ಪ್ರಯಾಣದ ಅನುಭವದಲ್ಲಿ ವಿಮಾನ ನಿಲ್ದಾಣಗಳು ಎಲ್ಲರ ಜೀವನದಲ್ಲೂ ಪ್ರಮುಖ ಪಾತ್ರವಹಿಸುತ್ತವೆ. ಪ್ರಯಾಣಿಕರು ತಮ್ಮ ಅಗತ್ಯ ಎಣಿಸಿದ ವಸ್ತುಗಳನ್ನು ಅಥವಾ ಉಡುಗೊರೆಗಾಗಿಯೋ ಉತ್ಪನ್ನಗಳನ್ನು ಖರೀದಿಸುವುದು ಸಹಜ. ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ಆಹಾರ ಪದಾರ್ಥಗಳು ಮಾರುಕಟ್ಟೆಯಲ್ಲಿರುವುದಕ್ಕಿಂದ ದುಬಾರಿಯಾಗಿ ಇರುತ್ತದೆ. ಆದರೆ ಕೊಂಚ ದುಬಾರಿಯಾದರೂ ಕೈಗೆಟದಷ್ಟು ಅಲ್ಲ.!
ಆದರೆ ಈ ಏರ್ ಪೋರ್ಟ್ ಬೆಲೆ ಏರಿಕೆಗೆ ಕುಖ್ಯಾತಿಗೆ ಪಾತ್ರವಾಗಿದ್ದು, ಪ್ರಪಂಚದಾದ್ಯಂತದ ಪ್ರಯಾಣಿಕರು ಈ ವಿಮಾನ ನಿಲ್ದಾಣವನ್ನು 'ವಿಶ್ವದ ಅತ್ಯಂತ ದುಬಾರಿ' ಎಂದು ಕರೆದಿದ್ದಾರೆ. ಈ ಏರ್ ಪೋರ್ಟ್ ಎಷ್ಟು ದುಬಾರಿಯೆಂದರೆ ಇಲ್ಲಿ ಕೇವಲ ಒಂದು ಬಾಳೆಹಣ್ಣಿಗೆ ₹500 ಪಾವತಿಸಬೇಕು. ಮಾರುಕಟ್ಟೆ ಬದಲಾಗಿ ಏರ್ ಪೋರ್ಟ್ ಅಷ್ಟೇ ಕೇವಲ ಸ್ಥಳ ಬದಲಾಗಿದೆಯೆಂದರೆ ಈ ಮಟ್ಟಿಗೆ ಬೆಲೆ ಏರಿಕೆ ಮಾಡಿ ಮಾರಾಟ ಮಾಡುವುದು ಸರಿಯೇ ಎಂಬುವುದು ಪ್ರಯಾಣಿಕರ ಅನಿಸಿಕೆ. ವಿಮಾನ ನಿಲ್ದಾಣವು ಅತ್ಯಂತ ಮೂಲಭೂತವಾಗಿ ಆಹಾರ ಪದಾರ್ಥಗಳನ್ನು ಪ್ರೀಮಿಯಂ ಬೆಲೆಯಲ್ಲಿ ಮಾರಾಟ ಮಾಡುತ್ತದೆ. ಸಾಮಾನ್ಯವಾಗಿ ಸ್ಥಳದ ಬಾಡಿಗೆ ಮತ್ತು ನಿರ್ವಹಣಾ ವೆಚ್ಚಗಳು, ಸುರಕ್ಷತಾ ನಿಯಮಗಳು ಇತ್ಯಾದಿಗಳ ಕಾರಣ ವಿಮಾನ ನಿಲ್ದಾಣದಲ್ಲಿ ಸಿಗುವ ವಸ್ತುಗಳು ಕೊಂಚ ದುಬಾರಿಯಾಗುತ್ತದೆ.

ಆದರೆ ಇಸ್ತಾನ್‌ಬುಲ್ ವಿಮಾನ ನಿಲ್ದಾಣದ ಕಥೆಯೇ ಬೇರೆ. ಒಂದು ಬಿಯರ್ £15 ಅಥವಾ ₹ 1,697 ಕ್ಕೆ ಮತ್ತು ಒಂದು ಬಾಳೆಹಣ್ಣನ್ನು £5 ಅಥವಾ ₹ 565 ಕ್ಕೆ ಮಾರಾಟ ಮಾಡಲಾಗುತ್ತದೆ. ₹1,697 ಅಂದ್ರೆ ಸ್ಥಳೀಯ ಪಬ್‌ನಲ್ಲಿ ಮೂರು ಬಿಯರ್ ಕುಡಿದು ಸ್ನೇಹಿತನಿಗೆ ಕುಡಿಸಿದ್ರು ಇಷ್ಟೊಂದು ಆಗೋದಿಲ್ಲ, ಇನ್ನು ತರಕಾರಿ ಮಾರುಕಟ್ಟೆಯಲ್ಲಿ ಅದೇ ಬೆಲೆಗೆ ೫-೧೦ ಕಿಲೋ ಬಾಳೆಹಣ್ಣು ಬರಬಹುದು. ಅಂದಹಾಗೆ ಈ ಇಸ್ತಾನ್‌ಬುಲ್ ವಿಮಾನ ನಿಲ್ದಾಣ ಇರೋದು ಟರ್ಕಿಯಲ್ಲಿ. ಈ ವಿಮಾನ ನಿಲ್ದಾಣವು ಟರ್ಕಿಯ ಅತಿದೊಡ್ಡ ಮತ್ತು ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು 2019 ರಲ್ಲಿ ಪೂರ್ಣಗೊಂಡ ಈ ಆಧುನಿಕ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಅನುಕೂಲಕರಮತ್ತು ಸೇವೆಗಳನ್ನು ಒದಗಿಸುತ್ತದೆ.
ಟರ್ಕಿಯ ಪ್ರಮುಖ ವಿಮಾನ ನಿಲ್ದಾಣವು ದಿನಕ್ಕೆ ಸರಾಸರಿ 220,000 ಪ್ರಯಾಣಿಕರ ದಟ್ಟಣೆಯನ್ನು ಹೊಂದಿದೆ. ಆದರೆ ಹೆಚ್ಚಿನ ಪ್ರಯಾಣಿಕರು ಇಲ್ಲಿ ಮಾರಾಟ ಮಾಡೋ ವಸ್ತುಗಳ ಬೆಲೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅದರಲ್ಲೂ ನಿರ್ದಿಷ್ಟವಾಗಿ ಆಹಾರ ಮತ್ತು ಪಾನೀಯಗಳ ಬೆಲೆಗಳು ಕೈಗೆಟುಕದಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹೆಚ್ಚಿನ ವೆಚ್ಚವು ಪ್ರಯಾಣಿಕರ ಅನುಭವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಗಗನಕ್ಕೇರಿರುವ ಬೆಲೆಗಳು; ಕೈ ಸುಟ್ಟುಕೊಳ್ಳುತ್ತಿರುವ ಪ್ರಯಾಣಿಕರು
ಇಟಾಲಿಯನ್ ಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ಪ್ರಕಾರ , ಇಸ್ತಾನ್‌ಬುಲ್ ವಿಮಾನ ನಿಲ್ದಾಣವು ಆಹಾರ ಮತ್ತು ಪಾನೀಯಗಳಿಗೆ ಯುರೋಪಿನ 'ಅತ್ಯಂತ ದುಬಾರಿ ವಿಮಾನ ನಿಲ್ದಾಣ'ವಾಗಿದೆ. ಒಬ್ಬ ಇಟಾಲಿಯನ್ ಬರಹಗಾರ 90 ಗ್ರಾಂ ಇದ್ದ ಲಸಾಂಜ (ಇಟಾಲಿಯನ್ ಆಹಾರ ಭಕ್ಷ್ಯ )ವನ್ನು £21 ಅಥವಾ ₹ 2,376 ಕ್ಕೆ ಏರ್ ಪೋರ್ಟ್ ನಲ್ಲಿ ಮಾರಾಟ ಮಾಡುತ್ತಿದ್ದ ಅನುಭವವನ್ನು ವಿವರಿಸಿದ್ದಾರೆ. ಅದು ನೋಡೋಕೆ ಕೇವಲ ಒಂದು ಇಟ್ಟಿಗೆಯ ಚೂರಿನಂತಿತ್ತು, ಅದರ ಮೇಲೆ ಸ್ವಲ್ಪ ತುರಿದ ಚೀಸ್ ಮತ್ತೆ ಏನೋ ಬೆಸಿಲ್ ಲೀಫ್ ತರಹ ಉದುರಿಸಿದ್ದರಿ ಹಾಕಿದ್ದಾರೆ ಅಷ್ಟೆ," ಎಂದು ಅವರು ಅಸಮಾಧಾನದ ಪಟ್ಟುಕೊಂಡಿರುವ ಬರಹಗಾರರು, ಇಷ್ಟೊಂದು ದುಬಾರಿ ಬೆಲೆಗೆ ಆ ಆಹಾರ ಕ್ವಾಲಿಟಿಯೂ ಸರಿ ಇಲ್ಲ, ದುಡ್ಡು ದಂಡವಷ್ಟೇ" ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇನ್ನೊಂದು ವಿಚಿತ್ರ ಎಂದ್ರೆ ಮೆಕ್‌ಡೊನಾಲ್ಡ್ಸ್ ಮತ್ತು ಬರ್ಗರ್ ಕಿಂಗ್‌ನಂತಹ ಪಾಕೆಟ್ ಸ್ನೇಹಿ ಫಾಸ್ಟ್ ಫುಡ್ಸ್ ಸಂಸ್ಥೆಗಳು ಸಹ ತಮ್ಮ ಪ್ರಮುಖ ಭಕ್ಷ್ಯಗಳನ್ನು ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತವೆ ಎಂದಿದ್ದಾರೆ.
ಮತ್ತೊಬ್ಬ ಪ್ರಯಾಣಿಕರು ಬೆಲೆಗಳು ನಂಬಲು ಸಾಧ್ಯವಾಗದಷ್ಟು ಜಾಸ್ತಿ ಇವೆ!" ಎಂದು ಬೇಸತ್ತ ರೆಡ್ಡಿಟ್‌ನಲ್ಲಿಬರೆದುಕೊಂಡಿದ್ದು "ಇಸ್ತಾನ್‌ಬುಲ್‌ನಲ್ಲಿ ಇಷ್ಟು ಬೆಲೆ ಇರಬಾರದು. ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣಕ್ಕಿಂತ ಎರಡರಿಂದ ನಾಲ್ಕು ಪಟ್ಟು ಹೆಚ್ಚಿದೆ! ಯಾಕೆ ಇಷ್ಟು ಬೆಲೆ ಜಾಸ್ತಿ? ಟರ್ಮಿನಲ್ ಮಾತ್ರ ಚೆನ್ನಾಗಿದೆ, ಆದ್ರೆ ಈ ಬೆಲೆಗಳಿಂದ ಪ್ರಯಾಣದ ಖುಷಿ ಹೊರಟುಹೋಗಿದೆ," ಎಂದು ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications