ವ್ಯವಹಾರವೊಂದು (Business) ಸ್ಥಾಪಿಸಬೇಕೆಂಬುದು ಹಲವರ ಕನಸಾಗಿರುತ್ತೆ. ಆದ್ರೆ ನಷ್ಟದ ಭಯದಿಂದ, ಬಂಡವಾಳದ ಕೊರತೆಯಿಂದ ಹೆಚ್ಚಿನವರು ಬ್ಯುಸಿನೆಸ್ ಆರಂಭಿಸೋಕೆ ಮುಂದಾಗುವುದಿಲ್ಲ. ಆದ್ರೆ ಇಲ್ಲೊಬ್ಬರು ತಿಂಗಳಿಗೆ ಲಕ್ಷಗಟ್ಟಲೆ ಸಂಬಳ (High Paid Salary) ಪಡೆಯುತ್ತಿದ್ದ ಕಂಪನಿಯನ್ನೇ ತೊರೆದು ಬ್ಯುಸಿನೆಸ್ ಆರಂಭಿಸಿದ್ದಾರೆ. ಇಂದು ಈ ಕಂಪನಿ ಕೋಟಿ ಮೌಲ್ಯದ್ದಾಗಿದೆ. ಕಾನ್ಪುರದ ರೋನಕ್ ಅವರು ತಮ್ಮ ₹20 ಲಕ್ಷ ವಾರ್ಷಿಕ ವೇತನದ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಕ್ಕೆ ರಿಸೈನ್ ಮಾಡಿ, ಕೇವಲ ಮೂರು ವರ್ಷಗಳಲ್ಲಿ ತಮ್ಮ ಕಂಪನಿಯ ವಹಿವಾಟನ್ನು ₹100 ಕೋಟಿ ಮುಟ್ಟುವಂತೆ ಮಾಡಿದ್ದಾರೆ. ಈಗ ರೋನಕ್ ಟಂಡನ್ ಅವರ ಯಶಸ್ಸಿನ ಕಥೆ (Success Story), ಅನೇಕ ಯುವಕರಿಗೆ ಮಾದರಿಯಾಗಿಬಿಟ್ಟಿದೆ.

ನೆಮ್ಮದಿ ಬೇಡ, ಸಕ್ಸಸ್ ಬೇಕು: ಉತ್ತಮ ಸಂಬಳ ಮತ್ತು ನೆಮ್ಮದಿ ಎಂಬುದು ಯಾರಿಗೆ ಬೇಡ ಹೇಳಿ? ಆದರೆ, ಕೆಲವರು ಯಶಸ್ಸಿಗಾಗಿ ರಾತ್ರಿ-ಹಗಲೆನ್ನದೆ ದುಡಿದು, ಸಕ್ಸಸ್ ಕಾಣಬೇಕೆಂದು ಕನಸ ಕಟ್ಟಿಕೊಂಡಿರುತ್ತಾರೆ. ಅಂಥವರಿಗೆ ಕೇವಲ ಸಂಬಳ ಅಥವಾ ನೆಮ್ಮದಿಯೇ ಸಾಕಾಗಲ್ಲ, ಇಂತಹವರು ನೆಮ್ಮದಿಯ ಜೀವನವನ್ನೇ ತೊರೆದು, ಹೊಸ ಬ್ಯುಸಿನೆಸ್ ಶುರು ಮಾಡಲು ಮುಂದಾಗುತ್ತಾರೆ. ಅದೇ ಶ್ರಮ, ಅವರಿಗೆ ಮುಂದೊಂದು ದಿನ ದೊಡ್ಡ ಯಶಸ್ಸನ್ನು ತಂದುಕೊಡುತ್ತೆ.
ಅಂಥವರಲ್ಲಿ ಕಾನ್ಪುರದ ರೋನಕ್ ಟಂಡನ್ ಕೂಡಾ ಒಬ್ಬರು. ರೋನಕ್ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಉತ್ತಮ ಪ್ಯಾಕೇಜ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು, ಅಲ್ಲದೇ ಹಲವು ವರ್ಷಗಳ ಕಾಲ ಕೆಲಸೂ ಮಾಡುತ್ತಿದ್ದರು. ಆದರೆ, ಒಂದು ದಿನ ಅವರು ತಮ್ಮ ಕೆಲಸವನ್ನು ತೊರೆದು ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದು ಕೊಂಡರು. ಇದೇ ನೋಡಿ ರೋನಕ್ ಅವರ ಯಶಸ್ಸಿನ ಹಿಂದಿನ ಗುಟ್ಟು.
ಕಾನ್ಪುರದ ಆರ್ಯನಗರದ ನಿವಾಸಿ ರೋನಕ್, 2011 ರಲ್ಲಿ ಚೆನ್ನೈ ಮೂಲದ ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಪ್ರಾರಂಭಿಸಿದರು. ಅವರ ಆರಂಭಿಕ ವಾರ್ಷಿಕ ಸಂಬಳ 9 ಲಕ್ಷ ರೂ. ಆಗಿತ್ತು, ವರ್ಷ ಕಳೆದಂತೆ ಆ ಸ್ಯಾಲರಿ 20 ಲಕ್ಷದವರೆಗೆ ತಲುಪಿತು. ಸಂಬಳ ಎಷ್ಟೇ ಹೆಚ್ಚಾದರೂ, ರೋನಕ್ ಅವರ ಗುರಿ ಮಾತ್ರ ಬೇರೆಯೇ ಆಗಿತ್ತು.
ರೋನಕ್ ಅವರ ಉದ್ದೇಶ ಸ್ವಂತ ವ್ಯವಹಾರ ಪ್ರಾರಂಭಿಸುವುದು. ಆದರೆ ಅದಕ್ಕಾಗಿ ಉತ್ತಮ ಪ್ಯಾಕೇಜ್‌ನ ಕೆಲಸ ತೊರೆಯುತ್ತೇನೆ ಎಂಬ ನಿರ್ಧಾರ ಎಲ್ಲರನ್ನೂ ಆಶ್ಚರ್ಯಕ್ಕೀಡುಮಾಡಿತು. ಸ್ನೇಹಿತರು, ಕುಟುಂಬಸ್ಥರು ಈ ನಿರ್ಧಾರಕ್ಕೆ ಅಡ್ಡಬಂದರೂ, ಕೇಳದ ರೋನಕ್ ತನ್ನಿಚ್ಛೆಯಂತೆ 2016 ರಲ್ಲಿ ಉದ್ಯೋಗವನ್ನು ತೊರೆದು, ಉದ್ಯಮ ಶುರು ಮಾಡಲು ಮುಹೂರ್ತ ಇಟ್ಟಿದ್ದರು.
ಅಷ್ಟರಲ್ಲಾಗಲೇ ಅವರು ₹50 ಲಕ್ಷ ಬಂಡವಾಳವನ್ನು ಕೂಡಾ ಸಂಗ್ರಹಿಸಿದ್ದರು. ರೋನಕ್ ಈ ಹಣವನ್ನು ಭಾರೀ ವಾಹನಗಳ ಡೀಲರ್‌ಶಿಪ್‌ಗಳನ್ನು (ಟ್ರಕ್, ಬಸ್, ಡಂಪರ್, ಹೈವಾ ಮುಂತಾದ ದೊಡ್ಡ ವಾಹನಗಳು) ತೆಗೆದುಕೊಳ್ಳಲು ಬಳಸಿದರು. ಈ ಸಂದರ್ಭದಲ್ಲಿ ಎಂಬಿಎ ಪದವೀಧರೆ ರೋನಕ್ ಅವರ ಪತ್ನಿ ಇಶಿತಾ ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದರು.
ಇಶಿತಾ ಅವರ ವ್ಯವಹಾರ ಯೋಜನೆ ಮತ್ತು ರೋನಕ್ ಅವರ ಕಠಿಣ ಪರಿಶ್ರಮವೇ ಇಂದು ಯಶಸ್ವಿ ಉದ್ಯಮವಾಗಲು ಕಾರಣವಾಗಿಬಿಟ್ಟಿದೆ. ಇಶಿತಾ ಮತ್ತು ರೋನಕ್ ತಮ್ಮ ವ್ಯಾಪಾರವನ್ನು ಬಹಳ ಪ್ಲಾನ್‌ನೊಂದಿಗೆ ಶುರು ಮಾಡಿದರು. ಕೇವಲ 2.5 ವರ್ಷಗಳಲ್ಲಿ ರೋನಕ್ ಸ್ಥಾಪಿಸಿದ ಬ್ಯುಸಿನೆಸ್, ಇಡೀ ಉತ್ತರಪ್ರದೇಶದಲ್ಲೇ ದೊಡ್ಡ ಡೀಲರ್‌ಶಿಪ್ ಆಗಿ ಹೊರಹೊಮ್ಮಿತು.
ರಾಷ್ಟ್ರೀಯ ಪ್ರಶಸ್ತಿ ಗೆದ್ದ ರೋನಕ್!
ರೋನಕ್ ಸಾಧನೆಗಾಗಿ, ವ್ಯವಹಾರ ಕ್ಷೇತ್ರದಲ್ಲಿ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ಪ್ರಸ್ತುತ, ಅವರ ಕಂಪನಿಯ ಡೀಲರ್‌ಶಿಪ್ ಫತೇಪುರ್, ಫರೂಖಾಬಾದ್ ಮತ್ತು ಘಾಟ್‌ಪುರ್ ವರೆಗೆ ವಿಸ್ತರಿಸಿದೆ. ಉತ್ತರ ಪ್ರದೇಶದ ಹೊರಗೂ ಅಂದರೆ, ಇತರ ರಾಜ್ಯಗಳಿಗೂ ತನ್ನ ವ್ಯವಹಾರವನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಇದೂ ಕೂಡಾ ಸಾಧ್ಯವಾಗಲಿದೆ ಎನ್ನಲಾಗಿದೆ.
ರೋನಕ್ ತಮ್ಮ ವ್ಯವಹಾರ ಆರಂಭಿಸುವ ಮುನ್ನ ಹಲವಾರು ಸಂಶೋಧನೆಗಳನ್ನು ಕೈಗೊಂಡಿದ್ದರು. ಇದೇ ಕಾರಣದಿಂದಾಗಿ ಅವರ ಕಂಪನಿಯ ವಹಿವಾಟು ಕೇವಲ ಮೂರು ವರ್ಷಗಳಲ್ಲಿ ₹100 ಕೋಟಿಗೆ ಮುಟ್ಟಿತು. ಬರೀ 50 ಲಕ್ಷ ರೂಪಾಯಿಯಲ್ಲಿ ಪ್ರಾರಂಭವಾದ ಕಂಪನಿ ಇಂದು 200 ಪಟ್ಟು ಹೆಚ್ಚು ವಹಿವಾಟು ನಡೆಸುತ್ತದೆ.
ಕೆಲಸ ಬಿಡುವ ನಿರ್ಧಾರ ದೊಡ್ಡ ಸವಾಲಾಗಿದ್ದರು, ಅವರ ಪ್ಲಾನ್, ಕಠಿಣ ಪರಿಶ್ರಮ, ಆಟೋಮೊಬೈಲ್‌ನಲ್ಲಿ ರೋನಕ್ ಅವರಿಗಿದ್ದ ಅನುಭವ, ಇಂದು ಯಶಸ್ಸಿಗೆ ಕಾರಣವಾಯಿತು ಎಂದು ಹೇಳುತ್ತಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications