2026-27ನೇ ಸಾಲಿನ ಕೇಂದ್ರ ಬಜೆಟ್ (Union Budget 2026-27) ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಅತ್ತ ಕೇಂದಗ್ರ ಬಜೆಟ್‌ನತ್ತ ಭಾರೀ ನಿರೀಕ್ಷೆಗಳನ್ನು ಹೂಡಿಕೆದಾರರು ಇಟ್ಟಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಅಯವ್ಯಯವನ್ನು ಮಂಡನೆ ಮಾಡಲಿದ್ದು, ಹಲವು ವರ್ಷಗಳ ನಂತರ ಬಜೆಟ್ ಮಂಡನೆ ದಿನ ಭಾನುವಾರ ಬಂದಿದೆ. ಈ ಹಿನ್ನೆಲೆ ಸಾರ್ವಜನಿಕರಲ್ಲಿ, ಹೂಡಿಕೆದಾರರಲ್ಲಿ ಹಲವು ಪ್ರಶ್ನೆಗಳು, ಗೊಂದಲಗಳು ಮೂಡಿದೆ. ಅದರಲ್ಲೂ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ (Stock Market Investors) ದೊಡ್ಡ ಪ್ರಶ್ನೆಯೊಂದಿದೆ. ಅದೇನೆಂದರೆ ಬಜೆಟ್ ಮಂಡನೆ ದಿನ ಅಂದರೆ ಫೆ.1, ಭಾನುವಾರದಂದಯ ಷೇರು ಮಾರುಕಟ್ಟೆಗೆ ರಜೆ (Stock Market Holidays) ಇರುತ್ತಾ? ಈ ಗೊಂದಲ ನಿಮಗೂ ಈ ಇದ್ರೆ ಈ ಸುದ್ದಿ ಓದಿ.

ಹೌದು, ಬಜೆಟ್ ಮಂಡನೆ ದಿನ ಭಾನುವಾರ ಎಂದು ಗೊತ್ತಾಗಿನಿಂದ ಷೇರು ಮಾರುಕಟ್ಟೆ ಬಗ್ಗೆ ಭಾರೀ ಗೊಂದಲ ಉಂಟಾಗಿತ್ತು. ಆದ್ರೆ ಜನವರಿ 16 ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ, ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಮತ್ತು ಮುಂಬೈ ಷೇರು ಮಾರುಕಟ್ಟೆ (BSE) ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಅಂದರೆ ಸಾಮಾನ್ಯ ದಿನಗಳಂತೆ, ನಾಳೆ (ಫೆ.1, ಭಾನುವಾರ) ವಹಿವಾಟು ನಡೆಸಲಿದೆ.
ಭಾನುವಾರವೇ ಬಜೆಟ್ ಮಂಡನೆ!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2026 ರಂದು ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದು ಅವರ ಸತತ ಒಂಬತ್ತನೇ ಬಜೆಟ್ ಮಂಡನೆಯಾಗಿದ್ದು, ಹಣಕಾಸು ಸಚಿವರಾಗಿ ಸುದೀರ್ಘ ನಿರಂತರ ಅಧಿಕಾರಾವಧಿಯ ಜೊತೆಗೆ, ಸತತ 9 ಬಾರಿ ಬಜೆಟ್ ಮಂಡಿಸಿದ ದಾಖಲೆ ಇದಾಗಿದೆ.
ಕೇಂದ್ರ ಬಜೆಟ್ ಮಂಡನೆಗೂ ಮುನ್ನ, ಫೆಬ್ರವರಿ 1 ಭಾನುವಾರ ಬಂದರೂ, ಷೇರು ಮಾರುಕಟ್ಟೆಗಳು ವಹಿವಾಟಿಗೆ ತೆರೆದಿರಲಿವೆ ಎಂದು BSE ಮತ್ತು NSE ಈ ತಿಂಗಳ ಆರಂಭದಲ್ಲಿ ದೃಢಪಡಿಸಿದ್ದವು.
NSE ಸುತ್ತೋಲೆಯಲ್ಲಿ ಏನಿತ್ತು?
ಜನವರಿ 16 ರಂದು ಎನ್‌ಎಸ್‌ಇ (NSE) ಹೊರಡಿಸಿದ ಸುತ್ತೋಲೆಯಲ್ಲಿ ಹೀಗೆ ತಿಳಿಸಿತ್ತು: "ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ, ಫೆಬ್ರವರಿ 01, 2026 ರಂದು ಸಾಮಾನ್ಯ ಮಾರುಕಟ್ಟೆ ಸಮಯಗಳಾದ (ಬೆಳಗ್ಗೆ 9:15 ರಿಂದ ಮಧ್ಯಾಹ್ನ 3:30 ರವರೆಗೆ) ವ್ಯಾಪಾರ, ವಹಿವಾಟು ನಡೆಸಲಿದೆ." ಎಂದು ತಿಳಿಸಿತ್ತು.
ಯೂನಿಯನ್ ಬಜೆಟ್‌ಗಳನ್ನು ಸಾಮಾನ್ಯವಾಗಿ ವಾರದ ದಿನಗಳಲ್ಲಿ ಮಂಡಿಸಲಾಗುತ್ತದೆ. ಪ್ರಧಾನಿ ಮೋದಿ ನೇತೃತ್ವ ಸರ್ಕಾರ ಬಂದಾಗಿನಿಂದ ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಲಾಗುತ್ತಿದೆ. ಅದೇ ರೀತಿ ಈ ಬಾರಿ ಫೆಬ್ರವರಿ 1, ಭಾನುವಾರ ಬಂದಿದ್ದರಿಂದ ಭಾರೀ ಕುತೂಹಲ ಹುಟ್ಟಿಸಿತ್ತು. ಇನ್ನು ಈ ದಿನವನ್ನು ಬಿಎಸ್‌ಇ ಮತ್ತು ಎನ್‌ಎಸ್‌ಇ "ಸ್ಪೆಷಲ್ ಲೈವ್ ಟ್ರೇಡಿಂಗ್ ಸೆಷನ್" ಎಂದು ಘೋಷಿಸಿದೆ. ಇನ್ನು 2026ರ ಕೇಂದ್ರ ಬಜೆಟ್ ಮಂಡನೆ ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ. ಅದರಲ್ಲಿ ವಿಶೇಷವಾಗಿ ಭಾನುವಾರ, ಮತ್ತೊಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಸತತವಾಗಿ 9ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ.


Click it and Unblock the Notifications