ಸಾಮಾನ್ಯವಾಗಿ ಎಲ್ಲರಂತೆ ಜೀವನ ನಡೆಸಬೇಕು ಎಂದು ಪ್ರತಿಯೊಬ್ಬರು ಒಂದಷ್ಟು ಲೋನ್‌ಗಳ ಸಹಾಯ ಪಡೆದಿರುತ್ತಾರೆ. ಹಾಗೆಯೇ ಎಲ್ಲರೂ ಅತಿಹೆಚ್ಚಾಗಿ ತೆಗೆದುಕೊಳ್ಳುವ ಸಾಲ ಗೃಹಸಾಲ ಹಾಗೂ ವೈಯಕ್ತಿಕ ಸಾಲ. ಈ ವೈಯಕ್ತಿಕ ಸಾಲ ತಮ್ಮ ವೈಯಕ್ತಿಕ ಖರ್ಚು, ವೈಯಕ್ತಿಕ ಅಗತ್ಯತೆಗಳನ್ನು ಪೂರೈಸುತ್ತದೆ. ಇದೀಗ ಸೌತ್ ಇಂಡಿಯನ್ ಬ್ಯಾಂಕ್ ಕೂಡ ವೈಯಕ್ತಿಕ ಸಾಲ ನೀಡುವ ವೇದಿಕೆ ಕಲ್ಪಿಸಿದೆ. ಇದು ಸಂಪೂರ್ಣ ಡಿಜಿಟಲ್ ವೈಯಕ್ತಿಕ ಸಾಲದ ವೇದಿಯಾಗಿದೆ.

ಹೌದು, ಸೌತ್ ಇಂಡಿಯನ್ ಬ್ಯಾಂಕ್ ತನ್ನ ಹೊಸ ಹೊಸ ಗ್ರಾಹಕರಿಗಾಗಿಯೇ, ಈ ಸಂಪೂರ್ಣ ಡಿಜಿಟಲ್ ವೈಯಕ್ತಿಕ ಸಾಲದ ವೇದಿಕೆಯನ್ನು ಕಲ್ಪಿಸಿದೆ. ಇದಕ್ಕಾಗಿ SIB QUICKPL ಅನ್ನು ಪರಿಚಯಿಸಿದೆ. ಇದು ಪ್ರಮುಖವಾಗಿ ಉತ್ತಮ ಕ್ರೆಡಿಟ್ ಪ್ರೊಫೈಲ್ ಹೊಂದಿರುವ ಸಂಬಳ ಪಡೆಯುವವರು ಹಾಗೂ ಸ್ವ-ಉದ್ಯೋಗಿಗಳಿಗೆ ಅಸುರಕ್ಷಿತ ವೈಯಕ್ತಿಕ ಸಾಲಗಳನ್ನು ಸುಲಭವಾಗಿ ನೀಡುತ್ತದೆ. ಈ ಪ್ಲಾಟ್‌ಫಾರ್ಮ್‌ನಿಂದ ಗ್ರಾಹಕರು ಕೇವಲ 10 ನಿಮಿಷಗಖ ಒಳಗೆ ತಮ್ಮ ಸಾಲವನ್ನು ಪಡೆಯಬಹುದಾಗಿದೆ.
ವೈಯಕ್ತಿಕ ಸಾಲದ ಸೌಲಭ್ಯಗಳೇನು..?
SIB QUICKPL ವೇದಿಕೆ ಮೂಲಕ ಗ್ರಾಹಕರು ಕೇವಲ ಹತ್ತು ನಿಮಿಷಗಳಲ್ಲಿ ಸಾಲ ಪಡೆಯಬಹುದು. ಹಾಗೆಯೇ ಸಾಲದ ಮೊತ್ತವನ್ನು ಭಾರತದ ಯಾವುದೇ ಬ್ಯಾಂಕಿನ ಉಳಿತಾಯ ಖಾತೆಗೆ ನೇರವಾಗಿ ಜಮಾ ಮಾಡಬಹುದು. ಇದು ಬಹಳ ಸುಗಮ ಮತ್ತು ವೇಗವಾದ ವಿಧಾನವಾಗಿದೆ. ತುರ್ತು ಹಣಕಾಸಿನ ಅವಶ್ಯಕತೆಗೆ ವೇಗವಾಗಿ ಪರಿಹಾರ ನೀಡುತ್ತದೆ. ಈ ಸೇವೆಯು ಸಂಪೂರ್ಣ ಡಿಜಿಟಲ್ ಸೇವೆಯಾಗಿದ್ದು, ಪೇಪರ್‌ವರ್ಕ್ ಮತ್ತು ದೀರ್ಘಗತಿಗೆ ಒಳಗಾಗುವ ಮ್ಯಾನುಯಲ್ ಪ್ರಕ್ರಿಯೆಗಳ ಅಗತ್ಯವಿಲ್ಲ.
