ಕಳೆದ ವಾರ ಕೇವಲ 18 ವರ್ಷಕ್ಕೆ ಭಾರತದ ಡಿ ಗುಕೇಶ್ ಅವರು ಚೆಸ್ ವಿಶ್ವ ಚಾಂಪಿಯನ್ ಆಗಿ ಇತಿಹಾಸ ಬರೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಚೀನಾದ ಚದುರಂಗ ಪಟು ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಚೆಸ್ ನಲ್ಲಿ ಕಿರಿಯ ವಿಶ್ವ ಚಾಂಪಿಯನ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು.
ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ಟೈ 14ನೇ ಮತ್ತು ಕೊನೆಯ ಕ್ಲಾಸಿಕಲ್ ಗೇಮ್ ನ್ನು ಗೆಲುವ ಮೂಲಕ ಗುಕೇಶ್ 7.5-6.5 ರಿಂದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿದ್ದರು. ಇದಕ್ಕೂ ಹಿಂದೆ ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕಾಸ್ಪರೋವ್ ಅವರು 22 ನೇ ವಯಸ್ಸಿನಲ್ಲಿ ಕಿರಿಯ ವಿಶ್ವ ಚಾಂಪಿಯನ್ ಎಂಬ ದಾಖಲೆಯನ್ನು ಹೊಂದಿದ್ದರು. ಇದೀಗ 18ರ ಗುಕೇಶ್ ಇದನ್ನು ಅಳಿಸಿ ಹಾಕಿದ್ದಾರೆ.

ಸಿಂಗಾಪೂರ್ ದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಗುಕೇಶ್ ಗೆ ಸಿಕ್ಕ ಸಂಭಾವನೆ ಎಷ್ಟು ಎಂಬ ಕುತೂಹಲ ನೆಟ್ಟಿಗರಲ್ಲಿ ಇತ್ತು. ಆದರೆ ಇದಕ್ಕೂ ಉತ್ತರ ದೊರಕಿತ್ತು. ವಿಶ್ವ ಚಾಂಪಿಯನ್ ಶಿಪ್ ನ ಲ್ಲಿ 14 ಸುತ್ತಿನಲ್ಲಿ ಪ್ರತಿ ಪಂದ್ಯದಲ್ಲಿ ಗೆದ್ದವರು 200,000 ಡಾಲರ್ (ಸುಮಾರು 1.69 ಕೋಟಿ ರೂ) ನೀಡಲಾಗುತ್ತದೆ. ಗುಕೇಶ್ ಮೂರು ಪಂದ್ಯಗಳನ್ನು ಗೆದ್ದ ಕಾರಣ ಅಂದಾಜು ರೂ 5.07 ಕೋಟಿ ಗಳಿಸಿದರು.
ಮತ್ತೊಂದೆಡೆ, ಎರಡು ಪಂದ್ಯಗಳನ್ನು ಗೆದ್ದ ಲಿರೆನ್ ಅಂದಾಜು 3.38 ಕೋಟಿ ರೂ. ಪಡೆದರು. ಉಳಿದ $1.5 ಮಿಲಿಯನ್ ಬಹುಮಾನದ ಹಣವನ್ನು ಇಬ್ಬರು ಸ್ಪರ್ಧಿಗಳ ನಡುವೆ ಸಮವಾಗಿ ಹಂಚಲಾಗುತ್ತದೆ. ಇದರೊಂದಿಗೆ, ಗುಕೇಶ್ ಅವರ ಒಟ್ಟು ಬಹುಮಾನದ ಮೊತ್ತವು $ 1.35 ಮಿಲಿಯನ್ (ಅಂದಾಜು ರೂ 11.45 ಕೋಟಿ) ಗಳಿಸಿದ್ದರೆ, ಲಿರೆನ್ $ 1.15 ಮಿಲಿಯನ್ (ಅಂದಾಜು ರೂ 9.75 ಕೋಟಿ) ಗಳಿಸಿದ್ದರು.
ಗುಕೇಶ್ ಗೆಲುವಿಗೂ ಆದಾಯ ತೆರಿಗೆ ಇಲಾಖೆಗೂ ಏನು ಸಂಬಂಧ?
ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿ , ಚೆಸ್ ಪಟು ಗುಕೇಶ್ ಗೆದ್ದ ಹಣಕ್ಕಾಗಿ ಆದಾಯ ತೆರಿಗೆ ಇಲಾಖೆಯನ್ನು ಅಭಿನಂದಿಸುತ್ತಾ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಕಾಮೆಂಟ್‌ಗಳ ಸುರಿಮಳೆಯಾಗಿದೆ. ಗುಕೇಶ್ ಗೆದ್ದ ಹಣದ ಮೇಲೆ ತೆರಿಗೆ ಕಟ್ಟಬೇಕು ಎಂಬ ವಿಷಯ ಎಕ್ಸ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದು, ಈ ಕಾರಣಕ್ಕೆ ಆದಾಯ ತೆರಿಗೆ ಇಲಾಖೆಗೆ ನೆಟ್ಟಿಗರು ಅಭಿನಂದನೆಗಳ ಸುರಿಮಳೆ ಸುರಿಯುತ್ತಿದೆ.
ಗುಕೇಶ್ ಅವರು ಗೆದ್ದ ಬಹುಮಾನದ ಮೇಲೆ ಆದಾಯ ತೆರಿಗೆ ಕಟ್ಟಬೇಕು ಎಂಬ ವಿಷಯದ ಕುರಿತಾಗಿ ಜನರು ನೇರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಟ್ಯಾಗ್ ಮಾಡುತ್ತಿದ್ದಾರೆ. ಹಲವಾರು ಬಳಕೆದಾರರು @nsitharaman, @nsitharamanoffc, @IncomeTaxIndia, ಮತ್ತು @FinMinIndia ಅನ್ನು ಎಕ್ಸ್‌ನಲ್ಲಿ ಟ್ಯಾಗ್ ಮಾಡಿದ್ದು, ಗುಕೇಶ್ ಗೆಲುವಿನೊಂದಿಗೆ ಐಟಿ ವಿಭಾಗವು ವಿಜೇತವಾಗಿ ಹೊರಹೊಮ್ಮಿದೆ ಎಂದು ವ್ಯಂಗ್ಯವಾಡಿದೆ.
ಕೆಲವು ಕಾಮೆಂಟ್ ಗಳು ಹೀಗಿವೆ:
ಗಬ್ಬರ್ ಎಂಬ ಎಕ್ಸ್ ಖಾತೆದಾರರು " ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದಕ್ಕೆ ಭಾರತೀಯ ತೆರಿಗೆ ಇಲಾಖೆಗೆ ಅಭಿನಂದನೆಗಳು ಮತ್ತು 11 ಕೋಟಿ ಬಹುಮಾನದ ಹಣದಲ್ಲಿ 5 ಕೋಟಿ ರೂಪಾಯಿ ಗಳಿಸಿದ್ದಕ್ಕೆ ಅಭಿನಂದನಗಳು" ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಸರ್ವೇಶ್ ಯಾದವ್ ಎಂಬ ಖಾತೆದಾರರು , "ಭಾರತೀಯ ತೆರಿಗೆ ಇಲಾಖೆ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತದೆ, ಗೆಲುವಿನಲ್ಲಿ ತಮ್ಮ ಪಾಲನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುತ್ತದೆ! ಚೆಸ್‌ನಲ್ಲಿಯೂ ಸಹ, ಅವರು ಗಳಿಕೆಯನ್ನು 'ಚೆಕ್‌ಮೇಟ್' ಮಾಡಲು ಯಶಸ್ವಿಯಾಗುತ್ತಾರೆ. 11 ಕೋಟಿಯಲ್ಲಿ 5 ಕೋಟಿ ರೂ. ಐಟಿ ಗಳಿಸಿದೆ ಎಂದಿದ್ದಾರೆ.
ಗುಕೇಶ್ ಚೆಸ್ ಚಾಂಪಿಯನ್‌ಶಿಪ್ ನಂತರ ₹11 ಕೋಟಿ ಗೆದ್ದಿದ್ದಾರೆ. ಈಗ ಸರ್ಕಾರ ಇದರ ಮೇಲೆ 42% ತೆರಿಗೆ ವಿಧಿಸುತ್ತಿದೆ. ಹೀಗಾಗಿ ಸುಮಾರು ₹5 ಕೋಟಿಯನ್ನು ಹಣ ತೆಗೆದುಕೊಳ್ಳುತ್ತಿದೆ. ನಿಜವಾದ ಗ್ರಾಂಡ್‌ಮಾಸ್ಟರ್ ಯಾರು ಎಂದು ನಿಮಗೆ ಗೊತ್ತಾ!! ಎಂದು ನೇಹಾ ನಗರ್ ಎಂಬ ಖಾತೆದಾರರು ಟ್ವೀಟ್ ಮಾಡಿದ್ದಾರೆ.


Click it and Unblock the Notifications