ಭಾರತದಲ್ಲಿ ಬೆಳ್ಳಿ ದರ (Gold Rate India) ಇಂದು (ಜ.29) ದಾಖಲೆ ಮಟ್ಟದಲ್ಲಿ ಹೆಚ್ಚಳವಾಗಿದೆ. ಎಂದೂ ಏರಿಕೆ ಕಾಣದಷ್ಟು ಹೆಚ್ಚಳವಾದ ಬೆಳ್ಳಿ ದರ, ಇಂದು 4 ಲಕ್ಷ ಗಡಿ ದಾಟಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳ್ಳಿ ದರ ಇಷ್ಟೊಂದು ಏರಿಕೆ ಕಂಡಿದೆ. ಹಾಗಿದ್ರೆ ಪ್ರತೀ ಗ್ರಾಂ ಬೆಳ್ಳಿಯಲ್ಲಿ ಎಷ್ಟು ಏರಿಕೆ ಕಂಡಿದೆ? ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬೆಳ್ಳಿ ದರ ಎಷ್ಟಿದೆ? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜನವರಿ 29, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳಿಗ್ಗೆ 10:54 ರ ವೇಳೆಗೆ ಬೆಳ್ಳಿ ದರ 4,02,500 ಕ್ಕೆ ತಲುಪಿದೆ. ಅಂದರೆ ಹಿಂದಿನ ವಹಿವಾಟಿಗಿಂತಲೂ ಇಂದು 4.24%% ಏರಿಕೆಯಾಗಿದ.
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಭಾರತದಲ್ಲಿ ಪ್ರತೀ ಗ್ರಾಂ ಬೆಳ್ಳಿಯಲ್ಲಿ ಬರೋಬ್ಬರಿ 30 ರೂ. ಹೆಚ್ಚಳವಾಗಿದೆ. 1 ಗ್ರಾಂ ಬೆಳ್ಳಿ ದರ ಇಂದು ₹410 ರೂ.ಗೆ ಆಗಿದ್ದು, ನಿನ್ನೆ ₹380 ರೂ. ಇತ್ತು. ಇನ್ನು 8 ಗ್ರಾಂ ಬೆಳ್ಳಿ ದರ ₹3,280 ರೂ. ಆಗಿದ್ದು, ನಿನ್ನೆ 3,040 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ ₹240 ರೂ. ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹4,100 ರೂ. ಆಗಿದ್ದು, ನಿನ್ನೆ ₹3,800 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹300 ರೂ. ಹೆಚ್ಚಳವಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹41,000 ರೂ. ಆಗಿದ್ದು, ನಿನ್ನೆ 38,000 ರೂ. ಇತ್ತು. ಒಂದು ಕೆಜಿ ಬೆಳ್ಳಿ ದರ ₹4,10,000 ರೂ. ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ.
ಭಾರತದಲ್ಲಿ ಚಿನ್ನದ ಬೆಲೆ:
ಭಾರತದಲ್ಲಿ ಇಂದು ಚಿನ್ನದ ಬೆಲೆಯೂ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. 24K ಚಿನ್ನದ ಬೆಲೆ ಇಂದು 17,885 ರೂ., 22K ಚಿನ್ನದ ಬೆಲೆ ಇಂದು 16,395 ರೂ., 18K ಚಿನ್ನದ ಬೆಲೆ ಇಂದು 13,414 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ ಹೇಗಿದೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ₹4,100 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 41,000 ರೂ., 1 ಕೆಜಿ ಬೆಳ್ಳಿ ದರ ₹4,10,000 ರೂ. ಆಗಿದೆ. ಪ್ರತೀ ಗ್ರಾಂನಲ್ಲಿ 30 ರೂ. ಹೆಚ್ಚಾಗುವ ಮೂಲಕ ಬೆಳ್ಳಿ ಇಂದು ದಾಖಲೆ ಬರೆದಿದೆ.
ಚೆನ್ನೈ ಬೆಳ್ಳಿ ದರ:
ಇತರ ರಾಜ್ಯಗಳಿಗೆ ಹೋಲಿಸಿದ್ರೆ, ಚೆನ್ನೈನಲ್ಲಿ ಬೆಳ್ಳಿ ದರ ಹೆಚ್ಚಳ ಇರುತ್ತದೆ. ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 4,250 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 42,500 ರೂ. ಇದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ದರ ಇಂದು 4,25,000 ರೂ. ಆಗಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 4,100 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 41,000 ರೂ., 1 ಕೆಜಿ ಬೆಳ್ಳಿ ಬೆಲೆ 4,10,000 ರೂ. ಆಗಿದೆ.
ಹೈದರಾಬಾದ್ ಬೆಳ್ಳಿ ಬೆಲೆ:
ಹೈದರಾಬಾದ್‌ನಲ್ಲೂ ಬೆಳ್ಳಿ ದರ ಭರ್ಜರಿ ಏರಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು 4,250 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 42,500 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 4,25,000 ರೂ. ಆಗಿದೆ.
ದೆಹಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 4,100 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ 41,000 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ₹4,10,000 ರೂ. ಆಗಿದೆ.
MCX ಬೆಳ್ಳಿ ದರ ಎಷ್ಟಿದೆ?
ಜನವರಿ 29, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳಿಗ್ಗೆ 10:54 ರ ವೇಳೆಗೆ ಬೆಳ್ಳಿ ದರ 4,02,500 ಕ್ಕೆ ತಲುಪಿದೆ. ಅಂದರೆ ಹಿಂದಿನ ವಹಿವಾಟಿಗಿಂತಲೂ ಇಂದು 4.24%% ಏರಿಕೆಯಾಗಿದೆ.
ಸ್ಪಾಟ್ ಬೆಳ್ಳಿ ದರ:
ಜನವರಿ 29ರ GOLDPROCE.org ವರದಿ ಪ್ರಕಾರ, ಬೆಳಿಗ್ಗೆ 11 ಗಂಟೆ ಸುಮಾರಿ ಬೆಳ್ಳಿ ದರ ಪ್ರತೀ ಔನ್ಸ್‌ಗೆ $119.15 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗಿಂತ ಪ್ರಸ್ತುತ 5.05% ಏರಿಕೆಯಾಗಿದೆ


Click it and Unblock the Notifications