SIP..ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್..ಅಂದ್ರೆ ಇದು ಮ್ಯೂಚುವಲ್ ಫಂಡ್‌ನ ಜನಪ್ರಿಯವಾದ ಹೂಡಿಕೆಯ ಸಾಧನ. ಮ್ಯೂಚುವಲ್ ಫಂಡ್ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ಏರಿಳಿತ ನೋಡುತ್ತಿದೆ. ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸುಮಾರು 12% ನಷ್ಟು ಕುಸಿದಿದೆ. ಇದರ ನಡುವೆ ಮಧ್ಯಮ ಮತ್ತು ಸಣ್ಣ ಕ್ಯಾಪ್ ಸೂಚ್ಯಂಕಗಳು ಕೂಡ 20% ಕ್ಕಿಂತ ಹೆಚ್ಚು ಕುಸಿದಿವೆ. ಇದರಿಂದ ಆತಂಕಕ್ಕೀಡಾದ ಹೂಡಿಕೆದಾರರು ಎಸ್‌ಐಪಿಯನ್ನು ಮುಂದುವರೆಸಬೇಕೋ ಬೇಡವೋ ಎಂಬ ತಲ್ಲಣದಲ್ಲಿದ್ದಾರೆ.
ಈ ಎಸ್‌ಐಪಿ ಯೋಜನೆ ಹೂಡಿಕೆದಾರರಿಗೆ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ನೀಡುವ ಒಂದು ಉತ್ತಮ ಪ್ಲಾಟ್‌ಫಾರ್ಮ್. ಮತ್ತು ರೂಪಾಯಿ ವೆಚ್ಚದ ಸರಾಸರಿ ಮೂಲಕ ಮಾರುಕಟ್ಟೆಯಲ್ಲಿ ಆಗುವ ಏರಿಳಿತಗಳಿಂದ ಲಾಭ ಪಡೆಯಲು ರೂಪಿಸಲಾಗಿದೆ. ಹೀಗಿದ್ರೂ ಮಾರುಕಟ್ಟೆಗಳು ಅಸ್ಥಿರವಾದಾಗ, ಚಂಚಲತೆಗೆ ಒಳಪಟ್ಟಾದ ಹೂಡಿಕೆದಾರರು ಆತಂಕಕ್ಕೊಳಗಾಗುವ ಸಾಧ್ಯತೆ ಇದೆ. ಆಗ ಎಸ್‌ಐಪಿ ಹೂಡಿಕೆಯು ನಿಲ್ಲಿಸಿಬಿಡುತ್ತಾರೆ.

1. ಹೂಡಿಕೆಯನ್ನು ಅಲ್ಪಾವಧಿ ಎಂದು ತಿಳಿಯುವುದು ತಪ್ಪು
ಸಾಮಾನ್ಯವಾಗಿ ಎಸ್‌ಐಪಿಯಲ್ಲಿ ಹೂಡಿಕೆ ಮಾಡುವ ಜನರು, ಇದೊಂದು ಅಲ್ಪಾವಧಿಯ ಯೋಜನೆ ಎಂದು ಭಾವಿಸಿರುತ್ತಾರೆ. ಆದರೆ ಇದೊಂದು ದೀರ್ಘಾವಧಿಯ ಯೋಜನೆಯಾಗಿದೆ. ಅಲ್ಲದೇ ತಾವು ಆಯ್ಕೆ ಮಾಡುವ ನಿಧಿಗಳು ಹಿಂದಿನ ಕಾರ್ಯಕ್ಷಮತೆಯ ಆಧಾರ ಮೇಲೆ ಆಯ್ಕೆ ಮಾಡುತ್ತಾರೆ. ಅಂದರೆ ಅವರು ಆಗ ನೋಡಿದ ಲಾಬವನ್ನೇ ನಿರೀಕ್ಷೆ ಮಾಡಿ ಹೂಡಿಕೆ ಮಾಡುತ್ತಾರೆ. ಅಲ್ಲದೇ ಇದನ್ನು ಮೌಲ್ಯಮಾಪನ ಮಾಡುವಾಗ, 3 ವರ್ಷಗಳು, 5 ವರ್ಷಗಳು ಅಥವಾ 10 ವರ್ಷಗಳಂತಹ ನಿರ್ದಿಷ್ಟ ಅವಧಿಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಜನರು ಮಾರುಕಟ್ಟೆಯ ಆವರ್ತಕ ಇಳಿಕೆ, ಏರಿಕೆಗಳನ್ನು ದಾಟಿ ಹೋಗುತ್ತವೆ ಎಂಬುದನ್ನೇ ಅರಿತಿರುವುದಿಲ್ಲ. ಅವರು ಒಟ್ಟಾರೆ ಆದಾಯದ ಮೇಲೆ ಮಾತ್ರ ಗಮನಹರಿಸುತ್ತಾರೆ. ಆದರೆ ನಷ್ಟ ಅನುಭವಿಸಿದಾಗ ಅವರು ಶಾಕ್‌ಗೆ ಒಳಗಾಗುತ್ತಾರೆ. ಆಗ ಅವರು ತಮ್ಮ ಎಸ್‌ಐಪಿ ಹೂಡಿಕೆಯನ್ನು ನಿಲ್ಲಿಸುತ್ತಾರೆ.
