Stock Market Holiday: ಜನವರಿ 26 ರಂದು ಷೇರು ಮಾರುಕಟ್ಟೆ ರಜೆ ಇರುತ್ತಾ? ಇಲ್ವಾ? ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ಯಾವುದೇ ಧಾರ್ಮಿಕ ಹಬ್ಬ, ಸಾರ್ವಜನಿಕ ರಜಾ ದಿನಗಳಿದ್ದಾಗ (Holidays) ಭಾರತೀಯ ಷೇರು ಮಾರುಕಟ್ಟೆಯೂ (Indian Stock Market) ಮುಚ್ಚಿರುತ್ತದೆ. ಅದೇ ರೀತಿ ಮುಂದಿನ ವಾರದ ಆರಂಭದಲ್ಲೇ ಗಣರಾಜ್ಯೋತ್ಸವ ದಿನ (Republic Day 2026) ಬರಲಿದೆ. ಈ ದಿನ ಷೇರು ಮಾರುಕಟ್ಟೆ ತೆರೆದಿರುತ್ತಾ? ಅಥವಾ ಮುಚ್ಚಿರುತ್ತಾ? ಎಂಬ ಗೊಂದಲ ಶುರುವಾಗಿದೆ. ಈ ಗೊಂದಲಕ್ಕೆ ಉತ್ತರ ಇಲ್ಲಿದೆ ಓದಿ.

ಜನವರಿ 26 ರಂದು ಷೇರು ಮಾರುಕಟ್ಟೆ ರಜೆ ಇರುತ್ತಾ? ಇಲ್ವಾ? ಇಲ್ಲಿದೆ ನೋಡ

ಈ ದಿನ ಷೇರು ಮಾರುಕಟ್ಟೆಗೆ ರಜೆ!
ಮುಂದಿನ ವಾರ ಅಂದರೆ ಜನವರಿ 26 ರಂದು ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ. ಜನವರಿ 26ರ ಸೋಮವಾರ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ಸಂಪೂರ್ಣವಾಗಿ ಮುಚ್ಚಲಿದೆ. ಅಂದು ಸ್ಟಾಕ್‌ಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಹೂಡಿಕೆದಾರರು ಇದನ್ನು ತಿಳಿದುಕೊಂಡರೆ ಉತ್ತಮ. ಆ ನಂತರವೇ ತಮ್ಮ ಹೂಡಿಕೆ ಪ್ಲಾನ್‌ ಮಾಡಿಕೊಂಡರೆ ಉತ್ತಮ.

ಈ ದಿನ ಯಾವುದೇ ಇಕ್ವಿಟಿ, ಡೆರಿವೇಟಿವ್ ಅಥವಾ ಕರೆನ್ಸಿ ವಹಿವಾಟು ಕೂಡಾ ನಡೆಸಲು ಆಗುವುದಿಲ್ಲ. ಹಿಂದಿನ ವಹಿವಾಟುಗಳ ಇತ್ಯರ್ಥದ ವೇಳಾಪಟ್ಟಿ ಸಹ ಬದಲಾಗಲಿದೆ. ಆದ್ದರಿಂದ ಹೂಡಿಕೆದಾರರು ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಿಂದ ತಪ್ಪಿಸಲು ಮೊದಲೇ ಪ್ಲಾನ್‌ ಮಾಡಿಕೊಳ್ಳುವುದು ಉತ್ತಮ.

ಷೇರು ಮಾರುಕಟ್ಟೆ ರಜಾದಿನಗಳನ್ನು ಸಾಮಾನ್ಯವಾಗಿ ರಾಷ್ಟ್ರೀಯ, ಧಾರ್ಮಿಕ ಹಬ್ಬಗಳು ಅಥವಾ ವಿಶೇಷ ಸಂದರ್ಭಗಳಲ್ಲಿ ಘೋಷಿಸಲಾಗುತ್ತದೆ. ಇದು ಮಾರುಕಟ್ಟೆ ಸಿಬ್ಬಂದಿ, ಬ್ರೋಕರ್‌ಗಳು ಹಾಗೂ ವ್ಯಾಪಾರಿಗಳಿಗೆ ಸಣ್ಣ ವಿರಾಮ ನೀಡಿದಂತೆಯೂ ಆಗುತ್ತದೆ. ಅಲ್ಲದೇ ಹೂಡಿಕೆದಾರರೂ ಇದನ್ನು ಮೊದಲೆ ತಿಳಿದುಕೊಂಡರೆ ಯಾವುದೇ ಸಮಸ್ಯೆಗಳಾಗುವುದಿಲ್ಲ.

ಹೂಡಿಕೆದಾರರ ಮೇಲೆ ಪರಿಣಾಮ
ಯಾವುದೇ ರಜಾದಿನಗಳಲ್ಲಿ ಷೇರು ಮಾರುಕಟ್ಟೆ ಕ್ಲೋಸ್‌ ಇದ್ದರೂ, ಹೂಡಿಕೆದಾರರ ಮೇಲೆ ನೇರ ಪರಿಣಾಮ ಬೀರುತ್ತದೆ. ಏಕೆಂದರೆ ಈ ರಜಾದಿನಗಳಂದು ಯಾವುದೇ ಷೇರು ಖರೀದಿಸಲಾಗಲಿ ಅಥವಾ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಅನಿರೀಕ್ಷಿತ ಸಮಸ್ಯೆಗಳನ್ನು ತಪ್ಪಿಸಲು ಹೂಡಿಕೆದಾರರು ತಮ್ಮ ವಹಿವಾಟು ತಂತ್ರಗಳನ್ನು ಮೊದಲೇ ಪ್ಲಾನ್‌ ಮಾಡಿಟ್ಟುಕೊಳ್ಳುವುದು ಉತ್ತಮ.

ಷೇರು ಮಾರುಕಟ್ಟೆ ರಜಾದಿನಗಳ ಅಧಿಕೃತ ಮಾಹಿತಿಗಾಗಿ, ಯಾವಾಗಲೂ BSE ಯ ಟ್ರೇಡಿಂಗ್ ಹಾಲಿಡೇಸ್ ಪುಟ ಹಾಗೂ NSE ಹಾಲಿಡೇ ಲಿಸ್ಟ್ ಅನ್ನು ನೋಡಬೇಕು. ಇದರಲ್ಲಿ ನಿರ್ದಿಷ್ಟ ರಜಾದಿನಗಳು, ಲಾಸ್ಟ್‌ ಮಿನಿಟ್ಸ್‌ ಬದಲಾವಣೆಗಳೂ ಸೇರಿದಂತೆ ಹಲವು ರಜಾಪಟ್ಟಿಗಳನ್ನು ವರದಿ ಮಾಡಲಾಗುತ್ತದೆ.

2026 ರಲ್ಲಿ, ಷೇರು ವಿನಿಮಯ ಕೇಂದ್ರಗಳು 15 ದಿನಗಳಲ್ಲಿ ರಜಾ ಇರಲಿವೆ. ಅದರಲ್ಲಿ ಜನವರಿ 26 ರ ಗಣರಾಜ್ಯೋತ್ಸವದ ಜೊತೆಗೆ, ಮಾರ್ಚ್ 03 ರ ಹೋಳಿ, ಮಾರ್ಚ್ 26 ರ ಶ್ರೀ ರಾಮ ನವಮಿ ಮತ್ತು ಮಾರ್ಚ್ 31 ರ ಶ್ರೀ ಮಹಾವೀರ ಜಯಂತಿ ಕೂಡಾ ಸೇರಿದೆ.

ಹಾಗೆಯೇ, ಏಪ್ರಿಲ್‌ನಲ್ಲಿ, 03 ರ ಗುಡ್‌ ಫ್ರೈಡೆ ಮತ್ತು 14 ರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಂದು ಷೇರು ಮಾರುಕಟ್ಟೆಗೆ ರಜೆ ಇರುತ್ತದೆ. ಮೇ 01 ರ ಮಹಾರಾಷ್ಟ್ರ ದಿನ, ಮೇ 28 ರ ಬಕ್ರೀದ್ ಮತ್ತು ಜೂನ್ 26 ರ ಮೊಹರಂ ಸಹ ಈ ರಜಾದಿನಗಳ ಪಟ್ಟಿಯಲ್ಲಿ ಸೇರಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+