ಚಿನ್ನದಷ್ಟೇ ಬೆಳ್ಳಿ ಪ್ರಿಯರೂ ಇದ್ದಾರೆ. ಆದ್ರೆ ಇತ್ತೀಚೆಗೆ ಬೆಲೆ ಏರಿಕೆಯಿಂದ ಬೆಳ್ಳಿ ಹೂಡಿಕೆದಾರರು ಸ್ವಲ್ಪ ಹಿಂದೆ ಸರಿದಿದ್ದರು. ಇದೀಗ ಮತ್ತೆ ಬೆಳ್ಳಿ ಇಳಿಕೆಯ ಹಾದಿ ನೋಡುತ್ತಿದೆ. ಆದ್ರೆ ಇಂದು ಬೆಳ್ಳಿ ನಿಂತಲ್ಲೇ ನಿಂತುಬಿಟ್ಟಿದೆ. ಅತ್ತ ಏರಿಕೆಯೂ ಇಲ್ಲದೆ, ಇಳಿಕೆಯೂ ಇಲ್ಲದೇ ನಿನ್ನೆಯ ಬೆಲೆಯಲ್ಲೇ ಸ್ಥಿರವಾಗಿದೆ. ಹಾಗಿದ್ರೆ ಭಾರತದಲ್ಲಿ ಬೆಳ್ಳಿ ಬೆಲೆ (Silver Rate India) ಇಂದು ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ ಬೆಳ್ಳಿ ದರ:
ಹೌದು, ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ. ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ, ಇಂದು ನಿಂತಲ್ಲೇ ನಿಂತಿದೆ. 1 ಗ್ರಾಂ ಬೆಳ್ಳಿ ದರ ಇಂದು ₹285 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ. 8 ಗ್ರಾಂ ಬೆಳ್ಳಿ ಬೆಲೆ ಇಂದು ₹2,280 ರೂ. ಆಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ಬೆಲೆ ₹2,850 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹28,500 ರೂ. ಆಗಿದೆ. ಇನ್ನು 1000 ಗ್ರಾಂ ಬೆಳ್ಳಿ ದರ ₹2,85,000 ರೂ. ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬೆಳ್ಳಿ ಬೆಲೆಯಲ್ಲಿ ಶೂನ್ಯ ಬದಲಾವಣೆಯಾಗಿದೆ.
ಭಾರತದಲ್ಲಿ ಚಿನ್ನದ ದರ:
ಭಾರತದಲ್ಲಿ ಚಿನ್ನದ ದರ ಇಂದು ಸ್ವಲ್ಪ ಏರಿಕೆ ಕಂಡಿದೆ. 24K ಚಿನ್ನದ ಬೆಲೆ 16,189 ರೂ. ಆಗಿದೆ. ಇನ್ನು 22K ಚಿನ್ನದ ಬೆಲೆ 14,840 ರೂ., 18K ಚಿನ್ನದ ಬೆಲೆ 12,142 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಎಷ್ಟಿದೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಇಂದು ಬೆಳ್ಳಿ ದರ ಭಾರೀ ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು 2,850 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹28,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ 2,85,000 ರೂ. ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಪ್ರತೀ ಗ್ರಾಂನಲ್ಲಿ 15 ರೂ. ಇಳಿಕೆಯಾಗಿದೆ.
ಹೈದರಾಬಾದ್ ಬೆಳ್ಳಿ ದರ ಎಷ್ಟಿದೆ?
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,950 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,500 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ಬೆಲೆ ಇಂದು 2,95,000 ರೂ. ಆಗಿದೆ.
ದೆಹಲಿಯಲ್ಲಿ ಬೆಳ್ಳಿ ದರ ಎಷ್ಟಿದೆ?
ರಾಜಧಾನಿ ದೆಹಲಿಯಲ್ಲಿ ಇಂದು ಬೆಳ್ಳಿ ದರ ಭಾರೀ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ 2,850 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 28,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ದರ 2,85,000 ರೂ. ಆಗಿದೆ. ರಾಜಧಾನಿಯಲ್ಲೂ ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಿಲ್ಲ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ 2,950 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹29,500 ರೂ. ಆಗಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ದರ ಇಂದು ₹2,95,000 ರೂ. ಆಗಿದ್ದು, ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಚೆನ್ನೈಯಲ್ಲಿ ಬೆಳ್ಳಿ ಬೆಲೆ ಶೂನ್ಯ ಬದಲಾವಣೆಯಾಗಿದೆ.
ಮುಂಬೈ ಬೆಳ್ಳಿ ದರ:
ಮಾಯಾನಗರಿ ಮುಂಬೈನಲ್ಲಿ 10 ಗ್ರಾಂ ಬೆಳ್ಳಿ ದರ 2,850 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,500 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,85,000 ರೂ. ಆಗಿದೆ.
MCX ಬೆಳ್ಳಿ ದರ:
ಫೆಬ್ರವರಿ 25, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಬುಧವಾರ ಭಾರೀ ಹೆಚ್ಚಳವಾಗಿದೆ. ಬೆಳಿಗ್ಗೆ 11:48 ರ ಸುಮಾರಿಗೆ 2,68,868 ರೂ.ನಲ್ಲಿ ವಹಿವಾಟು ನಡೆಸುತ್ತಿದ್ದು, ಹಿಂದಿನ ವಹಿವಾಟಿಗೆ ಹೋಲಿಕೆ ಮಾಡಿದ್ರೆ 3.09% ಏರಿಕೆಯಾಗಿದೆ.
ಸ್ಪಾಟ್ ಬೆಳ್ಳಿ ದರ:
ಫೆಬ್ರವರಿ 25ರ GOLDPRICE.ORG ವರದಿ ಪ್ರಕಾರ, ಬೆಳ್ಳಿ ದರ ಸೋಮವಾರ $90.6 ಡಾಲರ್ ತಲುಪಿದ್ದು, ಹಿಂದಿನ ವಹಿವಾಟಿಗಿಂತ ಇಂದು 3.53% ಏರಿಕೆ ಕಂಡಿದೆ.


Click it and Unblock the Notifications