SIB ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರಿಗೆ ಹೆಚ್ಚುವರಿ ಅನುಕೂಲ:
ಈಗಾಗಲೇ ಸೌತ್ ಇಂಡಿಯನ್ ಬ್ಯಾಂಕ್ 2019ರಿಂದ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಡಿಜಿಟಲ್ ಚಾನಲ್‌ಗಳ ಮೂಲಕ, ಪೂರ್ವ ಅನುಮೋದಿತವಾಗಿ ವೈಯಕ್ತಿಕ ಸಾಲಗಳನ್ನು ನೀಡುತ್ತಿದೆ. ಇದರ ವಿಶೇಷತೆ ಏನೆಂದರೆ ಇದು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಸಾಲದ ಮೊತ್ತವನ್ನು ವಿತರಿಸುವುದಾಗಿದೆ. ಹೀಗಾಗಿ ಗ್ರಾಹಕರಿಗೆ ಇದು ತ್ವರಿತ ಹಣಕಾಸು ಪರಿಹಾರವನ್ನು ಒದಗಿಸುತ್ತದೆ. ಅಲ್ಲದೇ ಬ್ಯಾಂಕಿನ ಡಿಜಿಟಲ್ ಕಾರ್ಯವಿಧಾನವನ್ನೂ ಪರಿಣಾಮಕಾರಿಯಾಗಿ ಪೂರ್ಣಗೊಳಿಸುತ್ತದೆ.
ಆಧುನಿಕ ತಂತ್ರಜ್ಞಾನ ಬಳಕೆ:
ಈ SIB QUICKPL ವೇದಿಕೆಯು ಆದಾಯ ತೆರಿಗೆ ಪೋರ್ಟಲ್ ಹಾಗೂ ಖಾತೆ ಸಂಗ್ರಾಹಕ ಚೌಕಟ್ಟಿನೊಂದಿಗೆ ಸಂಯೋಜನೆಗೊಂಡಿದೆ. ಇದರಿಂದ ಗ್ರಾಹಕರು ತಮ್ಮ ಆದಾಯ ದೃಢೀಕರಣಕ್ಕಾಗಿ ಪ್ರತ್ಯೇಕವಾಗಿ ತಮ್ಮ ಯಾವುದೇ ದಾಖಲೆಗಳನ್ನು ನಮೂದಿಸುವ ಅಗತ್ಯವಿಲ್ಲ. ಇದು ಕಡಿಮೆ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಜೊತೆಗೆ ಇದನ್ನು ಹೆಚ್ಚು ಸುಲಭವಾಗಿ ಬಳಸಬಹುದಾಗಿದೆ.
ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ..?
ಗ್ರಾಹಕರು ಈ ವೈಯಕ್ತಿಕ ಸಾಲ ಪಡೆಯಲು ಡಿಜಿಟಲ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಹೀಗಾಗಿ ಸಾಲದ ಅಗತ್ಯವಿರುವವರು ಮೊದಲು https://pl.southindianbank.com/quickpl/ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಬೇಕು. ಅಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಬೇಕು. ಈ ಸೌಲಭ್ಯದ ಬಳಸಲು ಯಾವುದೇ ದೌರ್ಬಲ್ಯ, ಜಟಿಲತೆಗಳಿಲ್ಲ. ಹೀಗಾಗಿ ಸಂಪೂರ್ಣ ಪ್ರಕ್ರಿಯೆಯು ಗ್ರಾಹಕರ ಅನುಕೂಲಕ್ಕಾಗಿ ಸರಳಗೊಳಿಸಲಾಗಿದೆ.
