ಇತ್ತೀಚೆಗೆ ಚಿನ್ನದಂತೆ ಬೆಳ್ಳಿ ಕೂಡಾ ದುಬಾರಿಯಾಗಿಬಿಟ್ಟಿದೆ. ಅತ್ತ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆ ಕೂಡಾ ಈ ವರ್ಷ ದಾಖಲೆ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಈ ವರ್ಷವಂತೂ ದಾಖಲೆ ಮಟ್ಟದಲ್ಲಿ ಬೆಳ್ಳಿ ದರ ಏರಿಕೆ (Silver Price Rise) ಕಾಣುತ್ತಿದೆ. ಇದೀಗ ಇಂದೂ ಕೂಡಾ ಭಾರತದಲ್ಲಿ ಬೆಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ. ಹಾಗಿದ್ರೆ ಒಟ್ಟು ಎಷ್ಟು ಹೆಚ್ಚಾಗಿದೆ ಗೊತ್ತಾ?

ಜನವರಿ 16, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಹಿಂದಿನ ವಹಿವಾಟು ಮುಗಿಯುವ ಹೊತ್ತಿಗೆ ಪ್ರತೀ ಕೆಜಿಗೆ ಇಂದು 2,87,701 ಲಕ್ಷ ರೂ. ತಲುಪಿದೆ. ಅಂದರೆ ಹಿಂದಿನ ವಹಿವಾಟಿಗಿಂತ ಒಟ್ಟು 0.02% ರಷ್ಟು ಇಳಿಕೆ ಕಂಡಿದೆ. ಹಾಗಿದ್ರೆ ಬೇರೆ ರಾಜ್ಯಗಳಲ್ಲಿ ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ಓದಿ.
ಭಾರತದಲ್ಲಿ ಬೆಳ್ಳಿ ದರ ಹೇಗಿದೆ?
ಭಾರತದಲ್ಲಿ ಬೆಳ್ಳಿ ದರ ಭಾರೀ ಏರಿಕೆ ಕಂಡಿದೆ. ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ ಇಂದು ದಿಢೀರ್ ಏರಿಕೆಯಾಗಿದೆ. ಅಂದರೆ 1 ಗ್ರಾಂ ಬೆಳ್ಳಿ ಬೆಲೆ 295 ರೂ. ಆಗಿದ್ದು, ನಿನ್ನೆ 292 ರೂ. ಆಗಿದ್ದು, 3 ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ಬೆಲೆ ₹2,360 ರೂಲ ಆಗಿದ್ದು, ನಿನ್ನೆ ₹2,336 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹24 ರೂ. ಹೆಚ್ಚಾಗಿತ್ತು. ಹಾಗೆಯೇ 10 ಗ್ರಾಂ ಬೆಳ್ಳಿ ಬೆಲೆ ₹2,950 ರೂ. ಆಗಿದ್ದು, ನಿನ್ನೆ ₹2,920 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ₹30 ರೂ. ಹೆಚ್ಚಳ ಕಂಡಿದೆ. ಹಾಗೆಯೇ 100 ಗ್ರಾಂ ಬೆಳ್ಳಿ ಬೆಲೆ ₹29,500 ರೂ. ಆಗಿದ್ದು, ನಿನ್ನೆ ₹29,200 ರೂ. ಆಗಿದೆ. ಒಟ್ಟು ₹300 ರೂ. ಹೆಚ್ಚಳ ಕಂಡಿದೆ. ಇನ್ನು 1000 ಗ್ರಾಂ ಬೆಳ್ಳಿ ದರ ₹2,95,000 ರೂ. ಆಗಿದ್ದು, ನಿನ್ನೆ ₹2,92,000 ರೂ. ಆಗಿತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹3,000 ರೂ. ಏರಿಕೆ ಕಂಡಿದೆ.
ಭಾರತದಲ್ಲಿ ಚಿನ್ನದ ಬೆಲೆ ಹೇಗಿದೆ?
