ಬೆಂಗಳೂರು, ಆಗಸ್ಟ್ 1: ಕೊರೋನಾ ನಂತರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು ಎನ್ನುವ ವರ್ಗದಲ್ಲಿ ದೊಡ್ಡ ಏರಿಕೆಯಾಗಿದೆ. ಇಂದು ಎಲ್ಲರಿಗೂ ಸ್ಟಾಕ್ ಮಾರ್ಕೆಟ್ ಅಪ್ ಡೇಟ್ ಗಳು ಬಹಳ ಮುಖ್ಯ ಸಂಗತಿಯಾಗುತ್ತವೆ. ಮಾರ್ಕೆಟ್ ಯಾವಾಗ ರಜೆ ಇರಲಿದೆ? ಬಜೆಟ್ ದಿನಾಂಕ ಯಾವುದು? ಆರ್ ಬಿಐ ಏನಾದರೂ ಘೊಷಣೆ ಮಾಡಿದೆಯಾ? ಪ್ರಮುಖ ಕಂಪನಿಗಳ ತ್ರೈಮಾಸಿಕ ವರದಿಗಳು ಯಾವಾಗ ಬರುತ್ತವೆ? ಈ ಎಲ್ಲ ವಿಚಾರಗಳಲ್ಲಿಯೂ ಸಹಜವಾಗಿ ಕುತೂಹಲ ಇರುತ್ತದೆ. ಹಾಗಿದ್ದರೆ ಹೊಸ ತಿಂಗಳು ಆಗಸ್ಟ್ ಶುರುವಾಗುತ್ತಿದ್ದು ಆಗಸ್ಟ್ ತಿಂಗಳಿನಲ್ಲಿ ಯಾವೆಲ್ಲ ದಿನ ಸ್ಟಾಕ್ ಮಾರ್ಕೆಟ್ ಕ್ಲೋಸ್ ಆಗಿರಲಿದೆ? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಆಗಸ್ಟ್ ತಿಂಗಳಲ್ಲಿ 10 ದಿನ ಸ್ಟಾಕ್ ಮಾರ್ಕೆಟ್ ಬಂದ್ ಆಗಿರಲಿದೆ. ಟ್ರೇಡಿಂಗ್ ಮಾಡುವ ಮುನ್ನ ಈ ರಜಾ ದಿನಗಳು ನಿಮ್ಮ ತಲೆಯಲ್ಲಿರಬೇಕು. ಭಾರತೀಯ ಷೇರು ಮಾರುಕಟ್ಟೆ ಸಾಮಾನ್ಯವಾಗಿ ವಾರಕ್ಕೆ 5 ದಿನ ವಹಿವಾಟು ನಡೆಸುತ್ತದೆ ಎನ್ನುವುದು ನಿಮಗೆಲ್ಲ ಗೊತ್ತೇ ಇದೆ. ಈ ಆಗಸ್ಟ್ ನಲ್ಲಿ ಭಾರತದ ಸ್ಟಾಕ್ ಮಾರ್ಕೆಟ್ ವಾರಾಂತ್ಯ ಸೇರಿದಂತೆ ಒಟ್ಟು 10 ದಿನಗಳ ಕಾಲ ಬಂದ್ ಆಗಲಿದೆ. ಮುಂದಿನ ತಿಂಗಳು 8 ದಿನ ಬ್ಯಾಂಕ್ ಗಳಿಗೂ ರಜೆ ಇರಲಿದೆ ಎನ್ನವುದನ್ನು ಗಮನಿಸಿಕೊಳ್ಳಬೇಕು. ಮುಂದಿನ ತಿಂಗಳು 10 ದಿನಗಳ ಕಾಲ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ (NSE) ಎರಡೂ ಸಹ ಈ ದಿನಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಮುಂದಿನ ತಿಂಗಳ ವಾರಾಂತ್ಯ ಅಂದರೆ ದಿನಾಂಕ 3, 4, 10, 11, 17, 18, 24, 25, ಮತ್ತು 31 ರಂದು ಮಾಮೂಲಿಯಂತೆ ಸ್ಟಾಕ್ ಮಾರ್ಕೆಟ್ ಕಾರ್ಯನಿರ್ವಹಿಸುವುದಿಲ್ಲ. ಆಗಸ್ಟ್ 15, ಭಾರತದ ಸ್ವಾತಂತ್ರ್ಯೋತ್ಸವದ ಸಂಭ್ರಮದ ಕಾರಣಕ್ಕೆ ಮಾರ್ಕೆಟ್ ಕ್ಲೋಸ್ ಆಗಿರುತ್ತದೆ. ಆಗಸ್ಟ್ 15 ಗುರುವಾರ ಬಂದಿರುವುದು ನಿಮ್ಮ ಗಮನದಲ್ಲಿ ಇರಬೇಕು.
ಶೀಯ ಷೇರುಪೇಟೆ ಬುಧವಾರ ಹೊಸ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ ಸೆನ್ಸೆಕ್ಸ್ 285 ಪಾಯಿಂಟ್ ಏರಿಕೆಯೊಂದಿಗೆ 81,741 ಮಟ್ಟದಲ್ಲಿ ಕೊನೆಗೊಂಡಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ಬೆಂಚ್‌ಮಾರ್ಕ್ ಸೂಚ್ಯಂಕ ನಿಫ್ಟಿ 25000 ರ ಹಂತಕ್ಕೆ ಸಮೀಪಿಸಿದೆ. ನಿಫ್ಟಿ 115.05 ಪಾಯಿಂಟ್ಸ್ ಏರಿಕೆಯೊಂದಿಗೆ 24,972.35 ಮಟ್ಟದಲ್ಲಿ ಕೊನೆಗೊಂಡಿತು.
ಇಂದು ಬುಧವಾರದ ವಹಿವಾಟಿನಲ್ಲಿ ಟೊರೆಂಟ್ ಪವರ್ ಷೇರುಗಳು 16.56% ನಷ್ಟು ಏರಿಕೆ ದಾಖಲಿಸಿದ್ದು, ಟಾಪ್ ಗೇಯ್ನರ್ ಎನಿಸಿದೆ. ಬುಧವಾರದ ವಹಿವಾಟಿನಲ್ಲಿ, ಬಿಎಸ್‌ಇ ಸ್ಮಾಲ್ ಕ್ಯಾಪ್ ಷೇರುಗಳಲ್ಲಿ ಕುಸಿತ ಕಂಡುಬಂದರೂ ನಿಫ್ಟಿ ಮಿಡ್‌ಕ್ಯಾಪ್ 100, ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಐಟಿ ಷೇರುಗಳಲ್ಲಿ ಉತ್ತಮ ಏರಿಕೆ ಕಂಡುಬಂದ ಕಾರಣ ಮಾರುಕಟ್ಟೆ ಸಮತೋಲನ ಕಾಯ್ದುಕೊಂಡಿತು.
ಲೋಕಸಭಾ ಚುನಾವಣೆ ಫಲಿತಾಂಶದ ಸಂದರ್ಭ ಕುಸಿತ ಕಂಡಿದ್ದ ಮಾರುಕಟ್ಟೆ ಮತ್ತೆ ಚೇತರಿಕೆ ಹಾದಿಗೆ ಮರಳಿತ್ತು. ಇದಾದ ಮೇಲೆ ಕೇಂದ್ರ ಬಜೆಟ್ ಮಂಡನೆ ವೇಳೆಯೂ ಹಿನ್ನಡೆ ಉಂಟಾಗಿತ್ತು. ಆದರೆ ಈಗ ಮಾರುಕಟ್ಟೆ 80 ಸಾವಿರ ಗಡಿ ದಾಟಿ ಮುಂದಕ್ಕೆ ಸಾಗಿದ್ದು ಹೂಡಿಕೆದಾರರು ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications