ಹೂಡಿಕೆ ಮಾಡಿ ಒಂದಷ್ಟು ಹಣ ಕೂಡಿಟ್ಟರೆ ಮನಸ್ಸಿಗೆ ಸಿಗುವ ಸಮಾಧಾನವೇ ಬೇರೆ. ಆದರೆ ಹೂಡಿಕೆ ಮಾಡಿದರೆ ಮಾತ್ರ ಸಾಕೇ ಅದಕ್ಕೆ ಉತ್ತಮ ಗಳಿಕೆ , ರಿಟರ್ನ್ ಸಿಗಬೇಕು.. ನಷ್ಟವಾಗಬಾರದು ಹೀಗೆ ಒಬ್ಬೊಬ್ಬರದು ಒಂದೊಂದು ರೀತಿಯ ಲೆಕ್ಕಾಚಾರವಿರುತ್ತದೆ. ಇನ್ನು ಒಂದಷ್ಟು ಮಂದಿ ಹೂಡಿಕೆ ಎಲ್ಲಿ, ಹೇಗೆ, ಎಷ್ಟು ಮಾಡಬೇಕು ಎಂದು ತಿಳಿಯದೇ ಸಂಪ್ರಾದಾಯಿಕವಾದ ಹೂಡಿಕೆಯನ್ನೇ ಅನುಸರಿಸುತ್ತಿರುತ್ತಾರೆ. ನೀವು ಸಣ್ಣ ಮೊತ್ತದಿಂದ ಪ್ರಾರಂಭಿಸುವುದಾದರೆ ನಿಮಗೆ ಅನುಕೂಲವಾಗಲಿ ಎಂದು SIP vs RD ಯಾವುದರಲ್ಲಿ ಅಧಿಕ ಲಾಭ ಎಂಬ ಮಾಹಿತಿ ಒದಗಿಸಿದ್ದೇವೆ.
ನೀವು ಪ್ರತಿ ತಿಂಗಳು 5,500 ರೂಪಾಯಿಗಳನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಿ ಎಂದರೆ, ನೀವು ಹೂಡಿಕೆಯ ಜಗತ್ತಿನಲ್ಲಿ ಹೊಸ ಆರಂಭ ಮಾಡುತ್ತಿದ್ದೀರಿ ಎಂದರೆ ಮೊದಲು ನೀವು ಎಸ್‌ಐಪಿ ಮತ್ತು ಆರ್‌ಡಿ ಯೋಜನೆಗಳನ್ನು ಅರ್ಥಮಾಡಿಕೊಳ್ಳಿ. ಇವೆರಡೂ ಎರಡೂ ಸ್ಥಿರ ಮಾಸಿಕ ಹೂಡಿಕೆಗಳಾಗಿದ್ದರೂ , ಆದರೆ ಅವುಗಳ ನಡುವೆ ಗಮನಾರ್ಹ ವ್ಯತ್ಯಾಸಗಳಿವೆ.

ಮರುಕಳಿಸುವ ಠೇವಣಿ (RD):
ಆರ್‌ಡಿ ಎನ್ನುವುದು ನಿಮ್ಮ ಬ್ಯಾಂಕ್ ಖಾತೆಯಿಂದ ನಿಗದಿತ ಮೊತ್ತವನ್ನು ಪ್ರತಿ ತಿಂಗಳು ಸ್ವಯಂಚಾಲಿತವಾಗಿ ವರ್ಗಾಯಿಸುವ ಒಂದು ಯೋಜನೆಯಾಗಿದೆ.
ಇಲ್ಲಿ ಆರ್‌ಡಿ ನಿಮಗೆ ಖಾತರಿಪಡಿಸಿದ ಬಡ್ಡಿ ದರವನ್ನು ನೀಡುತ್ತದೆ. ಆದರೆ ಇದು ಸಾಮಾನ್ಯವಾಗಿ ಕಡಿಮೆ ಅಪಾಯದ ಹೂಡಿಕೆಯಾಗಿದೆ. ಬ್ಯಾಂಕ್ ಠೇವಣಿಗಳಿಗೆ ಸರ್ಕಾರಿ ಗ್ಯಾರಂಟಿ ಇರುವುದರಿಂದ, ಆರ್‌ಡಿಗಳು ಹೆಚ್ಚು ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ.
ಪ್ರಸ್ತುತ ಬಡ್ಡಿ ದರ: ವಾರ್ಷಿಕ 6.7% (ತ್ರೈಮಾಸಿಕ ಸಂಯುಕ್ತ) (ಜನವರಿ 1, 2024 ರಿಂದ ಜಾರಿಗೆ ಬರುತ್ತದೆ)ರಷ್ಟಿದೆ. ಬಡ್ಡಿ ದರವು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗಬಹುದು. ನೀವು ಮಾಸಿಕವಾಗಿ 5,500 ರೂ ಹೂಡಿಕೆ ಮಾಡಿದ್ರೆ ಅವುಗಳ ಮೆಚುರಿಟಿ ಮೌಲ್ಯ, ಹೂಡಿಕೆ ಮೊತ್ತ ಎಷ್ಟು ಎಂಬಿತ್ಯಾದಿ ವಿವರ ನೋಡೋಣ..
ನೀವು 5 ವರ್ಷಗಳ ಕಾಲ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಯಿಂದ 5,500 ರೂಪಾಯಿಗಳನ್ನು ಮಾಸಿಕ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಈ ಅವಧಿಯಲ್ಲಿ ನೀವು ಒಟ್ಟು 3,30,000 ರೂಪಾಯಿಗಳನ್ನು ಹೂಡಿಕೆ ಮಾಡಿದಂತಾಗುತ್ತದೆ. ಈ ಯೋಜನೆಯು ನಿಮಗೆ ಸುಮಾರು 62,509 ರೂಪಾಯಿಗಳಷ್ಟು ಹೆಚ್ಚುವರಿ ಆದಾಯವನ್ನು ನೀಡುತ್ತದೆ. ಅಂದರೆ, 5 ವರ್ಷಗಳ ನಂತರ ನೀವು ನಿಮ್ಮ ಹೂಡಿಕೆಯ ಮೇಲೆ ಒಟ್ಟು 3,92,509 ರೂಪಾಯಿಗಳನ್ನು ಪಡೆಯಬಹುದು
ಖಾತೆ ತೆರೆಯಲು ಇರುವ ಅರ್ಹತೆ:
ಈ ಯೋಜನೆಯಲ್ಲಿ ಖಾತೆ ತೆರೆಯಲು ಎಲ್ಲರೂ ತೆರಯಬಹುದಾದರು, 3 ವಯಸ್ಕರವರೆಗೆ ಜಂಟಿ ಖಾತೆ ತೆರಯಬಹುದು., ಅಪ್ರಾಪ್ತ ವಯಸ್ಕರು ಅಥವಾ ಮಾನಸಿಕ ಅಸ್ವಸ್ಥರ ಪರವಾಗಿ ಪೋಷಕರು ಮತ್ತು 10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ಖಾತೆ ತೆರೆಯಲು ಅರ್ಹರಾಗಿದ್ದಾರೆ. ಪ್ರತಿ ತಿಂಗಳು ಕನಿಷ್ಠ 100 ರೂಪಾಯಿಗಳನ್ನು ಠೇವಣಿ ಮಾಡಬಹುದಾಗಿದೆ.
RDಯನ್ನು 3 ವರ್ಷಗಳ ನಂತರ ಯೋಜನೆಯನ್ನು ಮುಕ್ತಾಯಗೊಳಿಸಲು ಅವಕಾಶವಿದೆ, ಆದರೆ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಮುಂಚಿತವಾಗಿ ಮುಕ್ತಾಯಗೊಳಿಸಿದರೆ, ಉಳಿತಾಯ ಖಾತೆಯ ಬಡ್ಡಿದರದಲ್ಲಿ ಬಡ್ಡಿಯನ್ನು ಹಿಂಪಡೆಯಲಾಗುತ್ತದೆ. 12 ಠೇವಣಿಗಳ ನಂತರ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇಕಡಾ 50 ರಷ್ಟು ಮೊತ್ತದವರೆಗೆ ಸಾಲವನ್ನು ಪಡೆಯಬಹುದು. ಸಾಲದ ಮೇಲಿನ ಬಡ್ಡಿದರವು ಆರ್‌ಡಿ ಬಡ್ಡಿದರಕ್ಕಿಂತ ಶೇಕಡಾ 2 ಹೆಚ್ಚಿರುತ್ತದೆ.
ವ್ಯವಸ್ಥಿತ ಹೂಡಿಕೆ ಯೋಜನೆ (SIP)
SIP ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್ ಎನ್ನುವುದು ಮ್ಯೂಚುವಲ್ ಫಂಡ್‌ಗಳಲ್ಲಿ ಪ್ರತಿ ತಿಂಗಳು ಸ್ಥಿರ ಮೊತ್ತವನ್ನು ಹೂಡಿಕೆ ಮಾಡುವ ಒಂದು ಯೋಜನೆಯಾಗಿದೆ. ಇಲ್ಲಿ ಕೂಡಾ ನಿಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ನಿಗದಿತ ಮೊತ್ತವನ್ನು ನಿಮ್ಮ ಆಯ್ಕೆಯ ಮ್ಯೂಚುವಲ್ ಫಂಡ್‌ಗೆ ವರ್ಗಾಯಿಸಲಾಗುತ್ತದೆ. ಈ ಹೂಡಿಕೆಯಿಂದ ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ಅನುಸರಿಸಿ ಆದಾಯವನ್ನು ಗಳಿಸಬಹುದು. ಪ್ರತಿ ಹೂಡಿಕೆಯೊಂದಿಗೆ ಹೆಚ್ಚುವರಿ ಘಟಕಗಳನ್ನು ಸೇರಿಸುವುದರಿಂದ ಸಂಯುಕ್ತ ಬಡ್ಡಿಯ ಪ್ರಯೋಜನವನ್ನು ಪಡೆಯಬಹುದು. ಉದಾಹರಣೆಗೆ, ನೀವು ಪ್ರತಿ ತಿಂಗಳು 5,500 ರೂಪಾಯಿಗಳನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಒಟ್ಟು 3,30,000 ರೂಪಾಯಿಗಳನ್ನು ಹೂಡಿಕೆ ಮಾಡಿದಂತಾಗುತ್ತದೆ ಮತ್ತು ಸುಮಾರು 1,23,675 ರೂಪಾಯಿಗಳಷ್ಟು ಆದಾಯವನ್ನು ಪಡೆಯಬಹುದು. ಹೀಗೆ ಒಟ್ಟು ಮೆಚ್ಯೂರಿಟಿ ಮೌಲ್ಯವು 4,53,675 ರೂಪಾಯಿ ಆಗಿರುತ್ತದೆ.
SIP ಅನ್ನು ಯಾವಾಗ ಪ್ರಾರಂಭಿಸಬೇಕು? ಅರ್ಹತೆ ಏನು?
SIP ಅನ್ನು ನೀವು ಯಾವುದೇ ವಯಸ್ಸಿನಲ್ಲಿ ಮತ್ತು ಯಾವುದೇ ಸಮಯದಲ್ಲಿ ಪ್ರಾರಂಭಿಸಬಹುದು. ನಿಮಗೆ ಮನೆ ಖರೀದಿ, ವಿವಾಹ ಮುಂತಾದ ದೀರ್ಘಕಾಲೀನ ಹಣಕಾಸಿನ ಗುರಿಗಳಿದ್ದರೆ, SIP ಹೇಳಿಮಾಡಿದಂತಹ ಆಯ್ಕೆಯಾಗಿದೆ. ಒಂದು ಸಣ್ಣ ಮೊತ್ತದ ಹಣವನ್ನು ಪ್ರತಿ ತಿಂಗಳು ಹೂಡಿಕೆ ಮಾಡುವ ಮೂಲಕ, ನೀವು ನಿಮ್ಮ ಗುರಿಗಳನ್ನು ಸಾಧಿಸಲು ಹತ್ತಿರವಾಗಬಹುದು. ಆರಂಭದಲ್ಲಿ ಮಾಡುವ ಹೂಡಿಕೆಗಳು ಕಾಲಕ್ರಮೇಣ ಬೆಳೆಯುತ್ತವೆ ಮತ್ತು ನಿಮಗೆ ಹೆಚ್ಚಿನ ಆದಾಯವನ್ನು ನೀಡುತ್ತವೆ.
RD ಯೋಜನೆಯು ನಿಮಗೆ ಖಾತರಿಯ ಆದಾಯವನ್ನು ನೀಡುತ್ತದೆ. ಇಲ್ಲಿ ಕಡಿಮೆ ಅಪಾಯದವಿದ್ದು ನೀವು ಪಡೆಯುವ ಒಟ್ಟು ಮೊತ್ತವು SIP ಯೋಜನೆಯಿಂದ ಪಡೆಯುವ ಮೊತ್ತಕ್ಕಿಂತ(3,92,509 ರೂ) ಕಡಿಮೆ ಇರುತ್ತದೆ. ಆದರೆ SIP ಯೋಜನೆ ಹಾಗಲ್ಲ. ಆರ್.ಡಿಗೆ ಹೋಲಿಸಿದರೆ ಇಲ್ಲಿ ಮಾರುಕಟ್ಟೆಯ ಕಾರ್ಯಕ್ಷಮತೆಯನ್ನು ಅನುಸರಿಸಿ ಹೆಚ್ಚಿನ ಆದಾಯವನ್ನು (Rs 4,53,675) ನೀಡುವ ಸಾಧ್ಯತೆ ಇರುತ್ತದೆ. ಅದೇ ರೀತಿ SIP ಯೋಜನೆಯು ಹೆಚ್ಚಿನ ಅಪಾಯವನ್ನು ಹೊಂದಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?



Click it and Unblock the Notifications