ಕಳೆದ ಮೂರು ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ದರ (Silver Rate), ಇಂದು ದಿಢೀರ್ ಏರಿಕೆ ಕಂಡಿದೆ. ಇಂದು ಭಾರತದಲ್ಲಿ ಬೆಳ್ಳಿ ದರ ಇಳಿಕೆಯ ಹಾದಿ ಹಿಡಿಯಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ಕೊಟ್ಟಿದೆ. ಅತ್ತ ಚಿನ್ನದ ಬೆಲೆಯೂ ಏರಿಕೆಯಾಗಿದ್ದು, ಇತ್ತ ಬೆಳ್ಳಿ ದರವೂ ಭಾರೀ ಏರಿಕೆ ಕಂಡಿದೆ. ಹಾಗಿದ್ರೆ ಇಂದು ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಈ ಲೇಖನದಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಹಲವು ದಿನಗಳಿಂದ ಕೆಟ್ಟು ನಿಂತ ಗಾಡಿಯಂತೆ ನಿಂತಿದ್ದ ಬೆಳ್ಳಿ ದರ, ಇಂದು ದಿಢೀರ್ ಏರಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ದರ ಇಂದು ₹295 ರೂ. ಆಗಿದ್ದು, ನಿನ್ನೆ ₹285 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹10 ರೂ. ಏರಿಕೆಯಾಗಿದೆ. 8 ಗ್ರಾಂ ಬೆಳ್ಳಿ ದರ ಇಂದು ₹2,360 ರೂ. ಆಗಿದ್ದು, ನಿನ್ನೆ ₹2,280 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹80 ರೂ. ಏರಿಕೆ ಕಂಡಿದೆ. ಇನ್ನು 10 ಗ್ರಾಂ ಬೆಳ್ಳಿ ಬೆಲೆ ₹2,950 ರೂ. ಆಗಿದ್ದು, ನಿನ್ನೆ ₹2,850 ರೂ. ಇತ್ತು. ನಿನ್ನೆಗ ಹೋಲಿಕೆ ಮಾಡಿದ್ರೆ ಇಂದು ₹100 ರೂ. ಹೆಚ್ಚಳವಾಗಿದೆ. 100 ಗ್ರಾಂ ಬೆಳ್ಳಿ ದರ ₹29,500 ರೂ. ಆಗಿದ್ದು, ನಿನ್ನೆ ₹28,500 ರೂ. ಇತ್ತು. ನಿನ್ನೆಗಿಂತ ಇಂದು ₹1,000 ರೂ. ಹೆಚ್ಚಳ ಕಂಡಿದೆ. 1000 ಗ್ರಾಂ ಬೆಳ್ಳಿ ದರ ಇಂದು ₹2,95,000 ರೂ. ಆಗಿದ್ದು, ನಿನ್ನೆ ₹2,85,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹10,000 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
ಬೆಳ್ಳಿ ದರದಂತೆ, ಇಂದು ಚಿನ್ನದ ಬೆಲೆಯೂ ಭಾರೀ ಹೆಚ್ಚಳ ಕಂಡಿದೆ. 24K ಚಿನ್ನದ ಬೆಲೆ 16,473 ರೂ. ಆಗಿದೆ. ಇನ್ನು 22K ಚಿನ್ನದ ಬೆಲೆ 15,100 ರೂ., 18K ಚಿನ್ನದ ಬೆಲೆ 12,335 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರ ದಿಢೀರ್ ಏರಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು 2,950 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,500 ರೂ., 1000 ಗ್ರಾಂ ಬೆಳ್ಳಿ ಬೆಲೆ 2,95,000 ರೂ. ಆಗಿದೆ.
ಹೈದರಾಬಾದ್ ಬೆಳ್ಳಿ ದರ ಎಷ್ಟಿದೆ?
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹3,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹30,000 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ಬೆಲೆ ಇಂದು 3,00,000 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂನಲ್ಲಿ 10 ರೂ. ಹೆಚ್ಚಳ ಕಂಡಿದೆ..
ದೆಹಲಿಯಲ್ಲಿ ಬೆಳ್ಳಿ ದರ ಎಷ್ಟಿದೆ?
ರಾಜಧಾನಿ ದೆಹಲಿಯಲ್ಲಿ ಇಂದು ಬೆಳ್ಳಿ ದರ ಭಾರೀ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ 2,950 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹29,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ದರ 2,95,000 ರೂ. ಆಗಿದೆ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ 3,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹30,000 ರೂ. ಆಗಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ದರ ಇಂದು ₹3,00,000 ರೂ. ಆಗಿದೆ.
ಮುಂಬೈ ಬೆಳ್ಳಿ ದರ ಎಷ್ಟಿದೆ?
ಮಾಯಾನಗರಿ ಮುಂಬೈನಲ್ಲಿ 10 ಗ್ರಾಂ ಬೆಳ್ಳಿ ದರ 2,950 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹29,500 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,95,000 ರೂ. ಆಗಿದೆ.
MCX ಬೆಳ್ಳಿ ದರ:
ಫೆಬ್ರವರಿ 28, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಶನಿವಾರ ಬೆಳಿಗ್ಗೆ 11:43 ರ ಸುಮಾರಿಗೆ 2,74,389 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಹಿಂದಿನ ವಹಿವಾಟಿಗಿಂತ 0.22% ಇಳಿಕೆಯಾಗಿದೆ.


Click it and Unblock the Notifications