ಆನ್‌ಲೈನ್‌ನಲ್ಲಿ ಈಗ ಅಸಾಧ್ಯವಾದದ್ದೂ ಸಾಧ್ಯ.. ಬೇಕಾದ್ದನ್ನು ಬುಕ್ ಮಾಡಿಕೊಂಡು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಬೇಕಾದ ಕಡೆಗೆ ಟಿಕೆಟ್ ಬುಕ್ ಮಾಡಿಕೊಂಡು ಹೋಗಬಹುದು. ಈಗಿನ ಜನರ ಬದುಕೇ ಆನ್‌ಲೈನ್ ಮೇಲೆ ಅವಲಂಬಿತವಾಗಿದೆ. ಈ ಆಧುನಿಕತೆ ಹಾಗೂ ಜನರ ಅನಿವಾರ್ಯತೆಯನ್ನು ಅರಿತ ಪ್ರಸಿದ್ಧ ದೇವಾಲಯಗಳಾದ, ಗುಜರಾತಿನ ಸೋಮನಾಥ ದೇವಾಲಯ, ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯ ಮತ್ತು ಉಜ್ಜೈನಿಯ ಮಹಾಕಾಳೇಶ್ವರ ದೇವಾಲಯ ಹೊಸ ಕೊಡುಗೆ ನೀಡಲು ಮುಂದಾಗಿದೆ. ಅದೇನೆಂದರೆ ಭಕ್ತು ತಾವು ಕುಳಿತಲ್ಲೇ ಈ ಪ್ರಸಿದ್ಧ ದೇವಾಲಯಗಳಿಂದ ಪ್ರಸಾದ ತರಿಸಿಕೊಳ್ಳಬಹುದಾಗಿದೆ. ತಾವು ಬುಕ್ ಮಾಡಿದ ಪ್ರಸಾದ ಸ್ಪೀಡ್ ಪೋಸ್ಟ್ ಮೂಲಕ ತಲುಪಲಿದೆ.

ಇನ್ನು ಹೆಚ್ಚುವರಿಯಾಗಿ ಮಹಾಶಿವರಾತ್ರಿ ಸಂದರ್ಭದಲ್ಲಿ ಅಂಚೆ ಕಚೇರಿಗಳು, 250 ಮಿ.ಲಿ ಗಂಗಾಜಲವನ್ನು ₹30 ಕ್ಕೆ ನೀಡಲಿವೆ ಎನ್ನಲಾಗುತ್ತಿದೆ. ಉತ್ತರದ ಗುಜರಾತ್, ಸೌರಾಷ್ಟ್ರ ಮತ್ತು ಕಚ್ಚ್ ಅಂಚೆಮಾಸ್ತರ್ ಜನರಲ್ ಕೃಷ್ಣ ಕುಮಾರ್ ಯಾದವ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸೋಮನಾಥ ದೇವಾಲಯದ ಟ್ರಸ್ಟ್ ಭಾರತದ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಅನುಸಾರ ಭಕ್ತರಿಗೆ ಮನೆಯಲ್ಲೇ ಪ್ರಸಾದವನ್ನು ಒದಗಿಸಲು ಈ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಯ ಪ್ರಯೋಜನವನ್ನು ಯಾವುದೇ ಭಕ್ತರು ಪಡೆದುಕೊಳ್ಳಬಹುದು.
1. ಸೋಮನಾಥ ದೇವಾಲಯದ ಪ್ರಸಾದ ಬುಕಿಂಗ್:
ಕೇವಲ ₹270 ಮನಿ ಆರ್ಡರ್ ಮಾಡಿ, ಸೋಮನಾಥ ಟ್ರಸ್ಟ್ ಮ್ಯಾನೇಜರ್, ಪ್ರಭಾಸ್ ಪಾಟನ್, ಜೂನಾಗಢ ಜಿಲ್ಲೆ, ಗುಜರಾತ್-362268 ಗೆ ಕಳುಹಿಸಿ ಅದರಲ್ಲಿ, "Booking for Prasad" ಎಂದು ನಮೂದಿಸಬೇಕು.ಇಷ್ಟು ಮಾಡಿದರೆ ದೇವಾಲಯದ ಪ್ರಸಾದ ಭಕ್ತರ ಮನೆ ಸೇರುತ್ತದೆ. ಪಾವತಿಯನ್ನು ಸ್ವೀಕರಿಸಿದ ಬಳಿಕ ಸೋಮನಾಥ ದೇವಾಲಯದ ಟ್ರಸ್ಟ್ 400 ಗ್ರಾಂ ತೂಕದ ಪ್ರಸಾದ ಪ್ಯಾಕೆಟ್‌ನ ಸ್ಪೀಡ್ ಪೋಸ್ಟ್ ಮಾಡುತ್ತದೆ. ಇನ್ನು ಈ ಪ್ರಸಾದ ಪ್ಯಾಕೆಟ್‌ನಲ್ಲಿ 200 ಗ್ರಾಂ ಲಡ್ಡು, 100 ಗ್ರಾಂ ಕಡಲೆ ಚಿಕ್ಕಿ ಹಾಗೂ 100 ಗ್ರಾಂ ಎಳ್ಳು ಚಿಕ್ಕಿ ಇರುತ್ತದೆ.
2. ಕಾಶಿ ವಿಶ್ವನಾಥ ದೇವಾಲಯದ ಪ್ರಸಾದ ಬುಕಿಂಗ್:
ಕಾಶಿ ವಿಶ್ವನಾಥ ದೇವಾಲಯದ ಪ್ರಸಾದ ಬೇಕೆಂದರೆ, ವಾರಣಾಸಿ(ಪೂರ್ವ) ವಿಭಾಗ -221001 ರ ಹಿರಿಯ ಅಧೀಕ್ಷಕ ಅಂಚೆ ಕಚೇರಿಯ ಹೆಸರಿಗೆ ₹251 ಇ-ಮನಿ ಆರ್ಡರ್ ಕಳುಹಿಸಬೇಕು. ಪಾವತಿ ಸ್ವೀಕರಿಸಿದ ಬಳಿಕ ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದ ಕಳುಹಿಸಲಾಗುತ್ತದೆ. ಈ ಪ್ರಸಾದ ಪ್ಯಾಕೆಟ್‌ನಲ್ಲಿ ಕಾಶಿ ವಿಶ್ವನಾಥ ಜ್ಯೋತಿರ್ಲಿಂಗದ ಚಿತ್ರ, ಮಹಾ ಮೃತ್ಯುಂಜಯ ಯಂತ್ರ, ಶಿವ ಚಾಲೀಸಾ, 108 ಬೀಜದ ರುದ್ರಾಕ್ಷ ಮಾಲೆ, ಬಿಲ್ವದ ಪತ್ತೆಗಳು, ಮಾತಾ ಅನ್ನಪೂರ್ಣಾ ಚಿತ್ರವಿರುವ ನಾಣ್ಯ, ವಿಭೂತಿ, ರಕ್ಷಾ ಸೂತ್ರ, ಒಂದು ರುದ್ರಾಕ್ಷ ಬೀಜ ಹಾಗೂ ಒಣಹಣ್ಣು ಮತ್ತು ಕಲ್ಲುಸಕ್ಕರೆ ಕಳುಹಿಸಿಕೊಡುತ್ತಾರೆ.
3. ಮಹಾಕಾಳೇಶ್ವರ ದೇವಾಲಯದ ಪ್ರಸಾದ ಬುಕಿಂಗ್:
ಮಹಾಕಾಳೇಶ್ವರ ದೇವಸ್ಥಾನದಿಂದ ಪ್ರಸಾದ ತರಿಸಿಕೊಳ್ಳಲು, ಉಜ್ಜಯಿನಿಯ ಸ್ಪೀಡ್ ಪೋಸ್ಟ್ ಸೆಂಟರ್‌ನ ವ್ಯವಸ್ಥಾಪಕರಿಗೆ 251 ರೂ. ಗಳ ಇ-ಮನಿ ಆರ್ಡರ್ ಕಳುಹಿಸಬೇಕು. ಪಾವತಿ ಸ್ವೀಕರಿಸಿದ ಬಳಿ ಒದಗಿಸಲಾದ ವಿಳಾಸಕ್ಕೆ ಪ್ರಸಾದವನ್ನು ಸ್ಪೀಡ್‌ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ. ಈ ಪ್ರಸಾದ ಪ್ಯಾಕೆಟ್‌ನಲ್ಲಿ 200 ಗ್ರಾಂ ಲಡ್ಡು, ವಿಭೂತಿ ಮತ್ತು ಶ್ರೀ ಮಹಾಕಾಳೇಶ್ವರನ ಚಿತ್ರವಿರುತ್ತದೆ.
ಈ ರೀತಿ ಭಕ್ತರು ಈ ಪ್ರಸಿದ್ಧ ದೇವಾಲಯಗಳಿಂದ ಪ್ರಸಾದ ತರಿಸಿಕೊಳ್ಳಬಹುದು. ಭಕ್ತರು ನೀಡಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಸ್ಪೀಡ್ ಪೋಸ್ಟ್‌ನ ವಿವರ ನೀಡಲಾಗುತ್ತದೆ. ಇನ್ನೂ ಒಂದು ಗಮನಿಸಬೇಕಾದ ವಿಷಯ ಏನೆಂದರೆ ಇ-ಮನಿ ಆರ್ಡರ್‌ನಲ್ಲಿ ಭಕ್ತರು ತಮ್ಮ ಪೂರ್ಣ ವಿಳಾಸ, ಪಿನ್ ಕೋಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಬರೆಯುವುದು ಕಡ್ಡಾಯ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications