ಬೆಂಗಳೂರು, ಸೆಪ್ಟೆಂಬರ್ 26: 15,000 ಕೋಟಿ ರೂ. ಸಾಲವನ್ನು ಎದುರಿಸುತ್ತಿರುವ ಎಜ್ಯು-ಟೆಕ್ ಸಂಸ್ಥೆಯಾದ ಬೈಜೂಸ್ , ಬಿಸಿಸಿಐಯೊಂದಿಗಿದ್ದ ತನ್ನ ಬಾಕಿಯನ್ನು ಮಾತ್ರ ಏಕೆ ಇತ್ಯರ್ಥಪಡಿಸಲು ನಿರ್ಧರಿಸಿದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಬಿಸಿಸಿಐ ಗೆ ಬಾಕಿ ಹಣ ಪಾವತಿ ಪ್ರಕರಣ ಸಂಬಂಧಿಸಿದಂತೆ ಬೈಜುಸ್ ಕಂಪನಿ ವಿರುದ್ದ ದಿವಾಳಿ ಪ್ರಕ್ರಿಯೆಯನ್ನು ರದ್ದುಪಡಿಸಿದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಕ್ರಮವನ್ನು ಸರ್ವೋಚ್ಚ ನ್ಯಾಯಾಲಯ ಟೀಕಿಸಿತು.
158.9 ಕೋಟಿ ರೂ. ಬಾಕಿ ಪಾವತಿ ಸಂಬಂಧ ಸಂಬಂಧ ಬಿಸಿಸಿಐ, ಬೈಜುಸ್ ಸಂಸ್ಥೆ ವಿರುದ್ದ ದಿವಾಳಿ ಪ್ರಕ್ರಿಯೆಗೆ ನಡೆಸಲು ಮುಂದೆ ಬಂದಿತ್ತು. ಹಣ ಪಾವತಿ ಒಪ್ಪಿಗೆ ನೀಡಿದ್ದ ಮೇಲ್ಮನವಿ ನ್ಯಾಯಮಂಡಳಿ ನಂತರ ದಿವಾಳಿ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು. ಆಗಸ್ಟ್ 2 ರಂದು, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಬೈಜು ಮತ್ತು. ಬಿಸಿಸಿಐ ನಡುವೆ 158.9 ಕೋಟಿ ರೂ. ಮೊತ್ತದ ಪರಿಹಾರವನ್ನು ಅನುಮೋದಿಸಿತು, ಇದು ಸಂಸ್ಥಾಪಕ ಬೈಜು ರವೀಂದ್ರನ್ ನಿಯಂತ್ರಣವನ್ನು ಮರಳಿ ಪಡೆಯಲು ಅವಕಾಶ ಮಾಡಿಕೊಟ್ಟಿತು.

ಆದರೆ ಈ ಪರಿಹಾರವು ತಾತ್ಕಾಲಿಕವಾಗಿತ್ತು, ಯಾಕೆಂದರೆ ಅಮೇರಿಕಾ ಮೂಲದ ಸಾಲದಾತ ಸಂಸ್ಥೆಯಾಗಿರುವ ಗ್ಲಾಸ್ ಟ್ರಸ್ಟ್ ಕಂಪನಿ ಈ ಮೇಲ್ಮನವಿಯ ಆದೇಶ ನಂತರ ಇದನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿತ್ತು. ನಂತರ ಸುಪ್ರೀಂ ಕೋರ್ಟ್ ಆಗಸ್ಟ್ 14 ರಂದು NCLT ನ ನಿರ್ಧಾರವನ್ನು ತಡೆಹಿಡಿಯಿತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅಧ್ಯಕ್ಷತೆಯ ತ್ರಿಸದಸ್ಯ ನ್ಯಾಯಪೀಠವು, ನ್ಯಾಯಮಂಡಳಿಯೂ ಸರಿಯಾದ ನಿರ್ಧಾರ ಕೈಗೊಂಡಿಲ್ಲ ಎಂದು ಅಭಿಪ್ರಾಯಪಟ್ತಿತು. ಇದಲ್ಲದೇ ಇತ್ಯರ್ಥ ಮೊತ್ತವನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಇಡುವಂತೆ ಬಿಸಿಸಿಐಗೆ ನ್ಯಾಯಾಲಯ ಸೂಚಿಸಿದೆ.
