ಸುಕನ್ಯ ಸಮೃದ್ಧಿ ಯೋಜನೆಯು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆರ್ಥಿಕ ಭವಿಷ್ಯಕ್ಕಾಗಿ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು ಆರಂಭವಾಗಿ ಜನವರಿ 22ಕ್ಕೆ 10 ವರ್ಷಗಳನ್ನ ಪೂರೈಸಿದೆ. ಇದು ಪ್ರಮುಖವಾಗಿ ಹೆಣ್ಣು ಮಕ್ಕಳಿಗಾಗಿ ಇರುವ ಯೊಜನೆಯಾಗಿದೆ. ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಸುರಕ್ಷಿತ ಆರ್ಥಿಕ ಭವಿಷ್ಯವನ್ನು ಸುಷ್ಟಿಸಲು ಹೂಡಿಕೆಗೆ ಈ ಯೋಜನೆಯನ್ನ ಆಯ್ಕೆ ಮಾಡಿಕೊಳ್ಳುತ್ತಾರೆ.
ಹೆಣ್ಣು ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ
ಸುಕನ್ಯ ಸಮೃದ್ಧಿ ಯೋಜನೆಯು ಸರ್ಕಾರದ ಬೆಂಬಲಿತ ಉಳಿತಾಯ ಯೋಜನೆಯಾಗಿದೆ. ಇದು ಪ್ರತ್ಯೆಕವಾಗಿ ಹೆಣ್ಣು ಮಕ್ಕಳಿಗಾಗಿ ಇರುವ ಯೋಜನೆ ಇದಾಗಿದೆ. ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಪೋಷಕರು ತಮ್ಮ ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆಯನ್ನ ತೆರಯಬಹುದು. ಬ್ಯಾಂಕ್‌ಗಳು ಅಥವಾ ಪೋಸ್ಟ್ ಆಫೀಸ್‌ಗಳಲ್ಲಿ ಪ್ರತೀ ಹೆಣ್ಣು ಮಗಳಿಗೆ ಒಂದು ಖಾತೆಯನ್ನ ತೆರೆಯಬಹುದು. ಅಂದರೆ ಒಂದು ಕುಟುಂಬದ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಅವಕಾಶ ಇರುತ್ತದೆ. ಹೆಣ್ಣುಮಗುವಿಗೆ 18 ವರ್ಷ ತುಂಬುವ ವರೆಗೆ ಪೋಷಕರು ಇದರಲ್ಲಿ ಹೂಡಿಕೆ ಮಾಡಬಹುದು. ಹಾಗೆ ಈ ಖಾತೆಯನ್ನ ನಿರ್ವಹಿಸಬಹುದು. ಈ ಯೋಜನೆಯು ಹೆಣ್ಣು ಮಗುವಿನ ಶಿಕ್ಷಣ ಮತ್ತು ಮದುವೆಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ.

ಸುಕನ್ಯಾ ಸಮೃದ್ಧಿ ಯೋಜನೆಯು ಕೆಲವು ಪ್ರಮುಖ ಲಕ್ಷಣಗಳನ್ನ ಒಳಗೊಂಡಿದೆ. ಈ ಬಗ್ಗೆ ಇಲ್ಲಿ ತಿಳಿಯಿರಿ.
ಅರ್ಹತೆ ಮಾನದಂಡ: ಈ ಯೋಜನೆಯಲ್ಲಿ ಹೆಣ್ಣು ಮಗುವಿನ ಪೋಷಕರು ಅಥವಾ ಪಾಲಕರು ಈ ಖಾತೆಯನ್ನ ತೆರೆಯಬಹುದು. ಖಾತೆ ತೆರೆಯಲು ಹೆಣ್ಣು ಮಗುವಿಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಅಥವಾ ಗರಿಷ್ಠ 10 ಇರಬೇಕು.
ಬಡ್ಡಿ ದರ: ಈ ಯೋಜನೆಯ ಮೂಲಕ ನೀವು ಆಕರ್ಷಕ ಬಡ್ಡಿದರವನ್ನ ಪಡೆಯಬಹುದು. ಈ ಬಡ್ಡಿದರಗಳನ್ನ ಸರ್ಕಾರ ನಿಗದಿಪಡಿಸಿರುತ್ತದೆ ಜೊತೆಗೆ ಪ್ರತೀ ತ್ರೈಮಾಸಿಕಕ್ಕೆ ಇದು ಪರಿಷ್ಕರಣೆಯಾಗುತ್ತದೆ. ಅಲ್ಲದೆ ಸಾಮಾನ್ಯ ಉಳಿತಾಯ ಖಾತೆ ಅಥವಾ ಸ್ಥಿರ ಠೇವಣಿಗಿಂತ ಇದರಲ್ಲಿ ಬಡ್ಡಿ ದರಗಳು ಸಾಮಾನ್ಯವಾಗಿ ಹೆಚ್ಚಿರುತ್ತದೆ. ಬಡ್ಡಿಯನ್ನು ವಾರ್ಷಿಕವಾಗಿ ಸಂಯೋಜನೆ ಮಾಡಿ ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆಗೆ ಜಮಾ ಮಾಡಲಾಗುತ್ತದೆ.
ಕನಿಷ್ಠ ಮತ್ತು ಗರಿಷ್ಠ ಠೇವಣಿ ಮಿತಿಗಳು
ಖಾತೆಯನ್ನು ಸಕ್ರಿಯವಾಗಿರಿಸಲು ವರ್ಷಕ್ಕೆ ಕನಿಷ್ಠ 250 ರೂ. ಠೇವಣಿ ಇಡಬೇಕು. ಹಾಗೆ ಗರಿಷ್ಠ ಠೇವಣಿ ಮಿತಿ ವರ್ಷಕ್ಕೆ 1.5 ಲಕ್ಷ ಇರುತ್ತದೆ. ಠೇವಣಿಗಳನ್ನು ವಾರ್ಷಿಕ ಮಿತಿಯೊಳಗೆ ಅನುಕೂಲಕ್ಕೆ ಅನುಗುಣವಾಗಿ ಏಕರೂಪದಲ್ಲಿ ಅಥವಾ ಮಾಸಿಕ ಅಥವಾ ತ್ರೈಮಾಸಿಕ ಆಧಾರದ ಮೇಲೆ ಮಾಡಬಹುದು. ಇನ್ನು ಈ ಖಾತೆಯನ್ನು ತೆರೆದ ದಿನಾಂಕದಿಂದ ಮೊದಲ 14 ವರ್ಷಗಳವರೆಗೆ ಈ ಠೆವಣಿ ಅವಧಿ ಇರುತ್ತದೆ. 14 ವರ್ಷಗಳು ಪೂರ್ಣಗೊಂಡ ನಂತರ, ಹೆಚ್ಚಿನ ಕೊಡುಗೆಗಳ ಅಗತ್ಯವಿಲ್ಲ, ಆದರೆ ಖಾತೆಯು ಬಡ್ಡಿಯನ್ನು ಗಳಿಸುತ್ತಲೇ ಇರುತ್ತದೆ.
ಹೆಣ್ಣು ಮಗುವಿಗೆ 21 ವರ್ಷ ತುಂಬಿದಾಗ ಇಲ್ಲಿ ಹೂಡಿಕೆ ಮಾಡಿದ ಹಣವನ್ನ ಹಿಂಪಡೆಯಬಹುದು. ಅದ್ರೂ ಕೂಡ, ನಿರ್ದಿಷ್ಟ ಉದ್ದೇಶಗಳಿಗಾಗಿ ಹಿಂದೆ ಹಿಂಪಡೆಯುವಿಕೆಗಳನ್ನು ಮಾಡಬಹುದು. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ, 50% ವರೆಗೆ ಹಣವನ್ನ ಹಿಂತೆಗೆದುಕೊಳ್ಳಬಹುದು. ಈ ಹಿಂಪಡೆಯುವಿಕೆಯನ್ನು ಸಾಮಾನ್ಯವಾಗಿ ಹೆಣ್ಣು ಮಗುವಿನ ಉನ್ನತ ಶಿಕ್ಷಣ ಅಥವಾ ಮದುವೆಯ ಉದ್ದೇಶಕ್ಕಾಗಿ ಅನುಮತಿಸಲಾಗುತ್ತದೆ. 21 ವರ್ಷಗಳು ಪೂರ್ಣಗೊಂಡ ನಂತರ, ಸಂಪೂರ್ಣ ಕಾರ್ಪಸ್ ಅನ್ನು ಹೆಣ್ಣು ಮಗು ಹಿಂಪಡೆಯುವ ಅವಕಾಶ ಇರುತ್ತದೆ.
ಯೋಜನೆಯ ತೆರಿಗೆ ಪ್ರಯೋಜನಗಳು
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಡಿದ ಠೇವಣಿಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹತೆ ಪಡೆಯುತ್ತವೆ. ಇದರಲ್ಲಿ ವರ್ಷಕ್ಕೆ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯು ತೆರಿಗೆ-ಮುಕ್ತ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತವನ್ನ ನೀಡುತ್ತದೆ. ಈ ಠೇವಣಿಯ ಮೇಲಿನ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತವು ಸಂಪೂರ್ಣ ತೆರಿಗೆ ಮುಕ್ತವಾಗಿದೆ. ಜೊತೆಗೆ ಇದು ಹೆಚ್ಚುವರಿ ಆರ್ಥಿಕ ಪ್ರಯೋಜನಗಳನ್ನ ಕೂಡ ನೀಡುತ್ತದೆ. ಈ ಯೋಜನೆಯು ಟಿಡಿಎಸ್‌ನಿಂದ ವಿನಾಯಿತಿ ಪಡೆದಿದೆ, ಅಂದರೆ ಇದರಲ್ಲಿ ಗಳಿಸಿದ ಬಡ್ಡಿಯನ್ನು ಯಾವುದೇ ಕಡಿತವಿಲ್ಲದೆ ಕ್ರೆಡಿಟ್ ಮಾಡಲಾಗುತ್ತದೆ.
ಇನ್ನು ಈ ಖಾತೆಯನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಒಂದು ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಯಿಂದ ಇನ್ನೊಂದಕ್ಕೆ ವರ್ಗಾವಣೆ ಮಾಡಬಹುದು. ಇದು ಖಾತೆದಾರರಿಗೆ ಸಾಕಷ್ಟು ಪ್ರಯೋಜನಗಳನ್ನ ನೀಡುತ್ತದೆ. ಹೆಣ್ಣು ಮಕ್ಕಳು 21 ವರ್ಷ ತುಂಬುವ ಮೊದಲು ಮದುವೆಯಾದರೆ, ಆಕೆಗೆ 18 ವರ್ಷ ತುಂಬಿದ ನಂತರ ಮಾತ್ರ ಖಾತೆಯನ್ನು ಮುಕ್ತಾಯ ಅವಧಿಯ ಮೊದಲು ಈ ಖಾತೆಯನ್ನು ಮುಚ್ಚಬಹುದು.
ಹೆಣ್ಣು ಮಗುವಿನ ಭವಿಷ್ಯವನ್ನ ಭದ್ರಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದು ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷನ ಮತ್ತು ಮದುವೆಗೆ ಧನಸಹಾಯ ಮಾಡುತ್ತದೆ. ಈ ಯೋಜನೆಯು ಹೆಣ್ಣು ಮಗುವಿನ ಭವಿಷ್ಯಕ್ಕಾಗಿ, ಆರ್ಥಿಕ ಶಿಸ್ತು ಮತ್ತು ಯೋಜನೆಯನ್ನು ಉತ್ತೇಜಿಸುವ ಪೋಷಕರಿಗೆ ಉಳಿತಾಯ ಮಾಡಲು ಪ್ರೋತ್ಸಾಹಿಸುತ್ತದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications