ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಕುಟುಂಬದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಮುಂಬೈನ ರಸ್ತೆಯ ಬದಿಯಲ್ಲಿ ಪುಸ್ತಕಗಳನ್ನು ಮಾರಾಟ ಮಾಡಿದ ಚಿಕ್ಕ ಹುಡುಗ ಇಂದು ಯಶಸ್ವಿ ಉಸ್ಯಮಿ. ಮುಂಬೈನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಈ ವ್ಯಕ್ತಿಗೆ ಅಂದು ಖಾಸಗಿ ಶೌಚಾಲಯವೂ ಇರಲಿಲ್ಲ. ತಂದೆಗೆ ಸಬ್ಸಿಡಿಯಲ್ಲಿ ಅಗ್ಗದ ಮನೆ ಖರೀದಿಸುವ ಅವಕಾಶ ಇದ್ದರೂ ಹಣವಿಲ್ಲದೆ ಪರದಾಡಿದ ವ್ಯಕ್ತಿ ಇಂದು ಭಾರತೀಯ ಮೂಲದ ಟಾಪ್ 100 ಉದ್ಯಮಿಗಳಲ್ಲಿ ಒಬ್ಬರು.
ತಂದೆ ಉಕ್ಕಿನ ಕಾರ್ಖಾನೆಯಲ್ಲಿ ಮೇಲ್ವಿಚಾರಕ. ಪ್ರತಿ ತಿಂಗಳು ಏಳು ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಮನೆಯ ಖರ್ಚು, ಶಾಲಾ ಶುಲ್ಕ ಕಟ್ಟುವುದು ಕಷ್ಟವಾಗಿತ್ತು. ಅವರ ತಂದೆ ತೀರಿಕೊಂಡಾಗ ಕುಟುಂಬ ಭಾರ ಇವರ ಹೆಗಲ ಮೇಲೆ ಬಿತ್ತು. ಅಷ್ಟೇ ಅಲ್ಲ ಆದಾಯ ಹೆಚ್ಚಿಸಿಕೊಳ್ಳಲು ಹಾಲು ಹಂಚುವ ಕೆಲಸವನ್ನೂ ಆರಂಭಿಸಿದರು.

ಯಾರು ಈ ಸಾಧಕ?
ಈ ಸಾಧಕನ ಹೆಸರು ಭಾರತದಲ್ಲಿ ಅಷ್ಟಾಗಿ ಕೇಳಿ ಬಂದಿಲ್ಲ. ಆದರೆ ದೂರದ ದುಬೈನಲ್ಲಿ ಇವರ ಹೆಸರು ಮಾಡಿದ ಸಾಧಕ. ಮುಂಬೈನ ಕೊಳೆಗೇರಿಯಿಂದ ಹೊರಬಂದು ದುಬೈನಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ ಸಾಧಕ ರಿಜ್ವಾನ್ ಸಾಜನ್. ಅವರ ಕಥೆ ಒಂದು ಸಿನಿಮಾ ಕಥೆಯಂತೆ ತೋರುತ್ತದೆ.ಇವರು ಸ್ಥಾಪಿಸಿದ ಡ್ಯಾನ್ಯೂಬ್ ಗ್ರೂಪ್ ನಿರ್ಮಾಣ ಸಾಮಗ್ರಿಗಳು, ಗೃಹಾಲಂಕಾರಗಳು ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ದುಬೈ ಮೂಲದ ವ್ಯಾಪಾರ ಸಮೂಹವಾಗಿದೆ.
1993 ರಲ್ಲಿ ರಿಜ್ವಾನ್ ಸಜನ್ ಸ್ಥಾಪಿಸಿದ ಕಂಪನಿ, 2022 ರಲ್ಲಿ ಎರಡು ಬಿಲಿಯನ್ ಡಾಲರ್ ವಹಿವಾಟು ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಸಜನ್ ಅವರ ನಿವ್ವಳ ಮೌಲ್ಯ ಸುಮಾರು 18,000 ಕೋಟಿ ರೂಪಾಯಿಗಳು ಎಂದು ತಿಳಿದು ಬಂದಿದೆ.

