ವಾಲೆಂಟೈನ್ಸ್ ಡೇ ಮತ್ತೆ ಬಂದಿದೆ ಒಂದಷ್ಟು ಪ್ರೇಮಿಗಳು ಚಾಕಲೇಟ್ , ಟೆಡ್ಡಿಬೇರ್ , ಗುಲಾಬಿ ಹೂ ಅಂತಾ ತಲೆಕೆಡಿಸಿಕೊಂಡಿದ್ದರೆ ನಿಮ್ಮ ಪ್ಲ್ಯಾನ್ ಏನಿದೆ. ಪ್ರೇಮಿಗಳ ದಿನವು ಪ್ರೀತಿ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸಲು ಇರುವ ಪ್ರೀತಿಯ ದಿನ. ಈ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಜೀವನ ಸಂಗಾತಿಗೆ ಉಡುಗೊರೆಗಳನ್ನು ನೀಡುವುದು ಮರೆಯಬೇಡಿ. ಆದರೆ, ಈ ವರ್ಷ ನೀವು ಅವರಿಗೆ ಕೇವಲ ಭೌತಿಕ ಉಡುಗೊರೆಯನ್ನು ನೀಡುವ ಬದಲು, ಅವರಿಗೆ ಆರ್ಥಿಕ ಭವಿಷ್ಯ ಸದೃಢಪಡಿಸುವ ಉಡುಗೊರೆ ನೀಡುವ ಬಗ್ಗೆ ಏಕೆ ಯೋಚಿಸಬಾರದು?
ಹಣಕಾಸಿನ ಉಡುಗೊರೆಗಳು ನಿಮ್ಮ ಪ್ರೀತಿಪಾತ್ರರಿಗೆ, ನೀವು ಅವರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ತೋರಿಸಲು ಒಂದು ಉತ್ತಮ ಮಾರ್ಗವಾಗಿದೆ. ಇದು ಅವರಿಗೆ ಆರ್ಥಿಕವಾಗಿ ಹೆಚ್ಚು ಸುರಕ್ಷಿತವಾಗಲು ಸಹಾಯ ಮಾಡುತ್ತದೆ ಮತ್ತು ಅವರ ಭವಿಷ್ಯಕ್ಕಾಗಿ ಸಹಾಯ ಮಾಡುತ್ತದೆ.

ನಿಮ್ಮ ಸಂಗಾತಿಯು ಆರ್ಥಿಕವಾಗಿ ಸಬಲರಾಗಲು ಅವರ ಹೆಸರಿನಲ್ಲಿ ಹೂಡಿಕೆ ಮಾಡಬಹುದು ಅಥವಾ, PPF ಖಾತೆಯನ್ನು ತೆರೆಯಬಹುದು, ಉಳಿತಾಯ ಯೋಜನೆಗಳಲ್ಲಿ ಸ್ವಲ್ಪ ಹಣವನ್ನು ಹಾಕಬಹುದು ಅಥವಾ ಮ್ಯೂಚುವಲ್ ಫಂಡ್ SIP ತೆರೆಯಬಹುದು ಹೀಗೆ ಅನೇಕ ಉಡುಗೊರೆಗಳನ್ನು ಕೊಟ್ಟು ನಿಮ್ಮ ಸಂಗಾತಿಯನ್ನು ಸಂತೋಷದ ಜೊತೆಗೆ ಆರ್ಥಿಕವಾಗಿ ಸದೃಢರನ್ನಾಗಿಯೂ ಮಾಡಬಹುದು.
ಲೈಫ್ ಇನ್ಯೂರೆನ್ಸ್
ಅನಿರೀಕ್ಷಿತ ಸವಾಲುಗಳಿಂದ ಕೂಡಿರುವುದೇ ಜೀವನ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕಷ್ಟಕರವಾದ ಸನ್ನಿವೇಶಗಳು ಎದುರಾಗುತ್ತವೆ. ಈ ಸವಾಲುಗಳು ನಮ್ಮನ್ನು ದುರ್ಬಲಗೊಳಿಸಬಹುದು ಅಥವಾ ಬಲಪಡಿಸಬಹುದು. ಪ್ರೀತಿಪಾತ್ರರ ಅಗಲಿಕೆ , ಅನಾರೋಗ್ಯ ನಮ್ಮ ಜೀವನವನ್ನು ಖಾಲಿ ಮಾಡುವುದಲ್ಲದೇ, ಆರ್ಥಿಕವಾಗಿ ಸವಾಲು ಸೃಷ್ಟಿಯಾಗುತ್ತವೆ. ಹೀಗಿರುವಾಗ ಪ್ರೇಮಿಗಳ ದಿನಕ್ಕೆ ಲೈಫ್ ಇನ್ಯೂರೆನ್ಸ್ ಒಂದು ವಿಶಿಷ್ಟ ಮತ್ತು ಅರ್ಥಪೂರ್ಣ ಉಡುಗೊರೆಯಾಗಿದೆ.
