ದಿನ ಹೋದಂತೆ ಇತ್ತೀಚೆಗೆ ಬೆಳ್ಳಿ ದರ (Silver Rate) ಭಾರೀ ಹೆಚ್ಚಳವಾಗುತ್ತಿದೆ. ಇಂದು ಕಮ್ಮಿಯಾಗುತ್ತೆ, ನಾಳೆ ಕಮ್ಮಿಯಾಗುತ್ತೆ ಎಂದು ನಿರೀಕ್ಷೆಯಲಿದ್ದವರಿಗೆ ದಿನ ಕಳೆದಂತೆ ನಿರಾಸಾಭಾವವೇ ವ್ಯಕ್ತವಾಗುತ್ತಿದೆ. ಅದರಲ್ಲೂ ಚಿನ್ನದಂತೆ ಬೆಳ್ಳಿ ಬೆಲೆ ಕೂಡಾ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದೀಗ ಚಿನ್ನ ಮತ್ತು ಬೆಳ್ಳಿ ಬೆಲೆ ಯಾಕೆ ಇಷ್ಟು ಏರಿಕೆ ಕಾಣುತ್ತಿದೆ ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.

ಬೆಳ್ಳಿ ಬೆಲೆ ಮತ್ತೆ ಏರುತ್ತಿರುವುದೇಕೆ?
ಈಗಾಗಲೇ ಬೆಳ್ಳಿ ದರ ದಾಖಲೆಯ $97 ಗಡಿಯನ್ನು ದಾಟಿದೆ. ಈ ಮಧ್ಯೆ ಇದನ್ನೂ ಮೀರಲಿದ್ಯಾ? ಎಂಬ ಪ್ರಶ್ನೆ ಹುಟ್ಟಿದೆ. ಬೆಳ್ಳಿ ಈಗ ತನ್ನ ದಾಖಲೆ ಮಟ್ಟದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದು, ಹೂಡಿಕೆದಾರರು ಜಾಗತಿಕ ರಾಜಕೀಯ ಬೆಳವಣಿಗೆಗಳು, ಆರ್ಥಿಕ ಬದಲಾವಣೆ ಮತ್ತು ಕರೆನ್ಸಿ ಬದಲಾವಣೆಗಳ ಬಗ್ಗೆ ಭಾರೀ ಗಮನಹರಿಸುತ್ತಿದ್ದಾರೆ. ಈ ಪ್ರವೃತ್ತಿಯಿಂದಾಗಿ ಚಿನ್ನ ಮತ್ತು ಪ್ಲಾಟಿನಂನಂತಹ ಇತರ ಲೋಹಗಳ ಏರಿಕೆಗೂ ಕಾರಣವಾಗಿದೆ.
ಅಂತಾರಾಷ್ಟ್ರೀಯವಾಗಿ ರಾಜಕೀಯ ಉದ್ವಿಗ್ನತೆ, ರಾಷ್ಟ್ರಗಳ ನಡುವಿನ ಘರ್ಷಣೆ ಅಮೂಲ್ಯ ಲೋಹಗಳ ಮೇಲಿನ ಬೇಡಿಕೆಯನ್ನು ಹೆಚ್ಚಿಸಿದೆ. ಮತ್ತೊಂದೆಡೆ, ದುರ್ಬಲಗೊಂಡ ಯುಎಸ್ ಡಾಲರ್ ವಿದೇಶಿ ಖರೀದಿದಾರರಿಗೆ ಲೋಹಗಳನ್ನು ಅಗ್ಗವಾಗಿಸಿ, ಹೂಡಿಕೆಗೆ ನೆರವಾಗಿದೆ. ಇದೇ ಸಮಯದಲ್ಲಿ, ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆಗಳ ಬಗ್ಗೆ ಇರುವ ನಿರೀಕ್ಷೆಗಳು ಹೂಡಿಕೆದಾರರ ನಿರ್ಧಾರಗಳ ಮೇಲೆ ಗಮನಾರ್ಹ ಪ್ರಭಾವ ಬೀರಲು ಆರಂಭಿಸಿದೆ. ಈ ನಡುವೆಯೂ ಹೂಡಿಕೆದಾರರು ಬೆಳ್ಳಿ $97 ಗಡಿತ ದಾಟಿ $100ರತ್ತ ತಲುಪುತ್ತಾ ಎಂದು ಕಾದು ನೋಡುತ್ತಿದ್ದಾರೆ.
ಇತರ ಲೋಹಗಳ ಬೆಲೆಗಳನ್ನು ಗಮನಿಸಿದರೆ, ಸ್ಪಾಟ್ ಚಿನ್ನವು 0.5% ಏರಿಕೆಯಾಗಿ ಪ್ರತಿ ಔನ್ಸ್‌ಗೆ $4,961.57 ಕ್ಕೆ ತಲುಪಿದೆ. ಇದು ಈ ಹಿಂದೆ $4,966.59 ರ ದಾಖಲೆ ಮಟ್ಟವನ್ನು ಮುಟ್ಟಿತ್ತು. ಫೆಬ್ರವರಿ ಡೆಲಿವರಿಗಾಗಿ ಯುಎಸ್ ಚಿನ್ನದ ಫ್ಯೂಚರ್ಸ್ 1.1% ಏರಿಕೆ ಕಂಡು $4,964.60 ತಲುಪಿತು. ಪ್ಲಾಟಿನಂ 1.4% ಹೆಚ್ಚಳವಾಗಿ $2,665.85 ಮುಟ್ಟಿತ್ತು.
ಬೆಳ್ಳಿ ದರ ಏರಿಕೆಯಾಗಲು ಕಾರಣವೇನು?
ಬೆಳ್ಳಿ ಬೆಲೆ ಏರಿಕೆಗೆ ಹಲವಾರು ಕಾರಣಗಳಿವೆ. ಯುಎಸ್ ಡಾಲರ್ ದುರ್ಬಲಗೊಂಡಿರುವುದು ವಿದೇಶಿ ಖರೀದಿದಾರರಿಗೆ ವೆಚ್ಚವನ್ನು ಕಡಿಮೆ ಮಾಡಿದೆ. ಜಾಗತಿಕವಾಗಿ ರಾಜಕೀಯ ಉದ್ವಿಗ್ನತೆ ಲೋಹಗಳ ಮೇಲಿನ ಬೇಡಿಕೆನ್ನು ಹೆಚ್ಚಿಸಿದೆ. ಯುಎಸ್ ಫೆಡರಲ್ ರಿಸರ್ವ್‌ನ ಬಡ್ಡಿದರ ಕಡಿತದ ನಿರೀಕ್ಷೆಗಳು ಬೆಳ್ಳಿಗೆ ಮತ್ತಷ್ಟು ಬೆಂಬಲ ನೀಡಿದಂತಾಗಿದೆ. ಬೆಳ್ಳಿ ಹೂಡಿಕೆಯ ಬೇಡಿಕೆ ಮತ್ತು ಕೈಗಾರಿಕಾ ಬಳಕೆ ಎರಡರಿಂದಲೂ ಲಾಭ ಪಡೆಯುತ್ತದೆ. ಜೊತೆಗೆ, ಚಿನ್ನ ಮತ್ತು ಪ್ಲಾಟಿನಂ ಬೆಲೆಗಳಲ್ಲಿ ಆಗುತ್ತಿರುವ ಬೆಲೆ ಬದಲಾವಣೆ, ಬೆಳ್ಳಿಯ ಏರಿಕೆಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಈ ಎಲ್ಲ ಅಂಶಗಳು ಒಟ್ಟಾಗಿ ಬೆಳ್ಳಿ ಬೆಲೆಗಳನ್ನು ದಾಖಲೆ ಮಟ್ಟಕ್ಕೆ ತಲುಪುವಂತೆ ಮಾಡಿದೆ. ಜಾಗತಿಕ ರಾಜಕೀಯ ಬೆಳವಣಿಗೆಗಳು ಲೋಹಗಳ ಮಾರುಕಟ್ಟೆಗೆ ಮತ್ತಷ್ಟು ಬೆಂಬಲ ನೀಡಿದಂತಾಗಿದೆ. ಇದರಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುತ್ತಿದ್ದಾರೆ.


Click it and Unblock the Notifications