ಇವರ ಹಿನ್ನೆಲೆ ಏನು?
1981 ರಲ್ಲಿ, ಅವರು ತಮ್ಮ ಚಿಕ್ಕಪ್ಪನ ನಿರ್ಮಾಣ ಸಾಮಗ್ರಿಗಳ ಅಂಗಡಿಯಲ್ಲಿ ಕೆಲಸ ಮಾಡಲು ಕುವೈಟ್‌ಗೆ ಹೋದರು. ಅಲ್ಲಿ ಅವರು ಮಾರಾಟಗಾರರಾಗಿ ಕೆಲಸ ಮಾಡಿದರು. ಕುವೈತ್ ನಲ್ಲಿ ಎಂಟು ವರ್ಷ ಕೆಲಸ ಮಾಡಿ ಸೇಲ್ಸ್ ಮ್ಯಾನೇಜರ್ ಆದರು. ಕ್ರಮೇಣ ಸಾಜನ್ ಅವರ ಕೆಲಸವು ಹೆಚ್ಚಾಗತೊಡಗಿತು ಆದರೆ 1991 ರಲ್ಲಿ ಕೊಲ್ಲಿ ಯುದ್ಧವು ಎಲ್ಲವನ್ನೂ ಕೊನೆಗೊಳಿಸಿತು ಪರಿಣಾಮ ದೇಶಕ್ಕೆ ಬರುವಂತಾಯಿತು.
ಮುಂಬೈಗೆ ಮರಳಿದ ನಂತರ ಮತ್ತೆ ಕೆಲಸ ಹುಡುಕತೊಡಗಿದರು. ಕೊನೆಗೆ ದುಬೈನಲ್ಲಿ ಬಿಲ್ಡಿಂಗ್ ಮೆಟೀರಿಯಲ್ ವ್ಯವಹಾರದಲ್ಲಿ ಬ್ರೋಕರೇಜ್ ಕೆಲಸ ಸಿಕ್ಕಿತು. ನಂತರ ಒಂದು ದಿನ ರಿಜ್ವಾನ್ ತನ್ನ ಕೆಲಸವನ್ನು ಬಿಟ್ಟು ತನ್ನದೇ ಆದ ವ್ಯವಹಾರವನ್ನು ಪ್ರಾರಂಭಿಸಿದನು. 1993 ರಲ್ಲಿ ಡ್ಯಾನ್ಯೂಬ್ ಗ್ರೂಪ್ ಹುಟ್ಟು ಹಾಕಿದರು. ಆಗಷ್ಟೇ ದುಬೈನಲ್ಲಿ ನಿರ್ಮಾಣ ಕಾರ್ಯಗಳಿಗೆ ಚುರುಕು ಮುಟ್ಟಿತ್ತು.

ಯಶಸ್ಸಿ ಮೆಟ್ಟಿಲುಗಳು
ಇಲ್ಲಿಂದ ಆರಂಭವಾದ ವ್ಯಾಪಾರ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಮುಂದಿನ ಒಂದೂವರೆ ದಶಕದ ಕಾಲ ರಿಜ್ವಾನ್ ವ್ಯಾಪಾರವನ್ನು ವಿಸ್ತರಿಸಿದರು. 2006 ರಲ್ಲಿ ಅವರು ನೈರ್ಮಲ್ಯ ಪರಿಹಾರಗಳ ಬ್ರ್ಯಾಂಡ್ ಮಿಲೋವನ್ನು ಪ್ರಾರಂಭಿಸಿದರು. ನಂತರ 2008ರಲ್ಲಿ ಗೃಹೋಪಯೋಗಿ ಉದ್ಯಮಕ್ಕೂ ಕಾಲಿಟ್ಟರು. ನಾಲ್ಕು ವರ್ಷಗಳ ನಂತರ, ಅಂದರೆ 2012 ರಲ್ಲಿ, ಅವರು ಅಲ್ಯೂಮಿನಿಯಂ ಕಾಂಪೋಸಿಟ್ ಪ್ಯಾನಲ್ ಗಳನ್ನು ತಯಾರಿಸಲು ಪ್ರಾರಂಭಿಸಿದರು ಮತ್ತು 2014 ರಲ್ಲಿ ರಿಯಲ್ ಎಸ್ಟೇಟ್ಗೆ ಪ್ರವೇಶಿಸಿದರು.
ರಿಜ್ವಾನ್ ಅವರ ಒಂದು ಶೇಕಡಾ ಯೋಜನೆ ದೊಡ್ಡ ಹಿಟ್ ಆಗಿದ್ದು, ಅವರು ಇಲ್ಲಿಯವರೆಗೆ 15,000 ಫ್ಲಾಟ್‌ಗಳನ್ನು ನಿರ್ಮಿಸಿದ್ದಾರೆ. ಆರಂಭದಲ್ಲಿ ಸ್ವಲ್ಪ ಹಣವನ್ನು ಪಾವತಿಸಿ ನೀವು ಫ್ಲಾಟ್ ಅನ್ನು ಸ್ವಾಧೀನಪಡಿಸಿಕೊಳ್ಳಬಹುದು. ನೀವು ಉಳಿದ ಮೊತ್ತವನ್ನು ಪ್ರತಿ ತಿಂಗಳು ಒಂದು ಶೇಕಡಾದಲ್ಲಿ ಪಾವತಿಸಬಹುದು. ಸಾವಿರಾರು ಜನರು ತಕ್ಷಣ ಅದನ್ನು ತೆಗೆದುಕೊಂಡರು. 2022 ರಲ್ಲಿ ಡ್ಯಾನ್ಯೂಬ್ ಸಮೂಹದ ವಹಿವಾಟು ಎರಡು ಬಿಲಿಯನ್ ಡಾಲರ್ ಆಗಿತ್ತು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!



Click it and Unblock the Notifications