Super Moon: ವರ್ಷದ ಮೊದಲ ಸೂಪರ್‌ ಮೂನ್‌! ಸಂಜೆ ಆಕಾಶ ನೋಡದನ್ನ ಮಿಸ್‌ ಮಾಡ್ಬೇಡಿ

2026ರ ಮೊದಲ ಸೂಪರ್‌ಮೂನ್ ಜನವರಿ 3, ಶನಿವಾರ ರಾತ್ರಿ ಆಕಾಶದಲ್ಲಿ ಕಾಣಿಸಿಕೊಳ್ಳಲಿದೆ. ಅಂದರೆ ಈ ವರ್ಷದ ಮೊದಲ ಸೂಪರ್‌ ಮೂನ್‌ (Super Moon) ಇಂದು ಗೋಚರಿಸಲಿದೆ. ಈ ಸಂದರ್ಭದಲ್ಲಿ ಚಂದ್ರನು ಶೇ 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಮತ್ತು ಶೇ 14%ರಷ್ಟು ದೊಡ್ಡದಾಗಿ ಗೋಚರಿಸುತ್ತದೆ. ಭಾರತದಲ್ಲಿ ಸೂರ್ಯಾಸ್ತ್ರದ ನಂತರ ಸಂಜೆ ಇದನ್ನು ಸ್ಪಷ್ಟವಾಗಿ ವೀಕ್ಷಿಸಬಹುದು.

ವರ್ಷದ ಮೊದಲ ಸೂಪರ್‌ ಮೂನ್‌! ಸಂಜೆ ಆಕಾಶ ನೋಡದನ್ನ ಮಿಸ್‌ ಮಾಡ್ಬೇಡಿ

ಸೂಪರ್‌ಮೂನ್‌ ಎಂದರೇನು?
ಸೂಪರ್‌ ಮೂನ್‌ ಎಂದರೆ ಪೂರ್ಣ ಚಂದ್ರನು ಭೂಮಿಗೆ ಅತ್ಯಂತ ಹತ್ತಿರ ಬರುವ ಸಮಯದಲ್ಲಿ ಕಾಣಿಸಿಕೊಳ್ಳುವುದಾಗಿದೆ. ಇದರಿಂದ ಚಂದ್ರ ಸಾಮಾನ್ಯ ಕಾಣುವುದಕ್ಕುಂದ 14% ದೊಡ್ಡದಾಗಿ ಮತ್ತು 30% ಹೆಚ್ಚಿನ ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತದೆ.

ಇನ್ನು ಈ ಸಮಯದಲ್ಲಿ ಚಂದ್ರನು (Moon) ಭೂಮಿಯಿಂದ ಸುಮಾರು 3,62,641 ಕಿಲೋಮೀಟರ್ ದೂರದಲ್ಲಿ ಇರಲಿದ್ದಾನೆ. ಇದೇ ಸಂದರ್ಭದಲ್ಲಿ ಚಂದ್ರನ ಗಾತ್ರ ಮತ್ತು ಪ್ರಕಾಶವನ್ನು ಗಣನೀಯವಾಗಿ ಹೆಚ್ಚಾಗುತ್ತದೆ. ಅಲ್ಲದೇ ಪ್ರತೀ ವರ್ಷವೂ ಈ ಸಂದರ್ಭ ಎಲ್ಲರ ಗಮನ ಸೆಳೆಯುತ್ತದೆ.

ಪೂರ್ಣ ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಸಮೀಪಕ್ಕೆ ಬರುವ ಹಂತವನ್ನು 'ಸೂಪರ್‌ಮೂನ್' ಎನ್ನುತ್ತಾರೆ. ಇದನ್ನು ವೈಜ್ಞಾನಿಕವಾಗಿ 'ಪೆರಿಜಿ' ಎಂದು ಪರಿಗಣಿಸಲಾಗಿದೆ. ಈ ವಿಶಿಷ್ಟ ಸಂದರ್ಭದಲ್ಲಿ, ಚಂದ್ರನು ಸೂರ್ಯನಿಗೆ ವಿರುದ್ಧ ದಿಕ್ಕಿನಲ್ಲಿ ಇರುವುದರಿಂದ, ಭೂಮಿಗೆ ಹತ್ತಿರವಿರುವ ಚಂದ್ರನ ಭಾಗವು ಸಂಪೂರ್ಣವಾಗಿ ಪ್ರಕಾಶಮಾನವಾಗಿ ಗೋಚರಿಸುತ್ತದೆ. ಇದರಿಂದ ಚಂದ್ರನು ಸಾಮಾನ್ಯ ಹುಣ್ಣಿಮೆ ಸಂದರ್ಭದಲ್ಲಿ ಕಾಣುವುದಕ್ಕಿಂತಲೂ ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತಾನೆ.

ಯಾವಾಗ ಮತ್ತು ಎಲ್ಲಿ ಕಾಣಿಸಿಕೊಳ್ಳುತ್ತದೆ?
ಇನ್ನು ಈ ಸೂಪರ್‌ ಮೂನ್‌ ಅನ್ನು ಜನವರಿ 3 ರಂದು ಸಂಜೆ ವೇಳೆ ಪ್ರಪಂಚದಾದ್ಯಂತ ಆಕಾಶ ವೀಕ್ಷಕರು ಸೂಪರ್‌ ಮೂನ್‌ ನೋಡಬಹುದು. ಭಾರತದಲ್ಲಿ ಚಂದ್ರೋದಯದಲಿ ಸಮಯದಲ್ಲಿ ಜನವರಿ 3 ರಂದು ಕಾಣಬಹುದಗಿದೆ. ಸೂರ್ಯಾಸ್ತದ ನಂತರ ಭಾರತೀಯ ಸಮಯ ಸಂಜೆ 5:45 ರಿಂದ 6 ಗಂಟೆಯವರೆಗೆ ಇದನ್ನು ನೋಡಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಚಂದ್ರನು 362,642 ಕಿ.ಮೀ ದೂರದಿಂದ ಕಾಣಿಸಿಕೊಳ್ಳುತ್ತಾನೆ ಎಂದು ನಾಸಾ ತಿಳಿಸಿದೆ.

ಜನವರಿ ತಿಂಗಳ ಈ ಹುಣ್ಣಿಮೆಯನ್ನು "ವೂಲ್ಫ್ ಮೂನ್" ಎಂದೂ ಕರೆಯಲಾಗುತ್ತದೆ. ಉತ್ತರ ಗೋಳಾರ್ಧದ ಜಾನಪದದ ಪ್ರಕಾರ, ಚಳಿಗಾಲದ ದೀರ್ಘ ರಾತ್ರಿಗಳಲ್ಲಿ ತೋಳಗಳ ಕೂಗುವಿಕೆಯಿಂದ ಈ ಹೆಸರು ಬಂದಿದೆ ಎಂದು ಹೇಳಲಾಗಿದೆ. ಇದನ್ನು "ಮೂನ್ ಆಫ್ಟರ್ ಯೂಲೆ" ಎಂದೂ ಗುರುತಿಸಲಾಗುತ್ತದೆ. ಈ ಸೂಪರ್‌ಮೂನ್‌ ಅನ್ನು ಯಾವುದೇ ವಿಶೇಷ ಉಪಕರಣಗಳಿಲ್ಲದೆ ನೋಡಬಹುದು. ಆದರೆ ಇನ್ನೂ ಸೂಕ್ಷ್ಮವಾಗಿ ವೀಕ್ಷಿಸಬೇಕೆಂದರೆ ದೂರದರ್ಶಕ ಅಥವಾ ದೂರದೃಷ್ಟಿ ಬಳಸುವುದು ಉತ್ತಮ.

ಇನ್ನು 2026ರಲ್ಲಿ ಒಟ್ಟು ಮೂರು ಸೂಪರ್‌ ಮೂನ್‌ಗಳಿವೆ. ಅದರಲ್ಲಿ ಒದು ಇಂದು ಅಂದರೆ ಜನವರಿ 3 ರಂದು ಸಂಭವಿಸುತ್ತದೆ. ಉಳಿದ ಎರಡು ಸೂಪರ್‌ ಮೂನ್‌ಗಳು ನವೆಂಬರ್‌ 24 ಮತ್ತು ಡಿಸೆಂಬರ್‌ 24 ರಂದು ಸಂಭವಿಸಲಿದೆ ಎಂದು ವರದಿಯಾಗಿದೆ. ಸದ್ಯ ಇಂದು ಸಂಭವಿಸುವ ಸೂಪರ್‌ ಮೂನ್‌ ವರ್ಷದ ಮೊದಲದ್ದಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+