ಭಾರತದಲ್ಲಿ ಬೆಳ್ಳಿಯ (Silver Rate India) ಮೇಲೆ ಹೂಡಿಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಅದೇ ಕಾರಣದಿಂದ ಬೆಳ್ಳಿ ದರ ದಿನೇ ದಿನೇ ಏರಿಕೆ ಕಾಣುತ್ತಿದೆ. ಚಿನ್ನದಂತೆ ಬೆಳ್ಳಿಯನ್ನೂ ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. ಹಾಗಿದ್ರೆ ಭಾರತದಲ್ಲಿ ಇಂದು ಬೆಳ್ಳಿ ದರ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಇಂದು ಬೆಳ್ಳಿ ದರ ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ಭಾರತದಲ್ಲಿ ಇಂದು 1 ಗ್ರಾಂ ಬೆಳ್ಳಿ ದರ ₹275 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. ನಿನ್ನೆಗೂ ಇಂದಿಗೂ ಯಾವುದೇ ವ್ಯತ್ಯಾಸಗಳಾಗಿಲ್ಲ. ಇನ್ನು 8 ಗ್ರಾಂ ಬೆಲೆ ಇಂದು ₹2,200 ರೂ. ಆಗಿದ್ದು, ನಿನ್ನೆಗೂ ಇಂದಿಗೂ ಯಾವುದೇ ವ್ಯತ್ಯಾಸಗಳಾಗಿಲ್ಲ. 10 ಗ್ರಾಂ ಬೆಳ್ಳಿ ದರ ಇಂದು ₹2,750 ರೂ. ಆಗಿದ್ದು, ನಿನ್ನೆಯಷ್ಟೇ ಇಂದು ಬೆಲೆ ಮುಂದುವರೆದಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ ₹27,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ದರ ₹2,75,000 ರೂ. ಆಗಿದೆ.
ಭಾರತದಲ್ಲಿ ಚಿನ್ನದ ದರ ಹೇಗಿದೆ?
ಭಾರತದಲ್ಲಿ ಇಂದು ಚಿನ್ನದ ಬೆಲೆ ಕೂಡಾ ಸ್ಥಿರವಾಗಿದೆ. 24K ಚಿನ್ನದ ಬೆಲೆ 15,775 ರೂ. ಆಗಿದೆ. ಇನ್ನು 22K ಚಿನ್ನದ ಬೆಲೆ 14,460 ರೂ., 18K ಚಿನ್ನದ ಬೆಲೆ 11,831 ರೂ. ಆಗಿದೆ. ಅಂದರೆ ನಿನ್ನೆಗೂ ಇಂದಿಗೂ ಹೋಲಿಸಿದ್ರೆ, ಶೂನ್ಯ ಬದಲಾವಣೆಯಾಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ ಎಷ್ಟಿದೆ?
ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರ ನಿಂತ ನೀರಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು 2,750 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹27,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ ₹2,75,000 ರೂ. ಆಗಿದೆ.
ಹೈದರಾಬಾದ್ ಬೆಳ್ಳಿ ದರ ಎಷ್ಟಿದೆ?
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,800 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹28,000 ರೂ. ಆಗಿದೆ. ಅಲ್ಲದೇ 1000 ಗ್ರಾಂ ಬೆಳ್ಳಿ ಬೆಲೆ ಇಂದು 2,80,000 ರೂ. ಆಗಿದೆ.
ದೆಹಲಿಯಲ್ಲಿ ಬೆಳ್ಳಿ ದರ ಎಷ್ಟಿದೆ?
ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಬೆಳ್ಳಿ ದರ 2,750 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ 27,500 ರೂ. ಆಗಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ದರ 2,75,000 ರೂ. ಆಗಿದೆ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿಯೂ ಇಂದು ಬೆಳ್ಳಿ ದರ ಏರಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ 2,800 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹28,000 ರೂ. ಆಗಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ದರ ಇಂದು 2,80,000 ರೂ. ತಲುಪಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ 10 ಗ್ರಾಂ ಬೆಳ್ಳಿ ದರ ₹2,750 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹27,500 ರೂ., 1 ಕೆಜಿ ಬೆಳ್ಳಿ ಬೆಲೆ ₹2,75,000 ರೂ. ಆಗಿದೆ.
MCX ಬೆಳ್ಳಿ ದರ ಹೇಗಿದೆ?
ಫೆಬ್ರವರಿ 13, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ದಿನದ ಅಂತ್ಯದ ವೇಳೆಗೆ ಬೆಳ್ಳಿ ದರ 2,44,999 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗಿಂತ 3.62% ಇಳಿಕೆ ಕಂಡಿದೆ.
ಸ್ಪಾಟ್ ಬೆಳ್ಳಿ ದರ:
ಫೆಬ್ರವರಿ 13ರ GOLDPRICE.ORG ವರದಿ ಪ್ರಕಾರ, ಬೆಳ್ಳಿ ದರ ಶನಿವಾರ ಅಂತ್ಯದ ವೇಳೆಗೆ $77.41 ಡಾಲರ್ ತಲುಪಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ 2.08% ತಲುಪಿದೆ.


Click it and Unblock the Notifications