ಇತ್ತೀಚಿನ ಜನರ ಜೀವನ ಶೈಲಿ ಬದಲಾಗಿದೆ. ತಿನ್ನೋ ಅನ್ನದಿಂದ ಹಿಡಿದು ಹಾಕೋ ಬಟ್ಟೆವರೆಗೂ ವಿದೇಶಿ ಸ್ಟೈಲ್‌ನಲ್ಲೇ ಇದೆ. ಹಾಗಂತ ಜನರಿಗೆ ಸ್ವದೇಶಿ ಅಭಿರುಚಿ ಹೋಗಿದೆ ಅಂತಲ್ಲ. ಸ್ವದೇಶಿ ತನವನ್ನು ಉಳಿಸಿಕೊಂಡಿಲ್ಲ ಅಂತ ಅರ್ಥ. ಮಾಲ್‌ಗಳಲ್ಲಿ ಶಾಪಿಂಗ್ ಮಾಡ್ತಾ, ಶೈನಿಂಗ್ ಬಟ್ಟೆ ತೊಡುತ್ತಿರುವ ಜನ ತಾಯಿ ಮಡಿಲಿನಂತಿರುವ ಸ್ವದೇಶಿತನವನ್ನು ಮರೆತಿದ್ದಾರೆ. ಅಂಥವರ ನಡುವೆ ತುಮಕೂರು ಮೂಲದ ರೇಖಾ ಕುಮಾರ್ ಅಪರೂಪದಲ್ಲಿ ಅಪರೂಪದವರು ಎನ್ನಬಹುದು.

ಹೌದು, ನಾವು ಹೇಗಿರ್ತೇವೋ ನಮ್ಮ ಸಮಾಜ ಹಾಗಿರುತ್ತೆ. ಈ ಆಧುನಿಕ ಬದುಕು ಎಲ್ಲವನ್ನೂ ಬದಲಾಗಿಸಿದೆ. ತನ್ನ ಮೂಲವನ್ನೇ ಜನರು ಮರೆತು ಬದುಕೋ ಸಂಸ್ಕೃತಿಗೆ ಒಗ್ಗಿಕೊಂಡಿದ್ದಾರೆ. ನಾವು ತೊಡುವ ಒಂದು ಬಟ್ಟೆಯೇ ಇದಕ್ಕೆ ಉದಾಹರಣೆಯಾಗಿರಬಹುದು. ಹಾಗಂತ ಸ್ವದೇಶಿ ವಸ್ತುಗಳ ಮೇಲೆ ಪ್ರೀತಿ ಇಲ್ಲ ಅಂತ ಹೇಳೋಕಾಗಲ್ಲ. ಸ್ವದೇಶಿ ವಸ್ತುಗಳು ಕಣ್ಣಿಗೆ ಬೀಳ್ತಿಲ್ಲ ಅಷ್ಟೇ. ಆದ್ರೆ ತುಮಕೂರಿನ ರೇಖಾ ಕುಮಾರ್, ತಮ್ಮಲ್ಲಿರುವ ಸ್ವದೇಶಿ ತತ್ವವನ್ನ ತನ್ನ ಸುತ್ತ-ಮುತ್ತಲಿನವರಿಗೂ ಸಾರುತ್ತಾ ಬದುಕುತ್ತಿದ್ದಾರೆ.
ತುಮಕೂರಿನಲ್ಲೊಂದು 'ಸ್ವದೇಶಿ ಕುಟೀರ':
ಬೆಂಗಳೂರಿನ ಪಕ್ಕದಲ್ಲೇ ಇರುವ ತುಮಕೂರು ಮುಂದೊಂದು ದಿನ ಬೆಂಗಳೂರನ್ನ ಮೀರಿಸುವಷ್ಟು ಬೆಳೆಯುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಕಣ್ಣು ಕುಕ್ಕುವಂತಹ ಶೋರೂಂಗಳು, ಮಾಲ್ ಎಲ್ಲವೂ ಇದೆ. ಇಂತಹ ನಗರದಲ್ಲಿ ರೇಖಾ ಕುಮಾರ್ ( ರೇಖಾ ಬಿ.ಎಸ್) ಅವರು, ಸ್ವದೇಶಿ ಕುಟೀರ ಎಂಬ ಪುಟ್ಟ ಮಳಿಗೆ ತೆರೆದಿದ್ದಾರೆ. ಅಲ್ಲಿ ಸ್ವದೇಶಿ ವಸ್ತುಗಳಾದ ಇಳಕಲ್ ಸೀರೆ, ಟೆರಾಕೋಟ ಆಭರಣಗಳು (ಮಣ್ಣಿನಿಂದ ಮಾಡಿದ ಆಭರಣ), ನಾಟಿ ಹಸುವಿನ ತುಪ್ಪ (ಯಾವುದೇ ಕೆಮಿಕಲ್ ಇಲ್ಲದೇ ಸ್ವತಃ ತಯಾರಿಸಿರುವ ತುಪ್ಪ) ಮಾರಾಟ ಮಾಡುತ್ತಿದ್ದಾರೆ. ಇವರ ಮಳಿಗೆಗೆ ಇಡೀ ತುಮಕೂರಿನ ಜನ ಫಿದಾ ಆಗಿದ್ದಾರೆ.
Covid-19 ಸಂಕಷ್ಟದಲ್ಲಿ ಒಂದು ಸಂಕಲ್ಪದ ಬೆಳಕು:
ಕಳೆದ ಐದು ವರ್ಷಗಳ ಹಿಂದಿನ ಪರಿಸ್ಥಿತಿ ಹೇಗಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಇಡೀ ಜಗತ್ತೇ ಅಲ್ಲೋಲ ಕಲ್ಲೋಲವಾಗಿತ್ತು. ಕೊರೋನಾ ರಣಾರ್ಭಟದ ನಡುವೆ ಜೀವಗಳು ಉಳಿದಿದ್ದೇ ಹೆಚ್ಚು. ಅಂತಹ ಸಮಯದಲ್ಲಿ ಸಂಕಲ್ಪ ತೊಟ್ಟ ರೇಖಾ ಶಿವಕುಮಾರ್ ಅವರು, ಇಂದು ತಮ್ಮ ಬ್ಯುಸಿನೆಸ್‌ನ ಉನ್ನತ ಮಟ್ಟದಲ್ಲಿ ನಡೆಸುತ್ತಿದ್ದಾರೆ. ಅಂದಹಾಗೆ ಮಹಾಮಾರಿ ಕೊರೋನಾ ಸಂದರ್ಭದಲ್ಲಿ, ಮಗ್ಗದ ಕೆಲಸ ಮಾಡುವವರ ಬದುಕು ನಿಶ್ಶಬ್ಧವಾಗಿ ಹೋಯಿತು. ಅಂತಹ ಸಮಯದಲ್ಲಿ ಇವರು ಎದ್ದುನಿಂತ ರೀತಿ ನಿಜಕ್ಕೂ ಮೆಚ್ಚುವಂತದ್ದು.
ಆನ್‌ಲೈನ್‌ನಿಂದ ಸ್ವದೇಶಿ ಕುಟೀರ:
ಇವರು ಮೊದಲು ಇಳಕಲ್‌ನಿಂದ ಪ್ಯೂರ್ ಕಾಟನ್ ಸೀರೆಯನ್ನು ತರಿಸಿಕೊಂಡು, ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ರು. ಆದ್ರೆ ಕೊರೊನಾ ಸಂದರ್ಭದಲ್ಲಿ ಮಗ್ಗದ ಕೆಲಸದವರು ಬದುಕು ಸ್ಥಗಿತವಾಯ್ತು. ಎಷ್ಟೋ ಜನ ನೇಣಿಗೆ ಶರಣಾದರು. ಅವರ ಕೆಲಸ ಅಳಿವಿನಂಚಿಗೆ ಹೋಗುವಂತಾಗಿತ್ತು. ಅಂತಹ ಸಮಯದಲ್ಲಿ, ಇವರು ಸ್ವದೇಶಿ ಕುಟೀರ ಶುರು ಮಾಡಿದರು. ಈ ಮೂಲಕ ತನ್ನ ಕೈಯಿಂದ ಅಳಿಸು ಸೇವೆಯಾದ್ರೂ ಆಗಲಿ, ಅವರ ಬದುಕು ಉಳಿಯಲಿ ಎಂಬ ಆಶಯದಿಂದ ತಮ್ಮ ಉದ್ಯಮ ಶುರು ಮಾಡಿದರು.
ಶೂನ್ಯ ಬಂಡವಾಳದಿಂದ ಉದ್ಯಮ ಆರಂಭ:
ಅಂದಹಾಗೆ ರೇಖಾ ಅವರು ಉದ್ಯಮ ಆರಂಭಿಸಿದ್ದು ಶೂನ್ಯ ಬಂಡವಾಳದಿಂದ. ಅಂದರೆ ಮೊದಲು ಮಾರಾಟ ಮಾಡಲಾಗುವಷ್ಟು ಸೀರೆ ತರಿಸಿಕೊಳ್ಳುತ್ತಿದ್ದರು. ಬಂದ ಹಣದಲ್ಲಿ ಲಾಭ ಇಟ್ಟುಕೊಂಡು, ಉಳಿದ ಹಣವನ್ನು ಹಿಂದಿರುಗಿಸುತ್ತಿದ್ದರು. ಈ ರೀತಿಯ ಬಂಡವಾಳ ತಂತ್ರದಿಂದಲೇ ಅವರು, ಟೆರಾಕೋಟ ಜ್ಯುವೆಲರಿಯನ್ನೂ ಮಾರಾಟ ಮಾಡಲಾರಂಭಿಸಿದರು. ಇಂದು ಇವರ ಉದ್ಯಮ ಬೆಳವಣಿಗೆ ನಿಜಕ್ಕೂ ಸ್ಪೂರ್ತಿದಾಯಕ ಎನ್ನಬಹುದು.
ತಾನೇ ಮಾರುಕಟ್ಟೆ, ತಾನೇ ಪರಂಪರೆಯ ರಕ್ಷಕ:
ಇಳಕಲ್‌ನಿಂದ ನೇರವಾಗಿ ಸೀರೆ ತರಿಸಿಕೊಂಡು ಮಾರಾಟ ಮಾಡುವ ಇವರ ಕೀರ್ತಿ ನಿಜಕ್ಕೂ ಮೆಚ್ಚುವಂತದ್ದೇ. ಏಕೆಂದರೆ ಇಡೀ ತುಮಕೂರಿನಲ್ಲಿ ಇವರ ಮಳಿಗೆಯ ಇಳಕಲ್ ಸೀರೆ ಫೇಮಸ್. ಅಂದಹಾಗೆ ಇವರ ಉತ್ಪನ್ನಗಳಿಗೆ ಇವರೇ ಬ್ರಾಂಡ್ ಅಂಬಾಸಿಡರ್ ಎನ್ನಬಹುದು. ಏಕೆಂದರೆ ಇವರು ಯಾವುದೇ ರೀತಿಯ ಮಾರ್ಕೆಟಿಂಗ್ ಮೊರೆ ಹೋಗಲಿಲ್ಲ. ಯಾವುದೇ ಮಾಡೆಲ್‌ಗಳನ್ನು ಅವಲಂಬಿಸಲಿಲ್ಲ. ತಮ್ಮ ಅಂಗಡಿಯ ಬಟ್ಟೆ ಹಾಗೂ ಮಣ್ಣಿನ ಆಭರಣಗಳನ್ನು ತಾವೇ ತೊಟ್ಟು, ಅದರ ಮೌಲ್ಯ, ಆಕರ್ಷಣೆ, ಅಂದ-ಚಂದವನ್ನು ಸಾರಿದರು. ಇವರು ತೊಟ್ಟ ಸೀರೆ, ಆಭರಣವೇ ಇವರಿಗೆ ಮಾರ್ಕೆಟಿಂಗ್ ಎನ್ನಬಹುದು.
ಬೇರೆ ಊರಿಗೂ ಹಿಡಿದ ಇಳಕಲ್ ಜಾಡು:
ಇಡೀ ತುಮಕೂರಿನಲ್ಲಿ ಬಹುತೇಕ ಮಂದಿ ಇಳಕಲ್ ಸೀರೆ ಉಟ್ಟಿದ್ದೇ, ಇವರ ಮಳಿಗೆಯಿಂದ. ಶಿಕ್ಷಕಿಯರು, ಉಪನ್ಯಾಸಕಿಯರು, ಅಧಿಕಾರಿಣಿಗಳು ಹೀಗೆ ಎಲ್ಲಾ ವರ್ಗದವರಿಗೂ ಸೀರೆ ಉಡಿಸಿದ ನಾರಿ ಇವರು. ಇದಿಷ್ಟೇ ಅಲ್ಲ. ತುಮಕೂರಿನಿಂದಾಚೆಗೂ ಇವರ ಇಳಕಲ್ ಸೀರೆ ಜಾಡು ಹಿಡಿದಿದೆ. ಬೆಂಗಳೂರಿನಿಂದ ಮೈಸೂರು, ಮಂಡ್ಯ, ಪಾವಗಡ, ಮಧುಗಿರಿ ಸೇರಿ ಹಲವು ಭಾಗದ ಮಹಿಳೆಯರು, ಮಾರಾಟಗಾರರೂ ಸಹ ಇವರ ಮಳಿಗೆಗೆ ಬರುತ್ತಿದ್ದಾರೆ.
₹700 ರಿಂದ ಸೀರೆ ಶುರು:
ಇವರ ಮಳಿಗೆಯಲ್ಲಿ ಎಲ್ಲಾ ವರ್ಗದವರು ಕೂಡ ಕೊಳ್ಳಬಹುದಾದಂತಹ ಬೆಲೆ ಇದೆ. ₹700 ರಿಂದ ₹12,800 ವರೆಗಿನ ಸೀರೆಗಳು ಇವರ ಮಳಿಗೆಯಲ್ಲಿದೆ. ಅದರಂತೆ ₹150 ರಿಂದ ₹4,500 ವರೆಗೆ ಟೆರಾಕೋಟ ಆಭರಣಗಳು ಇಲ್ಲಿವೆ. ಇಲ್ಲಿನ ಪ್ರತಿಯೊಂದು ವಸ್ತು ಕೂಡ ಒಂದಿಷ್ಟು ಕಥೆ ಹೊಂದಿದೆ. ಈ ಆಭರಣಗಳನ್ನು ಅವರ ಸ್ನೇಹಿತೆ ತಯಾರಿಸುತ್ತಿದ್ದು, ತಾವು ಯಾವುದೇ ಪ್ಲಾಸ್ಟಿಕ್ ಅಥವಾ ನಕಲಿ ವಸ್ತುಗಳನ್ನು ಬಳಸದೆ ಮಣ್ಣಿನ ಶುದ್ಧತೆಯನ್ನು ಹಿಡಿದುಕೊಂಡಿದ್ದಾರೆ.
ಕುಟುಂಬ ಎಂಬ ಬಲದ ತುತ್ತೂರಿ:
ಇನ್ನು ಈ ನಾರಿಶಕ್ತಿ ಬೆನ್ನ ಹಿಂದೆ ಒಂದು ಬಲವಾದ ಶಕ್ತಿ ಇದೆ. ಅದೇ ಕುಟುಂಬದ ಶಕ್ತಿ. ರೇಖಾ ಕುಮಾರ್ ಅವರ ಪತಿ ಶಿವಕುಮಾರ್. ಅವರ ಬೆಂಬಲವಿಲ್ಲದೇ ಇವರ ಸಾಧನೆ ಶೂನ್ಯ ಎನ್ನಬಹುದು. ಅಪಾರ ಬೆಂಬಲ ನೀಡುವ ಪತಿಯಿಂದ ಈ ನಾರಿಶಕ್ತಿ ಸಮಾಜದಲ್ಲಿ ಗುರುತಿಸಿಕೊಂಡಿದೆ ಎಂದರೂ ತಪ್ಪಾಗದು.
ಇಬ್ಬರು ಮಕ್ಕಳ ಜೊತೆಗೆ ಉದ್ಯಮದ ಜವಾಬ್ದಾರಿ:
ಇನ್ನು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದೊಡ್ಡವರು ಧೀಕ್ಷಾ, ಚಿಕ್ಕವರು ರಕ್ಷಾ. ಇಂಜಿನಿಯರಿಂಗ್ ವ್ಯಾಸಂಗದಲ್ಲಿ ತೊಡಗಿರುವ ಮಕ್ಕಳು ಕೂಡ, ತಾಯಿಯ ಕನಸಿಗೆ ಶಕ್ತಿ ಎನ್ನಬಹುದು. ಇವರ ದೊಡ್ಡ ಮಗಳಾದ ಧೀಕ್ಷಾ ಭರತನಾಟ್ಯ ಕಲಾವಿದೆಯಾಗಿದ್ದಾರೆ.
ಮಹಿಳಾ ಸಬಲೀಕರಣ, ಉದ್ಯೋಗ ಸೃಷ್ಟಿ:
ಇದು ಕೇವಲ ಉದ್ಯಮ ಮಾತ್ರವಲ್ಲ. ಇದು ಮಹಿಳಾ ಸಬಲೀಕರಣದ ದಾರಿ. 'ಅವೇಕ್', 'ಚಿತ್ರಕಲಾ ಪರಿಷತ್' ಮುಂತಾದ ಸ್ಥಳಗಳಲ್ಲಿ ಮಳಿಗೆ ಇಟ್ಟು, ತಮ್ಮ ಉತ್ಪನ್ನಗಳನ್ನು ಜನರ ಮುಂದೆ ತರುತ್ತಿದ್ದಾರೆ. ಅದು ವ್ಯವಹಾರದ ಕಣ್ಣುಗಳಲ್ಲಿ ನೋಟವಲ್ಲ, ಅದು ಕನಸಿನ ಕಣ್ಗಳಲ್ಲಿ ಬೆಳೆದ ದೀಪ.
ಸಮಾಜದ ಮುಖ್ಯ ವೇದಿಕೆಗಳಲ್ಲಿ ಪಾತ್ರ:
ಸಾಮಾಜಿಕ ಕಾರ್ಯಕರ್ತೆಯಾಗಿ, 'ಐಕ್ಯ ಫೌಂಡೇಷನ್' ಸಂಸ್ಥಾಪಕ ಅಧ್ಯಕ್ಷೆಯಾಗಿದ್ದು, 'ಇನ್ನರ್ ವ್ಹೀಲ್' ಕಾರ್ಯದರ್ಶಿಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೇದಿಕೆಗಳ ಮೂಲಕ ಇವರು ಇನ್ನಷ್ಟು ಮಹಿಳೆಯರಿಗೆ ಉದ್ಯೋಗದ ದಾರಿ ತೋರಿಸುತ್ತಿದ್ದಾರೆ.
ದೊಡ್ಡ ಉದ್ಯಮವನ್ನಾಗಿ ಬೆಳೆಸುವ ಕನಸು:
ಈಗ ಸಣ್ಣದೊಂದು ಮಳಿಗೆ ತೆರೆದು, ಸ್ವದೇಶಿ ವಸ್ತುಗಳನ್ನು ಮಾರಾಟ ಮಾಡುತ್ತಿರುವ ರೇಖಾ ಕುಮಾರ್ ಅವರಿಗೆ ದೊಡ್ಡ ಆಸೆಯಿದೆ. ಮಹಿಳಾ ಸಬಲೀಕರಣಕ್ಕಾಗಿ ಈ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು. ಹಾಗೂ ತನ್ನಂತೆಯೇ ಇರುವ ಸಾಕಷ್ಟು ಮಹಿಳೆಯರಿಗೆ ಉದ್ಯೋಗದ ಹಾದಿ ಕಾಣಿಸಬೇಕು ಎಂಬ ಮಹದಾಸೆ ಹೊಂದಿದ್ದಾರೆ.
ಅಂದಹಾಗೆ ಇಂದಿನ ಜನತೆ ಇಂದಿನ ಜನತೆ ಪ್ಲಾಸ್ಟಿಕ್ ರೇಷ್ಮೆ, ಪ್ಯಾಕೇಜ್ಡ್ ಶೈನಿಂಗ್‌ಗೆ ಮಾರು ಹೋಗಿರುವ ಕಾಲದಲ್ಲಿ, ರೇಖಾ ಅವರ ಪ್ರಾಮಾಣಿಕ ಮಣ್ಣಿನ ಶಕ್ತಿ ಇನ್ನು ಜೀವಂತವಾಗಿದೆ. ಮಾಲ್‌ಗಳಲ್ಲಿ ದೊರೆಯುವ ಫ್ಯಾಷನ್‌ನಲ್ಲಿ ಒಂದಿಷ್ಟು ಕೃತಕ ನಗುವಿದ್ದರೆ, ಸ್ವದೇಶಿ ಕುಟೀರದಲ್ಲಿ ಇಳಕಲ್ ಸೀರೆ ತೊಟ್ಟ ತಾಯಿಯ ಮುಖದಲ್ಲಿ ಇರುವ ನಿಜವಾದ ಹೆಮ್ಮೆ. ರೆಖಾ ಅವರು ಯಾವುದೇ ಹಿರಿತನದ ಮಾದರಿಯ ವಸ್ತುಗಳ ಜಾಹೀರಾತು ಮಾಡುತ್ತಿಲ್ಲ. ಅವರು ತಾವೇ ಮಾದರಿಯಾಗಿದ್ದಾರೆ. ಇದು ಇಂದಿನ ಹೊಸ ಭಾರತದ ಹೊಸ ಪ್ರಾರಂಭ. ಇದು ಭಾರತ ಮಣ್ಣಿನ ಧ್ವನಿಯಾಗಲಿದೆ.
ಈಗಿನ ಯುಗದಲ್ಲಿ ಎಲ್ಲವೂ ವಿದೇಶಿ ಸೊಗಸುಗಳ ಹೊಳೆಯಲ್ಲಿದ್ದರೂ, ಸ್ವದೇಶಿತನ ಅಸ್ತಿತ್ವವನ್ನು ಉಳಿಸಿಕೊಂಡು, ತಾಯಿಮಣ್ಣು ಮತ್ತು ಪರಂಪರೆಯ ಮಮತೆಯನ್ನು ತೋರಿಸುವವರು ಕಿರಿಯಬಲ್ಲದ್ದು. 'ಸ್ವದೇಶಿ ರೇಖಾ'ಗಳಂತಹ ಮಹಿಳೆಯರ ಮೂಲಕ ಮಾತ್ರ ನಮ್ಮ ಸಂಸ್ಕೃತಿ ಜೀವಂತವಿರುವುದು ನಿಜ. ಅವರು ಕೇವಲ ವ್ಯವಹಾರವನ್ನೇ ಮಾಡುತ್ತಿಲ್ಲ, ಅವರು ಸ್ವದೇಶಿ ಬಾಳಿನ ಬೆಳಕು, ಮಹಿಳಾ ಶಕ್ತಿ ಮತ್ತು ಹೃದಯಸ್ಪರ್ಶಿ ಸಂಘಟನೆಗಳ ಪ್ರತೀಕವಾಗಿದ್ದಾರೆ.
ಸ್ವದೇಶಿತನಿಗೆ ಮಡಿಲು ಕೊಟ್ಟ ಇಂತಹ ನಾರಿಶಕ್ತಿ, ಮಾಲ್‌ಗಳ ಗ್ಲಾಮರ್ ನಡುವೆ ನಿಜವಾದ ಮಣ್ಣಿನ ಶಕ್ತಿ, ಸಾಂಸ್ಕೃತಿಕ ನಿಜಾಯಿತಿಯನ್ನು ಉಳಿಸುವ ಹೋರಾಟಗಾರರು. ಇಂತಹರು ಬಹುಶಃ ನಮ್ಮ ಸಮಾಜದ ನಿಜವಾದ ಹೀರೋಗಳು. ಅವರು ತೋರಿಸುವ ದಾರಿ, ನಮ್ಮ ಮುಂದಿನ ತಲೆಮಾರಿಗೆ ಬೆಳೆಸುವ ಹಾದಿ. ಹೀಗಾಗಿ, ಗ್ಲೋಬಲ್ ಚಲನವಲನದ ನಡುವೆ ತನ್ನ ಹಳ್ಳಿ, ತನ್ನ ಸಂಸ್ಕೃತಿ, ತನ್ನ ಮಣ್ಣು ಮರೆಯದೆ ಬದುಕೋಣ. ಸ್ವದೇಶಿತನ ಮಡಿಲಲ್ಲಿ ಬೆಳೆಯೋಣ; ಅದೇ ನಿಜವಾದ ಶಕ್ತಿ, ನಿಜವಾದ ಸೌಂದರ್ಯ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications