ಭಾರತದಲ್ಲಿ ಇ-ಕಾಮರ್ಸ್ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, ಇದರೊಂದಿಗೆ ಆಹಾರ ಪದಾರ್ಥಗಳ ಆನ್‌ಲೈನ್‌ನಲ್ಲಿನ ಮಾರಾಟವೂ ಹೆಚ್ಚಾಗುತ್ತಿದೆ. ಆದರೆ, ಈ ಹೆಚ್ಚಳದ ಜೊತೆಗೆ ಆಹಾರದ ಸುರಕ್ಷತೆಯ ಕುರಿತಾದ ಕಳವಳವೂ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಸುರಕ್ಷಿತ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇ- ಕಾಮರ್ಸ್ ಕಂಪನಿಗಳ ಉಗ್ರಾಣದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿರುವ ಆಯುಕ್ತರು ನಿಗಾವಹಿಸಬೇಕು. ಗ್ರಾಹಕರಿಗೆ ಸುರಕ್ಷಿತವಾಗಿರುವ ಆಹಾರ ಪೂರೈಕೆ ಸಂಬಂಧ ಪ್ರಮಾಣಿತ ಕಾರ್ಯಾಚರಣೆ ವಿಧಾನ ರೂಪಿಸಬೇಕು ಎಂದು ಸೂಚಿಸಿದೆ. ಎಫ್‌ಎಸ್‌ಎಸ್‌ಎಐ ಗುರುವಾರ ನಡೆಸಿದ 45ನೇ ಕೇಂದ್ರ ಸಲಹಾ ಸಮಿತಿ (ಸಿಎಸಿ) ಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.
ಈ ಸಭೆಯಲ್ಲಿ, ಎಫ್‌ಎಸ್‌ಎಸ್‌ಎಐ ಎಲ್ಲಾ ರಾಜ್ಯಗಳ ಆಹಾರ ಸುರಕ್ಷತಾ ಆಯುಕ್ತರಿಗೆ ನಿರ್ದೇಶನ ನೀಡಿದೆ. ಇ-ಕಾಮರ್ಸ್ ಕಂಪನಿಗಳ ಗೋದಾಮುಗಳ ಮೇಲೆ ನಿಗಾ ವಹಿಸಲು ಮತ್ತು ಆಹಾರ ಪದಾರ್ಥಗಳ ವಿತರಣೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ) ಅನುಸರಿಸುವಂತೆ ಸೂಚಿಸಲಾಗಿದೆ. ಈ ಎಸ್‌ಒಪಿಗಳು ಆಹಾರ ಪದಾರ್ಥಗಳ ಸಂಗ್ರಹಣ, ಸಾಗಾಟ ಮತ್ತು ವಿತರಣೆಯ ಪ್ರತಿಯೊಂದು ಹಂತದಲ್ಲೂ ಆಹಾರದ ಸುರಕ್ಷತೆಯನ್ನು ಕಾಪಾಡುವುದನ್ನು ಖಚಿತಪಡಿಸುತ್ತದೆ.

ಇದರೊಂದಿಗೆ ಪ್ರವಾಸಿ ಋತುವಿನಲ್ಲಿ ಅಂದರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನವೆಂಬರ್‌ನಿಂದ ಮಾರ್ಚ್‌ವರೆಗಿನ ಗರಿಷ್ಠ ಪ್ರವಾಸಿ ಋತುವಿನ ತಯಾರಿಯಲ್ಲಿ ಜನಪ್ರಿಯ ತಾಣಗಳಲ್ಲಿ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒತ್ತಾಯ ಕೇಳಿಬಂತು. ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ, ಆಹಾರದ ಗುಣಮಟ್ಟ ಕುರಿತು ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ, ಪ್ರವಾಸಿ ತಾಣಗಳಲ್ಲಿ ಆಹಾರ ಪದಾರ್ಥಗಳನ್ನು ಪರಿಶೀಲಿಸಲು ಮೊಬೈಲ್ ಲ್ಯಾಬ್‌ಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರೊಂದಿಗೆ, ಪ್ರವಾಸಿ ತಾಣಗಳಲ್ಲಿ ಕಣ್ಗಾವಲು ಹೆಚ್ಚಿಸುವ ಮೂಲಕ ಆಹಾರ ಸುರಕ್ಷತೆಯನ್ನು ಕಾಪಾಡಲು ಒತ್ತಾಯಿಸಲಾಗಿದೆ.
ಸಭೆಯಲ್ಲಿ FSSAI ಸಿಇಒ ಜಿ ಕಮಲಾ ವರ್ಧನ ರಾವ್ ಅವರು ವಿವಿಧ ರಾಜ್ಯಗಳ ಆಹಾರ ಆಯುಕ್ತರಿಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಬಳಸುವ ಗೋದಾಮುಗಳು ಮತ್ತು ಇತರ ಸೌಲಭ್ಯಗಳ ಮೇಲೆ ಕಣ್ಗಾವಲು ಹೆಚ್ಚಿಸುವಂತೆ ಕೇಳಿದ್ದಾರೆ. ಅಂತಹ ಗೋದಾಮುಗಳಿಗೆ ಮತ್ತು ಈ ವೇದಿಕೆಗಳ ವಿತರಣಾ ಸಿಬ್ಬಂದಿಗಳು SOP ( Standard Operating Procedure)ಗಳನ್ನು ಅನುಸರಿಬೇಕು ಎಂದು ಕೇಳಿಕೊಂಡಿದ್ದಾರೆ.
ಸಮಿತಿಯು ಎಲ್ಲಾ ರಾಜ್ಯಗಳು/UTಗಳಲ್ಲಿ ಆಹಾರ ವ್ಯಾಪಾರ ನಿರ್ವಾಹಕರಿಗೆ (FBOs) ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ (FoSTaC) ಅಡಿಯಲ್ಲಿ ತರಬೇತಿ ನೀಡಲು ಒತ್ತು ನೀಡಿದೆ. ಇದರಿಂದ ಎಲ್ಲಾ ನಾಗರಿಕರಿಗೆ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಬಹುದು.
ಮಾರ್ಚ್ 2026 ರೊಳಗೆ 25 ಲಕ್ಷ ಆಹಾರ ನಿರ್ವಹಣಾಕಾರರಿಗೆ ತರಬೇತಿ ನೀಡುವ ಗುರಿಯನ್ನು ಸಮಿತಿ ಹೊಂದಿದೆ. ಇದರಲ್ಲಿ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಹಾಸ್ಟೆಲ್‌ಗಳ ಕ್ಯಾಂಟೀನ್‌ಗಳು ಸೇರಿವೆ.
ಆಹಾರ ಸುರಕ್ಷತೆಯನ್ನು ಖಚಿತಪಡಿಸಲು ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸಂಬಂಧಿತ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು. ಪ್ರತಿ ರಾಜ್ಯ ಮತ್ತು ಜಿಲ್ಲೆಯಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಿ, ಆಹಾರ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಬೇಕು ಎಂದು ಸೂಚಿಸಲಾಯಿತು. ಜನರು ಆರೋಗ್ಯಕರ ಆಹಾರವನ್ನು ಸೇವಿಸುವಂತೆ ಪ್ರೋತ್ಸಾಹಿಸಲು 'ಈಟ್ ರೈಟ್ ಇಂಡಿಯಾ' ಅಭಿಯಾನವನ್ನು ಇನ್ನಷ್ಟು ಬಲಪಡಿಸಬೇಕು ಎಂದು ನಿರ್ಧರಿಸಲಾಯಿತು. ಇದಕ್ಕಾಗಿ ಮೇಳಗಳು, ವಾಕ್‌ಥಾನ್‌ಗಳು ಮತ್ತು ಬೀದಿ ನಾಟಕಗಳಂತಹ ಔಟ್‌ರೀಚ್ ಉಪಕ್ರಮಗಳ ಮೂಲಕ ಆಹಾರ ಸುರಕ್ಷತೆಯ ಜಾಗೃತಿಯನ್ನು ವರ್ಧಿಸಲು ರಾಜ್ಯಗಳಿಗೆ ಸಲಹೆ ನೀಡಲಾಯಿತು" ಎಂದು ಎಫ್‌ಎಸ್‌ಎಸ್‌ಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಭೆಯಲ್ಲಿ ಆಹಾರ ಸುರಕ್ಷತಾ ಆಯುಕ್ತರು (CFS), ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು, ಹಿರಿಯ FSSAI ಅಧಿಕಾರಿಗಳು ಮತ್ತು ಆಹಾರ ಉದ್ಯಮ, ಗ್ರಾಹಕ ಗುಂಪುಗಳು, ಕೃಷಿ ವಲಯ, ಪ್ರಯೋಗಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ಸದಸ್ಯರು ಸೇರಿದಂತೆ 60 ಕ್ಕೂ ಹೆಚ್ಚು ಅಧಿಕಾರಿಗಳು ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.


Click it and Unblock the Notifications