ಇಸ್ರೇಲ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಒಟ್ಟಾಗಿ ಇದೀಗ ಇರಾನ್ ಅನ್ನು ಗಢ ಗಢ ನಡುಗುವಂತೆ ಮಾಡಿದೆ. ಈ ದಾಳಿಯಲ್ಲಿ ಇಸ್ರೇಲ್, ಇರಾನ್ ಅಧ್ಯಕ್ಷರ ಭವನ ಮತ್ತು ಇರಾನ್ ಗುಪ್ತಚರ ಸಂಸ್ಥೆಯ ಪ್ರಧಾನ ಕಚೇರಿಯನ್ನು ಗುರಿಯಾಗಿಸಿದೆ. ಇಂದು (ಫೆ.28) ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ಜಂಟಿ ಕ್ಷಿಪಣಿ ದಾಳಿ ನಡೆಸಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸದ್ಯ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಟೆಹ್ರಾನ್‌ನ ಅಧ್ಯಕ್ಷೀಯ ಭವನ, ಯೂನಿವರ್ಸಿಟಿ ಸ್ಟ್ರೀಟ್ ಹಾಗೂ ಜೋಮ್ಹುರಿ ಪ್ರದೇಶಗಳು ದಾಳಿಗೆ ಗುರಿಯಾದವು.

ಇನ್ನು ಯುಎಸ್, ಇಸ್ರೇಲ್ ಜಂಟಿ ದಾಳಿಗೆ ನಡುಗಿದ ಇರಾನ್, ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೆನಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ದಾಳಿಯ ಬಳಿಕ ಇಸ್ರೇಲ್ ತನ್ನ ನಾಗರಿಕರಿಗೂ ಕ್ಷಿಪಣಿ ದಾಳಿ ಕುರಿತು ಎಚ್ಚರಿಕೆ ನೀಡಿತು.
ಯುದ್ಧ ಬೆನ್ನಲ್ಲೇ ಟ್ರಂಪ್ ವಾರ್ನಿಂಗ್!
ಇಸ್ರೇಲ್, ಯುಎಸ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಸೇನೆ ಮತ್ತು ಪೊಲೀಸ್ ಸಿಬ್ಬಂದಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ವೇಳೆ "ನಿಮ್ಮ ಶಸ್ತ್ರಾಸ್ತ್ರಗಳನ್ನು ಬಿಡಿ ಅಥವಾ ಸಾವನ್ನು ಎದುರಿಸಿ" ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಇದೇ ವೇಳೆ ಟ್ರಂಪ್, ಅಮೆರಿಕ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್ ವಿರುದ್ಧ "ಪ್ರಮುಖ ಯುದ್ಧ ಕಾರ್ಯಾಚರಣೆ" (Major Combat Operations) ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಕೊನೆಗೂ ಡೊನಾಲ್ಡ್ ಟ್ರಂಪ್, ಅಮೆರಿಕ ಇರಾನ್ ವಿರುದ್ಧ ದಾಳಿ ನಡೆಸಿದೆ ಎಂದು ಒಪ್ಪಿಕೊಂಡಿದ್ದಾರೆ.
ಇನ್ನು ಟ್ರಂಪ್ ಅವರು ತಮ್ಮ ವಿಡಿಯೋದಲ್ಲಿ 'ನಮ್ಮ ಉದ್ದೇಸ ಅಮೆರಿಕನ್ ಜನರನ್ನು ರಕ್ಷಿಸುವುದು ಮತ್ತು ಇರಾನ್ ಆಡಳಿತದಿಂದ ಬರುವಂತಹ ಬೆದರಿಕೆಗಳನ್ನು ನಿರ್ಮೂಲನೆ ಮಾಡುವುದಾಗಿದೆ. ಅಲ್ಲದೇ ಇರಾನ್‌ನ ಮಿಸೈಲ್ ಉದ್ಯಮದ ಮೇಲೆ ಯುಎಸ್ ಇಟ್ಟಿರುವ ಕಣ್ಣು, ಇದೀಗ ಈ ನಾಶದ ಹಿಂದಿನ ಕಾರಣವಾಗಿದೆ.
ಇರಾನ್ ಮಿಸೈಲ್ ಉದ್ಯಮಗಳ ಕುರಿತು ಟ್ರಂಪ್ "ನಾವು ಅವರ ಕ್ಷಿಪಣಿಗಳನ್ನು ನಾಶಪಡಿಸುತ್ತೇವೆ ಮತ್ತು ಅವರ ಕ್ಷಿಪಣಿ ಉದ್ಯಮವನ್ನು ನೆಲಸಮ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ. ಇರಾನ್ ಪರಮಾಣು ಕಾರ್ಯಕ್ರಮ ಪುನರಾರಂಭಿಸಿ, ಶಾಂತಿ ಪ್ರಯತ್ನಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ ಟ್ರಂಪ್, ಒಪ್ಪಂದಕ್ಕಾಗಿ ನಿರಂತರ ಪ್ರಯತ್ನಿಸಿದರೂ ಇರಾನ್ ಸಹಕರಿಸಲಿಲ್ಲ ಎಂದು ಹೇಳಿದರು.
ಈ ಮೂಲಕ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ಗೆ (IRGC) "ಶಸ್ತ್ರಾಸ್ತ್ರಗಳನ್ನು ಕೆಳಗಿಡಿ, ಇಲ್ಲವೇ ಸಾವಿಗೆ ಸಿದ್ಧರಾಗಿ" ಎಂದು ಟ್ರಂಪ್ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಇರಾನ್‌ನಲ್ಲಿ ಆಡಳಿತ ಬದಲಾಯಿಸುವುದೇ ನಮ್ಮ ಉದ್ದೇಶ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಜನರಿಗೆ ಕರೆ ನೀಡಿದ ಟ್ರಂಪ್, ಈ ಕ್ಷಣವನ್ನು ವಶಪಡಿಸಿಕೊಳ್ಳಿ ಮತ್ತು ಸರ್ಕಾರವನ್ನು ವಶವಡಿಸಿಕೊಳ್ಳಿ ಎಂದು ಟ್ರಂಪ್ ಹೇಳಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications