ವಾರಕ್ಕೆ 70 ಗಂಟೆ ಕೆಲಸ: ಪತಿಯ ಹೇಳಿಕೆ ಸಮರ್ಥಿಸಿದ ಸುಧಾ ಮೂರ್ತಿ ವಾರಕ್ಕೆಷ್ಟು ಗಂಟೆ ದುಡಿತ್ತಾರೆ ಗೊತ್ತಾ!?

ಲೇಖಕಿ ಮತ್ತು ಸಮಾಜ ಸೇವಕಿ ಆದ ಸುಧಾ ಮೂರ್ತಿ ಅವರು ದೇಶದ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಹೇಳಿದ್ದಾರೆ. ಈ ಮೂಲಕ ತನ್ನ ಪತಿಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. "ವಾರಕ್ಕೆ 70 ಗಂಟೆಗಳ ಕೆಲಸದ" ತನ್ನ ಪತಿ ನಾರಾಯಣ ಮೂರ್ತಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

73 ವರ್ಷದ ಸುಧಾ ಮೂರ್ತಿ ಅವರು "ನಾನು ಈ ವಯಸ್ಸಿನಲ್ಲೂ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತೇನೆ," ಎಂದಿದ್ದಾರೆ. ನಾನು ಈ ಶ್ರಮವನ್ನು ಅಧಿಕ ಕೆಲಸ ಎಂದು ಪರಿಗಣಿಸುವುದಿಲ್ಲ ಎಂದು ಇಂಡಿಯಾ ಟುಡೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

 ವಾರಕ್ಕೆ 70 ಗಂಟೆ ಕೆಲಸ: ಪತಿಯ ಹೇಳಿಕೆ ಸಮರ್ಥಿಸಿದ ಸುಧಾ ಮೂರ್ತಿ

ಕಳೆದ ವರ್ಷ 77 ವರ್ಷದ ನಾರಾಯಣ ಮೂರ್ತಿ, (ಇನ್ಫೋಸಿಸ್‌ನ ಸಹ-ಸಂಸ್ಥಾಪಕ) ಅವರು ತಮ್ಮ "ಐಟಿ ಉದ್ಯೋಗಿಗಳು ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು" ಎಂಬ ಹೇಳಿಕೆ ನೀಡಿದ್ದರು. ಇದು ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಂದಿಗೂ ಈ ಹೇಳಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ.

ಇಂಡಿಯಾ ಟುಡೇ ಕನ್ಸಲ್ಟಿಂಗ್ ಎಡಿಟರ್ ರಾಜ್‌ದೀಪ್ ಸರ್ದೇಸಾಯಿ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ, ಸುಧಾ ಮೂರ್ತಿ ಅವರನ್ನು ನಾರಾಯಣ ಮೂರ್ತಿಯವರ "ವಾರಕ್ಕೆ 70 ಗಂಟೆ ಕೆಲಸ" ಮತ್ತು ಕಚೇರಿಯಲ್ಲಿ ಅತಿಯಾಗಿ ಕೆಲಸ ಮಾಡುವ ದೃಷ್ಟಿಕೋನದ ಬಗ್ಗೆ ಪ್ರಶ್ನಿಸಲಾಗಿದೆ.

ಕೆಲಸ-ಜೀವನವು ಯಾವಾಗಲೂ ಸಮಾನಾರ್ಥಕವಾಗಿರಬೇಕಾಗಿಲ್ಲ. ಕೆಲಸ-ಜೀವನದಲ್ಲಿ ಅವರ ಉದ್ಯೋಗದ ಬಗ್ಗೆ ಹೆಚ್ಚು ಭಾವೋದ್ರಿಕ್ತರಾಗಿದ್ದರೆ, ಅದು ಕೂಡಾ ಸಂತೋಷವೇ ಎಂದರು. ಹಾಗೆಯೇ ತಾನು ಕಷ್ಟಪಟ್ಟು ಕೆಲಸ ಮಾಡುವುದನ್ನು ರಜಾದಿನಗಳಿಗೆ ಹೋಲಿಸಿದರು.

"ಕನಿಷ್ಠ ನಮ್ಮಿಬ್ಬರಿಗೂ ಕೆಲಸವು ಯಾವಾಗಲೂ ಸಂತೋಷವಾಗಿತ್ತು. ಆದ್ದರಿಂದ ಅದು ನಮ್ಮನ್ನು ಕೆಲಸದ ವಿಚಾರದಲ್ಲಿ ರುಬ್ಬುವುದು ಅಥವಾ ಬೇರೇನು ಅನಿಸಲಿಲ್ಲ. ನಾನು ಈ ವಯಸ್ಸಿನಲ್ಲಿ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತೇನೆ. ಯಾಕೆಂದರೆ ಕೆಲಸವೆಂದರೆ ನನಗೆ ವಿಭಿನ್ನವಾಗಿದೆ," ಎಂದು ಸಂದರ್ಶನದಲ್ಲಿ ಸುಧಾ ಮೂರ್ತಿ ಹೇಳಿಕೊಂಡಿದ್ದಾರೆ.

"ಕೆಲಸದಿಂದಾಗಿ ಕುಟುಂಬ ಜೀವನ ನಡೆಸಲು ಸಾಧ್ಯವಿಲ್ಲ ಎಂಬುವುದು ಇಲ್ಲ. ಇದು ಸುಳ್ಳಲ್ಲ, ನಾವು ಇನ್ನೂ ಕೆಲಸದ ಜೊತೆಗೆ ಕುಟುಂಬದೊಂದಿಗೆ ಇರಬಹುದು. ನಾನು ಅಡುಗೆಮನೆಯಲ್ಲಿರುವಾಗ ಅವರು ಬಂದು ಸಹಾಯ ಮಾಡುತ್ತಾರೆ. ಇದು ಒಟ್ಟಿಗೆ ಸಮಯ ಕಳೆಯುವುದಲ್ಲವೇ?," ಎಂದು ಸುಧಾ ಮೂರ್ತಿ ಪ್ರಶ್ನಿಸಿದ್ದಾರೆ.

ನೀವು ನಿಮ್ಮ ಕೆಲಸವನ್ನು ಆನಂದಿಸಬೇಕು ಎಂಬುವುದು ನಾನು ಹೇಳುತ್ತೇನೆ. ನಿಮ್ಮ ಕೆಲಸದ ಬಗ್ಗೆ ನೀವು ಉತ್ಸಾಹ ಹೊಂದಿರಬೇಕು. ಕೆಲಸವು ಕೂಡಾ ರಜಾದಿನದಂತೆ ಎಂದಿದ್ದಾರೆ.

ಸುಧಾ ಮೂರ್ತಿ ಅವರು ಸಮಕಾಲೀನ "ಕೆಲಸ-ಜೀವನದ ಸಮತೋಲನ ಮತ್ತು ಮಾನಸಿಕ ಆರೋಗ್ಯ" ಚರ್ಚೆಯನ್ನು ವಿರೋಧಿಸಿದ್ದಾರೆ. ತಾನು ತನ್ನ ಪತಿಯೊಂದಿಗೆ ಮಾಡಿದಂತೆ "ಕೆಲಸವನ್ನು ಆನಂದಿಸಬಹುದು" ಮತ್ತು "ಒಟ್ಟಿಗೆ ಕೆಲಸ ಮಾಡಬಹುದು" ಎಂದಿದ್ದಾರೆ.

"ಇಂದಿನ ಪೀಳಿಗೆಯು ನಮಗೆ ಕೆಲಸ-ಜೀವನದ ಸಮತೋಲನ ಬೇಕು. ನಾವು ಕೆಲಸ ಮಾಡಲು ಹೆಚ್ಚು ಸಮಯ ಕಳೆದರೆ ನಮ್ಮ ಮಾನಸಿಕ ಆರೋಗ್ಯ ಏನಾಗುತ್ತದೆ? ನಾವು ಜೀವನವನ್ನು ಯಾವಾಗ ನಿಜವಾಗಿಯೂ ಆನಂದಿಸುವುದು? ಎಂದು ಹೇಳುತ್ತಾರೆ. ಆದರೆ ನಾನು ನನ್ನ ಕೆಲಸವನ್ನು ಇಷ್ಟಪಡುತ್ತೇನೆ, ಅವರೊಂದಿಗೆ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ, ಮನೆಯಲ್ಲಿಯೂ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ," ಎಂದು ಸುಧಾ ಮೂರ್ತಿ ಹೇಳಿದರು.

ಕೆಲಸದ ಅವಧಿಯಲ್ಲ ಉತ್ಪಾದಕತೆ ಮುಖ್ಯ

ಈ ನಡುವೆ ಇಂಡಿಯಾ ಟುಡೇ ಜೊತೆಗಿನ ವಿಶೇಷ ಸಂವಾದದಲ್ಲಿ, ನಾರಾಯಣ ಮೂರ್ತಿ ಅವರು ಯುವ ಭಾರತೀಯರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ತಮ್ಮ ಹಿಂದಿನ ಸಲಹೆಯನ್ನು ದೃಢಪಡಿಸಿದರು. "ಸಂಪೂರ್ಣವಾಗಿ, 70-ಗಂಟೆಗಳ ವಾರದ ಕೆಲಸವು ಸಮಾಜಕ್ಕೆ ಮರಳಿ ನೀಡುವ ಮಾರ್ಗವಾಗಿರಬೇಕು," ಎಂದು ಮೂರ್ತಿ ಹೇಳಿದರು.

ನಿವೃತ್ತಿಯಾಗುವವರೆಗೂ ವಾರಕ್ಕೆ 85 ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. 70 ನೇ ಸಂಖ್ಯೆ ಮುಖ್ಯವಲ್ಲ. ಎರಡನೇ ಮಹಾಯುದ್ಧದ ನಂತರ ಜರ್ಮನ್ನರು ಮಾಡಿದಂತೆ, ಜಪಾನಿಯರು ಮಾಡಿದಂತೆ ಉತ್ಪಾದಕತೆಯತ್ತ ಗಮನ ಹರಿಸಬೇಕು ಎಂದು ಮೂರ್ತಿ ಅವರು ಸ್ಪಷ್ಟಪಡಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+