ಇನ್ನು ಈ SIB QUICKPL ಎಂಬ ವೈಯಕ್ತಿಕ ಸಾಲದ ವೇದಿಕೆಯಿಂದ, ಬ್ಯಾಂಕ್‌ನ ವೇಗ ಮತ್ತು ಪಾರದರ್ಶಕತೆ ಹೆಚ್ಚುತ್ತದೆ. ಅಲ್ಲದೇ ಗ್ರಾಹಕರಿಗೆ ವೈಯಕ್ತಿಕ ಸಾಲದ ಅನುಭವವನ್ನು ಒದಗಿಸಲು ಬದ್ಧವಾಗಿದೆ. ಈ ಹೊಸ ಡಿಜಿಟಲ್ ವೇದಿಕೆಯಿಂದ, ಗ್ರಾಹಕರು ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಸಾಲ ಪಡೆಯಲು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಈ ಬ್ಯಾಂಕ್ ಇಂತಹ ಇನ್ನಷ್ಟು ಅಪ್‌ಡೇಟೆಡ್ ಸೇವೆಗಳನ್ನು ಪರಿಚಯಿಸುವ ಸಾಧ್ಯತೆಯೂ ಇದೆ. ಇದರಿಂದ ಗ್ರಾಹಕರು ಇನ್ನಷ್ಟು ಸುಲಭವಾಗಿ ಬ್ಯಾಂಕ್‌ನ ಸೇವೆಗಳನ್ನು ತ್ವರಿತವಾಗಿ ಪಡೆಯಬಹುದಾಗಿದೆ.
ಈ ಬಗ್ಗೆ ಸೌತ್ ಇಂಡಿಯನ್ ಬ್ಯಾಂಕ್‌ನ ಸಿಜಿಎಂ ಮತ್ತು ರಿಟೇಲ್ ಪ್ರಾಪರ್ಟಿ ಮುಖ್ಯಸ್ಥರಾದ ಶ್ರೀ ಸಂಜಯ್ ಸಿನ್ಹಾ ಮಾತನಾಡಿದ್ದಾರೆ. ಈ ಉಪಕ್ರಮದಿಂದ ವ್ಯಕ್ತಿಗಳು ತಮ್ಮ ಜೀವನ ಶೈಲಿಗೆ ಅನುಗುಣವಾಗಿ ತ್ವರಿತ, ಪಾರದರ್ಶಕ ಹಾಗೂ ಗ್ರಾಹಕ ಸ್ನೇಹಿ ಹಣಕಾಸು ಆಯ್ಕೆಗಳನ್ನು ನೀಡುವ ಮೂಲಕ ಎಸ್‌ಐಬಿ ಬ್ಯಾಂಕ್ ಅವರ ಜೀವನವನ್ನು ಸಬಲೀಕರಣಗೊಳಿಸುತ್ತದೆ. ಈ ಯೋಜನೆಯು ಗ್ರಾಹಕರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಮತ್ತು ಇದು ಡಿಜಿಟಲ್ ರೂಪದಲ್ಲಿರುವುದರಿಂದ ಎಲ್ಲಾ ರೀತಿಯಲ್ಲೂ ಗ್ರಾಹಕರಿಗೆ ಸಹಾಯ ನೀಡಲಿದೆ ಎಂದಿದ್ದಾರೆ.
ಇನ್ನು ಈ ಸೌತ್ ಇಂಡಿಯನ್ ಬ್ಯಾಂಕ್ ಕೇರಳ ಮೂಲದ ಖಾಸಗಿ ಬ್ಯಾಂಕ್. ಇದು ದೇಶಾದ್ಯಂತ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದ್ದು, ಉತ್ತಮ ಸೇವೆ ಒದಗಿಸುತ್ತಿರುವ ಬ್ಯಾಂಕ್ ಆಗಿದೆ. ಸದ್ಯ ಈ ಬ್ಯಾಂಕ್ 950 ಶಾಖೆಗಳು, 1,154 ಎಟಿಎಂಗಳು ಮತ್ತು 126 ಕ್ಯಾಶ್ ರಿಸೈಕ್ಲಿಂಗ್ ಮಷಿನ್‌ಗಳನ್ನು ನಡೆಸುತ್ತಿದೆ. ಇದು ತನ್ನ ಷೇರನ್ನು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಹೂಡಿದೆ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications