆಲೆ ₹285 ರೂ. ತಲುಪಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹2,280 ರೂ. ಆಗಿದ್ದು, ನಿನ್ನೆ ₹2,400 ರೂ. ಇತತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹120 ರೂ. ಇಳಿಕೆಯಾಗಿದೆ. ಇನ್ನು 10 ಗ್ರಾಂ ಬೆಳ್ಳಿ ಬೆಲೆ ₹2,850 ರೂ. ಆಗಿದ್ದು, ನಿನ್ನೆ ₹3,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹150 ರೂ. ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ದರ ₹28,500 ರೂ. ಆಗಿದ್ದು, ನಿನ್ನೆ ₹30,000 ರೂ. ಇತ್ತು. ನಿನ್ನೆಗಿಂತ ಇಂದು ₹1,500 ರೂ. ಕುಸಿತ ಕಂಡಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ದರ ₹2,85,000 ರೂ. ಆಗಿದ್ದು, ನಿನ್ನೆ ₹3,00,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೋಬ್ಬರಿ ₹15,000 ರೂ. ಇಳಿಕೆ ಕಂಡಿದೆ.
ಭಾರತದಲ್ಲಿ ಚಿನ್ನದ ದರ:
ಭಾರತದಲ್ಲಿ ಚಿನ್ನದ ಬೆಲೆ ಕೂಡಾ ಭಾರೀ ಹೆಚ್ಚಳ ಕಂಡಿದೆ. 24K ಚಿನ್ನದ ಬೆಲೆ 16,178 ರೂ. ಆಗಿದೆ. ಇನ್ನು 22K ಚಿನ್ನದ ಬೆಲೆ 14,830 ರೂ., 18K ಚಿನ್ನದ ಬೆಲೆ 12,134 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಇಂದು ಬೆಳ್ಳಿ ದರ ಭಾರೀ ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು 2,850 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹28,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ 2,85,000 ರೂ. ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಪ್ರತೀ ಗ್ರಾಂನಲ್ಲಿ 15 ರೂ. ಇಳಿಕೆಯಾಗಿದೆ.
ಹೈದರಾಬಾದ್ ಬೆಳ್ಳಿ ದರ:
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,000 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ಬೆಲೆ ಇಂದು 2,90,000 ರೂ. ಆಗಿದೆ.
ದೆಹಲಿಯಲ್ಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲಿ ಇಂದು ಬೆಳ್ಳಿ ದರ ಭಾರೀ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ 2,850 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 28,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ದರ 2,85,000 ರೂ. ಆಗಿದೆ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ 2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,000 ರೂ. ಆಗಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ದರ ಇಂದು ₹2,90,000 ರೂ. ಆಗಿದ್ದು, ನಿನ್ನೆಗಿಂತ ಸ್ವಲ್ಪ ಇಳಿಕೆಯಾಗಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ 10 ಗ್ರಾಂ ಬೆಳ್ಳಿ ದರ 2,850 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,500 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,85,000 ರೂ. ಆಗಿದೆ.
MCX ಬೆಳ್ಳಿ ದರ:
ಫೆಬ್ರವರಿ 24, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಮಂಗಳವಾರ 2,66,205 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ಇಂದು ಒಟ್ಟು ಬರೀ 0.30% ಏರಿಕೆಯಾಗಿದೆ.
ಸ್ಪಾಟ್ ಬೆಳ್ಳಿ ದರ:
ಫೆಬ್ರವರಿ 24ರ GOLDPRICE.ORG ವರದಿ ಪ್ರಕಾರ, ಬೆಳ್ಳಿ ದರ ಸೋಮವಾರ $87.96 ಡಾಲರ್ ತಲುಪಿದ್ದು, ಹಿಂದಿನ ವಹಿವಾಟಿಗಿಂತ ಇಂದು 1.34% ಏರಿಕೆಯಾಗಿದೆ.


Click it and Unblock the Notifications