ಬಂಗಾರದ ಉಡುಗೊರೆ
ಬಂಗಾರ ಅಂದಕ್ಷಣ ಚಿನ್ನದ ಒಡವೆಗಳು ನೆನಪಿಗೆ ಬರುತ್ತವೆ. ಒಡವೆಗಳ ಬದಲಾಗಿ ನೀವು ಚಿನ್ನದ ಇಟಿಎಫ್ ಅಥವಾ ಗೋಲ್ಡ್ ಬಾಂಡ್ ಗಳನ್ನು ಗಿಫ್ಟ್ ಆಗಿ ಕೊಡಬಹುದು. ಗೋಲ್ಡ್ ಇಟಿಎಫ್‌ಗಳು ಮತ್ತು ಸಿಲ್ವರ್ ಇಟಿಎಫ್‌ಗಳು ವಿನಿಮಯ-ವಹಿವಾಟು ನಿಧಿಗಳಾಗಿದ್ದು, ಹೂಡಿಕೆದಾರರಿಗೆ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತವೆ.ಚಿನ್ನದ ಇಟಿಎಫ್‌ಗಳನ್ನು ಷೇರುಗಳಂತೆ ಷೇರು ವಿನಿಮಯ ಕೇಂದ್ರಗಳಲ್ಲಿ ವ್ಯಾಪಾರ ಮಾಡಲಾಗುತ್ತದೆ, ಇದು ಹೂಡಿಕೆದಾರರಿಗೆ ಭೌತಿಕ ಚಿನ್ನದೊಂದಿಗೆ ಸಂಬಂಧಿಸಿದ ಲಾಜಿಸ್ಟಿಕಲ್ ಸವಾಲುಗಳಿಲ್ಲದೆ ಸುಲಭವಾಗಿ ಖರೀದಿಸಲು ಮತ್ತು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.
ಭೌತಿಕ ಚಿನ್ನವನ್ನು ಖರೀದಿಸುವುದು ದುಬಾರಿಯಾಗಿರುವುದರಿಂದ ಚಿನ್ನದ ಬಾಂಡ್ ಯೋಜನೆಗಳ ಮೇಲೆ ಹೂಡಿಕೆ ಮಾಡಬಹುದು. ಸಾವರಿನ್ ಚಿನ್ನದ ಬಾಂಡ್ ಯೋಜನೆಗಳು ಗ್ರಾಂ ಚಿನ್ನದ ಮೌಲ್ಯದಲ್ಲಿ ಸರ್ಕಾರಿ ಭದ್ರತೆಗಳಾಗಿವೆ. ಅವು ಭೌತಿಕ ಚಿನ್ನವನ್ನು ಹೊಂದಿರುವುದಕ್ಕೆ ಬದಲಿಯಾಗಿವೆ. ಹೂಡಿಕೆದಾರರು ನೀಡಿಕೆಯ ಬೆಲೆಯನ್ನು ನಗದು ರೂಪದಲ್ಲಿ ಪಾವತಿಸಬೇಕು ಮತ್ತು ಬಾಂಡ್‌ಗಳನ್ನು ಮುಕ್ತಾಯದ ನಂತರ ನಗದು ರೂಪದಲ್ಲಿ ಮರುಪಾವತಿಸಲಾಗುತ್ತದೆ.
ಮ್ಯೂಚುವಲ್ ಫಂಡ್ SIP
SIP ಎಂದರೆ "Systematic Investment Plan" (ವ್ಯವಸ್ಥಿತ ಹೂಡಿಕೆ ಯೋಜನೆ). ಇದು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಒಂದು ವಿಧಾನವಾಗಿದೆ. SIP ನಲ್ಲಿ, ನೀವು ಒಂದು ನಿರ್ದಿಷ್ಟ ಅವಧಿಗೆ ನಿಯಮಿತವಾಗಿ (ಉದಾಹರಣೆಗೆ, ಮಾಸಿಕವಾಗಿ) ಒಂದು ನಿರ್ದಿಷ್ಟ ಮೊತ್ತವನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತೀರಿ.ಇ ದು ಒಂದು ಉತ್ತಮ ಮತ್ತು ಭವಿಷ್ಯದ ದೃಷ್ಟಿಯಿಂದ ಉಪಯುಕ್ತವಾದ ಉಡುಗೊರೆಯಾಗಿದೆ.SIP ದೀರ್ಘಾವಧಿಯ ಹೂಡಿಕೆಗೆ ಸೂಕ್ತವಾಗಿದೆ. ನಿಮ್ಮ ಪ್ರೀತಿಪಾತ್ರರಿಗೆ ನೀವು SIP ಉಡುಗೊರೆಯಾಗಿ ನೀಡಿದರೆ, ಅವರು ದೀರ್ಘಾವಧಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು.