ಕಂಪನಿಯು ಬಹುದೊಡ್ಡ ಮೊತ್ತ ಸಾಲದಲ್ಲಿರುವಾಗ ಒಬ್ಬ ಪ್ರವರ್ತಕ ನನಗೆ ಬಾಕಿ ಹಣ ಪಾವತಿಸಲು ಸಿದ್ದವಿರುವುದಾಗಿ ಹೇಳಿರುವುದರಿಂದ ಒಬ್ಬ ಸಾಲಗಾರ (ಬಿಸಿಸಿಐ) ಹೊರ ನಡೆದಿದ್ದಾರೆ. ಇಲ್ಲಿ ಬಿಸಿಸಿಐ ಒಂದರ ಪ್ರಕರಣವನ್ನೇ ಆಯ್ಕೆ ಮಾಡಿಕೊಂಡು ಇತ್ಯರ್ಥಪಡಿಸುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಕಳವಳ ವ್ಯಕ್ತಪಡಿಸಿದರು. ಬೈಜುಸ್ ಬಿಸಿಸಿಐನೊಂದಿಗೆ ಮಾತ್ರವೇ ಸಾಲಗಾರನಾಗಿದೆಯೇ ಮತ್ತು ಇತರ ಸಾಲಗಾರರನ್ನು ಏಕೆ ಪರಿಗಣಿಸುವುದಿಲ್ಲ ಎಂದು ಅವರು ನ್ಯಾಯಪೀಠ ಪ್ರಶ್ನಿಸಿದೆ. ತೀರ್ಪು ನೀಡುವ ಮೊದಲು ಹೆಚ್ಚಿನ ಪರಿಶೀಲನೆಗಾಗಿ ಪ್ರಕರಣವನ್ನು ಮೇಲ್ಮನವಿ ನ್ಯಾಯಾಧಿಕರಣಕ್ಕೆ ಕಳುಹಿಸಬಹುದಿತ್ತು ಎಂದು ನ್ಯಾಯಾಲಯ ಹೇಳಿದೆ.
ಗುರುವಾರ ವಿಚಾರಣೆಯನ್ನು ಪುನರಾರಂಭಿಸಲಿರುವ ನ್ಯಾಯಪೀಠವು, ಪ್ರಕರಣವನ್ನು ದಿವಾಳಿತನ ಮೇಲ್ಮನವಿ ನ್ಯಾಯಮಂಡಳಿಗೆ ಹಿಂತಿರುಗಿಸುವುದಾಗಿ ಸುಳಿವು ನೀಡಿದೆ. ಹಿರಿಯ ವಕೀಲರಾದ ಅಭಿಷೇಕ್ ಸಿಂಘ್ವಿ ಮತ್ತು ಎನ್‌ಕೆ ಕೌಲ್ ಅವರು ಬೈಜು ಪರವಾಗಿ ವಾದಿಸಿದರೆ, ಕಪಿಲ್ ಸಿಬಲ್ ಮತ್ತು ಶ್ಯಾಮ್ ದಿವಾನ್ ಯುಎಸ್ ಸಂಸ್ಥೆಯನ್ನು ಪ್ರತಿನಿಧಿಸಿದರು.
ಬೈಜೂಸ್ 2019 ರಿಂದ BCCI ಯೊಂದಿಗೆ ಪ್ರಾಯೋಜಕತ್ವದ ಒಪ್ಪಂದವನ್ನು ಹೊಂದಿತ್ತು, ಇದು ಭಾರತೀಯ ಕ್ರಿಕೆಟ್ ತಂಡದ ಕಿಟ್‌ನಲ್ಲಿನ ವಿಶೇಷ ಬ್ರ್ಯಾಂಡಿಂಗ್‌ಗಾಗಿ ಪಾವತಿಸಬೇಕಾದ ಅಗತ್ಯವಿದೆ. 2022 ರವರೆಗೆ ಪಾವತಿಗಳನ್ನು ಮಾಡಲಾಗಿದ್ದರೂ, ನಂತರದ 158.9 ಕೋಟಿ ರೂ.ಪಾವತಿಯನ್ನು ಬೈಜೂಸ್ ಬಾಕಿ ಉಳಿಸಿಕೊಂಡಿತ್ತು.


Click it and Unblock the Notifications