ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲರೂ ಉದ್ಯಮಿಗಳಾಗಲು ಬಯಸುವುದು ಇಂದಿನ ಟ್ರೆಂಡ್ ಆಗಿದೆ. ಆದರೆ ಉದ್ಯಮವೆಂದು ಹೇಳಿದ ಬಳಿಕ ಅದಕ್ಕೆ ಅದರದ್ದೇ ಆದ ಹಲವು ಸವಾಲುಗಳಿವೆ. ಮುಖ್ಯವಾಗಿ ಉದ್ಯಮಕ್ಕೆ ಹಣ ಹೊಂದಿಸುವುದು ಅಂದರೆ ಹಣ ಹೂಡಿಕೆ ಮಾಡುವುದು ಸವಾಲಿನ ಕೆಲಸವೇ ಸರಿ. ಆದರೆ ಅಲ್ಪ ಬಂಡವಾಳ ಹಾಕಿಕೊಂಡು ಯಾವ ಉದ್ಯಮ ಅದರಲ್ಲೂ ಭಾರತದಲ್ಲಿ ಹೇಗೆ ಆರಂಭಿಸುವುದು ಎಂಬುದು ಹೆಚ್ಚಿನವರ ಪ್ರಶ್ನೆಯಾಗಿದೆ. ಅದರಲ್ಲೂ ಹೆಚ್ಚಿನವರು ಮನೆಯಿಂದ ಕೆಲಸ ಮಾಡಲು ಬಯಸುತ್ತರೆ. ಆದರೆ ಹಣವನ್ನು ಕಳೆದುಕೊಳ್ಳುವ ಅಪಾಯದಿಂದ ಕಲ್ಪನೆಗಳೇ ಕಳೆದುಹೋಗುತ್ತದೆ. ಸದ್ಯ ನಾವು ಮನೆಯಿಂದಲೇ ನಿರ್ವಹಿಸಬಹುದಾದ ಎರಡು ಐಡಿಯಾಗಳನ್ನು ಇಲ್ಲಿ ಹೇಳಕೊಡಲಿದ್ದೇವೆ. ಆದರೆ ಮನೆಯಿಂದಲೇ ನಿರ್ವಹಿಸಬಹುದಾದರೂ ಶ್ರದ್ದೆ ಹಾಗೂ ಗುಣಮಟ್ಟದ ರೀತಿಯಲ್ಲಿ ಸೇವೆಗಳನ್ನು ನೀಡಿದರೆ ಮಾತ್ರ ಇದರಲ್ಲಿ ಯಶಸ್ಸು ಗಳಿಸಬಹುದು.
ಕಡಿಮೆ ಹೂಡಿಕೆಯ ವ್ಯವಹಾರ ಐಡಿಯಾಗಳು
ಸದ್ಯ 2024 ಕೂಡ ಅಂತ್ಯಗೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅನೇಕ ಜನರು ಹೊಸ ಉದ್ಯಮ ಆರಂಭಿಸಲು ಅಥವಾ ಯೋಜಿಸಲು ಆರಂಭಿಸಬಹುದು. ಆದರೂ ಸರಿಯಾದ ರೀತಿಯ ವ್ಯಾಪಾರದ ಐಡಿಯಾಗಳನ್ನು ಹೊಂದುವ ವಿಷಯದಲ್ಲಿ ಅನೇಕರು ಸಿಕ್ಕಿ ಬೀಳುತ್ತಾರೆ. ಯಾಕೆಂದರೆ ಇದರಲ್ಲಿ ಹಣವನ್ನು ಕಳೆದುಕೊಳ್ಳುವ ಅಪಾಯ ಕೂಡ ಇರುತ್ತದೆ. ಆದರೂ ನಾವು ಇಲ್ಲಿ ಸದ್ಯ ಮನೆಯಿಂದ ನಿರ್ವಹಿಸಬಹುದಾದ ಅತ್ಯಂತ ಕಡಿಮೆ ಹೂಡಿಕೆಯ ಐಡಿಯಾಗಳ ಬಗ್ಗೆ ಇಲ್ಲಿ ಚರ್ಚಿಸಲಿದ್ದೇವೆ. ಅಗ್ಗದ ಹೂಡಿಕೆಯ ವ್ಯವಹಾರ ಕಲ್ಪನೆಗಳ ಮೂಲಕ ನೀವು ನಿಮ್ಮ ಉದ್ಯಮಶೀಲತೆಯ ಕನಸುಗಳಿಗೆ ನೀವು ಹೇಗೆ ಬೆಳೆಸಬಹುದು ಎಂಬುದು ಇಲ್ಲಿದೆ.

ಕಡಿಮೆ ವೆಚ್ಚದ ಹೂಡಿಕೆ ವ್ಯವಹಾರ ಐಡಿಯಾ
ಡ್ರಾಪ್ ಶಿಪಿಂಗ್ ವ್ಯವಹಾರ
ಡ್ರಾಪ್‌ಶಿಪಿಂಗ್ ತ್ವರಿತವಾಗಿದ್ದು, ಮತ್ತು ಪ್ರಾರಂಭಿಸಲು ಸುಲಭವಾಗಿದೆ. ಅದೂ ಅಲ್ಲದೆ ಇದಕ್ಕೆ ಹೆಚ್ಚಿನ ಹೂಡಿಕೆಯ ಅಗತ್ಯವಿರುವುದಿಲ್ಲ. ಹಾಗಾಗಿ ಕಡಿಮೆ ಹೂಡಿಕೆಯ ಮೂಲಕ ಆರಂಭಿಸಬಹುದು. ಭಾರತದಲ್ಲಿ ಡ್ರಾಪ್‌ಶಿಪಿಂಗ್ ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ ಅದರ ಲಾಭದಾಯಕತೆ ಮತ್ತು ವೇಗದ ROI ಕಾರಣದಿಂದಾಗಿ ಅಲ್ಲ. ಬದಲಾಗಿ ಡ್ರಾಪ್‌ಶಿಪಿಂಗ್ ವ್ಯವಹಾರವು ಮನೆಯಿಂದ ಅಥವಾ ಪ್ರಪಂಚದ ಯಾವುದೇ ಭಾಗದಿಂದ ನಡೆಸಬಹುದಾದ ಒಂದು ರೀತಿಯ ವ್ಯಾಪಾರವಾಗಿರುವುದು ಇದಕ್ಕೆ ಕಾರಣವಾಗಿದೆ. ಭಾರತದಲ್ಲಿ ಸಣ್ಣ-ಪ್ರಮಾಣದ ಡ್ರಾಪ್‌ಶಿಪಿಂಗ್ ವ್ಯವಹಾರ ಪ್ರಾರಂಭಿಸಲು ಉತ್ಪನ್ನದ ಆಯ್ಕೆ, ಮಾರ್ಕೆಟಿಂಗ್ ಮುಂತಾದ ಅಂಶಗಳ ಆಧಾರದ ಮೇಲೆ 10,000 ರೂ.ನಿಂದ 50,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚ ಬೇಕಾಗಬಹುದು. ಡ್ರಾಪ್‌ಶಿಪಿಂಗ್ ಉದ್ಯಮಗಳು ಸಾಮಾನ್ಯವಾಗಿ 15 ಪ್ರತಿಶತದಿಂದ 20 ಪ್ರತಿಶತದಷ್ಟು ಲಾಭಾಂಶವನ್ನು ಹೊಂದಿರುತ್ತವೆ. ಆದರೆ ಇದು ವಲಯ ಮತ್ತು ಉತ್ಪನ್ನದಿಂದ ಬದಲಾಗುತ್ತದೆ. ಇ ಕಾಮರ್ಸ್ ಡ್ರಾಪ್‌ಶಿಪಿಂಗ್ ವೆಬ್‌ಸೈಟ್‌ಗಳು ಲಾಭದಾಯಕ ಮತ್ತು ಕಡಿಮೆ-ಅಪಾಯದ ವ್ಯಾಪಾರ ಪರಿಕಲ್ಪನೆಯಾಗಿದ್ದು ಅದನ್ನು ಒಬ್ಬರ ನಿಯಮಿತ ಕೆಲಸಕ್ಕೆ ಸೇರಿಸಬಹುದು.
ಭಾರತದಲ್ಲಿ ಡ್ರಾಪ್‌ಶಿಪಿಂಗ್ ವ್ಯವಹಾರ ಹೇಗೆ ಪ್ರಾರಂಭಿಸುವುದು?
ಆರಂಭದಲ್ಲಿ ನೀವು ವೆಬ್‌ಸೈಟ್ ಹಾಗೂ ಉತ್ಪನ್ನಗಳನ್ನು ಪ್ರಾರಂಭಿಸಬೇಕು. ಗ್ರಾಹಕರು ಉತ್ಪನ್ನವನ್ನು ಖರೀದಿಸಿದ ನಂತರ, ಆರ್ಡರ್‌ಗಳನ್ನು ಪ್ರಕ್ರಿಯೆಗೊಳಿಸಿ, ಬಳಿಕ ಡ್ರಾಪ್‌ಶಿಪಿಂಗ್ ಸಂಸ್ಥೆಯು ಗ್ರಾಹಕರಿಗೆ ರವಾನಿಸುತ್ತದೆ. ಆದರೆ ಒಬ್ಬ ವಾಣಿಜ್ಯ ಉದ್ಯಮಿಯಾಗಿ ನಿಮ್ಮ ಗಮನವು ಉತ್ಪನ್ನಗಳು ಮತ್ತು ಜಾಹೀರಾತುಗಳ ಮೇಲೆ ಇರಬೇಕು. ಮಾರುಕಟ್ಟೆ ಸಂಶೋಧನೆಗಾಗಿ ನೀವು Google Trends ನಿಂದ ಸಹಾಯ ಪಡೆಯಬಹುದು. ಈ ಐಟಂಗಾಗಿ ಎಷ್ಟು ವ್ಯಕ್ತಿಗಳು ಹುಡುಕುತ್ತಿದ್ದಾರೆಂದು Google ಮೂಲಕ ನಿಮಗೆ ತೋರಿಸಬಹುದು.
ಪ್ರಿಂಟೆಡ್ ಟಿ-ಶರ್ಟ್‌ಗಳ ವ್ಯಾಪಾರ
ಸದ್ಯ ಇಂದಿನ ನವಯುಗದಲ್ಲಿ ಯುವಸಮೂಹವು ಆಕರ್ಷಕ ರೀತಿಯಲ್ಲಿ ತಮ್ಮದೇ ಇಚ್ಛೆಯ ಬರಹ ಹಾಗೂ ಚಿತ್ರಗಳನ್ನು ಹೊಂದಿರುವ ಟಿ-ಶರ್ಟ್‌ಗಳನ್ನು ಧರಿಸಲು ಬಯಸುತ್ತಾರೆ. ಸದ್ಯ ನೀವು ಮಾಡಬೇಕಾಗಿರುವುದು ಏನೆಂದರೆ, ನೀವೇ ಮುದ್ರಣ ಯಂತ್ರವನ್ನು ಪಡೆದುಕೊಳ್ಳುವುದು ಅಥವಾ ಬೇಡಿಕೆಯ ಸೇವೆಗಳ ಮೇಲೆ ಕೆಲವು ಮುದ್ರಣಗಳನ್ನು ಹುಡುಕುವುದಾಗಿದೆ. ಈ ಹಂತದಲ್ಲಿ ನೀವು ಕೆಲವೊಂದು ಗ್ರಾಫಿಕ್ ಡಿಸೈನರ್‌ಗಳನ್ನು ನೇಮಿಸಬೇಕು. Shopify ನಂತಹ ವಿಶ್ವಾಸಾರ್ಹ ಇ-ಕಾಮರ್ಸ್ ವೆಬ್‌ಸೈಟ್‌ಗಳೊಂದಿಗೆ ದಾಸ್ತಾನು ಇಲ್ಲದೆಯೇ ನೀವು ಕಸ್ಟಮ್ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಬಹುದು. ಇನ್ನು ಈ ವ್ಯವಹಾರದಲ್ಲಿ ಗುಣಮಟ್ಟದ ಸೇವೆ ನೀಡುವುದು ಬಹುಮುಖ್ಯವಾಗಿರುತ್ತದೆ.


Click it and Unblock the Notifications