ನಿಮ್ಮ ಸಂಗಾತಿ ಇಷ್ಟಪಡುವ ಬ್ರ್ಯಾಂಡ್ ಗಳ ಷೇರುಗಳನ್ನು ಖರೀದಿಸಿ
ನಿಮ್ಮ ಸಂಗಾತಿಯ ನೆಚ್ಚಿನ ಬಟ್ಟೆ, ಕಾಸ್ಮೆಟಿಕ್ ಬ್ರ್ಯಾಂಡ್ ನ ಷೇರುಗಳನ್ನು ಖರೀದಿಸಿ ಉಡುಗೊರೆ ನೀಡಬಹುದು. ಆದರೆ ಷೇರು ಕೊಂಡುಕೊಳ್ಳುವ ಮುನ್ನ ಆ ಕಂಪನಿಯ ಬಗ್ಗೆ ರಿಸರ್ಚ್ ಮಾಡಿ , ಮೌಲ್ಯಮಾಪನ ಪರಿಶೀಲಿ ತಜ್ಞರ ಸಲಹೆ ಪಡೆದು ಮುಂದುವರಿಯಿರಿ.
ಉಳಿತಾಯ ಖಾತೆ
ಇದು ನಿಮ್ಮ ಪ್ರೀತಿಪಾತ್ರರಿಗೆ ಹಣವನ್ನು ಉಳಿಸಲು ಸಹಾಯ ಮಾಡುವ ಮತ್ತೊಂದು ಉತ್ತಮ ಮಾರ್ಗವಾಗಿದೆ. ನೀವು ಅವರ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಬಹುದು ಮತ್ತು ಪ್ರತಿ ತಿಂಗಳು ಅದರಲ್ಲಿ ಸ್ವಲ್ಪ ಹಣವನ್ನು ಜಮಾ ಮಾಡಬಹುದು ಮತ್ತು ಅವರನ್ನು ಹಣ ಉಳಿಸುವಂತೆ ಪೋತ್ಸಾಹಿಸಬಹುದು.
ರೆಕ್ಯೂರಿಂಗ್ ಡೆಪಾಸಿಟ್ ಅಥವಾ ಆರ್‌ಡಿ
ನಿಮ್ಮ ಸಂಗಾತಿ ಹೆಸರಿನಲ್ಲಿ ಅಥವಾ ಜಂಟಿಯಾಗಿ ಆರ್‌ಡಿ ಹೂಡಿಕೆ ಮಾಡಲು ಆರಂಭಿಸುವುದು ಮತ್ತೊಂದು ಉತ್ತಮ ಆರ್ಥಿಕ ಉಡುಗೊರೆಯಾಗಿದೆ. ಪ್ರತಿ ತಿಂಗಳು ಕೂಡಾ ನಿಗದಿತ ಮೊತ್ತವನ್ನು ಆರ್‌ಡಿ ಖಾತೆಗೆ ಜಮೆ ಮಾಡುವ ಮೂಲಕ ಈ ಯೋಜನೆಯನ್ನು ಆರಂಭಿಸಬಹುದು. RD ಗಳು ನಿಯಮಿತ ಹೂಡಿಕೆಯ ಅಭ್ಯಾಸವನ್ನು ಹುಟ್ಟುಹಾಕುತ್ತದೆ. ಜೊತೆಗೆ ಉಳಿತಾಯದ ವಿಷಯಕ್ಕೆ ಬಂದಾಗ ಇವು ಶಿಸ್ತನ್ನು ಸಹ ಬೆಳೆಸುತ್ತವೆ. ಹೆಚ್ಚಿನ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಆರ್‌ಡಿ ಖಾತೆ ತೆರೆಯಲು ಅನುಮತಿ ನೀಡುತ್ತದೆ.
ಈ ರೀತಿಯ ಅಮೂಲ್ಯ ಆರ್ಥಿಕ ಉಡುಗೊರೆಗಳು, ನಿಮ್ಮ ಸಂಗಾತಿಗೆ ಭವಿಷ್ಯದಲ್ಲಿ ಆರ್ಥಿಕ ಸ್ಥಿರತೆ ಮತ್ತು ಸುರಕ್ಷತೆಯನ್ನು ನೀಡಲು ಸಹಾಯಕವಾಗುತ್ತವೆ.


Click it and Unblock the Notifications