2. ಹೂಡಿಕೆದಾರರು ತಮಗೆ ಸೂಕ್ತವಲ್ಲದ ನಿಧಿಯನ್ನು ನಮೂದಿಸುವುದು
ಕೆಲವೊಮ್ಮೆ ಎಸ್‌ಐಪಿ ಹೂಡಿಕೆದಾರರು ತಮಗೆ ಸೂಕ್ತವಾದ ನಿಧಿ ಯಾವುದು ಎಂಬುದೇ ಅರಿತಿರುವುದಿಲ್ಲ. ತಪ್ಪು ತಪ್ಪಾಗಿ ನಮೂದಿಸುತ್ತಾರೆ. ಹೆಚ್ಚಿನ ಜನರು ದೀರ್ಘಾವಧಿಗೆ SIP ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆಗ ಅವರು ಹೆಚ್ಚಾಗಿ ನಿವೃತ್ತಿ ಯೋಜನೆಯ ಭಾಗವಾಗಿ ಹೂಡಿಕೆ ಆಯ್ಕೆ ಮಾಡುತ್ತಾರೆ. ಅಲ್ಲದೇ ಕೆಲವರು ಪ್ರಯಾಣಕ್ಕೆ ಹಣ ಒದಗಿಸಲು, ಅಲ್ಪಾವಧಿಯ ಗುರಿಗಳಿಗೂ SIPಗಳನ್ನು ಬಳಸುತ್ತಾರೆ. ಇಲ್ಲಿ ಅರಿಯಬೇಕಾಗಿರುವ ಮುಖ್ಯವಾದ ವಿಚಾರವೇನೆಂದರೆ, ಹೂಡಿಕೆದಾರರ ಅಪಾಯದ ಸಾಮರ್ಥ್ಯ ಮತ್ತು ಹೂಡಿಕೆಯ ಗುರಿಗಳು.. ಮತ್ತು ಇವುಗಳ ಆಧಾರದ ಮೇಲೆ ಸರಿಯಾದ ನಿಧಿಯನ್ನು ಆಯ್ಕೆ ಮಾಡಬೇಕು.
3. ಫಂಡ್ ನಿರ್ವಹಿಸುವ ವ್ಯವಸ್ಥಾಪಕರ ಬಗ್ಗೆ ಅತೃಪ್ತಿ
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ಅಲ್ಲಿಂದ ಹಿಡಿದು ಆರಂಭದಲ್ಲಿಯೇ ಹೂಡಿಕೆ ಮಾಡಲು, ಉತ್ತಮವಾದ ನಿಧಿ ಆಯ್ಕೆ ಮಾಡಬೇಕು. ತಪ್ಪು ಹೂಡಿಕೆ ಮಾಡುವ ಪ್ರಯಾಣವು ತಪ್ಪು ದಾರಿಯಲ್ಲಿ ಹೋಗುತ್ತದೆ. ಆಗ ಅವರು ನಿರೀಕ್ಷಿತ ಆದಾಯವನ್ನು ಪಡೆಯದೇ ಇರಬಹುದು. ಇದರಿಂದ ಫಂಡ್ ನಿರ್ವಹಿಸುವ ವ್ಯವಸ್ಥಾಪಕರ ಬಗ್ಗೆ ಅತೃಪ್ತಿ ಶುರುವಾಗುತ್ತದೆ. ನೀವು ಅಂತಹ ಹೂಡಿಕೆದಾರರಲ್ಲಿ ಒಬ್ಬರಾಗಿದ್ದರೆ, SIP ಗಳನ್ನು ದೀರ್ಘಾವಧಿಗೆ ವಿನ್ಯಾಸಗೊಳಿಸಲಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.
ಕೆಲವೊಮ್ಮೆ ಎಸ್‌ಐಪಿ ವಿಧಾನದಲ್ಲಿ ಹೂಡಿಕೆ ಮಾಡಿದರೆ, ಅದು ಸಂಪೂರ್ಣವಾಗಿ ನಿಧಿ ವ್ಯವಸ್ಥಾಪಕರ ವಿವೇಚನೆಯ ಮೇಲೆ ಅವಲಂಬಿತವಾಗಿರುತ್ತದೆ. ಕಾಲಾನಂತರದಲ್ಲಿ ಮ್ಯೂಚುವಲ್ ಫಂಡ್ ಜಾಗದ ಬಗ್ಗೆ ಜ್ಞಾನವನ್ನು ಪಡೆದುಕೊಂಡಂತೆ, ಹೆಚ್ಚು ಸಕ್ರಿಯ, ಮೌಲ್ಯಮಾಪನ-ಚಾಲಿತ ತಂತ್ರಕ್ಕೆ ಆದ್ಯತೆಯನ್ನು ಬೆಳೆಸಿಕೊಳ್ಳಬಹುದು.
4. ಹಣಕಾಸಿನ ಗುರಿಗಳಲ್ಲಿ ಬದಲಾವಣೆ ಮಾಡುವುದು
ಹೂಡಿಕೆದಾರರ ಹಣಕಾಸಿನ ಗುರಿಗಳು ಕಾಲಾನಂತರದಲ್ಲಿ ಬದಲಾಗುತ್ತವೆ. ಅಂದರೆ ಆರಂಭದಲ್ಲಿ ನಿವೃತ್ತಿಗಾಗಿ ಉಳಿತಾಯವನ್ನು ಹೂಡಿಕೆದಾರರು ಪ್ರಾರಂಭಿಸುತ್ತಾರೆ. ಆದರೆ ಕೆಲವೊಮ್ಮೆ ಮಗುವಿನ ಶಿಕ್ಷಣ ಅಥವಾ ಮನೆ ಖರೀದಿಯಂತಹ ಖರ್ಚುಗಳಿಗಾಗಿ ಡೌನ್ ಪೇಮೆಂಟ್ ಕಟ್ಟಲು ನಿಧಿಯನ್ನು ಪರಿವರ್ತಿಸುತ್ತಾರೆ.
5. ಹೂಡಿಕೆದಾರರ ಫಂಡ್‌ನ ಕಳಪೆ ಕಾರ್ಯಕ್ಷಮತೆ
ಹೂಡಿಕೆದಾರರ ನಿಧಿಯು ಅನೇಕ ವರ್ಷಗಳ ಕಾಲ ಯಾವುದೇ ಕಾರಣವಿಲ್ಲದೇ, ಕಳಪೆ ಪ್ರದರ್ಶನ ನೀಡುತ್ತವೆ. ಅಂದರೆ ಅಲ್ಪಾವಧಿಯ ಏರಿಳಿತವನ್ನೂ ಮೀರಿ ನಿರಂತರವಾಗಿ ಮಾನದಂಡಗಳು ಹಾಗೂ ವರ್ಗದಲ್ಲಿ ಕಳಪೆ ಕಾರ್ಯಕ್ಷಮತೆ ತೋರಿಸುತ್ತವೆ. ಇದರಿಂದ ಕೂಡ ಹೂಡಿಕೆದಾರರು ಎಸ್‌ಐಪಿಯನ್ನು ನಿಲ್ಲಿಸುವ ಸಾಧ್ಯತೆ ಇದೆ.
ಹೀಗೆ ಮಾರುಕಟ್ಟೆಯ ಏರಿಳಿತಗಳು ಹೂಡಿಕೆಯ ಅವಿಭಾಜ್ಯ ಅಂಗ. ಅದನ್ನು ಎದುರಿಸಬೇಕೆಂದರೆ ಮಾನಸಿಕವಾಗಿ ಸ್ಥಿರವಾಗಿ ಇರಬೇಕು. ಇಲ್ಲವಾದರೆ ಎಸ್‌ಐಪಿ ಹೂಡಿಕೆಯನ್ನು ನಿಲ್ಲಿಸುವ ಪರಿಸ್ಥಿತಿ ಎದುರಾಗುತ್ತದೆ.


Click it and Unblock the Notifications