ನವದೆಹಲಿ, ಏಪ್ರಿಲ್ 15: ಜೀವನ ಏರು-ಪೇರುಗಳ ಹಾದಿ, ಕೆಲವೊಮ್ಮೆ ನಾವು ಅಂದುಕೊಂಡಂತೆಯೂ ಸಾಗುವುದಿಲ್ಲ, ಬಹಳಷ್ಟು ಸಾರಿ ಈ ದಾರಿಯಲ್ಲಿ ಸಾಗುವಾಗ ಏಕಾಂಗಿಯಾಗಿ ಸಾಗಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಹೀಗೆ ಏಕಾಂಗಿಯಾಗಿ ಯಶಸ್ಸಿನ ಶಿಖರವನ್ನು ತಲುಪಿದವರಲ್ಲಿ ಮೀರಾ ಕುಲಕರ್ಣಿ ಕೂಡಾ ಒಬ್ಬರು. ಇವರು ಆಯುರ್ವೇದದಲ್ಲಿ ಪರಿಣತಿ ಹೊಂದಿರುವ ಭಾರತದ ಪ್ರಸಿದ್ಧ ನೈಸರ್ಗಿಕ ಸೌಂದರ್ಯವರ್ಧಕ ಬ್ರ್ಯಾಂಡ್‌ಗಳಲ್ಲಿ ಒಂದಾದ ಫಾರೆಸ್ಟ್ ಎಸೆನ್ಷಿಯಲ್ಸ್‌ನ ಸಂಸ್ಥಾಪಕಿ ಮತ್ತು CMD ಆಗಿದ್ದಾರೆ. ಇವರ ಉದ್ಯಮ ಪಯಣ , ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ.

ಮೀರಾ ಕುಲಕರ್ಣಿ ತಮ್ಮ 20 ನೇ ವಯಸ್ಸಿನಲ್ಲಿ ವಿವಾಹವಾದರು. ಮೀರಾ ಅವರ ಪತಿ ವ್ಯಾಪಾರಿಯಾಗಿದ್ದು, ವಿವಾಹ ಬಳಿಕ ಪತಿಯ ವ್ಯಾಪಾರವು ಹದಗೆಡುತ್ತಾ ಬಂದಿತ್ತು. ಇದರ ಜೊತೆ ಜೊತೆಗೆ ಮೀರಾ ಅವರ ಪತಿ ಮದ್ಯಪಾನ ಚಟದತ್ತ ವಾಲಿದ್ದರು. ಕೊನೆಗೆ ಮದ್ಯವ್ಯಸನ ಸಂಸಾರವನ್ನೇ ನುಚ್ಚುನೂರು ಮಾಡಿತು. ಮೀರಾ ತಮ್ಮ ಇಬ್ಬರು ಮಕ್ಕಳೊಂದಿಗೆ ತನ್ನ ಪತಿಯಿಂದ ದೂರವಾಗಿ ತಮ್ಮ ಪೋಷಕರ ಮನೆಗೆ ಸ್ಥಳಾಂತರಗೊಂಡಳು. ದುರಾದೃಷ್ಟವಶಾತ್ ಮೀರಾ 28 ನೇ ವಯಸ್ಸಿನಲ್ಲಿತಮ್ಮ ಹೆತ್ತವರನ್ನು ಕಳೆದುಕೊಳ್ಳ ಬೇಕಾಯಿತು. ತಂದೆ ತಾಯಿ ಕಳೆದುಕೊಂಡ ನಂತರ ಅವರು ತಮ್ಮ ಜೀವನದಲ್ಲಿ ಒಂಟಿಯಾಗಿ ಹೋರಾಡಬೇಕಾಯಿತು.
ಮಕ್ಕಳ ವಿದ್ಯಾಭ್ಯಾಸದ ಬಳಿಕ ಮಗಳನ್ನು ಮದುವೆಯಾದ ಜವಬ್ದಾರಿಯನ್ನ ಮುಗಿಸಿ ತಮ್ಮ 45 ನೇ ವಯಸ್ಸಿನಲ್ಲಿ ಮೀರಾ ಅವರು ಮೇಣದಬತ್ತಿ ಮತ್ತು ತಾವೇ ಮಾಡಿದ ಸಾಬೂನುಗಳನ್ನು ತಯಾರಿಸಲು ಪ್ರಾರಂಭಿಸಿದರು.
ನಂತರ 2000 ರಲ್ಲಿ, ಅವರು ಆಯುರ್ವೇದ ಪರಿಕಲ್ಪನೆಗಳ ತತ್ವಗಳ ಆಧಾರದ ಮೇಲೆ ಭಾರತದ ಮೊದಲ ದೇಶೀಯ ಪ್ರೀಮಿಯಂ ಬ್ರ್ಯಾಂಡ್ ತ್ವಚೆಯ ರಕ್ಷಣೆಯ" ಫಾರೆಸ್ಟ್ ಎಸೆನ್ಷಿಯಲ್ಸ್" ಅನ್ನು ಸ್ಥಾಪಿಸಿದರು. ಕೇವಲ 2 ಲಕ್ಷ ರೂಪಾಯಿ ಹೂಡಿಕೆ ಮತ್ತು ಗ್ಯಾರೇಜ್‌ನಿಂದ 2 ಉದ್ಯೋಗಿಗಳೊಂದಿಗೆ ಅವರು ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು. ಅದಕ್ಕಾಗೊ ತೆಹ್ರಿ ಗರ್ವಾಲ್ ಪ್ರದೇಶದಿಂದ ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳನ್ನು ಪಡೆದುಕೊಂಡರು.
ಪ್ರಸ್ತುತ, ಅವರ ಬ್ರ್ಯಾಂಡ್ ಭಾರತದಾದ್ಯಂತ 28 ಕ್ಕೂ ಹೆಚ್ಚು ನಗರಗಳ 110 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ಮಾರಾಟವಾಗುತ್ತಿದೆ. ಅವರು ತಾಜ್ ಮತ್ತು ಹಯಾತ್‌ನಂತಹ ಪ್ರಸಿದ್ಧ ಹೊಟೇಲ್ ಚೈನ್ ಗಳಲ್ಲಿ ಸೇರಿ 300 ಕ್ಕೂ ಹೆಚ್ಚು ಹೋಟೆಲ್ ಸೇರಿದಂತೆ ಸುಮಾರು 150 ಸ್ಪಾಗಳು ಇವರ ಗ್ರಾಹಕರಾಗಿದ್ದಾರೆ. ಕಂಪನಿಯು FY20 ರಲ್ಲಿ 253 ಕೋಟಿ ಮತ್ತು FY21 ರಲ್ಲಿ 210 ಕೋಟಿ ಆದಾಯ ಗಳಿಸಿದೆ.
ಮೀರ ಅವರು ಸದ್ಯ ಸಾಕಷ್ಟು ಜನಮನ್ನಣೆ ಪಡೆದಿದ್ದು, ಫಾರ್ಚೂನ್ ಮ್ಯಾಗಜೀನ್‌ನಿಂದ ಭಾರತದ ವ್ಯಾಪಾರ ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆ ಎಂಬ ಟೈಟಲ್ ನ್ನು ಪಡೆದುಕೊಂಡಿದ್ದಾರೆ. ಅವರು ಕೋಟಾಕ್ ವೆಲ್ತ್ ಹುರುನ್ - 2020 ರ ಪ್ರಮುಖ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ 1,290 ಕೋಟಿ ರೂ.ಗಳ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.


Click it and Unblock the Notifications