ಇಸ್ರೇಲ್-ಇರಾನ್ ನಡುವಿನ ಭೀಕರ ಯುದ್ಧ (Israel-Iran War), ಅಮೂಲ್ಯ ಲೋಹಗಳ ಮೇಲೂ ತಟ್ಟಿದೆ. ಅತ್ತ ಚಿನ್ನದ ಬೆಲೆ ಇಳಿಕೆಯಾಗಿದ್ದು, ಇತ್ತ ಬೆಳ್ಳಿ ದರವೂ ಭಾರತದಲ್ಲಿ ಭಾರೀ ಇಳಿಕೆ ಕಂಡಿದೆ. ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದ್ದ ಬೆಳ್ಳಿ ಬೆಲೆ, ಕಳೆದೆರಡು ದಿನಗಳಿಂದ ಭಾರೀ ಕುಸಿತ ಕಂಡಿದೆ. ಹಾಗಿದ್ರೆ ಇಂದು (ಮಾರ್ಚ್ 04) ಭಾರತದಲ್ಲಿ ಬೆಳ್ಳಿ ದರ (Silver Rate India) ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದ ಬೆಳ್ಳಿ ದರ ಎಷ್ಟಿದೆ?
ಕೊನೆಗೂ ಭಾರತೀಯರಿಗೆ ಬಂಪರ್ ಸುದ್ದಿ ಸಿಕ್ಕಿದೆ. ಅತ್ತ 1 ಗ್ರಾಂ ಬೆಳ್ಳಿ ದರ ಇಂದು ₹285 ರೂ. ಆಗಿದ್ದು, ನಿನ್ನೆ ₹295 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ ₹10 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹2,280 ರೂ. ಆಗಿದ್ದು, ನಿನ್ನೆ ₹2,360 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹80 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,850 ರೂ. ಆಗಿದ್ದು, ನಿನ್ನೆ ₹2,950 ರೂ. ಇತ್ತು. ನಿನ್ನೆಗಿಂತ ಇಂದು ₹100 ರೂ. ಕುಸಿದಿದೆ. 100 ಗ್ರಾಂ ಬೆಳ್ಳಿ ದರ ಇಂದು ₹28,500 ರೂ. ಆಗಿದ್ದು, ನಿನ್ನೆ ₹29,500 ರೂ. ಇತ್ತು. ಒಂದೇ ದಿನದಲ್ಲಿ ₹1,000 ರೂ. ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ ಇಂದು ₹2,85,000 ರೂ. ತಲುಪಿದ್ದು, ನಿನ್ನೆ ₹2,95,000 ರೂ. ಇತ್ತು. ನಿನ್ನೆಗಿಂತ ಇಂದು ₹10,000 ರೂ. ವ್ಯತ್ಯಾಸವಾಗಿದೆ.
ಭಾರತದಲ್ಲಿ ಚಿನ್ನದ ದರ:
ಭಾರತದಲ್ಲಿ ಇಂದು ಚಿನ್ನದ ಬೆಲೆಯೂ ಇಳಿಕೆ ಕಂಡಿದೆ. 24K ಚಿನ್ನದ ಬೆಲೆ 16,451 ರೂ., 22K ಚಿನ್ನದ ಬೆಲೆ 15,080 ರೂ., 18K ಚಿನ್ನದ ಬೆಲೆ 12,338 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಬೆಂಗಳೂರಿನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 2,850 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹28,500 ರೂ., 1000 ಗ್ರಾಂ ಬೆಳ್ಳಿ ಬೆಲೆ 2,85,000 ರೂ. ಆಗಿದೆ.
ಹೈದರಾಬಾದ್ ಬೆಳ್ಳಿ ದರ:
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,950 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,500 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ಬೆಲೆ ಇಂದು 2,95,000 ರೂ. ಆಗಿದೆ.
ದೆಹಲಿಯಲ್ಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 2,850 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ದರ 2,85,000 ರೂ. ತಲುಪಿದೆ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ 2,950 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,500 ರೂ. ಆಗಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ದರ ಇಂದು ₹2,95,000 ರೂ. ಆಗಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ ಇಂದು ಬೆಳ್ಳಿ ದರ ಭಾರೀ ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ 2,850 ರೂ. ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,500 ರೂ., 1000 ಗ್ರಾಂ ಬೆಳ್ಳಿ ಬೆಲೆ 2,85,000 ರೂ. ಆಗಿದೆ.
MCX ಬೆಳ್ಳಿ ದರ:
ಮಾರ್ಚ್ 04, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಮಧ್ಯಾಹ್ನ 12 ಗಂಟೆಯ ವೇಳೆಗೆ 2,69,119 ರೂ. ತಲುಪಿದೆ. ಹಿಂದಿನ ವಹಿವಾಟಿಗೆ ಹೋಲಿಕೆ ಮಾಡಿದ್ರೆ 1.58% ಏರಿಕೆಯಾಗಿದೆ.
ಸ್ಪಾಟ್ ಬೆಳ್ಳಿ ದರ:
ಮಾರ್ಚ್ 04,2026 ರ GOLDPRICE.ORG ವರದಿ ಪ್ರಕಾರ, ಬೆಳ್ಳಿ ದರ ಇಂದು $83.99 ಡಾಲರ್ ತಲುಪಿದ್ದು, ಹಿಂದಿನ ವಹಿವಾಟಿಗಿಂತ ಇಂದು 0.95% ಏರಿಕೆ ಕಂಡಿದೆ.


Click it and Unblock the Notifications