ಭಾರತೀಯ ಷೇರುಪೇಟೆಯಲ್ಲಿ ಬಹುನಿರೀಕ್ಷಿತ ಎಂದೇ ಗುರುತಿಸಿಕೊಂಡಿರುವ ಆನ್‌ಲೈನ್ ಆಹಾರ ವಿತರಣಾ ಕಂಪನಿ ಸ್ವಿಗ್ಗಿಯ ಆರಂಭಿಕ ಸಾರ್ವಜನಿಕ ಕೊಡುಗೆ ( IPO) ಬುಧವಾರ ಬಿಡ್‌ಗೆ ತೆರೆದುಕೊಂಡಿದ್ದು, ನವೆಂಬರ್ 6ರಿಂದ 8ರವರೆಗೆ ಚಂದಾದಾರಿಕೆಗೆ ತೆರೆದಿರಲಿದೆ.
ಈ ಮೂಲಕ ಹೂಡಿಕೆದಾರರು ಸಾರ್ವಜನಿಕ ವಿತರಣೆಗಾಗಿ ಅರ್ಜಿ ಸಲ್ಲಿಸಲು ಇಂದು ಸೇರಿ ಎರಡು ದಿನಗಳನ್ನು ಹೊಂದಿದ್ದಾರೆ. ಇನ್ನು ಸ್ವಿಗ್ಗಿ ಐಪಿಒ ಬೆಲೆ ಬ್ಯಾಂಡ್ ಅನ್ನು ಪ್ರತೀ ಈಕ್ವಿಟಿ ಷೇರಿಗೆ 371 ರಿಂದ 390 ರೂ.ಗೆ ನಿಗದಿಪಡಿಸಿದೆ.

ಇನ್ನು ಸ್ವಿಗ್ಗಿ ಕಂಪನಿಯು ಸಾರ್ವಜನಿಕ ಸಂಚಿಕೆಗಳಿಂದ ಸುಮಾರು 11,327.43 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಸ್ವಿಗ್ಗಿ IPO ಚಂದಾದಾರಿಕೆಯ ಸ್ಥಿತಿಯ ಪ್ರಕಾರ, ಬುಕ್ ಬಿಲ್ಡ್ ಸಂಚಿಕೆಯು ಬಿಡ್ಡಿಂಗ್‌ನ ಮೊದಲ ದಿನದಂದು ಒಂದು ಉತ್ತಮವಾದ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ನಡುವೆ ಸ್ವಿಗ್ಗಿ ಷೇರಿನ ಬೆಲೆ ಬೂದು ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ. ಷೇರು ಮಾರುಕಟ್ಟೆ ವೀಕ್ಷಕರ ಪ್ರಕಾರ, ಇಂದು ಬೂದು ಮಾರುಕಟ್ಟೆಯಲ್ಲಿ ಸ್ವಿಗ್ಗಿ ಷೇರುಗಳು 11 ರೂ. ಪ್ರೀಮಿಯಂನಲ್ಲಿ ಲಭ್ಯವಿದೆ ಎನ್ನಲಾಗಿದೆ.
ಇಂದು ಸ್ವಿಗ್ಗಿ IPO GMP
ಈಗಾಗಲೇ ತಿಳಿಸಿದಂತೆ ಸ್ವಿಗ್ಗಿ IPO GMP (ಗ್ರೇ ಮಾರ್ಕೆಟ್ ಪ್ರೀಮಿಯಂ) ಇಂದು 11 ರೂ. ಆಗರಲಿದ್ದು, ಹಾಗೆ ನೋಡಿದರೆ ಬುಧವಾರದ ಗ್ರೇ ಮಾರ್ಕೆಟ್ ಪ್ರೀಮಿಯಂನಿಂದ ಯಾವುದೇ ಹೊಂದದಿರುವುದು ಕಂಡುಬಂದಿದೆ. ಅಲ್ಲದೆ ಸ್ವಿಗ್ಗಿ ಐಪಿಒದಲ್ಲಿ ಸ್ಥಿರವಾಗಿ ಉಳಿದಿರುವ ಬೂದು ಮಾರುಕಟ್ಟೆಯ ವಿಚಾರಗಳು ಭಾರತೀಯ ಮಾಧ್ಯಮಿಕ ಮಾರುಕಟ್ಟೆಯಲ್ಲಿನ ಟ್ರೆಂಡ್ ರಿವರ್ಸಲ್‌ಗೆ ಕಾರಣವೆಂದು ಮಾರುಕಟ್ಟೆ ವೀಕ್ಷಕರು ಹೇಳಿದ್ದಾರೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿನ ತೀವ್ರ ಮಾರಾಟದ ಒತ್ತಡದಿಂದಾಗಿ ಇಶ್ಯೂ ಆರಂಭಿಕ ದಿನಾಂಕಕ್ಕಿಂತ ಮುಂಚೆಯೇ ಸ್ವಿಗ್ಗಿ ಷೇರುಗಳು ಹೊಳಪನ್ನು ಕಳೆದುಕೊಂಡಿವೆ ಎಂದು ಮಾರುಕಟ್ಟೆ ವೀಕ್ಷಕರು ತಿಳಿಸಿದ್ದಾರೆ. ಇದರ ಹೊರತಾಗಿಯೂ ಮುಂಬರುವ ಸೆಷನ್‌ಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯು ತನ್ನ ಗೆಲುವಿನ ಸರಣಿಯನ್ನು ವಿಸ್ತರಿಸಿದರೆ ಸ್ವಿಗ್ಗಿ IPO GMP ಯಲ್ಲಿ ಸ್ವಲ್ಪ ಚೇತರಿಕೆಯನ್ನು ಕಾಣುವ ನಿರೀಕ್ಷೆ ಇದೆ.
Swiggy IPO ಚಂದಾದಾರಿಕೆ ಸ್ಥಿತಿ
ಬಿಡ್ಡಿಂಗ್‌ನ ಮೊದಲನೇ ದಿನದ ನಂತರ, ಸಾರ್ವಜನಿಕ ಸಂಚಿಕೆಯನ್ನು 0.12 ಬಾರಿ ಬುಕ್ ಮಾಡಲಾಗಿದೆ, ಬುಕ್ ಬಿಲ್ಡ್ ಸಂಚಿಕೆಯ ಚಿಲ್ಲರೆ ಭಾಗವು 0.54 ಬಾರಿ ಚಂದಾದಾರಿಕೆಯಾಗಿದೆ ಮತ್ತು NII ಭಾಗವು 0.06 ಬಾರಿ ಚಂದಾದಾರಿಕೆಯಾಗಿರುವ ವಿಚಾರವನ್ನು ಬಹಿರಂಗಪಡಿಸಿದೆ.
ಕಂಪೆನಿಯ IPO ವಿಮರ್ಶೆ
ಈ ಬಗ್ಗೆ ಹೆಚ್ಚಿನ ಮಾಹತಿ ನೀಡಿರುವ ಡಾ ಚೋಕ್ಸಿ ಫಿನ್‌ಸರ್ವ್, ಹೈಪರ್‌ಲೋಕಲ್ ಕಾಮರ್ಸ್‌ನಲ್ಲಿ ಸ್ವಿಗ್ಗಿಯ ಕಾರ್ಯತಂತ್ರದ ಗಮನವು ಅದನ್ನು ಮಾರುಕಟ್ಟೆ ವಲಯದಲ್ಲಿ ಪ್ರಮುಖ ಕಂಪೆನಿಯನ್ನಾಗಿ ಮುಂದಡಿ ಇರಿಸುತ್ತದೆ. ಇದು ನಾವೀನ್ಯತೆ-ನೇತೃತ್ವದ ಸಂಸ್ಕೃತಿಯಿಂದ ನಡೆಸಲ್ಪಡುತ್ತದೆ. ಸರಾಸರಿ ಆರ್ಡರ್ ಮೌಲ್ಯದಲ್ಲಿ ಸ್ಥಿರವಾದ ಏರಿಕೆಯೊಂದಿಗೆ (AOV) ಮತ್ತು FY22 ರಲ್ಲಿ 301 ರಿಂದ FY24 ರಲ್ಲಿ 523 ಗೆ ಡಾರ್ಕ್ ಸ್ಟೋರ್‌ಗಳ ಬೆಳೆಯುತ್ತಿರುವ ನೆಟ್ವರ್ಕ್, ಬಳಕೆದಾರರ ತೊಡಗಿಸಿಕೊಳ್ಳುವಿಕೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಕಂಪನಿಯು ಸುಸಜ್ಜಿತವಾಗಿದೆ.
ಸ್ವಿಗ್ಗಿ ಐಪಿಒ ಕುರಿತು ಪ್ರಮುಖ ಅಂಶಗಳು
1) ಸ್ವಿಗ್ಗಿ ಐಪಿಒ ಗ್ರೇ ಮಾರ್ಕೆಟ್ ಪ್ರೀಮಿಯಂ
ಸ್ವಿಗ್ಗಿ ಐಪಿಒ ಷೇರುಪೇಟೆಗೆ ಎಂಟ್ರಿಕೊಡುವ ಮುನ್ನವೇ ಗ್ರೇ ಮಾರ್ಕೆಟ್ ಪ್ರೀಮಿಯಂ ತಗ್ಗುತ್ತಾ ಬಂದಿದ್ದು, ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಸ್ವಿಗ್ಗಿ ಐಪಿಒ ಗ್ರೇ ಮಾರ್ಕೆಟ್ ಪ್ರೀಮಿಯಂ 11 ರೂಪಾಯಿನಷ್ಟಿದೆ. ಅಲ್ಲದೆ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯು ಪಬ್ಲಿಕ್ ಇಶ್ಯೂ ಮೂಲಕ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸುವ ಯೋಜನೆ ಹೊಂದಿದ್ದು, ಇಶ್ಯೂ ಪ್ರೈಸ್ ಪ್ರತಿ ಈಕ್ವಿಟಿ ಷೇರಿಗೆ 371 ರಿಂದ 390 ರೂಪಾಯಿನಷ್ಟಿದೆ. ಅಲ್ಲದೆ ಈಗಾಗಲೇ ತಿಳಿಸಿದಂತೆ ಕಂಪನಿಯು ಈ ಐಪಿಒ ಮೂಲಕ 11,327.43 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಯೋಜಿಸಿದೆ. ಇದು ಹೊಸ ಷೇರುಗಳು ಮತ್ತು ಒಎಫ್‌ಎಸ್ ಮಿಶ್ರಣವನ್ನು ಒಳಗೊಂಡಿದೆ.
2. ಸ್ವಿಗ್ಗಿ ಐಪಿಒ ಲಾಟ್ ಗಾತ್ರ
ಸ್ವಿಗ್ಗಿ ಐಪಿಒದಲ್ಲಿ ಬಿಡ್ ಮಾಡಲು ಬಯಸುವವರು ಒಂದು ಲಾಟ್ ಖರೀದಿಸಬೇಕೆಂದರೆ ಕಂಪನಿಯ 38 ಷೇರುಗಳಿಗೆ ಬಿಡ್ ಮಾಡಬೇಕಾಗುತ್ತದೆ. ನಂತರದಲ್ಲಿ 38 ಈಕ್ವಿಟಿ ಷೇರುಗಳಿಗೆ ವಿರುದ್ಧವಾಗಿ ಗುಣಾಕಾರದಲ್ಲಿ ಬಿಡ್ ಮಾಡಬಹುದಾಗಿದೆ. ಇನ್ನು ಸ್ವಿಗ್ಗಿ ಐಪಿಒ ಷೇರು ಹಂಚಿಕೆ ದಿನಾಂಕವು ಶನಿವಾರಕ್ಕೆ ನಿಗದಿಯಾಗಿದೆ. ನವೆಂಬರ್ 9 ರಂದು ಷೇರು ಹಂಚಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಉಳಿದಂತೆ ಸ್ವಿಗ್ಗಿ ಐಪಿಒ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಇದೇ ನವೆಂಬರ್ 13ರಂದು ಪಟ್ಟಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
3. ಸ್ವಿಗ್ಗಿ ಐಪಿಒ ಲೀಡ್ ಮ್ಯಾನೇಜರ್ಸ್
ಕೋಟಕ್ ಮಹೀಂದ್ರಾ ಕ್ಯಾಪಿಟಲ್, ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ, ಜೆಫರೀಸ್ ಇಂಡಿಯಾ, ಅವೆಂದುಸ್ ಕ್ಯಾಪಿಟಲ್ ಜೆಪಿ ಮಾರ್ಗನ್ ಇಂಡಿಯಾ, ಬೋಫಾ ಸೆಕ್ಯುರಿಟೀಸ್ ಮತ್ತು ಐಸಿಐಸಿಐ ಸೆಕ್ಯುರಿಟೀಸ್ ಲೀಡ್ ಮ್ಯಾನೇಜರ್‌ಗಳಾಗಿ ಗುರುತಿಸಲಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಷೇರು ಮಾರುಕಟ್ಟೆ ಹೂಡಿಕೆದಾರರೇ, ಈ ವಾರ ಎಚ್ಚರ ತಪ್ಪಿದರೆ ನಷ್ಟ!

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆಯ ನಿರೀಕ್ಷೆ: ಹೂಡಿಕೆದಾರರೇ ಎಚ್ಚರ!

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಕೊನೆಯ ದಿನದ ಅನಿರೀಕ್ಷಿತ ತಿರುವು!

ಷೇರು ಮಾರುಕಟ್ಟೆ ಅಲುಗಾಡಿಸಲು ಸಜ್ಜಾದ ಪ್ರಮುಖ ಕಂಪನಿಗಳ ರಿಸಲ್ಟ್

ಷೇರು ಮಾರುಕಟ್ಟೆ ರಜೆ ಮುಗಿದು ಬುಧವಾರವೇ ಭರ್ಜರಿ ಏರಿಳಿತ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಲಾಭ ಸಿಗುತ್ತಾ?

ಕಚ್ಚಾ ತೈಲ ಬೆಲೆ ಏರಿಕೆ: ನಿಮ್ಮ ಹೂಡಿಕೆ ಉಳಿಸಿಕೊಳ್ಳುವುದು ಹೇಗೆ?

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?



Click it and Unblock the Notifications