ಅತ್ತ ಮಧ್ಯಪ್ರಾಚ್ಯದಲ್ಲಿ ಸಂಘರ್ಷ (Middle East) ಶುರುವಾದಾಗಿನಿಂದ, ಬೆಳ್ಳಿ ಬೆಲೆ ನಿಂತಲ್ಲೇ ನಿಂತುಬಿಟ್ಟಿದೆ. ಅತ್ತ ಏರಿಕೆಯೂ ಕಾಣದೆ, ಇತ್ತ ಇಳಿಕೆಯೂ ಕಾಣದೆ ಭಾರತದಲ್ಲಿ ಬೆಳ್ಳಿ ದರ ಸ್ಥಿರವಾಗಿಬಿಟ್ಟಿದೆ. ಹಾಗಿದ್ರೆ ಇಂದು ಭಾರತದಲ್ಲಿ ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದ ಬೆಳ್ಳಿ ದರ:
ಭಾರತದಲ್ಲಿ ಬೆಳ್ಳಿ ಬೆಲೆಯ ಸ್ಥಿತಿ, ಕೆಟ್ಟು ನಿಂತ ಗಾಡಿಯಂತಾಗಿದೆ. ಅತ್ತ ಮುಂದೆಯೂ ಹೋಗದೆ, ಹಿಂದೆಯೂ ಬಾರದೆ ನಿಂತಲ್ಲೇ ನಿಂತ ಗಾಡಿಯಂತೆ, ಬೆಳ್ಳಿ ದರ ಸ್ಥಿರವಾಗಿದೆ. ಆ ಪ್ರಕಾರ, 1 ಗ್ರಾಂ ಬೆಳ್ಳಿ ದರ ₹285 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹2,280 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಇತ್ತು. ಇನ್ನು 10 ಗ್ರಾಂ ಬೆಳ್ಳಿ ದರ ₹2,850 ರೂ., 100 ಗ್ರಾಂ ಬೆಳ್ಳಿ ಬೆಲೆ ₹28,500 ರೂ., 1000 ಗ್ರಾಂ ಬೆಳ್ಳಿ ದರ ₹2,85,000 ರೂ. ಆಗಿದ್ದು, ಕಳೆದೆರಡು ದಿನಗಳಿಂದ ಇದೇ ಬೆಲೆಯಲ್ಲಿ ಮುಂದುವರೆಯುತ್ತಿದೆ.
ಭಾರತದಲ್ಲಿ ಚಿನ್ನದ ದರ:
ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆ ಕಂಡಿದೆ. 24K ಚಿನ್ನದ ಬೆಲೆ 16,211 ರೂ., 22K ಚಿನ್ನದ ಬೆಲೆ 14,860 ರೂ., 18K ಚಿನ್ನದ ಬೆಲೆ 12,158 ರೂ. ಆಗಿದೆ. ಪ್ರತೀ ಗ್ರಾಂನಲ್ಲಿ 77 ರೂ. ಇಳಿಕೆಯಾಗಿದೆ..
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು 2,850 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹28,500 ರೂ., 1000 ಗ್ರಾಂ ಬೆಳ್ಳಿ ಬೆಲೆ 2,85,000 ರೂ. ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರದಲ್ಲಿ ಶೂನ್ಯ ಬದಲಾವಣೆಯಾಗಿದೆ.
ಹೈದರಾಬಾದ್ ಬೆಳ್ಳಿ ದರ ಎಷ್ಟಿದೆ?
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,000 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ಬೆಲೆ ಇಂದು 2,90,000 ರೂ. ಆಗಿದೆ.
ದೆಹಲಿಯಲ್ಲಿ ಬೆಳ್ಳಿ ದರ ಎಷ್ಟಿದೆ?
ದೆಹಲಿಯಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 2,850 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ದರ 2,85,000 ರೂ. ತಲುಪಿದೆ. ರಾಜಧಾನಿಯಲ್ಲೂ ಬೆಳ್ಳಿದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಚೆನ್ನೈ ಬೆಳ್ಳಿ ದರ ಎಷ್ಟಿದೆ?
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ 2,950 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,500 ರೂ. ಆಗಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ದರ ಇಂದು ₹2,95,000 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ.
ಮುಂಬೈ ಬೆಳ್ಳಿ ದರ ಎಷ್ಟಿದೆ?
ಮಾಯಾನಗರಿ ಎಂದು ಪರಿಗಣಿಸಿರುವ ಮುಂಬೈನಲ್ಲಿ ಇಂದು ಬೆಳ್ಳಿ ದರ ಸ್ಥಿರವಾಗಿದೆ. 10 ಗ್ರಾಂ ಬೆಳ್ಳಿ ದರ 2,850 ರೂ. ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,500 ರೂ., 1000 ಗ್ರಾಂ ಬೆಳ್ಳಿ ಬೆಲೆ 2,85,000 ರೂ. ಆಗಿದೆ.
MCX ಬೆಳ್ಳಿ ದರ:
ಮಾರ್ಚ್ 06, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಶುಕ್ರವಾರ ಮಧ್ಯಾಹ್ನ 12:30 ಗಂಟೆಯ ವೇಳೆಗೆ 2,66,900 ರೂ. ತಲುಪಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ಇಂದು 1.80% ಏರಿಕೆಯಾಗಿದೆ.
ಸ್ಪಾಟ್ ಬೆಳ್ಳಿ ದರ:
ಮಾರ್ಚ್ 06,2026 ರ GOLDPRICE.ORG ವರದಿ ಪ್ರಕಾರ, ಬೆಳ್ಳಿ ದರ ಇಂದು $84.41 ಡಾಲರ್ ತಲುಪಿದೆ. ಹಿಂದಿನ ವಹಿವಾಟಿಗಿಂತ ಇಂದು 3.20% ಹೆಚ್ಚಳ ಕಂಡಿದೆ.


Click it and Unblock the Notifications