ಭಾರತದಲ್ಲಿ ಇಂದು ಚಿನ್ನದ ಬೆಲೆ ಕೂಡಾ ಏರಿಕೆ ಕಂಡಿದ್ದು, ಪ್ರತೀ ಗ್ರಾಂನಲ್ಲಿ 38 ರೂ. ಹೆಚ್ಚಳವಾಗಿದೆ. ಅದೇ ರೀರಿ 24K ಚಿನ್ನದ ಬೆಲೆ 14,378 ರೂ., 22K ಚಿನ್ನದ ಬೆಲೆ 13,180 ರೂ., 18K ಚಿನ್ನದ ಬೆಲೆ 10,784 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ ಹೇಗಿದೆ?
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ನಿನ್ನೆಯಂತೆಯೇ ಇಂದೂ ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದರು. ಆದ್ರೆ ಇಂದೂ ಬೆಳ್ಳಿ ಪ್ರಿಯರಿಗೆ ನಿರಾಸೆಯಾಗಿದೆ. ಅಂದರೆ ಇಂದು 10 ಗ್ರಾಂ ಬೆಳ್ಳಿ ಬೆಲೆ ₹2,950 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹29,500 ರೂ., 1 ಕೆಜಿ ಬೆಳ್ಳಿ ದರ ₹2,95,000 ರೂ. ಆಗಿದೆ. ಅಂದರೆ ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂ ಬೆಳ್ಳಿಯಲ್ಲಿ 3 ರೂ. ಏರಿಕೆಯಾಗಿದೆ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 3,100 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 31,000 ರೂ. ಇದೆ. ಅದೇ ರೀತಿ 1 ಕೆಜಿ ಬೆಳ್ಳಿ ದರ ಇಂದು 3,10,000 ರೂ. ಆಗಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 2,950 ರೂ. ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ 29,500 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ಬೆಲೆ 2,95,000 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಮಾಯಾನಗರಿಯಲ್ಲಿ ಬೆಳ್ಳಿ ದರ ಏರಿಕೆಯ ಹಾದಿ ಹಿಡಿದಿದೆ.
ಹೈದರಾಬಾದ್ ಬೆಳ್ಳಿ ಬೆಲೆ:
ಹೈದರಾಬಾದ್‌ನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 3,100 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 31,000 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 3,10,000 ರೂ. ಆಗಿದೆ.
ದೆಹಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲೂ ಇಂದು ಬೆಳ್ಳಿ ದರ ಕೊಂಚ ಇಳಿಕೆ ಕಂಡಿದೆ. ಇಂದು 10 ಗ್ರಾಂ ಬೆಳ್ಳಿ ದರ ₹2,950 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹29,500 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ₹2,95,000 ರೂ. ಆಗಿದೆ.
MCX ಬೆಳ್ಳಿ ದರ:
ಜನವರಿ 16, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಹಿಂದಿನ ವಹಿವಾಟು ಮುಗಿಯುವ ಹೊತ್ತಿಗೆ ಪ್ರತೀ ಕೆಜಿಗೆ ಇಂದು 2,87,701 ಲಕ್ಷ ರೂ. ತಲುಪಿದೆ. ಅಂದರೆ ಹಿಂದಿನ ವಹಿವಾಟಿಗಿಂತ ಒಟ್ಟು 0.02% ರಷ್ಟು ಇಳಿಕೆ ಕಂಡಿದೆ.
ಸ್ಪಾಟ್ ಬೆಳ್ಳಿ ದರ:
ಜನವರಿ 16ರ GOLDPROCE.org ವರದಿ ಪ್ರಕಾರ, ಬೆಳ್ಳಿ ದರ ಪ್ರತೀ ಔನ್ಸ್‌ಗೆ $90.13 ಕ್ಕೆ ತಲುಪಿದೆ. ಅಂದರೆ ಹಿಂದಿನ ವಹಿವಾಟಿನಲ್ಲಿ ಒಟ್ಟು 2.47%ಕ್ಕೆ ಸ್ಥಿರವಾಗಿದೆ.


Click it and Unblock the Notifications