ನಮ್ಮಲ್ಲಿ ಹೆಚ್ಚಿನವರಿಗೆ ಒಂದು ಸಕ್ಸಸ್ ಫುಲ್ ಉದ್ಯಮಿ ಆಗಬೇಕೆಂಬ ಕನಸಿರುತ್ತೆ. ಆದ್ರೆ ಏನು ಮಾಡೋದು ಕೆಲವರ ವ್ಯವಹಾರಗಳು ಅದೃಷ್ಟವೆಂಬಂತೆ ಸಕ್ಸಸ್ ಕಾಣುತ್ತೆ, ಇನ್ನೂ ಕೆಲವರ ಉದ್ಯಮಗಳು ದುರಾದೃಷ್ಟವೆಂಬಂತೆ ನಷ್ಟದ ಹಾದಿಯನ್ನೂ ಹಿಡಿಯುತ್ತೆ. ಎಷ್ಟೋ ಜನರು ವ್ಯಾಪಾರದಲ್ಲಿ ನಷ್ಟ ಬಂದ್ರೆ ಸಾಕು ಸಂಪೂರ್ಣವಾಗಿ ಕುಗ್ಗಿ ಹೋಗ್ತಾರೆ. ಆದ್ರೆ ಈ ಸುದ್ದಿಯ ಸೂತ್ರಧಾರಿ ಎಲ್ಲರಿಗೂ ಸ್ಪೂರ್ತಿ. ಹೊಸ ಉದ್ಯಮ ಆರಂಭಿಸುವ ಐಡಿಯಾದಲ್ಲಿ ಇರುವವರಿಗೆ, ಬಿಸಿನೆಸ್ ಶುರು ಮಾಡಿ ಲಾಸ್ ಆದವರಿಗೆ ಎಲ್ಲರಿಗು ಇವ್ರು ಸ್ಪೂರ್ತಿ. ಏಕೆಂದರೆ, ಕೇವಲ 22 ವರ್ಷದಲ್ಲಿ ಉದ್ಯಮ ಶುರು ಮಾಡಿ, ಬರೀ 4 ವರ್ಷಗಳಲ್ಲಿ 600 ಕೋಟಿ ಕಂಪನಿಯ ಒಡೆಯನಾದವಾರ ಕಥೆ ಇದು (Success Business). ಇವರ ಹೆಸರು ಸಾಗರ್ ಗುಪ್ತಾ (Sagar Gupta).

ಕಠಿಣ ಶ್ರಮ ಇದ್ದರೆ ಏನನ್ನು ಸಾಧಿಸಲು ಸಾಧ್ಯ ಎಂಬುದಕ್ಕೆ ಮೂಲ ಉದಾಹರಣೆಯೇ ಈ ಸಾಗರ್ ಗುಪ್ತಾ. ಕೇವಲ 4 ವರ್ಷದಲ್ಲಿ ತಂದೆಯೊಂದಿಗೆ ಸೇರಿಕೊಂಡು 600 ಕೋಟಿಯ ಕಂಪನಿ ಕಟ್ಟಿದ ಸಾಗರ್ ಗುಪ್ತಾ ಇಂದು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಹಾಗಿದ್ರೆ ಅಷ್ಟಕ್ಕೂ ಸಾಗರ್ ಗುಪ್ತಾ ಆರಂಬಿಸಿದ ಉದ್ಯಮ ಯಾವುದು? ಇದು ಯಶಸ್ಸಿನ ಹಾದಿ ಹಿಡಿದಿದ್ದು ಹೇಗೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
22ಕ್ಕೆ ಡಿಗ್ರಿ ಪಾಸ್, 26ಕ್ಕೆ ಕೋಟಿಗಳ ಒಡೆಯ!
ಹೌದು, ಸಾಗರ್ ಗುಪ್ತ ೨೫ನೇ ವಯಸ್ಸಿಗೆ 600 ಕೋಟಿಗಳ ಒಡೆಯನಾಗಿದ್ದು ರೋಚಕ ಕಥೆ. ಏಕೆಂದರೆ ಒಮ್ಮೆ ಡಿಗ್ರಿ ಮುಗಿದ್ರೆ ಸಾಕು ಕೆರಿಯರ್ ಬಗ್ಗೆ ಚಿಂತೆ ಮಾಡುವ ಯುವಕರ ನಡುವೆ, ಸಾಗರ್ ಹೊಸದೊಂದು ಕಂಪನಿಗೆ ಅಡಿಪಾಯ ಹಾಕಿದ್ದರು. ತನ್ನ ಯಶಸ್ಸಿನ ಬಗ್ಗೆ ದೃಢವಾದ ಗುರಿ ಹೊಂದಿದ್ದ ಸಾಗರ್, ಅದಕ್ಕಾಗಿ ನಿರಂತರ ಶ್ರಮಿಸುತ್ತಲೇ ಇದ್ದರು.
ಸಿಎ ಆಗೋದು ಕನಸು, ವ್ಯಾಪಾರದಲ್ಲಿ ಸಕ್ಸಸ್
ಮೂಲತಃ ಉತ್ತರ ಪ್ರದೇಶದವರಾದ ಸಾಗರ್ ಗುಪ್ತಾ, ಆರಂಭದಲ್ಲಿ ಉದ್ಯಮಿಯಾಗಬೇಕೆಂದು ಕನಸು ಹೊಂದಿದವರಲ್ಲ. ಡಿಗ್ರಿ ಮುಗಿಸಿ ಸಿಎ ಆಗಬೇಕೆಂದು ಕನಸು ಕಂಡಿದ್ದ ಸಾಗರ್ ಅವ್ರು ತಂದೆಯಿಂದ ಸ್ಪೂರ್ತಿ ಪಡೆದು ಉದ್ಯಮ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಬಿ.ಕಾಂ ಮುಗಿಸಿದ ಕೇವಲ ಒಂದು ವರ್ಷದಲ್ಲೇ, ಸಾಗರ್ ತನ್ನ ತಂದೆಯೊಂದಿಗೆ ಸೇರಿಕೊಂಡು ಹೊಸ ಉದ್ಯಮ ಆರಂಭಿಸಿದ್ರು. 2017 ರಲ್ಲಿ ಪ್ರಾರಂಭವಾದ ಈ ವ್ಯವಹಾರವು ಸಾಗರ್ ಜೀವನಕ್ಕೆ ಸಿಕ್ಕ ಬಿಗ್ ಟ್ವಿಸ್ಟ್ ಅಂತಾನೆ ಹೇಳಬಹುದು. ೩೦ ವರ್ಷಗಳ ಕಾಲ ಸೆಮಿಕಂಡಕ್ಟರ್‌ಗಳ ವ್ಯಾಪಾರ ಮಾಡುತ್ತಿದ್ದ ಸಾಗರ್ ಅವರ ತಂದೆ 2017 ರಲ್ಲಿ ಎಲ್‌ಇಡಿ ಟೆಲಿವಿಷನ್‌ಗಳನ್ನು (TV) ಉತ್ಪಾದಿಸಲು ಪ್ರಾರಂಭಿಸಿದರು.
ಇದೇ ಉದ್ಯಮ ಸಾಗರ್ ಅವರಿಗೆ ಹೊಸ ಅವಕಾಶ ಕಲ್ಪಿಸಿದ್ದು. ಅದಾದ ಎರಡು ವರ್ಷಗಳ ನಂತರ, ತಂದೆ ಮತ್ತು ಮಗ ಸೇರಿಕೊಂಡು ನೋಯ್ಡಾದಲ್ಲಿ ತಮ್ಮ ಟೆಲಿವಿಷನ್ ಉತ್ಪಾದನಾ ವ್ಯವಹಾರವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಕಷ್ಟವಾದರೂ ಸಾಗರ್ ತಂದೆಗೆ ಉದ್ಯಮ ಜಗತ್ತಿನ ದಿಗ್ಗಜ ಕಂಪನಿಗಳ ಜೊತೆ ಸಂಪರ್ಕ ಇದ್ದಿದ್ದರಿಂದ, ಸಾಗರ್ ಅವರಿಗೆ ಉದ್ಯಮ ನಡೆಸಲು ಮತ್ತಷ್ಟು ಸುಲಭವಾಯಿತು. ತಂದೆಯ ಸಹಕಾರದೊಂದಿಗೆ ಸ್ಯಾಮ್‌ಸಂಗ್, ತೋಷಿಬಾ ಮತ್ತು ಸೋನಿಯಂತಹ ಬ್ರಾಂಡ್ ಕಂಪನಿಗಳೊಂದಿಗೆ ಸಂಪರ್ಕ ಸಾಧಿಸಿದ ಸಾಗರ್, ಈ ಕಂಪನಿಗಳೊಂದಿಗೆ ಉತ್ಪಾದನೆಗೆ ಕೈ ಜೋಡಿಸಿದರು.
100 ಕ್ಕೂ ಅಧಿಕ ಕಂಪನಿಗಳಿಗೆ ಟಿವಿ ಉತ್ಪಾದನೆ
ಸಾಗರ್ ಗುಪ್ತಾ ತಮ್ಮ ತಂದೆಯ ಕಂಪನಿಯಲ್ಲಿ ನಿರಂತರವಾಗಿ ದುಡಿದು ಬರೋಬ್ಬರಿ ೬೦೦ ಕೋಟಿಯ ವ್ಯವಹಾರವನ್ನಾಗಿ ಪರಿವರ್ತಿಸಿದರು.. ಇಂದು, ಸಾಗರ್ ಅವರ ಕಂಪನಿಯು 100 ಕ್ಕೂ ಹೆಚ್ಚು ಕಂಪನಿಗಳಿಗೆ LCD ಟಿವಿಗಳು, LED ಟಿವಿಗಳು ಮತ್ತು ಉನ್ನತ ಗುಣಮಟ್ಟದ ಟಿವಿಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಈ ಮೂಲಕ ಸಾಗರ್ ಅವರ ಕಂಪನಿ, ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಟಿವಿಗಳನ್ನು ಉತ್ಪಾದಿಸುತ್ತದೆ ಎಂದು ವರದಿಯಾಗಿದೆ. .
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications