ನವದೆಹಲಿ, ಮಾರ್ಚ್ 23: ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಒಂದು. ಇದು ಹೆಣ್ಣುಮಕ್ಕಳಿಗಾಗಿ ಇರುವ ಯೋಜನೆ. ಇದು ಸರ್ಕಾರಿ ಬೆಂಬಲಿತ ಸಣ್ಣ ಠೇವಣಿ ಯೋಜನೆಯಾಗಿದೆ. ಇದು ಹೆಣ್ಣುಮಕ್ಕಳ ಆರ್ಥಿಕ ಅಗತ್ಯ ರೂಪಿಸುವ ಯೋಜನೆ. ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ಮೂಲಕ ನಿಮ್ಮ ಹೆಣ್ಣು ಮಗುವಿಗೆ ಉಜ್ವಲ ಭವಿಷ್ಯವನ್ನು ಭದ್ರಪಡಿಸುವ ಮತ್ತು ಹೆಣ್ಣುಅಗುವಿನ ಕಲ್ಯಾಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಸೆಕ್ಷನ್ 800 ಸಿ ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನಗಳನ್ನೂ ಹೊಂದಿದೆ. ರಿಟರ್ನ್ಸ್ ಕೂಡ ತೆರಿಗೆ ಮುಕ್ತವಾಗಿದೆ.
ಇನ್ನು ಸರ್ಕಾರವು ಪ್ರತಿ ತ್ರೈಮಾಸಿಕಕ್ಕೊಮ್ಮೆ ಸುಕನ್ಯಾ ಸಮೃದ್ಧಿ ಯೋಜನೆ (SSY) ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ.

ಏಪ್ರಿಲ್-ಜೂನ್ 2024 ತ್ರೈಮಾಸಿಕದ ಬಡ್ಡಿ ದರದ ನವೀಕರಣ ವಿವರ:
ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವು ಹಿಂದಿನ ತ್ರೈಮಾಸಿಕದಷ್ಟೇ ಇದ್ದು ಯಾವುದೇ ಬದಲಾವಣೆ ಆಗಿಲ್ಲ. ಹೀಗಾಗಿ ಏಪ್ರಿಲ್-ಜೂನ್ 2024 ತ್ರೈಮಾಸಿಕದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಬಡ್ದಿದರವು 8.2% ರಷ್ಟಿದೆ.
ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾರು ತೆರೆಯಬಹುದು?
ಯಾವುದೇ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನದ ನಂತರ ಆಕೆಗೆ 10 ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಆಕೆಯ ಪೋಷಕರು ಅಥವಾ ಕಾನೂನಿನ ಅಡಿಯರುವಂತೆ ಅವರ ಪಾಲಕರು ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಗರಿಷ್ಠ ಇಬ್ಬರು ಹೆಣ್ಣು ಮಕ್ಕಳ ಖಾತೆಗಳನ್ನು ತೆರೆಯಲು ಅವರಿಗೆ ಅನುಮತಿ ಇದೆ. ಆದರೆ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ ಕೇವಲ ಒಂದು SSY ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ.
SSY ಖಾತೆಯನ್ನು ತೆರೆಯಲು ಅಗತ್ಯವಿರುವ ದಾಖಲೆಗಳು :
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಗುರುತಿನ ಪುರಾವೆಯ ಪ್ರತಿ
- ಹೆಣ್ಣು ಮಗುವಿನ ಜನನ ಪ್ರಮಾಣಪತ್ರದ ಪ್ರತಿ
- RBIನ KYCಯ ನೀತಿಯ ಪ್ರಕಾರ ನಿವಾಸದ ಪುರಾವೆ
ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯ ಅಕಾಲಿಕವಾಗಿ ಕ್ಲೋಸ್:
ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಕೆಲವು ಸಂದರ್ಭಗಳಲ್ಲಿ ಮಾತ್ರ ಅಕಾಲಿಕವಾಗಿ ಮುಚ್ಚಬಹುದು ಅವುಗಳೆಂದರೆ,
ಖಾತೆದಾರ ಮಗುವಿನ ಮರಣದ ಸಂದರ್ಭದಲ್ಲಿ
ಖಾತೆದಾರರ ಜೀವಕ್ಕೆ ತೊಂದರೆಯಾಗುವಂತಹ ತೀವ್ರ ವೈದ್ಯಕೀಯ ಪರಿಸ್ಥಿತಿಗಳು
ಖಾತೆದಾರರಿಗೆ ಅನಗತ್ಯ ತೊಂದರೆಯನ್ನು ಉಂಟುಮಾಡುವ ಪೋಷಕರ ಮರಣದಂತಹ ತೀವ್ರ ಸಹಾನುಭೂತಿಯ ಕಾರಣಗಳ ಸಂದರ್ಭಗಳಲ್ಲಿ
ಇಷ್ಟು ಮಾತ್ರವಲ್ಲದೇ ಖಾತೆಯನ್ನು ತೆರೆದ ದಿನಾಂಕದಿಂದ ಐದು ವರ್ಷಗಳು ಪೂರ್ಣಗೊಳ್ಳುವ ಮೊದಲು ಈ ಸಂದರ್ಭಗಳಲ್ಲಿ ಖಾತೆಯನ್ನು ಅಕಾಲಿಕವಾಗಿ ಮುಚ್ಚಲು ಅನುಮತಿಸಲಾಗುವುದಿಲ್ಲ
ಠೇವಣಿ ಮತ್ತಿತರ ವಿವರ:
ಸುಕನ್ಯಾ ಸಮೃದ್ಧಿ ಖಾತೆಗೆ ಕನಿಷ್ಠ 250 ರೂ. ಠೇವಣಿ ಇಡಬೇಕಾದ ಅಗತ್ಯವಿದೆ. ಗರಿಷ್ಟ 1.5 ಲಕ್ಷ ರೂ. ವರೆಗೆ ಠೇವಣಿ ಇಡಬಹುದು.ಠೇವಣಿ ಮಾಡಲು ವಿಫಲವಾದರೆ ವಾರ್ಷಿಕ ರೂ 50 ದಂಡವನ್ನು ವಿಧಿಸಲಾಗುತ್ತದೆ. ಖಾತೆಯು ಪ್ರಾರಂಭವಾದ ದಿನಾಂಕದಿಂದ ಸುಕನ್ಯಾ ಸಮೃದ್ಧಿ ಖಾತೆಯು ಖಾತೆಯನ್ನು ತೆರೆದ ದಿನಾಂಕದಿಂದ 21 ವರ್ಷಗಳ ನಂತರ ಅಥವಾ 18 ವರ್ಷಗಳನ್ನು ತಲುಪಿದ ನಂತರ ಹೆಣ್ಣು ಮಗುವಿನ ಮದುವೆಯ ಸಮಯದಲ್ಲಿ (1 ತಿಂಗಳ ಮೊದಲು ಅಥವಾ ಮದುವೆಯ ದಿನಾಂಕದ 3 ತಿಂಗಳ ನಂತರ) ಮೆಚುರಿಟಿ ಆಗುತ್ತದೆ. ಮಗುವಿನ ಉನ್ನತ ಶಿಕ್ಷಣದ ವೆಚ್ಚಗಳ ಅಗತ್ಯವನ್ನು ಪೂರೈಸಲು ಶೇ 50 ರಷ್ಟು ಉಪಯೋಗಿಸಬಹುದು. ನಂತರ ಆಕೆ 18 ವರ್ಷಕ್ಕೆ ತಲುಪಿದ ನಂತರ ಉಳಿದ ಶೇ 50 ರಷ್ಟು ಹಣ ಅವರ ಕೈ ಸೇರುತ್ತದೆ.


Click it and Unblock the Notifications